ಮದುವೆ ಅಂದ್ರೆ ಅದೊಂದು ರೀತಿಯ ಜೀವನದ ಟರ್ನಿಂಗ್ ಪಾಯಿಂಟ್ (Turning Point) ಅಂತಲೇ ಹೇಳಬಹುದು. ಯಾಕಂದ್ರೆ ಅಲ್ಲಿಯ ತನಕ ನಾನು ನಾನು ಎಂದು ಹೇಳುವ ಜನರು ನಾವು ಎಂದು ಜೀವನ ಆರಂಭವಾಗುತ್ತದೆ. ಮದುವೆಯ ನಂತರ ಅದೆಷ್ಟೋ ಜನರ ಜೀವನ ಬದಲಾಗುತ್ತದೆ. ತನ್ನ ಮನಸ್ಸಿನ ಆಗುವ ಬೇಸರ, ದುಗುಡ ಅಥವಾ ಬರುವ ಸಂಕಷ್ಟಗಳನ್ನು ಒಟ್ಟಿಗೆ ನಿಭಾಯಿಸುತ್ತಾರೆ. ಹೀಗಾಗಿ ಅದೆಷ್ಟೋ ಜನರಿಗೆ ಮದುವೆ ಅಂದ್ರೆ ಒಂದು ಹೊಸ ಜೀವನ, ಖುಷಿ ಘಳಿಗೆ ಎಂದು ಪರಿಗಣಿಸುತ್ತಾರೆ. ಇನ್ನೂ ಹಲವಾರು ಜನರಿಗೆ ಈ ಮದುವೆ (Marriage) ಅಂದ್ರೆ ಒಂದು ರೀತಿಯ ಕಟ್ಟುಪಾಡು, ಹಿಂಸೆ ಎಂದು ಭಾಸಬಾಗುತ್ತದೆ. ಮನೆಯವರ ಒತ್ತಾಯಕ್ಕೆ ಮದುವೆ ಆಗಿ ಕಷ್ಟದಲ್ಲಿ ಜೀವನ ಸಾಗಿಸುವವರ ಉದಾಹರಣೆಗಳು (Example) ನಮ್ಮ ಸಮಾಜದಲ್ಲಿ ಸಾಕಷ್ಟು ಇವೆ.
ಮೊದಮೊದಲಿಗೆ ಕಷ್ಟಪಟ್ಟು ಜೀವನ ಸಾಗಿಸುತ್ತಾ ಇರುವವರು, ಬರ್ತಾ ಬರ್ತಾ ಹೊಂದಾಣಿಕೆಯಾಗಿ ಸುಖ ಜೀವನವನ್ನು ಕೂಡ ಸಾಗಿಸುತ್ತಾರೆ. ಇನ್ನು ಕೆಲವರಿಗೆ ತಮ್ಮ ಬಾಳ ಸಂಗಾತಿ ಸರಿಯಾಗಿ ಸಿಗದೇ , ಇರದೇ ಇರುವ ಕಾರಣಗಳಿಂದ ವಿಚ್ಚೇದನವನ್ನು ನೀಡುತ್ತಾರೆ.
ಈ ರೀತಿಯಾಗಿ ದಿನಕ್ಕೆ ನೂರಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಮಕ್ಕಳು ಆದಮೇಲೆ ಅವರನ್ನು ಯಾರ ಬಳಿ ಬಿಡೋದು ಅಂತಲೇ ದೊಡ್ಡ ಸಮಸ್ಯೆಯಾಗಿ ಉಳಿದು ಬಿಡುತ್ತದೆ. ಇದೀಗ ವಿಚ್ಛೇದನದ ಸುದ್ಧಿ ಸಖತ್ ವೈರಲ್ ಆಗ್ತಾ ಇದೆ.
ಸಾಮಾನ್ಯವಾಗಿ ವಿಚ್ಛೇದನ ಆದ ನಂತರ ಅದನ್ನು ಯಾರು ನೆನಪಿಟ್ಟುಕೊಳ್ಳಲು ಬಯಸುವುದಿಲ್ಲ ಬಿಡಿ. ಯಾಕಂದ್ರೆ ಅಷ್ಟು ನೋವು, ಮಾನಸಿಕ ಒತ್ತಡದಿಂದ ಅವರು ಈ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗಾಗಿ ನೆನಪಿಟ್ಟುಕೊಳ್ಳುವುದು ಕಡಿಮೆ.
ಇದನ್ನೂ ಓದಿ: ಈ ಚಿಂಪಾಂಜಿಗಳ ಫೋಟೋ ನೋಡಿದ್ರೆ ನೀವು ಅವಾಕ್ ಆಗ್ತೀರಾ! ಇದ್ರಲ್ಲಿ ಅಂಥದ್ದೇನಿದೆ ನೀವೇ ನೋಡಿ
ಆದ್ರೆ ಇಲ್ಲೋರ್ವ ಮಹಿಳೆ ತನ್ನ 4ನೆಯ ವರ್ಷದ ವಿಚ್ಚೇದನವನ್ನು ಆಚರಿಸಿಕೊಳ್ಳುತ್ತಿದ್ದಾಳೆ. ಶಾಶ್ವತಿ ಶಿವಾ ಎಂಬಾಕೆ ಮದುವೆ ಆಗಿ ವಿಚ್ಚೇದನವನ್ನು ಪಡೆದುಕೊಂಡು ತುಂಬಾ ಖುಷಿಯಾಗಿದ್ದಾಳೆ. ಇದನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
ಪ್ರತೀ ವರ್ಷ ನಾನು ಈ ದಿನವನ್ನು ನನ್ನ ಸ್ವಾತಂತ್ರ್ಯ ದಿನ ಎಂದು ಆಚರಿಸಿಕೊಳ್ಳುತ್ತೇನೆ. 1,460 ದಿನಗಳಿಂದ ನಾನು ತುಂಬಾ ಆರಾಮದಾಯಕವಾಗಿದ್ದೇನೆ. ಅದೆಷ್ಟೋ ಜನರು ಕಮಿಟ್ ಆದ ನಂತರ ಜೀವನವನ್ನು ಇಷ್ಟ ಪಡುತ್ತಾರೆ. ಆದರೆ ನಾನು ನಿಜಕ್ಕೂ ನಾನು ಈ ಡಿವೋರ್ಸ್ ಆದ ನಂತರ ತುಂಬಾ ಖಷಿ ಖುಷಿಯಾಗಿ ಇದ್ದೇನೆ. ಗಾರ್ಡನ್ನಲ್ಲಿ ಕುಳಿತುಕೊಂಡು ಕಾಫಿ ಕುಡಿಯುತ್ತಾ ನಾನು ಇವತ್ತಿಗೆ ಫ್ರೀ ಬರ್ಡ್ ಅಂತ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
4 years of freedom, and not taking it for granted for a single day. Celebrating a divorce-versary today. 🥳
Happy happies to me!!! pic.twitter.com/fxcp5MFScb
— Shasvathi Siva (@shasvathi) January 23, 2023
ನೆಟ್ಟಿಗರು ಈ ಪೋಸ್ಟ್ಗೆ ಸಖತ್ ಶಾಕ್ ಆಗಿದ್ದಾರೆ. ಯಾಕಂದ್ರೆ ಹೀಗೂ ತಮ್ಮ ವಿಚ್ಚೇದನವನ್ನು ಆಚರಿಸ್ತಾರ ಅಂತ ಶಾಕ್ ಆಗಿದ್ದಾರೆ. ನಿಮಗೂ ಈ ಪೋಸ್ಟ್ ನೋಡಿ ಏನ್ ಅನಿಸ್ತು ಅಂತ ತಿಳಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ