Woman Moustache: ದಪ್ಪ ಮೀಸೆಯ ಮಹಿಳೆ! ಆಕೆಯ ಜೀವನಶೈಲಿ ಹೇಗಿದೆ ಗೊತ್ತಾ?

ಮೀಸೆ ಹೊಂದಿರುವ ಈ ಮಹಿಳೆಯ ಹೆಸರು ಶೈಜಾ, ಕೇರಳದ ಕಣ್ಣೂರಿನವರು. 35 ವರ್ಷದ ಶೈಜಾಗೆ ಮುಖದ ಮೇಲೆ ಮೀಸೆಯಿದೆ. ಹೀಗಾಗಿ ಸಾಕಷ್ಟು ಬಾರಿ ಜನರು ಗೇಲಿ ಮತ್ತು ತಮಾಷೆಗೆ ಗುರಿಯಾಗಿದ್ದಾರೆ. ಆದರೂ ಸಹ ಅವರು ಮೀಸೆಯನ್ನು ತೆಗೆದಿಲ್ಲ. ನಾನು ಮೀಸೆ ಹೊಂದಲು ಇಷ್ಟ ಪಡುತ್ತೇನೆ. ಹಾಗಾಗಿ ಕತ್ತರಿಸಿಲ್ಲ ಎಂದಿದ್ದಾರೆ.

ಮೀಸೆ ಹೊಂದಿರುವ ಮಹಿಳೆ ಶೈಜಾ

ಮೀಸೆ ಹೊಂದಿರುವ ಮಹಿಳೆ ಶೈಜಾ

 • Share this:
  ಹುಡುಗರು (Boys) ಹದಿಹರೆಯಕ್ಕೆ ಬರುವ ಹೊತ್ತಿಗೆ ಅವರಿಗೆ ಗಡ್ಡ ಮತ್ತು ಮೀಸೆ (Moustache) ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ತಾರೆಯರು (Cinema Actress) ಗಡ್ಡ ಮೀಸೆಯ ಕ್ರೇಜ್ ಸಾಕಷ್ಟು ಹೊಂದಿದ್ದು, ಟ್ರೆಂಡ್ (Trend) ಆಗಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಹುಡುಗನೂ ಗಡ್ಡ, ಮೀಸೆ ಹೊಂದಲು ಬಯಸುತ್ತಾನೆ. ಆದರೆ ಕೆಲವೊಮ್ಮೆ ಹುಡುಗರಿಗೆ ಗಡ್ಡ, ಮೀಸೆ ಇಲ್ಲದಿರುವುದು ಹಾರ್ಮೋನ್ ಹದಗೆಡುವುದರ ಸಂಕೇತ ಆಗಿದೆ. ಮಹಿಳೆಯರಲ್ಲಿ ಹಾರ್ಮೋನ್ ಹದಗೆಟ್ಟಾಗ ಮುಖದ ಮೇಲೆ ಹೆಚ್ಚು ಕೂದಲು ಬರುತ್ತದೆ. ಮಹಿಳೆಯರು ಕ್ರೀಮ್‌, ಮೇಣದ ಪಟ್ಟಿ, ರೇಜರ್‌ಗಳು ಮತ್ತು ಎಪಿಲೇಟರ್‌ ಇತ್ಯಾದಿಗಳಿಂದ ಮುಖದ ಮೇಲಿನ ಈ ಕೂದಲನ್ನು ತೆಗೆದು ಹಾಕುತ್ತಾರೆ.

  ಆದರೆ ಭಾರತದಲ್ಲಿ ಮೀಸೆ ಹೊಂದಿರುವ ಕೆಲ ಮಹಿಳೆಯರಿದ್ದಾರೆ. ಇಲ್ಲೊಬ್ಬ ಮಹಿಳೆ ಮೀಸೆ ಇಡಲು ಇಷ್ಟ ಪಡುತ್ತಾರೆ. ಹಲವು ಬಾರಿ ಜನರು ತಮಾಷೆ, ಗೇಲಿ ಮಾಡಿದರೂ ಮೀಸೆ ತೆಗೆದಿಲ್ಲ. ಹಾಗಿದ್ರೆ ಯಾರು ಆ ಮಹಿಳೆ? ಮೀಸೆ ಬರಲು ಕಾರಣವೇನು ಇಲ್ಲಿ ತಿಳಿಯೋಣ.

  ಯಾರು ಆ ಮೀಸೆ ಹೊಂದಿರುವ ಮಹಿಳೆ

  ಮೀಸೆ ಹೊಂದಿರುವ ಈ ಮಹಿಳೆಯ ಹೆಸರು ಶೈಜಾ, ಕೇರಳದ ಕಣ್ಣೂರಿನವರು. 35 ವರ್ಷದ ಶೈಜಾಗೆ ಮುಖದ ಮೇಲೆ ಮೀಸೆಯಿದೆ. ಹೀಗಾಗಿ ಸಾಕಷ್ಟು ಬಾರಿ ಜನರು ಗೇಲಿ ಮತ್ತು ತಮಾಷೆಗೆ ಗುರಿಯಾಗಿದ್ದಾರೆ. ಆದರೂ ಸಹ ಅವರು ಮೀಸೆಯನ್ನು ತೆಗೆದಿಲ್ಲ. ಈ ಬಗ್ಗೆ ಶೈಜಾ, ಸಂದರ್ಶನವೊಂದರಲ್ಲಿ ಮಾತನಾಡಿದ್ದಾಳೆ. ನಾನು ಮೀಸೆ ಹೊಂದಲು ಇಷ್ಟ ಪಡುತ್ತೇನೆ. ಹಾಗಾಗಿ ಕತ್ತರಿಸಿಲ್ಲ ಎಂದಿದ್ದಾರೆ.

  ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ

  ಅನೇಕ ಮಹಿಳೆಯರಂತೆ ಶೈಜಾ ಅವರ ಮುಖದ ಮೇಲೂ ಹೆಚ್ಚು ಕೂದಲು ಇದೆ. ನಿಯಮಿತವಾಗಿ ಥ್ರೆಡಿಂಗ್ ಮಾಡುತ್ತಿದ್ದಳು. ಆದರೆ ತುಟಿಯ ಮೇಲೆ ಬೆಳೆದಿರುವ ಕೂದಲು ಅಂದ್ರೆ ಮೀಸೆಯನ್ನು ಅವಳು ಎಂದಿಗೂ ತೆಗೆದು ಹಾಕಲು ಯೋಚಿಸಿಲ್ಲ. ಸುಮಾರು ಐದು ವರ್ಷಗಳ ಹಿಂದೆ ಮೀಸೆ ದಪ್ಪವಾಗುತ್ತಾ ಹೋಯಿತು.

  ಸಂದರ್ಶನದಲ್ಲಿ ಶೈಜಾ ಹೇಳಿರುವ ಪ್ರಕಾರ, ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಮಾಸ್ಕ್ ಧರಿಸಲು ಇಷ್ಟವಾಗುತ್ತಿರಲಿಲ್ಲ. ಮಾಸ್ಕ್ ಮೀಸೆ ಮುಚ್ಚುತ್ತಿತ್ತು. ಹಾಗಾಗಿ ಮಾಸ್ಕ್ ಧರಿಸಲು ಇಷ್ಟವಿರಲಿಲ್ಲ. ಅನೇಕರು ಮೀಸೆ ಕತ್ತರಿಸಲು ಹೇಳಿದರು. ಆದರೆ ನಾನು ಕತ್ತರಿಸಿಲ್ಲ. ನಾನು ಸುಂದರವಾಗಿಲ್ಲ ಎಂದು ನಾನು ಎಂದಿಗೂ ಭಾವಿಸಿಲ್ಲ ಎಂದಿದ್ದಾರೆ.

  ಶೈಜಾ ಕುಟುಂಬ ಮತ್ತು ಅವರ ಮಗಳು ಅವರಿಗೆ ಸಾಕಷ್ಟು ಬೆಂಬಲಿಸುತ್ತಾರೆ. ಅವರಿಗೆ ಮೀಸೆ ಚೆನ್ನಾಗಿ ಕಾಣುತ್ತೆ ಎನ್ನುತ್ತಾರೆ ಶೈಜಾ ಮಗಳು. ಆದತೆ ಶೈಜಾ, ಸಮಾಜದಲ್ಲಿ ಜನರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.

  ಶೈಜಾ ಮೀಸೆ ಕತ್ತರಿಸದೇ ಇರಲು ಕಾರಣವೇನು?

  ನನಗೆ ಎರಡು ಜೀವಗಳಿದ್ದಿದ್ದರೆ ನಾನು ಇತರರಿಗಾಗಿ ಒಂದು ಜೀವನ ನಡೆಸಬಹುದಿತ್ತು. ಇಲ್ಲಿಯವರೆಗೆ 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಸ್ತನದ ಗಡ್ಡೆ ತೆಗೆದು ಹಾಕುವ ಶಸ್ತ್ರಚಿಕಿತ್ಸೆ, ಅಂಡಾಶಯದಿಂದ ಚೀಲ ತೆಗೆದು ಹಾಕಲು ಶಸ್ತ್ರಚಿಕಿತ್ಸೆ.

  ನನ್ನ ಕೊನೆಯ ಶಸ್ತ್ರಚಿಕಿತ್ಸೆ ಐದು ವರ್ಷಗಳ ಹಿಂದೆ ಗರ್ಭಕಂಠವಾಗಿತ್ತು. ಯಾವುದೇ ಶಸ್ತ್ರಚಿಕಿತ್ಸೆಯಾದಾಗ ಇದು ನನ್ನ ಕೊನೆಯ ಶಸ್ತ್ರಚಿಕಿತ್ಸೆ ಎಂದು ಭಾವಿಸುತ್ತೇನೆ. ಈಗ ನಾನು ಆತ್ಮವಿಶ್ವಾಸ ಗಳಿಸಿದ್ದೇನೆ. ಹಾಗಾಗಿ ನನಗೆ ಬೇಕಾದ ಹಾಗೂ ಸಂತೋಷಮಯ ಜೀವನ ನಡೆಸುತ್ತೇನೆ ಎಂದಿದ್ದಾರೆ.

  ಶೈಜಾ ಮನೆಯಿಂದ ಹೊರಗೆ ಬರಲಿಲ್ಲ

  ಬಾಲ್ಯದಿಂದಲೂ ತುಂಬಾ ನಾಚಿಕೆ ಸ್ವಭಾವ ನನ್ನದು. ಅದರಲ್ಲೂ ಗ್ರಾಮದ ಮಹಿಳೆಯರು ಸಂಜೆ 6 ಗಂಟೆಯ ನಂತರ ಮನೆಯಿಂದ ಹೊರ ಬರುತ್ತಿರಲಿಲ್ಲ. ಆದರೆ ಮದುವೆಯಾದ ಮೇಲೆ ತಮಿಳುನಾಡಿನ ಅತ್ತೆಯ ಮನೆಗೆ ಹೋಗಿದ್ದೆ. ಅಲ್ಲಿ ಸಂಜೆ ಹೊರಗೆ ಓಡಾಡಲು ಅವಕಾಶ ಸಿಗುತ್ತಿತ್ತು. ರಾತ್ರಿ ಒಬ್ಬಳೇ ಅಂಗಡಿಗೆ ಹೋಗುತ್ತಿದ್ದೆ. ಸ್ವಂತ ಕೆಲಸ ಮಾಡುತ್ತಿದ್ದೆ. ಅದು ಆತ್ಮವಿಶ್ವಾಸ ಹೆಚ್ಚಿಸಿತು ಎಂದಿದ್ದಾರೆ.

  ಮಹಿಳೆಯರಿಗೆ ಗಡ್ಡ, ಮೀಸೆ ಏಕೆ ಬರುತ್ತದೆ ?

  ಲೆವೆಲ್ ಮತ್ತು ಕ್ಲಿನಿಕ್ ಪ್ರಕಾರ, ಕೆಲವು ಮಹಿಳೆಯರಿಗೆ ದೇಹದ ತುಟಿಗಳ ಮೇಲ್ಭಾಗ, ಗಲ್ಲ, ಎದೆ, ಹೊಟ್ಟೆಯ ಕೆಳಭಾಗದಲ್ಲಿ ಕೂದಲುಗಳು ಹೆಚ್ಚು ಕಂಡು ಬರುತ್ತದೆ. ಮತ್ತು ಕಾಲಾನಂತರದಲ್ಲಿ ದಪ್ಪವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಈ ಸ್ಥಿತಿಯನ್ನು ಹಿರ್ಸುಟಿಸಮ್ ಎನ್ನುತ್ತಾರೆ.

  ಹಿರ್ಸುಟಿಸಮ್ ಎಂಬುದು ದೇಹದ ಕೆಲವು ಭಾಗಗಳಲ್ಲಿ ಹೆಚ್ಚುವರಿ ಕೂದಲು ಬೆಳೆಯುವ ಸ್ಥಿತಿ. ಹಿರ್ಸುಟಿಸಂ ಮಹಿಳೆಯರಲ್ಲಿ ಅನಗತ್ಯ ಕೂದಲು ಬೆಳೆಯುವಿಕೆ, ಧ್ವನಿ ಭಾರವಾಗುವುದು, ಸ್ತನ ಗಾತ್ರ ಕಡಿಮೆಯಾಗುವುದು, ಸ್ನಾಯುಗಳ ಬೆಳೆವಣಿಗೆ, ಮೊಡವೆ, ಪಿಸಿಓಎಸ್ ಹೊಂದಿರುವ ಮಹಿಳೆಯರು ಹಿರ್ಸುಟಿಸಮ್ಗೆ ಗುರಿಯಾಗುತ್ತಾರೆ.

  ಇದನ್ನೂ ಓದಿ: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು

  ಹಿರ್ಸುಟಿಸಮ್ಗೆ ಕಾರಣಗಳು

  ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್, ಆಂಡ್ರೋಜೆನ್ ಉತ್ಪಾದನೆ, ಅತಿಯಾದ ಔಷಧಿ ಸೇವನೆ, ಋತುಬಂಧ ಸಮಸ್ಯೆ, ಕುಶಿಂಗ್ ಸಿಂಡ್ರೋಮ್ ಇತ್ಯಾದಿಗಳಿಂದ ಉಂಟಾಗಬಹುದು.
  Published by:renukadariyannavar
  First published: