ಎಷ್ಟೇ ಟೈಟ್ ಸೆಕ್ಯುರಿಟಿ ನೀಡಿದರು ಲೈವ್ ಪಂದ್ಯದ (Live Sprts) ವೇಳೆ ಅಭಿಮಾನಿಗಳು ಮೈದಾನಕ್ಕೆ (Ground) ನುಗ್ಗದ ಪ್ರಮೇಯ ಹಲವು ಭಾರಿ ಎದುರಾಗಿದೆ. ಕ್ರಿಕೆಟ್ (Cricket) ಪಂದ್ಯದ ವೇಳೆ ನೆಚ್ಚಿನ ಆಟಗಾರನನ್ನು ಮಾತನಾಡಿಸಲು ಅಥವಾ ನೋಡಲು ಮೈದಾನಕ್ಕೆ ಧುಮುಕಿ ಓಡೋಡಿ ಬಂದಿರುವ ಸನ್ನಿವೇಶವೂ ಇದೆ. ಆದರೆ ಸೆಕ್ಯುರಿಟಿಗಳಿಗೆ ಇಂತಹ ಘಟನೆಗಳು ದೊಡ್ಡ ತಲೆನೋವಾಗಿ ಪರಿಣಿಮಿಸುತ್ತದೆ. ಏಕೆಂದರೆ ಆ ಅಭಿಮಾನಿಗಳು ಮೈದಾನದಲ್ಲಿ ಅತ್ತಿಂದಿತ್ತ ಓಡಾಡುದರಿಂದ ಅವರನ್ನು ಹಿಡಿದು ಮತ್ತೆ ಗ್ಯಾಲರಿಯಲ್ಲಿ ಕೂರಿಸಲು ಹರ ಸಾಹಸ ಪಡುತ್ತಾರೆ. ಸಾಮಾನ್ಯವಾಗಿ ಕ್ರಿಕೆಟ್ ಮಾತ್ರವಲ್ಲ, ಫುಟ್ಬಾಲ್ನಲ್ಲೂ (Football) ಹೀಗೆ ಆಗುತ್ತದೆ. ಆದರೀಗ ರಗ್ಬಿ (Rugby) ಆಟದ ಸಮಯದಲ್ಲಿ ಇಂತಹದೊಂದು ಘಟನೆ ನಡೆದಿದೆ. ಮಹಿಳೆಯೊಬ್ಬಳು ಟಾಪ್ ಲೆಸ್ ಆಗಿ ಮೈದಾನಕ್ಕೆ ಇಳಿದು ಅತ್ತಿಂದಿತ್ತ ಓಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ. ಆಕೆಯ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೆಚ್ಚಿನ ತಾರೆಯತರನ್ನು ಕಾಣುವ ಉತ್ಸಾಹ ಅಭಿಮಾನಿಗಳಲ್ಲಿ ಇರುತ್ತಾರೆ. ಇಂತಹ ಸಮಯದಲ್ಲಿ ತಾರೆಯನ್ನು ನೋಡಬೇಕು ಎಂದೆನಿಸಿದರೆ ಅಭಿಮಾನಿಗಳು ಏನು ಮಾಡಲು ಹೇಸುವುದಿಲ್ಲ. ಆದರೆ ಆಸ್ಟ್ರೇಲಿಯದಲ್ಲಿ ನಡೆದ ರಗ್ಬಿ ಪಂದ್ಯ ಸಮಯದಲ್ಲಿ ನಡೆದದ್ದೇ ಬೇರೆ ಮಹಿಳೆಯೋರ್ವಳು ಮೈದಾನಕ್ಕೆ ಎಂಟ್ರಿ ನೀಡಿದ್ದಲ್ಲದೆ. ಕಪ್ಪು ಬಣ್ಣದ ಟಾಪ್ಲೆಸ್ ಬಟ್ಟೆಯಲ್ಲಿ ಓಡಾಡಿದ್ದಾಳೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ರಗ್ಬಿ ಲೀಗ್ನ ಗೋಲ್ಡ್ ಕೋಸ್ಟ್ ಟೈಟಾನ್ಸ್ ವಿರುದ್ಧದ ಪರಮಟ್ಟಾ ಈಲ್ಸ್ ತಂಡದ ಪಂದ್ಯದ ವೇಳೆ ಆಘಾತಕಾರಿ ಘಟನೆ ನಡೆದಿದೆ. ರಗ್ಬಿ ಪಂದ್ಯದ ವೇಳೆ ಮಹಿಳೆಯೊಬ್ಬಳು ಟಾಪ್ ಲೆಸ್ ಆಗಿ ಮೈದಾನಕ್ಕೆ ಬಂದಕಾರಣ ಗಿ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಮಹಿಳೆಯ ಹೆಸರು ಜಾವೊನ್ ಜಾನ್ಸನ್ ಎಂದು ಗುರುತಿಸಲಾಗಿದೆ.
ಆಕೆಯನ್ನು ಮೈದಾನದಿಂದ ಹೊರಗೆ ಕಳುಹಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಅವರನ್ನೂ ತಳ್ಳಿಕೊಂಡು ಮೈದಾನದಲ್ಲಿ ಆಕೆ ಓಡಾಡಿದ್ದಾಳೆ. ನಂತರ ಕಷ್ಟಪಟ್ಟು ಆಕೆಯನ್ನು ಹಿಡಿದಿದ್ದಾರೆ.
ಇದನ್ನೂ ಓದಿ: Viral Video: ಮಗಳ ಮದುವೆಗೆ ಫುಲ್ ಖುಷ್, ಊ ಅಂಟಾವಾ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಅಪ್ಪ
ಗೆಳೆಯನೊಬ್ಬ ನೀಡಿದ ಚಾಲೆಂಜ್
ಮಹಿಳೆಯ ಪ್ರಕಾರ, ಆಕೆಯ ಸ್ನೇಹಿತ ತನಗೆ ಈ ಚಾಲೆಂಜ್ ನೀಡಿದ್ದ. ಇದೇ ವಿಚಾರವಾಗಿ ಮಹಿಳೆ ಚಾಲೆಂಜ್ ಒಪ್ಪಿಕೊಂಡಳು. ಚಾಲೆಂಜ್ ಬಗ್ಗೆ ತಲೆಕೆಡಿಸಿಕೊಳ್ಳದ ಮಹಿಳೆ ಓಕೆ ಎಂದಳು. "ನನಗೆ ಅವಕಾಶ ಸಿಕ್ಕಿತು ಮತ್ತು ನಾನು ಸವಾಲನ್ನು ಪೂರ್ಣಗೊಳಿಸಿದೆ" ಎಂದು ಜಾವೊನ್ ಹೇಳಿದರು.
ಇದನ್ನೂ ಓದಿ: Times Square: ಬಾದ್ಶಾ ಬೀಟ್ಸ್, ದೇಸೀ ಯುವತಿ ಜೊತೆ ಸೇರಿಕೊಂಡ ಫಾರಿನ್ ಗರ್ಲ್ಸ್ ಬಿಂದಾಸ್ ಸ್ಟೆಪ್..!
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
ಜಾವೊನ್ ಮೈದಾನಕ್ಕೆ ಪ್ರವೇಶಿಸಿದ ತಕ್ಷಣ ಭದ್ರತಾ ಸಿಬ್ಬಂದಿ ಆಕೆಯನ್ನು ಸುತ್ತುವರಿದು ಮೈದಾನದಿಂದ ಹೊರಗೆ ಕರೆದೊಯ್ದರು. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಚರ್ಚೆಯಾಗುತ್ತಿದೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಆಕೆಯನ್ನು ಮೈದಾನದಿಂದ ಹೊರಗೆ ಕರೆದೊಯ್ದ ರೀತಿ ತಪ್ಪು ಎಂದು ಕೆಲವರು ಹೇಳಿದ್ದಾರೆ. ಕೆಲವರು ಜಾವೊನ್ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ