KFC: 8ರ ಬದಲು 4 ಪೀಸ್​ ಚಿಕನ್​ ಕೊಟ್ಟ ಕೆಎಫ್​ಸಿ ವಿರುದ್ಧ ಪೊಲೀಸರಿಗೆ ದೂರು

ತನಗೆ ಆ ರೆಸ್ಟೋರೆಂಟ್ ಕೇವಲ ನಾಲ್ಕು ಪೀಸ್ ಚಿಕನ್ ಕಳುಹಿಸಿರುವುದಾಗಿ ದೂರಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನಸ್ಸಿಗೆ ಸಂತಸ ನೀಡುವ ಹಲವು ಅಂಶಗಳ ಪೈಕಿ ರುಚಿ ರುಚಿಯಾದ ತಿಂಡಿ-ತಿನಿಸು ತಿನ್ನುವುದೂ ಸಹ ಒಂದು. ಕೆಲವರಿಗೆ ತಾವು ತಿನ್ನುವ ಆಹಾರದ (Food) ಕುರಿತು ಗಂಭೀರತೆ ಎಷ್ಟಿರುತ್ತದೆ ಎಂದರೆ ಅದರಲ್ಲೇನಾದರೂ ಕೊಂಚ ವ್ಯತ್ಯಾಸವಾದರೂ ಅವರಿಂದ ಅದನ್ನು ಸಹಿಸಲಾಗುವುದಿಲ್ಲ. ಇಂತಹ ಸಾಕಷ್ಟು ಜನರು ಇಂದಿಗೂ ಇದ್ದಾರೆ ಹಾಗೂ ಅಂಥವರು ತಮ್ಮ ಮನಸ್ಸಿಗೆ ತೃಪ್ತಿಯಾಗದಷ್ಟು (Satisfaction) ತಿನಿಸು ಪಡೆಯದಿದ್ದರೆ ಏನು ಮಾಡಬಲ್ಲರು ಎಂಬುದಕ್ಕೆ ಈ ಮಹಿಳೆ ಮಾಡಿದ ಕೆಲಸವೇ ಸಾಕ್ಷಿ.

ಬೇಕಾದಷ್ಟು ಚಿಕನ್​ ಪೀಸ್​ ಕೊಟ್ಟಿಲ್ಲ

ಇತ್ತೀಚೆಗೆ ನಡೆದ ಘಟನೆಯೊಂದರ ಪ್ರಕಾರ, ಅಮೆರಿಕದ ಕ್ಲೀವ್‌ಲ್ಯಾಂಡ್‌ ನಗರದಲ್ಲಿ ವಾಸವಿದ್ದ ಒಬ್ಬ ಮಹಿಳೆ ಫಾಸ್ಟ್ ಫುಡ್ ಔಟ್ಲೆಟ್ ಆದ ಕೆ‍ಎಫ್‍ಸಿಯಿಂದ ತನಗೆ ಬೇಕಾಗಿದ್ದ ಚಿಕನ್ ಖಾದ್ಯವೊಂದನ್ನು ಆರ್ಡರ್ ಮಾಡಿದ್ದರು. ಆದರೆ, ಅವಳು ಪಡೆದ ಖಾದ್ಯದಲ್ಲಿ ಕೇವಲ ನಾಲ್ಕು ಚಿಕನ್ ಪೀಸ್ ಗಳಿದ್ದವಂತೆ, ಅಷ್ಟಕ್ಕೂ ಅವರು ತನಗೆ ಎಂಟು ಪೀಸ್ ಚಿಕನ್ ಬೇಕಾಗಿದ್ದು ಅದಕ್ಕಾಗಿ ಹಣ ಪಾವತಿಸಿದ್ದರಂತೆ. ಇದರಿಂದ ಬೇಸರಗೊಂಡ ಮಹಿಳೆ ನೇರವಾಗಿ 911ಗೆ ಡಯಲ್ ಮಾಡುವ ಮೂಲಕ ತನ್ನ ದೂರನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ತನ್ನ ಕರೆಯಲ್ಲಿ ಅವರು "ನನ್ನ ಎಲ್ಲ ಚಿಕನ್ ನನಗೆ ಬೇಕು" ಎಂದು ದೂರಿದ್ದಾರೆ.

ಮಹಿಳೆಯ ದೂರಿಗೆ ಅವಕ್ಕಾದ ಪೊಲೀಸರು

ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯ ಮನೆಗೆ ಭೇಟಿ ನೀಡಿ ವಿಷಯ ಏನೆಂದು ವಿಚಾರಿಸಿದಾಗ ಆ ಮಹಿಳೆಯು ನಡೆದ ಸಂಗತಿ ಬಗ್ಗೆ ಹೇಳುತ್ತ ತನಗೆ ಆ ರೆಸ್ಟೋರೆಂಟ್ ಕೇವಲ ನಾಲ್ಕು ಪೀಸ್ ಚಿಕನ್ ಕಳುಹಿಸಿರುವುದಾಗಿ ದೂರಿದ್ದಾಳೆ. ಆ ಅಧಿಕಾರಿಗೆ ಈ ಬಗ್ಗೆ ಎಲ್ಲ ಮಾಹಿತಿ ಗೊತ್ತಾಗಿ ತದನಂತರ ಆತ ಆ ಮಹಿಳೆಯನ್ನು ಕುರಿತು, "ಈ ವಿಷಯದಲ್ಲಿ ಪೊಲೀಸರಿಂದ ಏನೂ ಮಾಡಲು ಸಾಧ್ಯವಿಲ್ಲ" ಎಂದು ಹೇಳಿ ಇದು ಯಾವುದೇ ರೀತಿಯ ಅಪರಾಧ ಚಟುವಟಿಕೆಗೊಳಪಡುವುದಿಲ್ಲ ಹಾಗೂ ಇದಕ್ಕೆ ಸಂಬಂಧಿಸಿದಂತೆ ಮಹಿಳೆಯು ಆ ಹೋಟೆಲ್ಲಿನ ಆಡಳಿತ ಮಂಡಳಿಯ ಗಮನಕ್ಕೆ ಈ ವಿಚಾರ ತರುವ ಮೂಲಕ ಪರಸ್ಪರರು ಬಗೆಹರಿಸಿಕೊಳ್ಳಬಹುದೆಂಬ ಬುದ್ಧಿ ಮಾತು ಹೇಳಿ ಅಲ್ಲಿಂದ ನಿರ್ಗಮಿಸಿದ್ದಾರೆ.

ಇದನ್ನು ಓದಿ: ಪರಂಪರೆ ರಕ್ಷಣೆಗೆ ಶತಪ್ರಯತ್ನ ನಡೆಸುತ್ತಿದೆ ತೇಲುವ ನಗರ ವೆನಿಸ್! ಏಕೆ ಏನಾಯ್ತು?

ಆದರೂ, ಮಹಿಳೆಯ ಕರೆಗೆ ಸಂಬಂಧಿಸಿದಂತೆ ನಗರದ ಆ ಕೆ‍ಎಫ್‍ಸಿ ಹೋಟೆಲ್ ಮಳಿಗೆಗೆ ಪೊಲೀಸ್ ಇಲಾಖೆ ಇನ್ನೊಬ್ಬ ಅಧಿಕಾರಿಯನ್ನು ಕಳುಹಿಸಿಕೊಟ್ಟಿತಾದರೂ ಅದರಿಂದ ಯಾವುದೇ ರೀತಿಯ ಪರಿಣಾಮ ಉಂಟಾಗಲಿಲ್ಲ ಎಂದು ತಿಳಿದುಬಂದಿದೆ.

ಇಂಥಹ ದೂರು ಬಂದ್ರೆ ಏನು ಮಾಡೋದು

ಕ್ಲೀವ್‌ಲ್ಯಾಂಡ್‌ ನಗರದ ವ್ಯಾಪ್ತಿಯಲ್ಲೇ ಈ ಘಟನೆ ನಡೆದಿದ್ದು ಇದೀಗ ಈ ಸುದ್ದಿ ಅಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ ಎನ್ನಲಾಗಿದೆ. ಅಲ್ಲದೆ, ಇಂತಹ ವಿಷಯಕ್ಕೆಲ್ಲ ಪೊಲೀಸರಿಗೆ ಕರೆ ಮಾಡುವುದು ಸರಿಯಾದ ಕ್ರಮವಲ್ಲವಾದ್ದರಿಂದ ಇದೀಗ ಆ ನಗರದ ಪೊಲೀಸ್ ಮುಖ್ಯಸ್ಥರು ಈ ಬಗ್ಗೆ ಜನರಲ್ಲಿ ಅರಿವು ಮೂಡುವ ರೀತಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆನ್ನಲಾಗಿದೆ. ಈ ಸಂದರ್ಭದಲ್ಲಿ ಅವರು ಜನರು ಯಾವ ವಿಷಯಕ್ಕೆ ಪೊಲೀಸರ ಸಹಾಯ ಪಡೆಯಬಹುದೆಂಬುದರ ಬಗ್ಗೆ ಅರ್ಥ ಮಾಡಿಕೊಳ್ಳಬೇಕೆಂದು ಹೇಳುತ್ತ, "ಪೊಲೀಸರು ಮುಗ್ಧ ಜನರ ಸಹಾಯಕ್ಕಿರುವುದು ನಿಜ. ಆದರೆ, ಸರಿಯಾದ ವಿಷಯ ಬಿಟ್ಟು ಬೇರೆಯದ್ದೇ ಆದ ವಿಷಯದಲ್ಲಿ ಪೊಲೀಸರ ಬಳಿ ಬರುವುದು ತರವಲ್ಲ" ಎಂದು ಹೇಳಿರುವುದಾಗಿ ವರದಿಯಾಗಿದೆ.

ಇದನ್ನು ಓದಿ: ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ ಬಚಾವ್ ಆಗಿದ್ದವರಿಗೆ ತೊಂದರೆ ಉಂಟು ಮಾಡಲಿದೆ ಹೊಸ ಅಲೆ!

ಒಟ್ಟಿನಲ್ಲಿ ಈ ಪ್ರಕರಣ ಸ್ವಲ್ಪ ಮಟ್ಟಿಗೆ ಪೊಲೀಸರಿಗೆ ಕಿರಿಕಿರಿ ಉಂಟು ಮಾಡಿದ್ದಂತೂ ಸುಳ್ಳಲ್ಲ. ಆದರೂ ಅಮೆರಿಕದ ತುರ್ತು ಸಹಾಯ ಸಂಖ್ಯೆ 911 ಅನೇಕ ಬಾರಿ ದುರುಪಯೋಗವಾಗಲ್ಪಟ್ಟಿದೆ ಎನ್ನಲಾಗುತ್ತದೆ. ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಅಮೆರಿಕದ ಹಲವು ಜನರು ಈ ತುರ್ತು ಸಹಾಯವಾಣಿಗೆ ಕರೆ ಮಾಡಿ ಸಂಬಂಧವೇ ಇಲ್ಲದ ವಿಷಯಗಳ ಬಗ್ಗೆಯೂ ದೂರಿದ್ದಾರೆ ಎಂದು ವರದಿಯಾಗಿವೆ. ಹಾಗಾಗಿ, ಅಲ್ಲಿನ ಪೊಲೀಸ್ ಇಲಾಖೆ ಆಗಾಗ ಜನರಿಗೆ ಕೇವಲ ತುರ್ತು ಇರಬಹುದಾದ ನೈಜ ಸಮಸ್ಯೆಯ ಸಂದರ್ಭದಲ್ಲೇ ಈ ಸಂಖ್ಯೆಯನ್ನು ಡಯಲ್ ಮಾಡಿ ಎಂದು ಎಚ್ಚರಿಸುತ್ತಲೇ ಇರುತ್ತಾರೆ.
Published by:Seema R
First published: