• Home
  • »
  • News
  • »
  • trend
  • »
  • ಹೊಟ್ಟೆ ನೋವಿನ ಕಾರಣ ಹುಡುಕಲು ಗೂಗಲ್‌ಗೆ ಬಂದ ಮಹಿಳೆಗೆ ಕಾದಿತ್ತು ಶಾಕ್; ರಿಪೋರ್ಟ್ ನಂತರ ಬಯಲಾಯ್ತು ಸತ್ಯ

ಹೊಟ್ಟೆ ನೋವಿನ ಕಾರಣ ಹುಡುಕಲು ಗೂಗಲ್‌ಗೆ ಬಂದ ಮಹಿಳೆಗೆ ಕಾದಿತ್ತು ಶಾಕ್; ರಿಪೋರ್ಟ್ ನಂತರ ಬಯಲಾಯ್ತು ಸತ್ಯ

(Credit: Instagram)

(Credit: Instagram)

ಜೆನ್ನಿ ಸ್ವಯಂ ತನ್ನ ಕಾಯಿಲೆಯನ್ನು ತಾನೇ ನಿರ್ಣಯಿಸಿಕೊಂಡಳು. ಗೂಗಲ್‌ನಲ್ಲಿ ಆಕೆಯ ರೋಗ ಲಕ್ಷಣಗಳು ಪ್ರೋಸ್ಟ್ರೇಟ್ ಕ್ಯಾನ್ಸರ್ ಎಂದು ತೋರಿಸಿದ್ದರಿಂದ ಆಕೆ ಆತಂಕಕ್ಕೆ ಒಳಗಾಗಿ ವೈದ್ಯರನ್ನು ಭೇಟಿಯಾಗಿದ್ದಾಳೆ. ಈ ನಿಟ್ಟಿನಲ್ಲಿ ತನಗೆ ಪ್ರೋಸ್ಟ್ರೇಟ್ ಕ್ಯಾನ್ಸರ್ ಇದೆಯೇ ಎಂದು ಪರಿಶೀಲಿಸಲು ವೈದ್ಯರನ್ನು ಕೇಳಿಕೊಂಡಿದ್ದಾಳೆ. ಆದರೆ ಜೆನ್ನಿಯನ್ನು ನೋಡಿ ವೈದ್ಯರು ನಕ್ಕಿದ್ದಾರೆ.

ಮುಂದೆ ಓದಿ ...
  • Share this:

ಇಂಗ್ಲೆಂಡ್‌ನ ದೆವೋನ್‌ನಲ್ಲಿರುವ ಪ್ಲೈಮೌತ್‌ನಲ್ಲಿ ಮಹಿಳೆಯೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ಹೊಟ್ಟೆ ನೋವಿನ ಲಕ್ಷಣಗಳನ್ನು ಗೂಗಲ್‌ನಲ್ಲಿ ಪರಿಶೀಲಿಸಿದ ನಂತರ ಆಕೆಗೆ ಗಂಭೀರವಾದ ಆರೋಗ್ಯ ಸಮಸ್ಯೆ ಇದೆ ಎಂದು ಗೂಗಲ್‌ನಲ್ಲಿ ಮಾಹಿತಿ ಲಭ್ಯವಾಗಿದೆ. ಆ ನಂತರ ಸಾಕಷ್ಟು ಬದಲಾವಣೆಗಳಾಗಿದ್ದು, ಈ ವಿಷಯವನ್ನು ಟಿಕ್​​ಟಾಕ್‌ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಜೆನ್ನಿ ಪಿಯರ್ಸ್ ಎನ್ನುವವರು @adventure_jenny ಎನ್ನುವ ತಮ್ಮ ಖಾತೆಯಲ್ಲಿ ಗೂಗಲ್‌ನಲ್ಲಿ ಆರೋಗ್ಯ ಸಮಸ್ಯೆಯನ್ನು ನೋಡಿಕೊಂಡು ಲಕ್ಷಣಗಳಿಂದ ಬೆಚ್ಚಿ ಬಿದ್ದು ವೈದ್ಯರ ಬಳಿಗೆ ಹೋದಾಗ ಮುಜುಗರಕ್ಕೆ ಒಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.


ಜೆನ್ನಿ ಸ್ವಯಂ ತನ್ನ ಕಾಯಿಲೆಯನ್ನು ತಾನೇ ನಿರ್ಣಯಿಸಿಕೊಂಡಳು. ಗೂಗಲ್‌ನಲ್ಲಿ ಆಕೆಯ ರೋಗ ಲಕ್ಷಣಗಳು ಪ್ರೋಸ್ಟ್ರೇಟ್ ಕ್ಯಾನ್ಸರ್ ಎಂದು ತೋರಿಸಿದ್ದರಿಂದ ಆಕೆ ಆತಂಕಕ್ಕೆ ಒಳಗಾಗಿ ವೈದ್ಯರನ್ನು ಭೇಟಿಯಾಗಿದ್ದಾಳೆ. ಈ ನಿಟ್ಟಿನಲ್ಲಿ ತನಗೆ ಪ್ರೋಸ್ಟ್ರೇಟ್ ಕ್ಯಾನ್ಸರ್ ಇದೆಯೇ ಎಂದು ಪರಿಶೀಲಿಸಲು ವೈದ್ಯರನ್ನು ಕೇಳಿಕೊಂಡಿದ್ದಾಳೆ. ಆದರೆ ಜೆನ್ನಿಯನ್ನು ನೋಡಿ ವೈದ್ಯರು ನಕ್ಕಿದ್ದಾರೆ.


ಇನ್ನು ವಿಡಿಯೋ ಟೆಕ್ಸ್ಟ್ ಮೂಲಕ ವಿವರಣೆ ಆರಂಭವಾಗುತ್ತದೆ. ತಾನು ಮುಜುಗುರ ಅನುಭವಿಸಿದ ಘಟನೆಯನ್ನು ಜೆನ್ನಿ ಟೆಕ್ಸ್ಟ್ ನಲ್ಲಿ ವಿವರಿಸಿದ್ದಾರೆ. ಜೆನ್ನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆದರೆ ಆಕೆಗೆ ಇದರಿಂದ ಗಂಭೀರ ಸಮಸ್ಯೆಗಳಾಗಿರಲಿಲ್ಲ. ಜೆನ್ನಿ ಆರೋಗ್ಯವಾಗಿಯೇ ಇದ್ದರು. ಆ ನಂತರ ಆಕೆ ವೈದ್ಯರನ್ನು ಭೇಟಿ ಮಾಡಿದ್ದಾರೆ. ತನಗೆ ಪ್ರೋಸ್ಟ್ರೇಟ್ ಕ್ಯಾನ್ಸರ್ ಇರಬಹುದೇ ಎಂದು ಕೇಳಿದ್ದಾರೆ. ಆದರೆ ವೈದ್ಯರು ಜೆನ್ನಿಯನ್ನು ನೋಡಿ ನಕ್ಕು 'ನಿಮಗೆ ಪ್ರೋಸ್ಟ್ರೇಟ್ ಅಂಗವೇ ಇಲ್ಲ. ಹಾಗಿದ್ದಲ್ಲಿ ಪ್ರೋಸ್ಟ್ರೇಟ್ ಕ್ಯಾನ್ಸರ್ ಹೇಗೆ ಬರಲು ಸಾಧ್ಯ ' ಎಂದು ಹೇಳಿ ನಕ್ಕಿದ್ದಾರೆ.


ಈ ಕ್ಲಿಪ್ ಒಂದು ಮಿಲಿಯನ್ ವೀಕ್ಷಣೆ ಪಡೆದಿದ್ದು, 89,000 ಲೈಕ್‌ಗಳನ್ನು ಪಡೆದುಕೊಂಡಿದೆ. ಅಲ್ಲದೇ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ ಇನ್ನಿತರರು ಕೂಡ ತಮ್ಮ ಅನುಭವವನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.


ವ್ಯಕ್ತಿಯೊಬ್ಬರು ಇದೇ ರೀತಿಯಾದ ಅನುಭವವನ್ನು ಹಂಚಿಕೊಂಡಿದ್ದು, ಅವರು ಸಾಯುತ್ತಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಆಂಬ್ಯುಲೆನ್ಸ್ ಬರುವ ಹೊತ್ತಿಗೆ ಅವರು ಸರಿಯಾಗಿದ್ದಾರೆ. ಆ ನಂತರ ಅವರ ತಂದೆ ಅಂಬ್ಯುಲೆನ್ಸ್ ಕ್ಯಾನ್ಸಲ್ ಮಾಡಿದ್ದರು ಎಂದು ತಿಳಿಸಿದ್ದಾರೆ. ಇನ್ನೊಬ್ಬ ಮಹಿಳೆ ತಾವು 18 ವರ್ಷದವರಿದ್ದಾಗ ಅನುಭವಿಸಿದ್ದ ಇಂತಹದ್ದೇ ಘಟನೆಯನ್ನು ಶೇರ್ ಮಾಡಿದ್ದಾರೆ.




'ಡಾ. ಗೂಗಲ್ ಅನ್ನೋದು ಒಂದು ರೀತಿ ಶಾಪವಾಗಿದೆ' ಎನ್ನುವ ಅಂಶವನ್ನು ಒಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಗೂಗಲ್ ಬಗ್ಗೆ ತಮ್ಮ ಅಸಮಧಾನ ಹೊರ ಹಾಕಿದ್ದಾರೆ. ಬಹುತೇಕರು ಜೆನ್ನಿಯಂತೆ ಗೂಗಲ್ ನೋಡಿಕೊಂಡು ಆತಂಕಕ್ಕೆ ಒಳಗಾಗಿದ್ದವರೇ ಆಗಿದ್ದಾರೆ.


ಇವತ್ತಿನ ದಿನಗಳಲ್ಲಿ ಗೂಗಲ್ ಅನ್ನೋದು ಕಾಯಿಲೆ ಪೀಡಿತರಿಗೆ ಒಂದು ರೀತಿ ವರದಾನವೂ ಹೌದು. ಇನ್ನೊಂದು ವಿಧದಲ್ಲಿ ಶಾಪವೂ ಹೌದು. ಸರಿಯಾದ ಮಾಹಿತಿಯನ್ನು ತೆಗೆದುಕೊಂಡು ಪರಿಶೀಲಿಸದೇ ಆತಂಕಕ್ಕೆ ಒಳಗಾಗಿರುವ ಎಷ್ಟೋ ಘಟನೆಗಳಿವೆ. ಅಲ್ಲದೇ ಡಾಕ್ಟರ್‌ಗಳು ಗೂಗಲ್ ಹೆಚ್ಚಾಗಿ ನೋಡಬೇಡಿ ಎಂದು ತಮ್ಮ ಗೂಗಲ್ ರೋಗಿಗಳಿಗೆ ತಿಳಿ ಹೇಳುತ್ತಲೇ ಇರುತ್ತಾರೆ. ಆದರೂ ಇದೆಲ್ಲದರ ಆಚೆಗೂ ಕೆಲವೊಮ್ಮೆ ಇಂತಹ ಘಟನೆಗಳು ನಡೆದಿರುತ್ತವೆ.

First published: