Parkinson's Disease: ಸ್ಕ್ಯಾನ್‌, ಟೆಸ್ಟ್‌ ಯಾವುದೂ ಬೇಡ! ಬರೀ ದೇಹದ ವಾಸನೆ ಮೂಲಕವೇ ಕಾಯಿಲೆ ಪತ್ತೆ ಹಚ್ತಾರಂತೆ ಈ ಮಹಿಳೆ!

72 ವರ್ಷ ವಯಸ್ಸಿನ ಮಹಿಳೆ ಯಾವುದೇ ವೈದ್ಯಕೀಯ ಸ್ಕ್ಯಾನರ್‌ಗಳು ಮತ್ತು ಯಂತ್ರಗಳು ಇಲ್ಲದೇ ಆರೋಗ್ಯ ಸಮಸ್ಯೆ ಬಗ್ಗೆ ಪತ್ತೆ ಹಚ್ಚುತ್ತಾರೆ ಎಂದರೆ ಆಶ್ಚರ್ಯವಾಗುತ್ತೆ ಅಲ್ವಾ. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ಈ ಮಹಿಳೆಯು ಪಾರ್ಕಿನ್ಸನ್ ಕಾಯಿಲೆ ಯಾರಿಗೆ ಇದೆ ಎಂಬುದರ ಬಗ್ಗೆ ಕ್ಷಣಮಾತ್ರದಲ್ಲಿ ಪತ್ತೆ ಹಚ್ಚಿಬಿಡುತ್ತಾಳೆ. ಪಾರ್ಕಿನ್ಸನ್‌ ಕಾಯಿಲೆ ಬಗ್ಗೆ ಸಂಶೋಧನೆ ನಡೆಸುತ್ತಿರುವಾಗ ಇದರ ಬಗ್ಗೆ ಮಾಹಿತಿ ಸಿಕ್ಕಿದೆ. ಅವರ ಶಕ್ತಿಯು ವೈದ್ಯರನ್ನು ದಿಗ್ಭ್ರಮೆಗೊಳಿಸಿದೆ.

ಜಾಯ್ ಮಿಲ್ನೆ

ಜಾಯ್ ಮಿಲ್ನೆ

  • Share this:
ಏನಾದರೂ ಆರೋಗ್ಯ ಸಮಸ್ಯೆ (Health Problem) ಕಾಣಿಸಿಕೊಂಡರೆ ಕೂಡಲೇ ನಾವೇನು ಮಾಡುತ್ತೆವೆ ಹೇಳಿ?. ಆಸ್ಪತ್ರೆಗೆ ಓಡುತ್ತೆವೆ. ವೈದ್ಯರ ತಪಾಸಣೆಯನ್ನು ಮಾಡಿಸಿಕೊಳ್ಳುತ್ತೇವೆ. ಅವರು ಸಾಮಾನ್ಯ ಆರೋಗ್ಯ ಸಮಸ್ಯೆ ಇದ್ದರೆ ಕೆಲವು ಮಾತ್ರೆಗಳನ್ನು ಬರೆದುಕೊಡುತ್ತಾರೆ. ಗಂಭೀರ ಆರೋಗ್ಯ ಸಮಸ್ಯೆಗಳಿಗಾದರೆ ಆಸ್ಪತ್ರೆಗಳಲ್ಲಿ ಸ್ಕ್ಯಾನರ್‌ಗಳು (Scanners) ಮತ್ತು ಯಂತ್ರಗಳನ್ನು ಬಳಸಿ ಯಾವ ರೋಗ ಎಂದು ಪತ್ತೆ ಹಚ್ಚುತ್ತಾರೆ. ಹೌದು ತಾನೇ? ಆದರೆ ಇಲ್ಲೊಂದು ವಿಸ್ಮಯಕಾರಿ ಘಟನೆ ಬಗ್ಗೆ ನಾವಿಂದು ನಿಮಗೆ ಹೇಳ್ತಿನಿ. ಅದೇನೆಂದರೆ ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯಕೀಯ ಸ್ಕ್ಯಾನರ್‌ಗಳು ಮತ್ತು ಯಂತ್ರಗಳನ್ನು ಬಳಸದೆಯೇ ಒಬ್ಬ ವ್ಯಕ್ತಿ ಇಂತಹದೇ ರೋಗದ ಸ್ಥಿತಿಯನ್ನು (Disease status) ಹೊಂದಿದ್ದಾನೆ ಎಂದು ಹೇಳ್ತಾರೆ ಎಂದರೆ ನೀವು ನಂಬ್ತಿರಾ? ಇಲ್ಲ ಅಲ್ವಾ. ಇವರು ಯಾವುದೋ ಸಿನಿಮಾ ಕಥೆ ಹೇಳ್ತಿದಾರೆ ಅನ್ಕೊಬೇಡಿ. 

72 ವರ್ಷ ವಯಸ್ಸಿನ ಮಹಿಳೆ ಯಾವುದೇ ವೈದ್ಯಕೀಯ ಸ್ಕ್ಯಾನರ್‌ಗಳು ಮತ್ತು ಯಂತ್ರಗಳು ಇಲ್ಲದೇ ಆರೋಗ್ಯ ಸಮಸ್ಯೆ ಬಗ್ಗೆ ಪತ್ತೆ ಹಚ್ಚುತ್ತಾರೆ ಎಂದರೆ ಆಶ್ಚರ್ಯವಾಗುತ್ತೆ ಅಲ್ವಾ. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಪಾರ್ಕಿನ್ಸನ್ ಕಾಯಿಲೆ ಕ್ಷಣಮಾತ್ರದಲ್ಲಿ ಪತ್ತೆ ಹಚ್ಚುತ್ತಾರೆ ಈ ಮಹಿಳೆ!
ಅದರಲ್ಲೂ ಈ ಮಹಿಳೆಯು ಪಾರ್ಕಿನ್ಸನ್ ಕಾಯಿಲೆ ಯಾರಿಗೆ ಇದೆ ಎಂಬುದರ ಬಗ್ಗೆ ಕ್ಷಣಮಾತ್ರದಲ್ಲಿ ಪತ್ತೆ ಹಚ್ಚಿಬಿಡುತ್ತಾಳೆ. ಪಾರ್ಕಿನ್ಸನ್‌ ಕಾಯಿಲೆ ಬಗ್ಗೆ ಸಂಶೋಧನೆ ನಡೆಸುತ್ತಿರುವಾಗ ಇದರ ಬಗ್ಗೆ ಮಾಹಿತಿ ಸಿಕ್ಕಿದೆ. ಅವರ ಶಕ್ತಿಯು ವೈದ್ಯರನ್ನು ದಿಗ್ಭ್ರಮೆಗೊಳಿಸಿದೆ.

ಇದನ್ನೂ ಓದಿ:  Water: ನೀರಿನ ಒಳ ರಚನೆ ಹೇಗಿರುತ್ತೆ? ಈ ಕುತೂಹಲಕಾರಿ ವಿಷಯ ತಿಳ್ಕೊಬೇಕಾ ಈ ಸ್ಟೋರಿ ಓದಿ

ಸ್ಕಾಟ್ಲೆಂಡ್‌ನ ಪರ್ತ್‌ನ ನಿವಾಸಿ ಜಾಯ್ ಮಿಲ್ನೆ ಎಂಬ ಮಹಿಳೆಯು ಈ ಅಪರೂಪದ ಶಕ್ತಿಯನ್ನು ಹೊಂದಿದ್ದಾಳೆ. ಆಕೆಗೆ ಅತಿಸೂಕ್ಷ್ಮ ವಾಸನೆಯನ್ನು ಕಂಡು ಹಿಡಿಯುವ ಶಕ್ತಿಯಿದೆ. ಅವಳ ವಾಸನೆಯ ಪ್ರಜ್ಞೆಯು ತುಂಬಾ ವಿಶಿಷ್ಟವಾಗಿದೆ. ಅವಳು ಪಾರ್ಕಿನ್ಸನ್ ಕಾಯಿಲೆಯಿರುವ ಜನರನ್ನು ಕೇವಲ ವಾಸನೆ ಮೂಲಕ ಪತ್ತೆ ಹಚ್ಚುತ್ತಾಳೆ.

ಪಾರ್ಕಿನ್ಸನ್ ಕಾಯಿಲೆ ಎಂದರೇನು?
ಈ ಪಾರ್ಕಿನ್ಸನ್ ಕಾಯಿಲೆ (ಪಿಡಿ) ದೀರ್ಘಕಾಲದ ನರವೈಜ್ಞಾನಿಕ ಅಸ್ವಸ್ಥತೆಯಾಗಿದೆ. ಈ ರೋಗದ ಆರಂಭಿಕ ಲಕ್ಷಣಗಳೆಂದರೆ ನಡುಕ, ದೈಹಿಕ ಬಿಗಿತ, ಚಲನೆಯಲ್ಲಿ ನಿಧಾನತೆ ಮತ್ತು ನಡೆದಾಡಲು ತೊಂದರೆ ಆಗುತ್ತಿರುವ ಲಕ್ಷಣಗಳನ್ನು ಹೊಂದಿರುತ್ತವೆ. 500 ಜನರಲ್ಲಿ ಒಬ್ಬರು ಈ ರೋಗದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಪಾರ್ಕಿನ್ಸನ್ ಕಾಯಿಲೆಗೆ ಇನ್ನೂ ಯಾವುದೇ ಚಿಕಿತ್ಸೆಯನ್ನು ಕಂಡುಹಿಡಿದಿಲ್ಲ. ಅದಕ್ಕಾಗಿಯೇ ವಿಜ್ಞಾನಿಗಳು ಈಗ ತಮ್ಮ ಸಂಶೋಧನೆಯಲ್ಲಿ ಜಾಯ್ ಮಿಲ್ನೆ ಅವರನ್ನು ಕೂಡ ತೊಡಗಿಸಿಕೊಂಡಿದ್ದಾರೆ ಏಕೆಂದರೆ ಆರಂಭಿಕ ರೋಗಲಕ್ಷಣಗಳನ್ನು ಕೂಡ ಹೇಳದೇ ನೇರವಾಗಿ ರೋಗವಿದೆ ಎಂದು ನಿರ್ಧರಿಸುವ ವಿಶಿಷ್ಟ ಸಾಮರ್ಥ್ಯ ಇರುವುದರಿಂದ ಅವರನ್ನು ಈ ಸಂಶೋಧನೆಯಲ್ಲಿ ಪ್ರಮುಖರನ್ನಾಗಿ ತೊಡಗಿಸಿಕೊಂಡಿದ್ದಾರೆ.

ದೇಹದ ವಾಸನೆಯಿಂದ ಪಾರ್ಕಿನ್ಸನ್ ಕಾಯಿಲೆ ಇರುವ ಬಗ್ಗೆ ಹೇಗೆ ತಿಳಿಯುತ್ತದೆ 
ಇದರ ಕುರಿತು “ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ಪತಿಯು 33 ವರ್ಷಕ್ಕೆ ಕಾಲಿಡುವ ವೇಳೆಗೆ ಅವರ ದೇಹವು ವಿಭಿನ್ನವಾದ ವಾಸನೆಯನ್ನು ಹೊರ ಸೂಸುತ್ತಿತ್ತು. ಅವರು ಸತತವಾಗಿ 12 ವರ್ಷಗಳಿಂದ ಈ ನರವೈಜ್ಞಾನಿಕ ಕಾಯಿಲೆಯಿಂದ ಬಳಲುತ್ತಿದ್ದರು” ಎಂದು 72 ವರ್ಷ ವಯಸ್ಸಿನ ಮಹಿಳೆ ವಿವರಿಸಿದರು.

ದೇಹದ ವಾಸನೆಯ ಮೂಲಕ ದೈಹಿಕ ಬದಲಾವಣೆಯನ್ನು ಗ್ರಹಿಸುವ ಈ ವಿಚಿತ್ರ ಸಾಮರ್ಥ್ಯದಿಂದ ಮಿಲ್ನೆ ಅವರ ಈ ಸ್ಥಿತಿಯ ಬಗ್ಗೆ ಸಂಶೋಧನೆ ನಡೆಸಲು ವಿಜ್ಞಾನಿಗಳು ಮುಂದಾಗಿದ್ದರು.

ಅವೆಲ್ಲ ಅಧ್ಯಯನಗಳು ಮತ್ತು ಪರೀಕ್ಷೆಗಳ ನಂತರ, ಆಕೆಯ ಅಪರೂಪದ ಸ್ಥಿತಿಯು ಈಗ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಶಿಕ್ಷಣತಜ್ಞರಿಗೆ ಪಾರ್ಕಿನ್ಸನ್ ಹೊಂದಿರುವ ಜನರನ್ನು ಗುರುತಿಸುವ ವಿಧಾನವನ್ನು ತಿಳಿಯಲು ಅವರ ವಾಸನೆಯ ಸಾಮರ್ಥ್ಯವು ಸಹಾಯ ಮಾಡುತ್ತಿದೆ.

ಈ ರೋಗವನ್ನು ಪತ್ತೆಹಚ್ಚಲು ವೈದ್ಯರು ಬಳಸುವ ವಿಧಾನ 
ರೋಗಿಯಲ್ಲಿನ ರೋಗಲಕ್ಷಣಗಳನ್ನು ಕಂಡುಹಿಡಿಯಲು ರೋಗಿಯ ದೇಹದಿಂದ ಮೇದೋಗ್ರಂಥಿಗಳ ಸ್ರಾವ ಮಾದರಿಯನ್ನು ಸಂಗ್ರಹಿಸಲು ಹತ್ತಿ ಮೊಗ್ಗು ಬಳಸಿ ಅಧ್ಯಯನವನ್ನು ಮಾಡಲಾಗುತ್ತದೆ. ಅದರ ನಂತರ, ಅಂತಿಮ ಫಲಿತಾಂಶಗಳನ್ನು ನಿರ್ಧರಿಸಲು ರೋಗಕ್ಕೆ ಸಂಬಂಧಿಸಿದ ಅಣುಗಳನ್ನು ಕಂಡುಹಿಡಿಯಲು ವಿಜ್ಞಾನಿಗಳು ಈ ಮಾದರಿಯನ್ನು ಬಳಸುತ್ತಾರೆ.

ಇದನ್ನೂ ಓದಿ:  Viral Video: ರೈಲಿನಲ್ಲಿ ಚಾಕೊಲೇಟ್ ಮಾರಿ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ ಈ ವೃದ್ಧೆ, ವಿಡಿಯೋವನ್ನೊಮ್ಮೆ ನೋಡಿ

ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ಡಾ. ಟಿಲೋ ಕುನಾಥ್ ಮತ್ತು ಪ್ರೊಫೆಸರ್ ಪರ್ಡಿಟಾ ಬರ್ರಾನ್ ಅವರು ಈಗ ಮಿಲ್ನೆ ಅವರ ಸಹಾಯದಿಂದ ಅಧ್ಯಯನವೊಂದನ್ನು ನಡೆಸುತ್ತಿದ್ದಾರೆ. ಕೆಲವು ಚರ್ಮದ ಸ್ವ್ಯಾಬ್‌ಗಳಲ್ಲಿ ನರವೈಜ್ಞಾನಿಕ ಅಸ್ವಸ್ಥತೆಯ ಅಣುಗಳು ನಿಜವಾಗಿ ಕಂಡುಬಂದಿವೆ ಎಂಬ ಸಂಗತಿಯನ್ನು ಕಂಡುಹಿಡಿದಿದ್ದಾರೆ.
Published by:Ashwini Prabhu
First published: