HOME » NEWS » Trend » WOMAN WITH WORLDS LONGEST NAILS CUTS THEM AFTER ABOUT 30 YEARS STG LG

Trend: 30 ವರ್ಷಗಳಿಂದ ಬೆಳೆಸಿದ್ದ ಪ್ರಪಂಚದ ಅತಿ ಉದ್ದದ ಉಗುರನ್ನು ಕೊನೆಗೂ ಕತ್ತರಿಸಿದ ಮಹಿಳೆ

ವಿಲಿಯಮ್ಸ್ ಅಯಾನ ಅವರ ಈ ಹಾದಿ ಸುಲಭದ್ದಾಗಿರಲಿ, ಬಟ್ಟೆ ತೊಳೆಯಲು, ಪಾತ್ರೆ ತೊಳೆಯಲು ಇನ್ನಿತರೆ ಚಟುವಟಿಕೆಗಳನ್ನು ನಿಭಾಯಿಸಲು ಕಷ್ಟವಾಗುತ್ತಿತ್ತು. ಆದರೂ ಯಾವುದನ್ನು ಲೆಕ್ಕಿಸದೆ ಸತತ 30 ವರ್ಷಗಳಿಂದ ಉಗುರಿನ ಆರೈಕೆ ಮಾಡಿದ್ದರು.

news18-kannada
Updated:April 8, 2021, 12:15 PM IST
Trend: 30 ವರ್ಷಗಳಿಂದ ಬೆಳೆಸಿದ್ದ ಪ್ರಪಂಚದ ಅತಿ ಉದ್ದದ ಉಗುರನ್ನು ಕೊನೆಗೂ ಕತ್ತರಿಸಿದ ಮಹಿಳೆ
ಮಹಿಳೆ
  • Share this:
ನಾವು ಗಿನ್ನೆಸ್ ವರ್ಲ್ಡ್‌ ರೆಕಾರ್ಡ್‌ ಪೇಜ್‍ಗೆ ಹೋದ್ರೆ ವಿಭಿನ್ನ ವಿಚಾರಗಳಲ್ಲಿ ಅಂದರೆ ಪ್ರತಿಭೆಯಿಂದಲೋ, ಹೊಸ ಹೊಸ ಪ್ರಯೋಗಗಳಿಂದಲೋ ರೆಕಾರ್ಡ್ ಬುಕ್‍ನಲ್ಲಿ ಹೆಸರು ಅಚ್ಚೊತ್ತಿಕೊಂಡಿರುತ್ತಾರೆ. ಅದರಲ್ಲಿ ಯುಎಸ್‍ಎ ಮಹಿಳೆಯೊಬ್ಬರು ಉದ್ದದ ಕೈ ಉಗುರನ್ನು ಬೆಳೆಸಿ ಗಿನ್ನೆಸ್ ದಾಖಲೆ ಮಾಡಿರುವುದು. ಒಮ್ಮೆ ಇವರನ್ನು ನೋಡಿದವರು ತೆಳ್ಳಗೆ, ಸಾಕಷ್ಟು ಉದ್ದವಿರುವ ಕೈಬೆರಳಿನ ಉಗುರುಗಳನ್ನು ಹೇಗಪ್ಪ ನಿರ್ವಹಣೆ ಮಾಡ್ತಾರೆ ಅಂತ ಆಶ್ಚರ್ಯಗೊಂಡಿದ್ದು ಇದೆ.

ಯುಎಸ್‍ಎಯಲ್ಲಿ ಟೆಕ್ಸಾಸ್‍ನಲ್ಲಿನ ಅಯನ್ನಾ ವಿಲಿಯಮ್ಸ್ ಅವರು ಸುಮಾರು 733.53 ಸೆಂ.ಮೀ ಇರುವ ಕೈ ಬೆರಳಿನ ಉಗುರುಗಳನ್ನು ಕತ್ತರಿಸಿದ್ದಾರೆ. ಸತತ 30 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಉದ್ದದ ಉಗುರುಗಳಿಗೆ ಕೊನೆಗೂ ಮುಕ್ತಿ ನೀಡಿದ್ದಾರೆ.

ಈ ಬಗ್ಗೆ ಗಿನ್ನೆಸ್ ವರ್ಲ್ಡ್‌ ರೆಕಾರ್ಡ್‍ನವರು ಖುದ್ದಾಗಿ ಮಾಹಿತಿ ನೀಡಿದ್ದು, ಉಗುರು ಕತ್ತರಿಸುವ ವಿಡಿಯೋವನ್ನು ಸಹ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಟೆಕ್ಸಾಸ್‍ನ ಟ್ರಿನಿಟಿ ವಿಸ್ಟಾ ಡರ್ಮೋಥಾಲಜಿಯ ವೈದ್ಯರಾದ ಅಲಿಸನ್ ರೀಡಿಂಗರ್ ಅವರು ಮೊದಲು ಉಗುರುಗಳನ್ನು ಟೇಪ್‍ನಿಂದ ಅಳೆದು ತದನಂತರ ಎಲೆಕ್ಟ್ರಾನಿಕ್ ರೋಟರಿ ಎಂಬ ಸಾಧನದಿಂದ ವಿಲಿಯಮ್ಸ್ ಅಯಾನಾ ಅವರ ಉಗುರನ್ನು ಕತ್ತರಿಸಿದ್ದಾರೆ. ಕಳೆದ 30 ವರ್ಷಗಳಿಂದ ಮಗುವಿನ ರೀತಿಯಲ್ಲಿ ಆರೈಕೆ ಮಾಡಿದ್ದ ಉಗುರುಗಳನ್ನು ಕತ್ತರಿಸುವಾಗ ಖುಷಿ ಜೊತೆಯಲ್ಲಿ ಬೇಸರ ಹೀಗೆ ಮಿಶ್ರಿತ ಭಾವ ವಿಲಿಯಮ್ಸ್ ಅಯಾನಾ ಅವರ ಮೊಗದಲ್ಲಿ ಎದ್ದು ಕಾಣುತ್ತಿತ್ತು.

ಕೊರೋನಾದಿಂದ ತತ್ತರಿಸಿರುವ ಬದುಕಿಗಾಗಿ ಕೈಗೆಟುಕುವ 10 ಸರಳ ವಿಮೆ ಯೋಜನೆಗಳು ಇಲ್ಲಿವೆ..

ಟಲೂನ್ಸ್ ವೇದಿಕೆಯಲ್ಲಿ 2017ರಲ್ಲಿ ವಿಲಿಯಮ್ಸ್ ಅವರ ಈ ಉದ್ದದ ಉಗುರನ್ನು ಗುರುತಿಸಲಾಯಿತು. 2018ರಲ್ಲಿ ಗಿನ್ನೆಸ್ ರೆಕಾರ್ಡ್ ಬುಕ್‍ಗೆ ತೆರೆದುಕೊಂಡಿತ್ತು. ಆ ಸಮಯದಲ್ಲಿ ಉಗುರಿನ ಉದ್ದ 576.4 ಸೆಂ.ಮೀ ( 18 ಅಡಿ 10.9 ಇಂಚು) ಇತ್ತು. ಇವರ ಈ ಉಗುರಿಗೆ ಮೆನಿಕ್ಯೂರ್ ಮಾಡಲು 20 ಗಂಟೆಗಳ ಕಾಲ ಸಮಯ ಬೇಕಿತ್ತು. ಉಗುರು ಬಣ್ಣ 2 ಬಾಟಲಿಗಳು ಬೇಕಾಗಿತ್ತು.

ವಿಲಿಯಮ್ಸ್ ಅಯಾನ ಅವರ ಈ ಹಾದಿ ಸುಲಭದ್ದಾಗಿರಲಿ, ಬಟ್ಟೆ ತೊಳೆಯಲು, ಪಾತ್ರೆ ತೊಳೆಯಲು ಇನ್ನಿತರೆ ಚಟುವಟಿಕೆಗಳನ್ನು ನಿಭಾಯಿಸಲು ಕಷ್ಟವಾಗುತ್ತಿತ್ತು. ಆದರೂ ಯಾವುದನ್ನು ಲೆಕ್ಕಿಸದೆ ಸತತ 30 ವರ್ಷಗಳಿಂದ ಉಗುರಿನ ಆರೈಕೆ ಮಾಡಿದ್ದರು.

ಈ ಬಗ್ಗೆ ಖುದ್ದಾಗಿ ಹೇಳಿರುವ ವಿಲಿಯಮ್ಸ್ ನಾನು ಕೆಲವು ದಶಕಗಳಿಂದ ನನ್ನ ಕೈ ಉಗುರುಗಳನ್ನು ಬೆಳೆಸುತ್ತಿದ್ದೆ. ಅದರ ಪ್ರಪಂಚವೇ ವಿಭಿನ್ನವಾಗಿತ್ತು. ಇದೀಗ ಮತ್ತೊಂದು ಹೊಸ ಬದುಕು ಶುರುವಾಗಲಿದೆ. ನಿಜವಾಗಿಯೂ ಈ ಬದುಕನ್ನು ಕಳೆದುಕೊಳ್ಳುತ್ತಿರುವುದಕ್ಕೆ ಬೇಸರವಾಗುತ್ತಿದೆ. ಆ ಸಮಯ ಅಷ್ಟೇ. ಮುಂದಿನ ಸಮಯದ ಜೊತೆ ಬದುಕಬೇಕಾಗಿದೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.ನಾನು ಪ್ರತಿಯೊಂದು ಚಟುವಟಿಕೆಗಳನ್ನು ತುಂಬಾ ಎಚ್ಚರಿಕೆ ನಿರ್ವಹಿಸುತ್ತಿದೆ. ನಾನು ಯಾವುದಾದರೂ ಕೆಲಸ ಮಾಡುವ ಮೊದಲು ನನ್ನ ಉಗುರಿಗೆ ತೊಂದರೆಯಾಗದ ರೀತಿಯಲ್ಲಿ ಮಾಡಬೇಕು ಎಂದು ಮಾನಸಿಕವಾಗಿ ತಯಾರಿ ಮಾಡಿಕೊಳ್ಳುತ್ತಿದೆ. ಇನ್ನು ಮುಂದಿನ ಬದುಕಿಗೆ ತೆರೆದುಕೊಳ್ಳುತ್ತೇನೆ ಎಂದು ಹೇಳಿದರು.
Youtube Video

1979 ರಿಂದ ಉಗುರು ಬೆಳೆಸಲು ಪ್ರಾರಂಭಿಸಿದ್ದ ಇವರು, ಉಗುರು ಇರಲಿ, ಇರದಿರಲಿ ನಾನು ಯಾವಾಗಲೂ ರಾಣಿ. ನನ್ನಿಂದ ಉಗುರೇ ಹೊರತು ಉಗುರಿನಿಂದ ನಾನಲ್ಲ ಎಂದು ಹೇಳಿಕೊಂಡಿದ್ದಾರೆ. ಅವರ ಈ ಉಗುರನ್ನು ಫ್ಲೋರಿಡಾದ ಒರ್ಲಾಡೋದಲ್ಲಿರುವ ರಿಪ್ಲೇಯಸ್ ಬಿಲಿವ್ ಇಟ್ ಆರ್ ನಾಟ್ ಎಂಬ ಗೋಡೆ ಬರಹದಡಿ ಸಂಗ್ರಹಿಸಿಟ್ಟಿದ್ದಾರೆ.
Published by: Latha CG
First published: April 8, 2021, 12:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories