• Home
  • »
  • News
  • »
  • trend
  • »
  • Bank Robbery: ಬ್ಯಾಂಕ್​ ದರೋಡೆ ಮಾಡಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಚಾಲಾಕಿ, 25 ವರ್ಷಗಳ ನಂತರ ಕಳ್ಳಿ!

Bank Robbery: ಬ್ಯಾಂಕ್​ ದರೋಡೆ ಮಾಡಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಚಾಲಾಕಿ, 25 ವರ್ಷಗಳ ನಂತರ ಕಳ್ಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಸುದ್ದಿಯನ್ನು ಕೇಳಿದ್ರೆ ನೀವು ಬ್ಯಾಂಕ್​ಗಳಲ್ಲಿ ಹಣ ಇಡುವುದನ್ನೇ ನಿಲ್ಲಿಸಬಹುದು. ಅಂತಹದ್ದೊಂದು ಪ್ರಕರಣವು ಬೆಳಕಿಗೆ ಬಂದೆ.

  • Share this:

ನಾವು ಸಾಮಾನ್ಯವಾಗಿ ಬ್ಯಾಂಕ್​ಗಳಲ್ಲಿ (Bank) ಹಣವನ್ನು ಯಾತಕ್ಕಾಗಿ ಇಡುತ್ತೇವೆ ಹೇಳಿ? ತುಂಬಾ ಸೇಫ್​, ರಕ್ಷಣೆಯ ಸಲುವಾಗಿ ನಾವು ಬ್ಯಾಂಕ್​ಗಳಲ್ಲಿ ಹಣವನ್ನು ಇಡುತ್ತೇವೆ. ಇದರ ಜೊತೆಗೆ ಹಲವಾರು ಸೌಲಭ್ಯಗಳು ಕೂಡ ನಮಗೆ ಬ್ಯಾಂಕ್​ಗಳು ನೀಡುತ್ತವೆ. ಯಾವ ಬ್ಯಾಂಕ್​ನಲ್ಲಿ ಜಾಸ್ತಿಯಾಗಿ ಇಂಟ್ರೆಸ್ಟ್ (Intrest), ಲೋನ್ (Loan)​, ಸಾಲಗಳನ್ನು​ ಕೊಡುತ್ತಾರೆಯೋ ಅಲ್ಲಿ ನಾವು ಹಣವನ್ನು ಹೂಡಿಕೆ ಮಾಡುತ್ತೇವೆ. ಇದು ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ಒಟ್ಟಿನಲ್ಲಿ ಬ್ಯಾಂಕ್​ ಅಂತ ಹೇಳಿದ್ರೆ ಅದರ ಮೇಲೆ ನಂಬಿಕೆ  ಇಡುತ್ತೇವೆ ಅಲ್ವಾ? ಆದರೆ ಬೇಲಿನೇ ಎದ್ದು ಹೊಲವನ್ನು ಮೇಯ್ದರೆ ಹೇಗಿರುತ್ತೆ ಅಲ್ವಾ? ಇದೀಗ ಇಂಥದ್ದೇ ಒಂದು ಪ್ರಕರಣ ಕಂಡು ಬಂದಿದೆ ಇಲ್ಲಿ. ಅರೇ! ಏನಿದು ಅಂತ ಕೇಳ್ತೀರಾ? ಇಲ್ಲಿದೆ ನೋಡಿ ಫುಲ್​ ಡೀಟೇಲ್ಸ್​.


ಬ್ಯಾಂಕ್​ನವರೇ ಇದೀಗ ಹಣವನ್ನು ಕದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಯ್ಯೋ ದೇವ್ರೇ ಏನಿದು? ಅಂತ ಶಾಕ್​ ಆಗ್ತಾ ಇದ್ದೀರಾ? ನಿಜ, ಚೀನಾದಲ್ಲಿ ಇದೀಗ ಇಂತಹದ್ದೇ ಒಂದು ಘಟನೆ ನಡೆದಿದೆ.


ಬ್ಯಾಂಕ್ ಉದ್ಯೋಗಿಯಾಗಿದ್ದ ಮಹಿಳೆ ತನ್ನದೇ ಬ್ಯಾಂಕ್ ನಲ್ಲಿ ವಂಚನೆ ಮಾಡಿ ಓಡಿ ಹೋಗಿದ್ದಾಳೆ. ಸುಮಾರು 25 ವರ್ಷಗಳಿಂದ ಈ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೂ 25 ವರ್ಷಗಳ ನಂತರ ಆಕೆ ಸಿಕ್ಕಿ ಬಿದ್ದಿದ್ದಾಳೆ. ಅದು ಹೇಗೆ 25 ವರ್ಷ ಅಂತ ಯೋಚನೆ ಮಾಡ್ತಾ ಇದ್ದೀರಾ? ನಿಜ ನೀವು ನಂಬಲೇಬೇಕು. ಆಕೆ ಯಾಕೆ 25 ವರ್ಷಗಳಿಂದ ಸಿಕ್ಕಿ ಬಿದ್ದಿಲ್ಲ ಎಂಬುವುದೇ ರೋಚಕ ಕಥೆ.


ಈ ಘಟನೆ ನಡೆದಿರುವುದು ಚೀನಾದ ನಗರದಲ್ಲಿ. ಚೀನಾದ ಮಾಧ್ಯಮ ವರದಿಗಳ ಪ್ರಕಾರ, ಚೆನ್ ಯೆ ಎಂದು ಗುರುತಿಸಲಾದ ಮಹಿಳೆ ಚೀನಾದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಬಳಿಕ ಬ್ಯಾಂಕ್ ದರೋಡೆ ನಡೆದಿರುವುದು ಗೊತ್ತಾಯಿತು. ನಂತರ ಇಡೀ ವಿಷಯಕ್ಕೆ ಈ ಮಹಿಳೆಯೇ ಕಾರಣ ಎಂದು ತಿಳಿದುಬಂದಿದೆ. ನಾಪತ್ತೆಯಾಗಿರುವ ಮಹಿಳೆರ ಬ್ಯಾಂಕ್​ನಲ್ಲಿ ಕ್ಲರ್ಕ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಕೆಯೇ ಬ್ಯಾಂಕಿನಿಂದ ಸುಮಾರು 5 ಕೋಟಿ ರೂ. ಕದ್ದಿದ್ದಳು.


ಇದನ್ನೂ ಓದಿ: ಆಕಾಶದಲ್ಲಿ ಹಡಗುಗಳು ಚಲಿಸುತ್ತಿವೆ, ಫೋಟೋ ಫುಲ್​ ವೈರಲ್​!


ಇಷ್ಟು ಮಾತ್ರವಲ್ಲದೆ ಈ ಮಹಿಳೆ ಅದೇ ಹಣದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ತನ್ನ ಮುಖವನ್ನು ಸಂಪೂರ್ಣವಾಗಿ ಬದಲಾಯಿಸಿದಾಗ ಯಾರಿಗೂ ಕಂಡು ಹಿಡಿಯಲು ಆಗಲಿಲ್ಲ. ಆದ್ದರಿಂದ ಯಾರೂ ಆಕೆಯನ್ನು ಗುರುತಿಸಲು ಆಗಲಿಲ್ಲ.


ಇದಾದ ನಂತರ ಮನೆ ಖರೀದಿಸಿ ನೆಮ್ಮದಿಯ ಜೀವನ ಮಾತ್ರವಲ್ಲದೇ’ ನಡೆಸತೊಡಗಿದಳು. ಅವಳು ಸ್ವಲ್ಪ ಹಣವನ್ನು ತನ್ನ  ವ್ಯಾಪಾರಕ್ಕೆ ಹಾಕಿಕೊಂಡಿದ್ದಳು ಮತ್ತು ಉಳಿದ ಹಣವನ್ನು ಒಡಹುಟ್ಟಿದವರ ಖಾತೆಗೆ ವರ್ಗಾಯಿಸಿದಳು.


ಮತ್ತೊಂದೆಡೆ, ತನಿಖಾಧಿಕಾರಿಗಳು ಈ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ ದೀರ್ಘಕಾಲ ಇದ್ದರು. ವರದಿಯ ಪ್ರಕಾರ ಇದನ್ನು ಮಾಡಲು 25 ವರ್ಷಗಳು ಬೇಕಾಯಿತು. ಇದೇ ವೇಳೆ ಮಹಿಳಾ ಆರೋಪಿಯೂ ಮದುವೆಯಾದರು. ಆದರೆ ಇತ್ತೀಚೆಗಷ್ಟೇ ಕೆಲ ಸಮಯದ ಹಿಂದೆ ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಅಧಿಕಾರಿಯೊಬ್ಬರಿಗೆ ಈ ಕಳ್ಳಿ ಇದೇ ವಿಷಯಕ್ಕೆ  ಕಪಾಳಮೋಕ್ಷ  ಮಾಡಿದ್ದಾಳೆ. ಅಧಿಕಾರಿಗೆ ಮಹಿಳೆ ಮೇಲೆ ಅನುಮಾನ ಬಂದಿದ್ದರಿಂದ ತಂಡಕ್ಕೆ ಮಾಹಿತಿ ನೀಡಿ ಮಹಿಳೆಯನ್ನು ಹಿಡಿದಿದ್ದಾರೆ.




ಮೊದಲಿಗೆ ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ, ಆದರೆ ಆಕೆಯ ವಿರುದ್ಧ ಎಲ್ಲಾ ಸಾಕ್ಷ್ಯಗಳು ಬೆಳಕಿಗೆ ಬಂದಾಗ, ಅವಳು ತನ್ನ ಅಪರಾಧವನ್ನು ಒಪ್ಪಿಕೊಳ್ಳಬೇಕಾಯಿತು. ಇದಾದ ಬಳಿಕ ಮಹಿಳೆ ಹಲವು ಆಘಾತಕಾರಿ ರಹಸ್ಯಗಳನ್ನು ಬಹಿರಂಗಪಡಿಸಿದ್ದಾಳೆ. ಅವಳು ಹೇಗೆ ಕಳ್ಳತನ ಮಾಡಿದಳು ಮತ್ತು ಮರುದಿನ ತನ್ನ ಇಡೀ ಕುಟುಂಬದೊಂದಿಗೆ ನಾಪತ್ತೆಯಾಗಿದ್ದಳು ಎಂಬುದನ್ನೂ ಹೇಳಿದಳು. ಸದ್ಯ ಮಹಿಳೆಯನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ.

First published: