Plastic Skin: ಬರೀ ಅರ್ಧ ಗಂಟೆ ಬಿಸಿಲಿನಲ್ಲಿ ಮಲಗಿದ ಮಹಿಳೆ! ಈಕೆಯ ಮುಖ ಹೇಗಾಗಿದೆ ನೋಡಿ

ಇಲ್ಲೊಬ್ಬ ಮಹಿಳೆ ಬಿಸಿಲಿನಲ್ಲಿ ಕೂತು ಹಾಗೆಯೇ ನಿದ್ರೆಗೆ ಜಾರಿದ್ದಾಳೆ ನೋಡಿ. ನಿದ್ದೆ ಮಾಡಿದರೆ ಏನು ತಪ್ಪು ಬಿಡಿ ಅಂತ ನೀವು ಕೇಳಬಹುದು. ಆದರೆ ಹೀಗೆ ಅರ್ಧ ಗಂಟೆ ಬಿಸಿಲಿನಲ್ಲಿ ಮಲಗಿರುವುದರಿಂದ ಆಕೆಯ ಹಣೆಯ ಮೇಲಿನ ಚರ್ಮವು ಪ್ಲಾಸ್ಟಿಕ್ ನಂತೆ ಆಗಿದೆ ನೋಡಿ.

ಬಿಸಿಲಿನಲ್ಲಿ ನಿದ್ದೆ ಮಾಡಿದ್ದಕ್ಕೆ ಪ್ಲಾಸ್ಟಿಕ್ ನಂತೆ ಆದ ಚರ್ಮ

ಬಿಸಿಲಿನಲ್ಲಿ ನಿದ್ದೆ ಮಾಡಿದ್ದಕ್ಕೆ ಪ್ಲಾಸ್ಟಿಕ್ ನಂತೆ ಆದ ಚರ್ಮ

  • Share this:
ಸಾಮಾನ್ಯವಾಗಿ ನಾವು ಬೇಸಿಗೆ (Summer) ಕಾಲದಲ್ಲಿ ಎಲ್ಲಿಯಾದರೂ ಹೊರಗೆ ಹೋಗಬೇಕಾದರೆ ನಮ್ಮ ಚರ್ಮವು ಬಿಸಿಲಿನ ಶಾಖಕ್ಕೆ ಸುಡಬಾರದು ಎಂದು ಸನ್‌ಸ್ಕ್ರೀನ್ (Sunscreen) ಕ್ರೀಮ್ ಗಳನ್ನು ಹಚ್ಚಿಕೊಳ್ಳುತ್ತೇವೆ. ಅದೇ ರೀತಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಡಿ ಕೊರತೆ ಇದ್ದರೆ, ವೈದ್ಯರು ನಮಗೆ ಬೆಳಿಗ್ಗೆ ಹೊತ್ತಿನಲ್ಲಿ ಬರುವ ಆ ಸೂರ್ಯನ ಕಿರಣಗಳಿಗೆ (sun ray) ಸ್ವಲ್ಪ ಹೊತ್ತು ಕುಳಿತುಕೊಳ್ಳಿ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ಬಿಸಿಲಿನಲ್ಲಿ ಕೂತು ಹಾಗೆಯೇ ನಿದ್ರೆಗೆ ಜಾರಿದ್ದಾಳೆ ನೋಡಿ. ನಿದ್ದೆ (Sleep) ಮಾಡಿದರೆ ಏನು ತಪ್ಪು ಬಿಡಿ ಅಂತ ನೀವು ಕೇಳಬಹುದು. ಆದರೆ ಹೀಗೆ ಅರ್ಧ ಗಂಟೆ ಬಿಸಿಲಿನಲ್ಲಿ ಮಲಗಿರುವುದರಿಂದ ಆಕೆಯ ಹಣೆಯ ಮೇಲಿನ ಚರ್ಮವು ಪ್ಲಾಸ್ಟಿಕ್ (Plastic) ನಂತೆ ಆಗಿದೆ ನೋಡಿ.

ಹಣೆಯ ಮೇಲಿನ ಚರ್ಮ ನೋಡಿ ದಿಗ್ಭ್ರಮೆಗೊಂಡ ಮಹಿಳೆ
ಮಲಗುವುದು ಒಳ್ಳೆಯ ಅಭ್ಯಾಸವೇ, ಆದರೆ ಇದನ್ನು ನೆರಳಿನಲ್ಲಿ ಮಾಡುವುದು ಉತ್ತಮ. ಏಕೆಂದರೆ ನೀವು ತುಂಬಾ ಸಮಯದವರೆಗೆ ನೇರ ಸೂರ್ಯನ ಬೆಳಕಿನಲ್ಲಿ ನಿದ್ರಿಸಿದರೆ, ನಿಮಗೂ ಸಹ ಈ ಮಹಿಳೆಯಂತೆಯೇ ನಿಮ್ಮ ಮುಖದ ಚರ್ಮವು ಪ್ಲಾಸ್ಟಿಕ್ ನಂತೆ ಆಗುತ್ತದೆ ನೋಡಿ. ಬ್ಯೂಟಿಷಿಯನ್ ಸಿರಿನ್ ಮುರಾದ್ ಅವರು ಕೇವಲ 30 ನಿಮಿಷಗಳ ಕಾಲ ಬಲ್ಗೇರಿಯಾದ ಕಡಲತೀರದಲ್ಲಿ ನಿದ್ರೆಗೆ ಜಾರಿದ್ದರು. ಅವರು ಎಚ್ಚರಗೊಂಡಾಗ ತನ್ನ ಹಣೆಯ ಮೇಲಿನ ಚರ್ಮವನ್ನು ನೋಡಿ, ಆಕೆ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಂತೂ ನಿಜ ಎಂದು ಹೇಳಬಹುದು.

ಸನ್‌ಸ್ಕ್ರೀನ್ ಹಚ್ಚಿಕೊಳ್ಳದೆ ಬಿಸಿಲಿನಲ್ಲಿ ಮಲಗಿದ್ದರಿಂದಾದ ಪರಿಣಾಮ 
25 ವರ್ಷದ ಮಹಿಳೆ ತನ್ನ ಮುಖಕ್ಕೆ ಯಾವುದೇ ಸನ್‌ಸ್ಕ್ರೀನ್ ಹಚ್ಚಿರಲಿಲ್ಲ ಮತ್ತು ಸುಮಾರು ಅರ್ಧ ಗಂಟೆಯ ನಂತರ ನಿದ್ದೆಯಿಂದ ಎಚ್ಚರಗೊಂಡಳು. ಆರಂಭದಲ್ಲಿ, ಅವಳು ತನ್ನ ಮುಖವು ಸ್ವಲ್ಪ ನೋಯುತ್ತಿದೆ ಮತ್ತು ಕೆಂಪಾಗಿದೆ ಎಂದು ಭಾವಿಸಿದಳು ಮತ್ತು 21 ಡಿಗ್ರಿ ಸಲ್ಸಿಯಸ್ ಬಿಸಿಲಿನಲ್ಲಿ ಹಾಗೆಯೇ ವಿಶ್ರಾಂತಿ ಪಡೆಯುವುದನ್ನು ಮುಂದುವರಿಸಿದಳು. ಸನ್‌ಸ್ಕ್ರೀನ್ ಹಚ್ಚಿಕೊಳ್ಳದೆ ಬಿಸಿಲಿನಲ್ಲಿ ಮಲಗಿದ್ದರಿಂದ ಆದ ಆ ಪರಿಣಾಮವು ಮರುದಿನ ಆಕೆಯ ಹಣೆಯ ಮೇಲೆ ಸ್ಪಷ್ಟವಾಗಿ ಕಾಣುತ್ತಿತ್ತು.

ಇದನ್ನೂ ಓದಿ:  Viral Photo: ಇವನ್ಯಾವ ನಟನೂ ಅಲ್ಲ, ಮಾಡೆಲ್ ಕೂಡ ಅಲ್ಲ ಇವನು ದೆಹಲಿಯ ಭಿಕ್ಷುಕ ಕಣ್ರೀ! ಎಲ್ಲಾ ಕಡೆ ಇವನದ್ದೇ ಸುದ್ದಿ

ಸಿರಿನ್ ಮುಖವು ಕೆಂಪಾಗಿ ತುಂಬಾ ನೋವನ್ನು ಸಹ ಆಕೆ ಅನುಭವಿಸಿದಳು ಮತ್ತು ಅವಳ ಚರ್ಮವು ಎಷ್ಟು ಬಿಗಿಯಾಗಿತ್ತು ಎಂದರೆ ಅದು ಪ್ಲಾಸ್ಟಿಕ್ ನಂತೆ ಕಾಣಲು ಶುರುವಾಯಿತು.ಅವಳು ತಕ್ಷಣವೇ ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲಿಲ್ಲ. ಮೊದಲು ತನ್ನ ಕುಟುಂಬದೊಂದಿಗೆ ಈ ಸಮಸ್ಯೆಯ ಬಗ್ಗೆ ಮಾತನಾಡಿದಳು. ಆದರೆ ಸಮಯ ಕಳೆದಂತೆ ಆ ನೋವು ಮತ್ತು ಕೆಂಪಾಗುವಿಕೆ ಇನ್ನಷ್ಟು ಹದಗೆಡಲು ಆರಂಭವಾಯಿತು.

ಈ ಬಗ್ಗೆ ಸಿರಿನ್ ಮುರಾದ್ ಏನು ಹೇಳಿಕೊಂಡಿದ್ದಾರೆ
ಅವಳ ಹಣೆಯ ಮೇಲಿನ ಚರ್ಮ ಮತ್ತು ಅವಳ ಕಣ್ಣುಗಳ ಸುತ್ತಲೂ ಚರ್ಮವು ಒಳ್ಳೆ ಸಿಪ್ಪೆ ಸುಲಿದಂತೆ ಕಾಣಿಸಲು ಶುರುವಾಯಿತು ಮತ್ತು ಮುಖದ ಮೇಲೆ ಗುಲಾಬಿ ಬಣ್ಣದ ತೇಪೆಗಳು ಸಹ ಕಾಣಿಸಿದವು. ಚರ್ಮವು ಸಿಪ್ಪೆ ಸುಲಿಯಲು ಪ್ರಾರಂಭಿಸಿದಾಗ ತನಗೆ ಸ್ವಲ್ಪ ಪರಿಹಾರ ಸಿಕ್ಕಿತು ಎಂದು ಸಿರಿನ್ ಹೇಳಿದರು. ಆದರೆ ಅದು ಇನ್ನೂ ತುಂಬಾ ನೋವಿನಿಂದ ಕೂಡಿತ್ತು ಎಂದು ಅವರು ಹೇಳುತ್ತಾರೆ.

"ಮರುದಿನ ಇದು ನಿಜವಾಗಿಯೂ ನೋವುಂಟು ಮಾಡಿತು ಆದರೆ ಅದು ಸಿಪ್ಪೆ ಸುಲಿಯಲು ಪ್ರಾರಂಭಿಸಿದಾಗ ನನಗೆ ನಿಜವಾಗಿಯೂ ಸ್ವಲ್ಪ ಸಮಾಧಾನ ಸಿಕ್ಕಿತು. ಆಗ ನೋವು ಕಡಿಮೆ ಆಯಿತು ಮತ್ತು ನಾನು ಹೆಚ್ಚು ಸುಧಾರಿಸಿಕೊಂಡೆ ಅಂತ ಅನ್ನಿಸಲು ಶುರುವಾಯಿತು. ವಿಚಿತ್ರವೆಂದರೆ ನನ್ನ ಚರ್ಮವು ಈಗ ಮೊದಲಿಗಿಂತಲೂ ಉತ್ತಮವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ" ಎಂದು ಅವರು ಹೇಳಿದರು.

ಇದನ್ನೂ ಓದಿ: Self Love: ಈ ಸ್ಟೋರಿ ಓದಿದ್ರೆ ನಿಮಗೆ ನಿಮ್ಮ ಮೇಲೆ ಲವ್ವಾಗೋದು ಗ್ಯಾರೆಂಟಿ! ಅಷ್ಟಕ್ಕೂ ಏನಿದೆ ನೋಡಿ

ಅವಳ ಮುಖದ ಚರ್ಮವು  ಸಾಮಾನ್ಯ ಸ್ಥಿತಿಗೆ ಮರಳಲು ಸುಮಾರು ಏಳು ವಾರಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಅವಳು ಈಗ ತನ್ನ ಕೆನ್ನೆಗಳ ಮೇಲೆ ಮತ್ತು ಕಣ್ಣುಗಳ ಕೆಳಗೆ ಕೆಲವು ತೇಪೆಗಳನ್ನು ಮಾತ್ರ ಹೊಂದಿದ್ದಾಳೆ ಎಂದು ಹೇಳಲಾಗುತ್ತಿದೆ.

ಬಿಸಿಲಿನಲ್ಲಿ ಹೋಗುವಾಗ ಸನ್ಸ್ಕ್ರೀನ್ ಬಳಸುವುದು ತುಂಬಾ ಮುಖ್ಯ
ಸನ್‌ಸ್ಕ್ರೀನ್ ಬಳಸುವುದು ತುಂಬಾ ಮುಖ್ಯ, ಏಕೆಂದರೆ ಚರ್ಮವು ಯಾವಾಗಲೂ ಸೂರ್ಯನಿಂದ ಗಾಯಕ್ಕೆ ಒಳಗಾಗುತ್ತದೆ. ಕ್ರೀಮ್ ನ ಮುಖವಾಡವು ನಮ್ಮ ಚರ್ಮವನ್ನು ಯುವಿ ಕಿರಣಗಳಿಂದ ರಕ್ಷಿಸುವುದಲ್ಲದೆ ಸುಕ್ಕುಗಳು, ಅನಗತ್ಯ ಪಿಗ್ಮೆಂಟೇಶನ್ ಸೇರಿದಂತೆ ಚರ್ಮದ ಹಾನಿಯನ್ನು ತಡೆಯುತ್ತದೆ.
Published by:Ashwini Prabhu
First published: