ಸಾಮಾನ್ಯವಾಗಿ ನಾವು ಈ ಬಸ್ (Bus) ಗಳಲ್ಲಿ ಪ್ರಯಾಣಿಸುವಾಗ ಅಲ್ಲಿ ‘ಧೂಮಪಾನ ನಿಷೇಧಿಸಿದೆ’ ಅಂತ ದೊಡ್ಡದಾಗಿ ಬರೆದಿರುವುದನ್ನು ನಾವೆಲ್ಲಾ ನೋಡುತ್ತೇವೆ. ಎಂದರೆ ಇದರರ್ಥ ಯಾರೊಬ್ಬರು ಬಸ್ ನಲ್ಲಿ ಸಿಗರೇಟ್ (Cigarette) ಅಥವಾ ಬೀಡಿಗಳನ್ನು ಸೇದಬಾರದು ಅಂತ. ಇಷ್ಟು ಹೇಳಿದರೂ ನಮ್ಮ ಜನರು ಕೆಲವೊಮ್ಮೆ ಕಂಡೆಕ್ಟರ್ ಮತ್ತು ಡ್ರೈವರ್ ಕಣ್ಣು ತಪ್ಪಿಸಿ ಬಸ್ ನ ಹಿಂಬದಿ ಬಾಗಿಲ ಫುಟ್ ಬೋರ್ಡ್ ನಲ್ಲಿ ನಿಂತು ಅಥವಾ ಕೊನೆಯ ಸೀಟ್ ನಲ್ಲಿ ಕುಳಿತು ಒಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಹಾಗೆಯೇ ಮೆಲ್ಲಗೆ ಅದನ್ನು ಸೇದುತ್ತಾ, ಹಾಗೆಯೇ ಆ ಹೊಗೆಯನ್ನು ಕಿಟಕಿಯಿಂದ ಆಚೆಗೆ ಬಿಡುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ.
ಇನ್ನೂ ಈ ರೈಲಿನಲ್ಲೂ ಸಹ ಸಿಗರೇಟ್ ಸೇದಬೇಡಿ ಅಂತ ಸಿಗರೇಟಿನ ಚಿತ್ರ ಬರೆದು ಅದರ ಮೇಲೆ ಬೇಡ ಅಂತ ಹೇಳುವ ಕ್ರಾಸ್ ಚಿಹ್ನೆಯನ್ನು ಬಳಸಿರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಇಂತಹ ಸಾರಿಗೆಗಳಲ್ಲಿ ಸಿಗರೇಟ್ ಸೇದುವುದರಿಂದ ಆ ಹೊಗೆ ಅಲ್ಲಿಯೇ ಇದ್ದು, ಅದರಿಂದ ಇತರ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಅಂತ ಮತ್ತು ಬೆಂಕಿ ಅವಘಡಗಳು ಸಂಭವಿಸದೆ ಇರಲಿ ಅಂತ ಹಾಗೆ ಸೂಚನೆ ನೀಡಿರುತ್ತಾರೆ.
ಆದರೆ ನಮ್ಮ ಜನರು ಗೊತ್ತಲ್ಲ, ಏನು ಮಾಡಬೇಡಿ ಅಂತ ಹೇಳಿರುತ್ತೇವೆಯೋ, ಅದನ್ನೇ ಮೊದಲು ಮಾಡಿ ನೋಡುತ್ತಾರೆ.
ಚಲಿಸುವ ರೈಲಿನಲ್ಲಿ ಗಾಂಜಾ ಮತ್ತು ಸಿಗರೇಟ್ ಸೇದಿದ ಮಹಿಳೆ..
ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದ್ದು, ಆ ಘಟನೆಯನ್ನು ಅಲ್ಲಿಯೇ ಇದ್ದ ಜನರು ವೀಡಿಯೋ ಮಾಡಿ ಅದನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ನೋಡಿ. ಮಹಿಳೆಯೊಬ್ಬಳು ಟಾಯ್ಲೆಟ್ ರೂಂ ಹತ್ತಿರ ನಿಂತು ರಾಜಾರೋಷವಾಗಿ ಸಿಗರೇಟ್ ಸೇದಿ ಹೊಗೆಯನ್ನು ಬಿಡುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.
ಇದನ್ನೂ ಓದಿ: NASA: ಆಗಸದಲ್ಲಿ ಕಂಡುಬಂದ ನೈಸರ್ಗಿಕ ಬೆಳಕಿನಾಟ, ಅದ್ಭುತ ಚಿತ್ರ ಹಂಚಿಕೊಂಡ ನಾಸಾ!
21 ಸೆಕೆಂಡಿನ ಈ ವೀಡಿಯೋ ಕ್ಲಿಪ್ ನಲ್ಲಿ ಮಹಿಳೆಯೊಬ್ಬರು ರೈಲಿನೊಳಗೆ ನಿಂತುಕೊಂಡು ಗಾಂಜಾ ಮತ್ತು ಸಿಗರೇಟುಗಳನ್ನು ಸೇದುತ್ತಿರುವುದನ್ನು ನಾವು ನೋಡಬಹುದು. ಈ ವೀಡಿಯೋವನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಟಾಟಾನಗರದಿಂದ ಕಟಿಹಾರ್ ಗೆ ಹೋಗುವ ರೈಲಿನಲ್ಲಿ ಈ ಮಹಿಳೆ ಪ್ರಯಾಣಿಸುತ್ತಿದ್ದು, ಇತರೆ ಸಹ ಪ್ರಯಾಣಿಕರು ಇದರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇಡೀ ರಾತ್ರಿ ಹೀಗೆ ಗಾಂಜಾ ಮತ್ತು ಸಿಗರೇಟ್ ಸೇದಿದ್ದಾಳಂತೆ ಈ ಮಹಿಳೆ
ಮಹಿಳೆ ಅಸನ್ಸೋಲ್ ನಲ್ಲಿ ರೈಲು ಹತ್ತಿ ಇಡೀ ರಾತ್ರಿ "ಗಾಂಜಾ ಮತ್ತು ಸಿಗರೇಟುಗಳನ್ನು ಸೇದುತ್ತಿದ್ದಳು" ಎಂದು ಪ್ರಯಾಣಿಕರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ರೈಲ್ವೆ ಸೇವಾ, ಪ್ರಯಾಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವಿನಂತಿಸಿದ್ದಾರೆ.
ಅವರ ಅನಾನುಕೂಲತೆಗೆ ಪ್ರತಿಕ್ರಿಯಿಸಿದ ರೈಲ್ವೆ ಸೇವಾ, "ಸರ್, ದಯವಿಟ್ಟು ಪ್ರಯಾಣದ ವಿವರಗಳನ್ನು (ಪಿಎನ್ಆರ್ / ರೈಲು ಸಂಖ್ಯೆ) ಮತ್ತು ಮೊಬೈಲ್ ಸಂಖ್ಯೆಯನ್ನು ನೇರವಾಗಿ ನಮಗೆ ಸಂದೇಶದ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಲು ನಾವು ವಿನಂತಿಸುತ್ತೇವೆ.
ತ್ವರಿತ ಪರಿಹಾರಕ್ಕಾಗಿ ನೀವು ನಿಮ್ಮ ಕಳವಳವನ್ನು ನೇರವಾಗಿ http://railmadad.indianrailways.gov.in ಅಥವಾ 139 ಗೆ ಡಯಲ್ ಮಾಡಿ ಸಹ ತಿಳಿಸಬಹುದು.
@AshwiniVaishnaw
इन लड़कियों ने रात भर गांजा और सीक्रेट करें पिया है 😡
Yah log Asansol mein chadhi thi Tata Katihar train mein pic.twitter.com/vo5YwI3DIf
— Parmanand kumar Saw (@Parmana93518260) February 27, 2023
ರೈಲಿನಲ್ಲಿ ಸಿಗರೇಟ್ ಕೈಗೆ ತೆಗೆದುಕೊಳ್ಳುವ ಮುಂಚೆ ಎರಡು ಬಾರಿ ಯೋಚನೆ ಮಾಡಿ. ಏಕೆಂದರೆ ನಿಮ್ಮ ಮೇಲೆ ಬೀಳುತ್ತೆ ಭಾರಿ ದಂಡ. ರೈಲುಗಳಲ್ಲಿ ಧೂಮಪಾನ ಮಾಡುವ ಪ್ರಯಾಣಿಕರನ್ನು ಬಂಧಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಭಾರತೀಯ ರೈಲ್ವೆ ಯೋಚಿಸುತ್ತಿದೆ.
ರೈಲ್ವೆ ಕಾಯ್ದೆಯ ಸೆಕ್ಷನ್ 167 ರ ಪ್ರಕಾರ, ಸಹ ಪ್ರಯಾಣಿಕರಿಂದ ನಿಷೇಧ ಅಥವಾ ಆಕ್ಷೇಪಣೆಯ ಹೊರತಾಗಿಯೂ ಯಾರಾದರೂ ಕಂಪಾರ್ಟ್ಮೆಂಟ್ ನಲ್ಲಿ ಧೂಮಪಾನ ಮಾಡುವುದು ಕಂಡುಬಂದರೆ 100 ರೂಪಾಯಿವರೆಗೂ ದಂಡ ವಿಧಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ