• Home
  • »
  • News
  • »
  • trend
  • »
  • Saree in Gym: ಸೀರೆಯನ್ನು ಉಟ್ಟುಕೊಂಡು ಸಖತ್ತಾಗಿ ಜಿಮ್​ನಲ್ಲಿ ವರ್ಕ್​ಔಟ್​ ಮಾಡಿದ ಮಹಿಳೆ!

Saree in Gym: ಸೀರೆಯನ್ನು ಉಟ್ಟುಕೊಂಡು ಸಖತ್ತಾಗಿ ಜಿಮ್​ನಲ್ಲಿ ವರ್ಕ್​ಔಟ್​ ಮಾಡಿದ ಮಹಿಳೆ!

ವೈರಲ್​ ಆಯ್ತು ವಿಡಿಯೋ

ವೈರಲ್​ ಆಯ್ತು ವಿಡಿಯೋ

ಜಿಮ್​ಗೆ ಹೋಗ್ತೀರಾ ನೀವು? ಯಾವ ರೀತಿಯ ಬಟ್ಟೆಗಳನ್ನು ನೀವು ಧರಿಸುತ್ತೀರಾ? ಇಲ್ಲೊಬ್ಬಳ ಮಹಿಳೆಯ ಜಿಮ್​ ಬಟ್ಟೆ ವೈರಲ್​ ಆಗಿದೆ.

  • Share this:

ಒಂದು ಕಾಲದಲ್ಲಿ ಜಿಮ್​ಗಳು (Gym)  ಇರಲಿಲ್ಲ. ಮನೆಯ ಅಂಗಳದಲ್ಲಿ ಅಥವಾ ಹಿತ್ತಲಿನಲ್ಲಿಯೇ ಯೋಗಾಸನ, ವ್ಯಾಯಾಮಗಳನ್ನು ಮಾಡುತ್ತಾ ಇದ್ದರು. ಜೊತೆಗೆ ಆಗಿನ ಕಾಲದ ಜನರು ಕೂಡ ರೋಗರುಜಿನಗಳಿಗೆ ತುತ್ತಾಗ್ತಾ ಇದ್ದಿದ್ದು ಬಹಳ ವಿರಳ. ಬರ್ತಾ ಬರ್ತಾ ಸಿನಿಮಾಗಳಿಗಾಗಿ ದೇಹದ ಮೈಕಟ್ಟನ್ನು ಚೆನ್ನಾಗಿ ಮಾಡಿಕೊಳ್ಳುವುದಾಗಿ ತರಬೇತಿಗಳು ಆರಂಭವಾದವು. ಈ ತರಬೇತಿಗಳೇ ಇಂದಿನ ದೊಡ್ಡ ದೊಡ್ಡ ಜಿಮ್​ಗಳು. ದಿನದ ಹೆಚ್ಚು ಹೊತ್ತುಗಳ ಕಾಲ ಅಲ್ಲೇ ಕಳೆಯುವ ಅದೆಷ್ಟೋ ಜನರು ಇದ್ದಾರೆ ಅಂದ್ರೂ ತಪ್ಪಾಗೋಲ್ಲ ಬಿಡಿ. ಮೈಕಟ್ಟನ್ನು ಚೆನ್ನಾಗಿ ನೋಡಿಕೊಂಡು, ಪೊಗರ್ದಸ್ತಾಗಿ ಬೆಳೆಸುವ ನಿಟ್ಟಿನಲ್ಲಿ ಜಿಮ್​ಗಳಿಗೆ ಹೋಗುತ್ತಾರೆ. ಅದಕ್ಕಾಗಿಯೇ ಹಲವಾರು ಬಟ್ಟೆಗಳು, ಶೂ ಕೂಡ ಬಂದಿವೆ. ಮಹಿಳೆಯರು, ಪುರುಷರು ಒಬ್ಬರಿಗೊಬ್ಬರು ಏನು ಕಮ್ಮಿ ಇಲ್ಲ ಬಿಡಿ ಎಲ್ಲರೂ ಕಾಂಪಿಟೇಷನ್​ (Competition) ಮೇಲೆ ಜಿಮ್​ಗೆ ನುಗ್ಗುತ್ತಾ ಇದ್ದಾರೆ.


ಹೌದು. ಜಿಮ್​ಗೆ  ಹೋಗುವಾಗ ಅದಕ್ಕೇ ಆದಂತಹ ಒಂದಷ್ಟು ಡ್ರೆಸ್​, ಶೂಗಳು ಇದೆ. ಅವೆಲ್ಲವನ್ನು ಬಿಟ್ಟು ಸಾಮಾನ್ಯ ಬಟ್ಟೆಗಳಲ್ಲಿ ಹೋದ್ರೆ ಪ್ರೆಸ್ಟೀಜ್​ ಪ್ರಶ್ನೆ ಅಲ್ವಾ? ಹೀಗಾಗಿ  ಸ್ಟಾಂಡರ್ಡ್​ ಆಫ್​ ಲೀವಿಂಗ್​ ಮ್ಯಾಟರ್​ಗಾಗಿ ಅದಕ್ಕಾಗಿಯೇ ಹೊಸಹೊಸ ರೀತಿಯ ಬಟ್ಟೆಗಳನ್ನು ಖರೀದಿಸುವುದು ಉಂಟು. ಆದ್ರೆ ಇವುಗಳನ್ನೆಲ್ಲಾ ಬೀಟ್​  ಮಾಡಿದೆ ಇಲ್ಲೊಂದು ವಿಡಿಯೋ.


ವಿಡಿಯೋದಲ್ಲಿ ಏನಿದೆ?


ರೀನಾಸಿಂಗ್​ಫಿಟ್​ನೆಸ್​  ಎಂಬುವವಳು ಫಿಟ್​ನೆಸ್​ ಟ್ರೈನರ್​. ಈಕೆ ಜಿಮ್​ಗೆ ಹೋಗುವಾಗ  ಯಾವುದೇ ಜಿಮ್​ ಡ್ರೆಸ್​ ಹಾಕುವುದಿಲ್ಲ. ಬದಲಾಗಿ ಟ್ರಡೀಷ್ನಲ್​ ಆಗಿ ಸೀರೆಯನ್ನು ಉಟ್ಟುಕೊಂಡು ಎಲ್ಲಾ ವರ್ಕ್​ ಔಟ್​ಗಳನ್ನು ಮಾಡುತ್ತಾರೆ.


ಈಕೇ ಅದೆಷ್ಟೋ ತೂಕವಿರುವ  ಟೈಯರ್​ಗಳನ್ನು ಎತ್ತುತ್ತಾರೆ, ವಾಕಿಂಗ್​ ಮಾಡುತ್ತಾರೆ, ಸೈಕ್ಲಿಂಗ್​ ಮಾಡುತ್ತಾರೆ, ಸ್ಕ್ವಾಟ್ಸ್​ಗಳನ್ನು ಕೂಡ ಮಾಡುತ್ತಾರೆ. ಇವೆಲ್ಲಾ ಮಾಡುವುದು ಆಕೆ ಸೀರೆಯನ್ನು ಉಟ್ಟುಕೊಂಡೇ. ವಿಡಿಯೋ ನೋಡ್ತಾ ಇದ್ರೆ ಒಂದು ಬಾರಿ ಶಾಕ್​ ಆಗುತ್ತೆ. ಯಾಕಂದ್ರೆ ಟ್ರಡೀಷ್ನಲ್​ ಆಗಿ ಜಿಮ್​ ಮಾಡಬಹುದು ಅಂತ  ತೋರಿಸಿಕೊಟ್ಟಿದ್ದಾರೆ ಈ ಮಹಿಳೆ.


ಇದನ್ನೂ ಓದಿ: ಒಂದು ಮಾತ್ರೆ ನಿಲ್ಲಿಸಿದ್ಲು ಅಷ್ಟೇ! ಈಗ ಆಕೆಗೆ ಹುಡುಗರಿಗಿಂತ ಹುಡುಗಿಯರೇ ಇಷ್ಟವಂತೆ!


ಈ ವಿಡಿಯೋ ಶೇರ್​ ಮಾಡಿದ ಮಹಿಳೆ, ಇನ್ನು ಮುಂದೆ ಆರಂಭ ಅನ್ನುವ ಅಡಿಬರಹವನ್ನು ಹಾಕಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಕಮೆಂಟ್​ಗಳು ಬಂದಿವೆ. 4 ಲಕ್ಷಕ್ಕೂ ಅಧಿಕ ಲೈಕ್ಸ್​ಗಳನ್ನು ಈ ವಿಡಿಯೋ ಪಡೆದುಕೊಂಡಿದೆ.


ವಾರೆವ್ಹಾ! ಮಹಿಳೆಯರು ಹೀಗೂ ಜಿಮ್​ ಮಾಡಬಹುದು ಅಂತ ಒಬ್ಬರು ಕಮೆಂಟ್​ ಮಾಡಿದ್ರೆ, ಇನ್ನೂ ಒಬ್ಬರು ಹೀಗೆ ನಾ ನೀವು ಜಿಮ್​ಗೆ ಹೋಗೋದು ಅಂತ ಪ್ರಶ್ನೆ ಮಾಡಿದ್ದಾರೆ. ಹೀಗೆ ಹಲವಾರು ಕಮೆಂಟ್​ಗಳನ್ನು ಪಡೆದುಕೊಂಡಿದೆ ಈ ವಿಡಿಯೋ.
ಹೆಣ್ ಮಕ್ಳೇ ಸ್ಟ್ರಾಂಗು ಗುರು ಅಂತ ಹಾಡು ನೆನಪಿಗೆ ಬರುತ್ತೆ ಈ ವಿಡಿಯೋ ನೋಡಿದ್ರೆ. ಯಾಕಂದ್ರೆ ಆ ರೀತಿಯಾಗಿ ಇದೆ ಈ ವಿಡಿಯೋ.  ಸೀರೆಯನ್ನು ಉಟ್ಟು ಸಾಂಪ್ರದಾಯಿಕವಾಗಿ ಪೂಜೆಗಳನ್ನು ಕೂಡ ಮಾಡುತ್ತಾರೆ ಮಹಿಳೆಯರು, ಇಲ್ಲದಿದ್ದಲ್ಲಿ ಹೀಗೆ ಜಿಮ್​ಗೆ ಕೂಡ ಹೋಗುತ್ತಾರೆ ಅಂತ ಸಾಧೀಸಿ ತೋರಿಸಿದ್ದಾರೆ ಈ ಮಹಿಳೆ.


What is the best outfit for gym, What is a gym outfit called, What can a lady wear to the gym, What do you wear at a gym guy, What you shouldn't wear to the gym, Does outfit matter at gym, How should a beginner dress for a gym, gym dress woman viral, instagram viral video, kannada news, karnataka news, ಕನ್ನಡ ನ್ಯೂಸ್​, ಕರ್ನಾಟಕ ನ್ಯೂಸ್​, ಜಿಮ್​ಗೆ ಗೆ ಸೀರೆ ಹಾಕಬಹುದಾ, ವೈರಲ್​ ಆಯ್ತು ವಿಡಿಯೋ, ಜಿಮ್​ಗೆ ಸೀರೆಯನ್ನು ಉಟ್ಟುಕೊಂಡು ಬಂದ ಮಹಿಳೆ
ವಿಡಿಯೋಗೆ ಬಂದ ಕಮೆಂಟ್​ಗಳು


ಈ ಮಹಿಳೆಯ ಇನ್ಸ್ಟಾಗ್ರಾಮ್​ ಖಾತೆಗೆ ಹೋಗಿ ನೋಡದ್ರೆ ನಿಮಗೇ ತಿಳಿಯುತ್ತೆ. ಆಕೆ ಭಾಗಶಃ  ಸೀರೆಯನ್ನು ಉಟ್ಟುಕೊಂಡೇ ವಿಡಿಯೋಗಳನ್ನು ಮಾಡಿರುವುದು. ಜೊತೆಗೆ ಅವರ ಲುಕ್​ ನೋಡಿ ಎಂಥಾ ಖಡಕ್​ ಲುಕ್​ ನಲ್ಲಿ ಜಿಮ್​ಗೆ ತೆರಳುತ್ತಾರೆ ಅಂತ. ಹಾಗೆಯೇ ಕಮೆಂಟ್​ಗಳಲ್ಲಿ ಕೂಡ ನಾವು ಸಾಕಷ್ಟು ಜನರ ಅಭಿಪ್ರಾಯಗಳನ್ನು ತಿಳಿದುಕೊಳ್ಳಬಹುದು.

First published: