HOME » NEWS » Trend » WOMANS RANT ON GOING BACK TO OFFICE AFTER WORK FROM HOME GOES VIRAL TWITTER RELATES STG MAK

Viral Video: ಕಚೇರಿಗೆ ಮರಳಲು ಕೋಪ ವ್ಯಕ್ತಪಡಿಸಿದ ಮಹಿಳೆ..!; ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇನ್ಸ್ಟಾಗ್ರಾಮ್ ಬಳಕೆದಾರ ಹರ್ಜಾಸ್ ಸೇಥಿ ಕಳೆದ ವಾರ ತಮಾಷೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಉದ್ಯೋಗಿಗಳಿಗೆ ಕೆಲಸಕ್ಕೆ ಮರಳಲು ತನ್ನ ಕಂಪನಿ ನಿರ್ಧಾರ ತೆಗೆದುಕೊಳ್ಳುವುದನ್ನು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

news18-kannada
Updated:February 25, 2021, 8:17 PM IST
Viral Video: ಕಚೇರಿಗೆ ಮರಳಲು ಕೋಪ ವ್ಯಕ್ತಪಡಿಸಿದ ಮಹಿಳೆ..!; ವೈರಲ್ ವಿಡಿಯೋ ಇಲ್ಲಿದೆ ನೋಡಿ
ವೈರಲ್​ ವಿಡಿಯೋದಲ್ಲಿರುವ ಮಹಿಳೆ.
  • Share this:
ಕೊರೋನಾ ವೈರಸ್ ಪ್ರೇರಿತ ಲಾಕ್​ಡೌನ್​ನಿಂದಾಗಿ ಕಳೆದ ವರ್ಷ ಕಚೇರಿಗಳು ಮತ್ತು ಸಾರ್ವಜನಿಕ ಸಾರಿಗೆಗಳು ಸ್ಥಗಿತಗೊಂಡಿದ್ದವು. ಇದರಿಂದ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಂ ಮೊರೆ ಹೋಗಿವೆ. ಇದರ ಪರಿಣಾಮವಾಗಿ, ಈಗ ಸುಮಾರು ಒಂದು ವರ್ಷದಿಂದ, ಲಕ್ಷಾಂತರ ವೃತ್ತಿಪರರು ತಮ್ಮ ಮನೆಗಳ ಸೌಕರ್ಯಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ವಿದ್ಯಮಾನದಿಂದ ಕೆಲವು ಉಲ್ಲಾದ ಪ್ರಮಾದಗಳು ನಡೆದವು. ಸದ್ಯ, ಕೊರೋನಾ ಸೋಂಕಿತರು ಕಡಿಮೆಯಾಗಿದ್ದು ಹಾಗೂ ಲಸಿಕೆ ಬಂದಿರುವುದರಿಂದ, ಹಲವಾರು ಕಚೇರಿಗಳು ಮತ್ತೆ ತೆರೆಯಲು ಪ್ರಾರಂಭಿಸಿವೆ. ಈ ಬಗ್ಗೆ ಅನೇಕರಿಗೆ ಬೇಸರವಿದೆ. ಮನೆಯಲ್ಲೇ ಕೆಲಸ ಮಾಡುವುದರಿಂದ ಅನೇಕ ಅನುಕೂಲಗಳು ಇದೆ ಎಂದೂ ಹೇಳಿಕೊಳ್ಳುತ್ತಾರೆ. ಇದೇ ರೀತಿ, ಅತೃಪ್ತ ಉದ್ಯೋಗಿಯೊಬ್ಬರು ಕಚೇರಿಗೆ ಹಿಂದಿರುಗುವ ಬಗ್ಗೆ ಫನ್ನಿ ವಿಡಿಯೋವೊಂದನ್ನು ಮಹಿಳೆ ಹಂಚಿಕೊಂಡಿದ್ದು, ಅದು ಬಹುತೇಕರಿಗೆ ಸಂಬಂಧ ಇರುವುದರಿಂದ ಸಖತ್ ವೈರಲ್ ಆಗುತ್ತಿದೆ.

ಇನ್ಸ್ಟಾಗ್ರಾಮ್ ಬಳಕೆದಾರ ಹರ್ಜಾಸ್ ಸೇಥಿ ಕಳೆದ ವಾರ ತಮಾಷೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಉದ್ಯೋಗಿಗಳಿಗೆ ಕೆಲಸಕ್ಕೆ ಮರಳಲು ತನ್ನ ಕಂಪನಿ ನಿರ್ಧಾರ ತೆಗೆದುಕೊಳ್ಳುವುದನ್ನು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಮತ್ತೆ ಕಚೇರಿಗೆ ಹೋಗುವ ಆಲೋಚನೆಯಿಂದ ನಡುಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ನೌಕರರನ್ನು ಕಚೇರಿಯಿಂದ ಕೆಲಸ ಮಾಡಲು ಹೇಳಿದರೆ ಅವರು ಏಕೆ ಮಾಡಲು ಬಯಸುತ್ತಾರೆ. ಎಲ್ಲರೂ ಸಂತೋಷವಾಗಿದ್ದಾರೆ, ನಿಮ್ಮ ಆದಾಯ ಹೆಚ್ಚುತ್ತಿದೆ, ನೀವು ಸಾರಿಗೆ ವೆಚ್ಚ ಮತ್ತು ಇತರ ಸೌಲಭ್ಯಗಳನ್ನು ಉಳಿಸುತ್ತಿದ್ದೀರಿ" ಎಂದು ಅವರು ನಿರ್ಲಿಪ್ತ ಭಾವದಲ್ಲಿ ಹಿಂದಿಯಲ್ಲಿ ಹೇಳುತ್ತಾರೆ.

ಅಲ್ಲದೆ, ತನ್ನ ಜೀನ್ಸ್ ಮತ್ತು ಪ್ಯಾಂಟ್ ಅನ್ನು ಪ್ಯಾಕ್ ಮಾಡಿ ಇಟ್ಟಿದ್ದು, ಪೈಜಾಮಾದಲ್ಲೇ ಕೆಲಸ ಮಾಡಲು ಕಲಿತಿದ್ದೇನೆ. ವರ್ಚುವಲ್ ಮೀಟಿಂಗ್ ರೂಮ್ಗಳಿಂದ ಮತ್ತೆ ಭೌತಿಕ ಕಾರ್ಯಕ್ಷೇತ್ರಗಳಿಗೆ ಮರಳುವುದು ಸಾಧ್ಯವಿಲ್ಲ'' ಎಂದೂ ಅವರು ಹೇಳಿದ್ದಾರೆ.

ಇನ್ನು, ವಿಡಿಯೋದ ಅಂತ್ಯವು ಸಹ ತಮಾಷೆಯಿಂದ ಕೂಡಿದೆ. ತನ್ನ ಕೋಪವನ್ನು ಪೂರ್ಣಗೊಳಿಸಿಕೊಂಡ ನಂತರ, ಸೇಥಿ ತನ್ನ ಉದ್ಯೋಗದಾತರು ಈ ವಿಡಿಯೋ ನೋಡಿ ತನ್ನನ್ನು ಕೆಲಸದಿಂದ ತೆಗೆಯಬೇಡಿ. ಇದು ಕೇವಲ ತಮಾಷೆಗಾಗಿ ಎಂದೂ ವಿನಂತಿಸಿಕೊಂಡಿದ್ದಾರೆ.

ಇಂಟರ್ನೆಟ್​ನಲ್ಲಿ ಪ್ರತಿಕ್ರಿಯೆ ಹೇಗಿದೆ..?

ಇನ್ಸ್ಟಾಗ್ರಾಮ್​ನಲ್ಲಿ ಮೊದಲು ಶೇರ್ ಮಾಡಿದ ವಿಡಿಯೋವನ್ನು ಮಂಗಳವಾರ ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಿದ ಬಳಿಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ 4 ಲಕ್ಷಕ್ಕೂ ಅಧಿಕ ನೆಟ್ಟಿಗರು ಈ ವಿಡಿಯೋ ನೋಡಿದ್ದು, ಸುಮಾರು 4 ಸಾವಿರ ಜನ ಇದನ್ನು ರೀಟ್ವೀಟ್ ಮಾಡಿದ್ದು, 13 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.1 ನಿಮಿಷ ಮತ್ತು 38 ಸೆಕೆಂಡುಗಳ ಈ ವಿಡಿಯೋಗೆ ನೂರಾರು ನೆಟ್ಟಿಗರು ನಾನಾ ರೀತಿಯ ಕಾಮೆಂಟ್​ಗಳನ್ನು ಮಾಡಿದ್ದಾರೆ.

ಕೆಲವು ಕಾಮೆಂಟ್ಗಳನ್ನು ನೋಡಿ:




Published by: MAshok Kumar
First published: February 25, 2021, 8:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories