Viral News: ಬೆಲೆ ಗೊತ್ತಿಲ್ಲದೇ ₹20 ಕೋಟಿ ವಜ್ರದ ಉಂಗುರ ಬಿಸಾಡೋಕೆ ಹೊರಟಿದ್ಲು ಮಹಾತಾಯಿ!

Diamond Ring worth 20 crores: ತಾನು ಎಸೆಯಲಿದ್ದ ಉಂಗುರ 2 ಮಿಲಿಯನ್ ಪೌಂಡ್ ಎಂದರೆ ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ 34 ಕ್ಯಾರೆಟ್ ವಜ್ರ ಎಂದು ತಿಳಿದಾಗ ಮಹಿಳೆ ದಿಗ್ಭ್ರಮೆಗೊಂಡರು

ವಜ್ರದ ಉಂಗುರ

ವಜ್ರದ ಉಂಗುರ

  • Share this:
Shocking: ಕೆಲವೊಮ್ಮೆ ನಾವು ಕೋಪದಲ್ಲಿ ಅಥವಾ ಯಾವುದೋ ಮಾತಿನ ಭರದಲ್ಲಿ ಕೆಲವೊಂದು ವಸ್ತುಗಳನ್ನು ಬಿಸಾಡಿ ಬಿಡುತ್ತೇವೆ(Throw them). ಸ್ವಲ್ಪ ಹೊತ್ತಿನ ನಂತರ ನಮಗೆ ಅದರ ನೈಜ ಬೆಲೆ ಅರ್ಥವಾಗಿ, ಅರೆ ಎಂತಹ ಕೆಲಸ ಆಗೋಯ್ತು ಅಂತ ಪಶ್ಚಾತಾಪ ಪಡುತ್ತೇವೆ. ಕೆಲವೊಮ್ಮೆ ನಾವು ಮನೆಯಲ್ಲಿಯೇ ಕಸದ ಬುಟ್ಟಿಯಲ್ಲಿ (Dustbin) ಬಿಸಾಕಿದರೆ, ಅದನ್ನು ಹೋಗಿ ಎತ್ತಿಕೊಂಡು ಬರುತ್ತೇವೆ. ಆದರೆ ಕೆಲವೊಂದು ಸಾರಿ ನಾವು ಮನೆ ಸ್ವಚ್ಛಗೊಳಿಸುವಾಗ ಎಲ್ಲಾ ಸಾಮಾನುಗಳ ಜೊತೆಗೆ ಬೆಲೆ ಬಾಳುವಂತಹ (Expensive things) ವಸ್ತುವನ್ನು ಸಹ ಬಿಸಾಡಿರುತ್ತೇವೆ. ಅಂತಹ ವಸ್ತುವನ್ನು ಹೋಗಿ ಹುಡುಕಿಕೊಂಡು ಬರಲು ಸಾಧ್ಯವಾಗುವುದಿಲ್ಲ.

ಇಲ್ಲಿಯೂ ಅಂತಹದೇ ಒಂದು ಘಟನೆ ನಡೆದಿದೆ. ಆದರೆ ಇದು ನಡೆದದ್ದು ನಮ್ಮ ದೇಶದಲ್ಲಿ ಅಲ್ಲ, ಇದು ಯುಕೆಯಲ್ಲಿ ನಡೆದಿದೆ. ತಾನು ಎಸೆಯಲಿದ್ದ ಉಂಗುರ 2 ಮಿಲಿಯನ್ ಪೌಂಡ್ ಎಂದರೆ ಭಾರತೀಯ ಬೆಲೆಯಲ್ಲಿ ಅದು ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ 34 ಕ್ಯಾರೆಟ್ ವಜ್ರ ಎಂದು ತಿಳಿದಾಗ ಮಹಿಳೆ ದಿಗ್ಭ್ರಮೆಗೊಂಡರು.

70ರ ಹರೆಯದ ಮಹಿಳೆ ಕೆಲವು ವರ್ಷಗಳ ಹಿಂದೆ ಕಾರ್ ಬೂಟ್ ಮಾರಾಟದಲ್ಲಿ ಇದನ್ನು ಖರೀದಿಸಿದ್ದರು, ಆದರೆ ಅದರ ನೈಜ ಮೌಲ್ಯದ ಬಗ್ಗೆ ಅವರಿಗೆ ತಿಳಿದಿರಲಿಲ್ಲ.

ಅದೊಂದು ಉಂಗುರು ಇದ್ದಿದ್ದೇ ನೆನಪಿರಲಿಲ್ಲ

ತಮ್ಮ ಹೆಸರನ್ನು ಬಹಿರಂಗ ಪಡಿಸದ ಈ ಮಹಿಳೆಯು ತಮ್ಮ ಮನೆಯಲ್ಲಿರುವ ವಸ್ತುಗಳನ್ನು ಸ್ವಚ್ಚಗೊಳಿಸಿ ಬಿಸಾಡುವ ಸಮಯದಲ್ಲಿ ಅವರು ಅದನ್ನು ಇತರ ಆಭರಣಗಳೊಂದಿಗೆ ಕಂಡುಕೊಂಡರು. ಅವರ ನೆರೆಹೊರೆಯವರು ಸೂಚಿಸಿದ ನಂತರ ಮಹಿಳೆಯು ತಾನು ಬಿಸಾಡುತ್ತಿರುವ ಆಭರಣದ ಮೌಲ್ಯ ತಿಳಿದುಕೊಳ್ಳಲು ನಿರ್ಧರಿಸಿದರು.

ಇದನ್ನೂ ಓದಿ: Viral News: ಮುದ್ದಿನ ಸಾಕು ನಾಯಿಗಳ ಮ್ಯಾಚಿಂಗ್ ದಿರಿಸುಗಳಿಗಾಗಿ 7 ಲಕ್ಷ ಖರ್ಚುಮಾಡಿದ ರೂಪದರ್ಶಿ

ನಾರ್ತ್ ಟೈನ್ ಸೈಡ್ ನ ನಾರ್ತ್ ಶೀಲ್ಡ್ಸ್‌ನಲ್ಲಿರುವ ಫೆಟೊನ್ಬಿಯ ಹರಾಜುದಾರರಾದ ಮಾರ್ಕ್ ಲೇನ್ ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡುತ್ತಾ "ಪಟ್ಟಣದಲ್ಲಿ ತನಗೆ ಕೆಲಸ ಇರುವುದರಿಂದ ಮಹಿಳೆಯೊಬ್ಬಳು ತನ್ನ ಕೈಯಲ್ಲಿದ್ದ ಆಭರಣಗಳ ಚೀಲವನ್ನು ತಂದು ಇರಿಸಿ ಈ ಉಂಗುರದ ಬೆಲೆಯನ್ನು ತಿಳಿದುಕೊಳ್ಳಲು ಬಯಸಿದ್ದರು. ಅದರಲ್ಲಿ ಅವರ ಮದುವೆಯ ಬ್ಯಾಂಡ್ ಮತ್ತು ಹಲವಾರು ಕಡಿಮೆ ಮೌಲ್ಯದ ಆಭರಣ ವಸ್ತುಗಳೊಂದಿಗೆ ಈ ಬೆಲೆಬಾಳುವ ಆಭರಣ ಸಹ ಇತ್ತು" ಎಂದು ಹೇಳಿದ್ದಾರೆ.

ನೋಡೋಕೆ ಚೆನ್ನಾಗಿತ್ತು ಎಂದು ಕೊಂಡುಕೊಂಡಳಂತೆ

"ನಾವು ಒಂದು ಪೌಂಡ್ ನಾಣ್ಯಕ್ಕಿಂತ ದೊಡ್ಡದಾಗಿರುವುದನ್ನು ಕಂಡು ಮತ್ತು ಅದು ನೋಡಲು ಕ್ಯೂಬಿಕ್ ಜಿರ್ಕೋನಿಯಾ, ಸಂಶ್ಲೇಷಿತ ವಜ್ರದ ಹಾಗೆ ಇತ್ತು ಎಂದು ನಾನು ಭಾವಿಸಿದೆ” ಎಂದು ಮಾರ್ಕ್ ಲೇನ್ ಹೇಳುತ್ತಾರೆ. ನಂತರ ನಾವು ಅದನ್ನು ವಜ್ರ ಪರೀಕ್ಷಕ ಯಂತ್ರ ಬಳಸುವವರೆಗೂ ಅದು ನನ್ನ ಮೇಜಿನ ಮೇಲೆ ಎರಡು ಅಥವಾ ಮೂರು ದಿನಗಳ ಕಾಲ ಇತ್ತು" ಎಂದು ಹೇಳಿದರು.

ಇದನ್ನೂ ಓದಿ: Viral News: 'ಪ್ಲೀಸ್.. ನನ್ನ ಜೈಲಿಗೆ ಹಾಕಿ.. ಮನೆಯಲ್ಲಿ ಹೆಂಡ್ತಿ ಕಾಟ ತಡೆಯಕ್ಕಾಗಲ್ಲ': ಗಂಡನ ಮನವಿ ಕೇಳಿ ಪೊಲೀಸ್ ಶಾಕ್!

"ಬೆಲ್ಜಿಯಂನ ಆಂಟ್ವರ್ಪ್‌ನ ತಜ್ಞರು ಅದನ್ನು ಪ್ರಮಾಣೀಕರಿಸುವ ಮೊದಲು ನಾವು ಅದನ್ನು ಲಂಡನ್‌ನಲ್ಲಿರುವ ನಮ್ಮ ಪಾಲುದಾರರಿಗೆ ಕಳುಹಿಸಿದ್ದೇವೆ, ಅವರು ಅದನ್ನು 34 ಕ್ಯಾರೆಟ್ ಎಂದು ದೃಢಪಡಿಸಿದರು" ಎಂದು ಮಾರ್ಕ್ ಹೇಳಿದರು.

ಸದ್ಯ ಅದನ್ನು ಸುರಕ್ಷಿತವಾಗಿ ಇರಿಸಲಾಗಿದೆ

ಆ ಉಂಗುರದ ಮಾಲೀಕರಿಗೆ ಅವರು ಅದನ್ನು ಎಲ್ಲಿ ಮತ್ತು ಯಾವಾಗ ಖರೀದಿಸಿದರು ಎಂದು ನೆನಪಿಸಿಕೊಳ್ಳಲಾಗಲಿಲ್ಲ.

ಈ ಪೌಂಡ್ ನಾಣ್ಯಕ್ಕಿಂತ ದೊಡ್ಡದಾದ ರತ್ನವನ್ನು ನವೆಂಬರ್ 30ರಂದು ಹರಾಜು ಮಾಡಲಾಗುವುದು. ಅಲ್ಲಿಯವರೆಗೆ ಇದನ್ನು ಲಂಡನ್ನಿನ ಹ್ಯಾಟನ್ ಗಾರ್ಡನ್ಸ್ ಎಂಬ ಸ್ಥಳದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.
Published by:Soumya KN
First published: