ವಿಚಿತ್ರ ಎನಿಸಿದರೂ ಇದು ಸತ್ಯ: ಈಕೆಗೆ ಪುರುಷರ ಧ್ವನಿ ಮಾತ್ರ ಕೇಳಲ್ವಂತೆ..!

ಈ ಬಗ್ಗೆ ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಇದೊಂದು ಬಹು ಅಪರೂಪದ ಕಿವುಡುತನ ಕಾಯಿಲೆ ಎಂಬುದು ಗೊತ್ತಾಗಿದೆ.

zahir | news18
Updated:January 13, 2019, 7:52 PM IST
ವಿಚಿತ್ರ ಎನಿಸಿದರೂ ಇದು ಸತ್ಯ: ಈಕೆಗೆ ಪುರುಷರ ಧ್ವನಿ ಮಾತ್ರ ಕೇಳಲ್ವಂತೆ..!
ಸಾಂದರ್ಭಿಕ ಚಿತ್ರ
  • News18
  • Last Updated: January 13, 2019, 7:52 PM IST
  • Share this:
ಜಗತ್ತಿನಲ್ಲಿ ನಡೆಯುವ ಕೆಲವೊಂದು ಅಚ್ಚರಿಗಳು ಕೇಳಿದರೂ ನಂಬಲಸಾಧ್ಯ ಎಂಬಂತಿರುತ್ತದೆ. ಆದರೆ ಸಾಕ್ಷಿ ಸಮೇತ ಇಂತಹ ಘಟನೆಗಳನ್ನು ಮುಂದಿಟ್ಟರೆ ನಾವು ನಂಬಲೇಬೇಕಾಗುತ್ತದೆ. ಅಂತಹದೊಂದು ವಿಚಿತ್ರ ಎನಿಸುವ ರೋಗ ಚೀನಾದ ಮಹಿಳೆಯೊಬ್ಬಳಲ್ಲಿ ಕಾಣಿಸಿದೆ.

ಚೀನಾದ ಪೂರ್ವ ಕರಾವಳಿಯಲ್ಲಿರುವ ಕ್ಸಿಯಾಮೆನ್ ನಗರ ಜೆನ್​ ಎಂಬ ಮಹಿಳೆಗೆ ಕಿವುಡುತನ ಕಾಣಿಸಿಕೊಂಡಿದೆ. ಇದರಲ್ಲೇನಿದೆ ಅಚ್ಚರಿ ಅಂದುಕೊಳ್ಳುತ್ತಿದ್ದೀರಾ? ಅದೇ ಇಲ್ಲಿ ಆಶ್ಚರ್ಯಕ್ಕೆ ಕಾರಣವಾಗಿರುವುದು. ಜೆನ್​ಗೆ ಪುರುಷರ ಧ್ವನಿ ಮಾತ್ರ ಕೇಳಿಸುವುದಿಲ್ಲವಂತೆ. ಆದರೆ ಮಹಿಳೆಯರು ಮಾತನಾಡಿದರೆ ಕೇಳಿಸುತ್ತದೆ.

ವಿಚಿತ್ರ ಎನಿಸಿದರೂ ಇದು ಸತ್ಯ. ಇತ್ತೀಚೆಗೆ ಬೆಳಿಗ್ಗೆ ಎದ್ದಾಗ ಜೆನ್​ಗೆ ತನ್ನ ಗೆಳೆಯ ಮಾತನಾಡುತ್ತಿರುವುದು ಕೇಳಿಸುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪುರುಷ ಡಾಕ್ಟರ್​ ವಿಚಾರಣೆ ನಡೆಸಿದ್ದಾರೆ. ಆದರೆ ಏನೂ ಕೇಳಿಸಿರಲಿಲ್ಲ. ಆದರೆ ಅಲ್ಲೆಯಿದ್ದ ನರ್ಸ್​ಗಳು ಮಾತನಾಡುವುದು ಕೇಳಿಸಿದೆ.

ಇದನ್ನೂ ಓದಿ: ಬ್ಲೂವೇಲ್, ಕೀ ಕೀ ಹಳೇದಾಯ್ತು: ಶುರುವಾಗಿದೆ ಹೊಸ ಹುಚ್ಚಾಟ ಬರ್ಡ್​ ಬಾಕ್ಸ್​ ಚಾಲೆಂಜ್..!

ಈ ಬಗ್ಗೆ ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಇದೊಂದು ಬಹು ಅಪರೂಪದ ಕಿವುಡುತನ ಕಾಯಿಲೆ ಎಂಬುದು ಗೊತ್ತಾಗಿದೆ. ರಿವರ್ಸ್ ಸ್ಲೋಪ್ ಹಿಯರಿಂಗ್ ಲಾಸ್ ಎಂಬ ಸಮಸ್ಯೆಗೆ  ಜೆನ್ ಇಡಾಗಿದ್ದಳು. ಈ ಕಾಯಿಲೆಯಿದ್ದರೆ ಪುರುಷರ ಧ್ವನಿಯ ಆವರ್ತನಗಳ ಶಬ್ದಗಳು ಕೇಳಿಸುವುದಿಲ್ಲ. ಈಗಾಗಲೇ ಪ್ರಪಂಚದಲ್ಲಿ 13 ಸಾವಿರಕ್ಕೂ ಹೆಚ್ಚಿನ ಇಂತಹ ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೆ ಮತ್ತೊಂದು ಕಾರಣ ಒತ್ತಡ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: ಎಲೆಕ್ಟ್ರಿಕ್​ ವಾಹನಗಳನ್ನು ಉತ್ತೇಜಿಸಲು ಹೊಸ ಕ್ರಮ: ಪ್ರತಿ 10-20 ಕಿ.ಮೀ.ಗೆ ಚಾರ್ಜಿಂಗ್ ಸ್ಟೇಷನ್!

ಸದ್ಯ ಜೆನ್​ಗೆ ಚಿಕಿತ್ಸೆಯನ್ನು ನೀಡಲಾಗಿದ್ದು, ಮರಳಿ ಪುರುಷರ ಧ್ವನಿ ಕೇಳುವಂತಾಗಲು ಸ್ವಲ್ಪ ದಿನಗಳು ತೆಗೆದುಕೊಳ್ಳಬಹುದು ಎಂದಿದ್ದಾರೆ ಡಾ. ಲಿನ್ ಕ್ಸಿಯಾವಿಕ್ಂಗ್.ಇದನ್ನೂ ಓದಿ: ಬೈಕ್​ ಸವಾರರಿಗೆ ಸಿಹಿ ಸುದ್ದಿ: ಟೆನ್ಶನ್​ ಇಲ್ಲದೆ ಈ ಹೆಲ್ಮೆಟ್​ ಧರಿಸಬಹುದು

 

First published:January 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ