COVID: 4 ಬಾರಿ ಲಸಿಕೆ ಪಡೆದಿದ್ದ ಮಹಿಳೆಗೆ ಕೋವಿಡ್ ಸೋಂಕು, ಇನ್ನೇನು ತಾನೇ ಮಾಡಬಹುದಿತ್ತು ಆಕೆ?

ಮಹಿಳೆಯಲ್ಲಿ ಕೋವಿಡ್ ದೃಢಪಟ್ಟ ಕುರಿತು ತಿಳಿದ ತಕ್ಷಣ ಅವರನ್ನು ಇಂದೋರ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವೈದ್ಯಾಧಿಕಾರಿ ಡಾ. ಕೌರವ್ ತಿಳಿಸಿದ್ದಾರೆ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಕೋವಿಡ್ (Covid) ಕಾಲ ಆರಂಭವಾದಾಗಿನಿಂದ ಬಹಳಷ್ಟು ಜನರು ಪ್ರಯಾಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಷ್ಟಗಳನ್ನು(Difficulties) ಅನುಭವಿಸುತ್ತಿದ್ದಾರೆ. ಮೊದಲಿಗೆ ಲಾಕ್ ಡೌನ್ ಇದ್ದಾಗಲಂತೂ ಪ್ರಯಾಣದ ಯಾವುದೇ ಸೌಲಭ್ಯ ನೀಡಲಾಗಲಿಲ್ಲ. ಆದರೆ ತದನಂತರ ಲಸಿಕೆಗಳು(Vaccine) ಬಂದು ಲಸಿಕೆ ಪಡೆದವರಿಗೆ ಮಾತ್ರ ವಿದೇಶ ಪ್ರಯಾಣಕ್ಕೆ ( Travel provided) ಅನುಮತಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ (World Health Organization) ಅನುಮೋದಿತವಾದ ಲಸಿಕೆ ಪಡೆದವರು ಅದೇಷ್ಟೋ ನಿಟ್ಟುಸಿರು ಬಿಟ್ಟಿದ್ದರು.

ಮತ್ತೆ RTPCR ಪರೀಕ್ಷೆ
ಈ ನಡುವೆ ಲಸಿಕೆ ಪಡದವರಲ್ಲೂ ಸಹ ಮತ್ತೆ ಕೋವಿಡ್ ಸೋಂಕು ಕಾಣಿಸಿಕೊಂಡಿತು. ಮೊದಲಿಗೆ ಇದು ಹಲವರಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದರೂ ವೈದ್ಯರು ಅದಾಗಲೇ ಈ ಕುರಿತು ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲವೆಂದು ಹೇಳಿದ್ದು ಮತ್ತೆ ಸಮಾಧಾನ ಮೂಡಿಸಿತು. ಆದರೆ, ಪ್ರಯಾಣಕ್ಕೆ ಸಂಬಂಧಿಸಿದಂತೆ ಲಸಿಕೆ ಕಡ್ಡಾಯ ಮಾಡಿದ್ದರೂ ಮತ್ತೆ RTPCR ಪರೀಕ್ಷೆಗಳನ್ನು ಕಡ್ಡಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಹಲವು ಜನರು ಲಸಿಕೆ ಪಡೆದಿದ್ದರೂ ವಿದೇಶಗಳಿಗೆ ಸಂಚರಿಸುವಾಗ ಮತ್ತೆ ಕೋವಿಡ್ ಸೋಂಕಿಗೆ ತುತ್ತಾಗಿರುವುದು ಪರೀಕ್ಷೆಗಳಿಂದ ದೃಢಪಟ್ಟು ಅವರು ಮತ್ತೆ ಪ್ರಯಾಣಿಸದಂತೆ ತಡೆದು ಆಸ್ಪತ್ರೆಗೆ ದಾಖಲಿಸಿದ ಉದಾಹರಣೆಗಳು ನಡೆದಿದೆ. ತದನಂತರ ಈ ರೀತಿಯ ಘಟನೆಗಳು ಸ್ವಲ್ಪ ಕಡಿಮೆಯಾಯಿತಾದರೂ ಅಲ್ಲಲ್ಲಿ ಮತ್ತೆ ವರದಿಯಾಗುತ್ತಲೇ ಇವೆ.

ಇದನ್ನೂ ಓದಿ: Covid-19: ಮೂರನೇ ಅಲೆ‌ ಭಯದ ನಡುವೆ 3 ಸ್ವದೇಶಿ ಡೋಸ್​​ಗಳಿಗೆ CDSCO ಒಪ್ಪಿಗೆ

ವಿವಿಧ ಲಸಿಕೆಗಳ ನಾಲ್ಕು ಡೋಸ್‌
ಇತ್ತೀಚಿನ ಕೆಲ ದಿನಗಳಲ್ಲಿ ಲಸಿಕೆ ಪಡೆದವರಿಗೂ ಸಹ ಕೋರೊನಾ ಸೋಂಕು ಮತ್ತೆ ತಗಲುತ್ತಿರುವುದರ ಬಗ್ಗೆ ವರದಿಯಾಗುತ್ತಿದೆ. ಇದೀಗ ಇದೇ ರೀತಿ ವರದಿಯಾದ ಮತ್ತೊಂದು ಘಟನೆಯಲ್ಲಿ ಇಂದೋರ್ ವಿಮಾನ ನಿಲ್ದಾಣದಿಂದ ದುಬೈಗೆ ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ಕೋವಿಡ್ ಮತ್ತೆ ದೃಢಪಟ್ಟಿದ್ದು ಆಕೆಯನ್ನು ದುಬೈಗೆ ಹಾರದಂತೆ ತಡೆದು ನಿಲ್ಲಿಸಲಾದ ಬಗ್ಗೆ ವರದಿಯಾಗಿದೆ. ಡಿಸೆಂಬರ್ 29ರಂದು ಈ ಘಟನೆ ನಡೆದಿದ್ದು ವಿಚಿತ್ರವೆಂದರೆ ದುಬೈ ನಿವಾಸಿಯಾಗಿರುವ 44 ವರ್ಷದ ಈ ಮಹಿಳೆ ಕೋವಿಡ್-19 ವಿರುದ್ಧ ಹೋರಾಡಲು ಈಗಾಗಲೇ ಎರಡು ವಿವಿಧ ಲಸಿಕೆಗಳ ನಾಲ್ಕು ಡೋಸ್‌ಗಳನ್ನು ಪಡೆದಿದ್ದಾರೆಂದು ಅಕೆಯನ್ನು ತಡೆದಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ದೃಢ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಟಿಐಗೆ ಪ್ರತಿಕ್ರಯಿಸಿರುವ ಇಂದೋರ್ ನಗರದ ವೈದ್ಯಕೀಯ ಅಧಿಕಾರಿಯಾಗಿರುವ ಡಾ. ಪ್ರಿಯಾಂಕಾ ಕೌರವ್ "ನಾವು ಎಂದಿನಂತೆ ವಾರಕ್ಕೊಂದು ಬಾರಿ ದುಬೈಗೆ ತೆರಳುವ ಇಂದೋರ್-ದುಬೈ ಫ್ಲೈಟ್ ಹೊರಡುವ ಮುಂಚೆ RTPCR ಪರೀಕ್ಷೆ ಕೈಗೊಂಡೆವು. 89 ಪ್ರಯಾಣಿಕರ ಪರೀಕ್ಷೆ ನಡೆಸಲಾಯಿತು. ಅದರಲ್ಲಿ ಮಹಿಳೆಯೊಬ್ಬರಲ್ಲಿ ಕೋವಿಡ್ ದೃಢಪಟ್ಟಿದೆ" ಎಂದು ಹೇಳಿದರು.

ಸುಮಾರು 12 ದಿನಗಳ ಹಿಂದೆ ದುಬೈ ಮೂಲದ ಈ ಮಹಿಳೆಯು ತಮ್ಮ ಆಪ್ತ ಬಳಗದಲ್ಲಿ ನಡೆದಿದ್ದ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಲು ಮಧ್ಯ ಪ್ರದೇಶದ ಇಂದೋರ್ ನಗರದ ಬಳಿಯಿರುವ ಮ್ಹೋವ್ ಪಟ್ಟಣಕ್ಕೆ ಬಂದಿಳಿದಿದ್ದರು. ಈ ಮಹಿಳೆಯು ಕೋವಿಡ್‌ಗೆ ಸಂಬಂಧಿಸಿದಂತೆ ಜನವರಿ ಹಾಗೂ ಆಗಸ್ಟ್ ಮಧ್ಯದ ಅವಧಿಯಲ್ಲಿ ಸಿನೋಫಾರ್ಮ್ ಹಾಗೂ ಫೈಜರ್ ಈ ಎರಡೂ ಲಸಿಕೆಯ ಎರಡೆರಡು ಡೋಸ್ ಪಡೇದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Precaution Dose: ಬೂಸ್ಟರ್​ ಡೋಸ್​ಗಿಂತ ಭಿನ್ನ ಈ ಮುನ್ನೆಚ್ಚರಿಕಾ ಡೋಸ್​​; ಹೇಗೆ ಅಂತೀರಾ!

ದುಬೈಗೆ ಹಾರಟ ತಡೆ
ಅವರು ಕೋವಿಡ್‌ನ ಯಾವುದೆ ಗುಣಲಕ್ಷಣಗಳನ್ನು ಹೊಂದಿರಲಿಲ್ಲ, ಆದರೆ ಅಧಿಕಾರಿಗಳ ಮುಂದೆ ಅವರು ನಾಲ್ಕೈದು ದಿನಗಳ ಹಿಂದೆ ನೆಗಡಿ ಹಾಗೂ ಕೆಮ್ಮಿನಿಂದ ಬಳಲಿರುವುದಾಗಿ ಹೇಳಿಕೊಂಡಿದ್ದಾರೆನ್ನಲಾಗಿದೆ. ಮಹಿಳೆಯಲ್ಲಿ ಕೋವಿಡ್ ದೃಢಪಟ್ಟ ಕುರಿತು ತಿಳಿದ ತಕ್ಷಣ ಅವರನ್ನು ಇಂದೋರ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವೈದ್ಯಾಧಿಕಾರಿ ಡಾ. ಕೌರವ್ ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ ಪ್ರತಿ ಬುಧವಾರ ಇಂದೋರ್‌ನಿಂದ ದುಬೈಗೆ ತೆರಳುವ ವಿಮಾನ ಪ್ರಯಾಣದ ಸಮಯದಲ್ಲಿ ಈಗಾಗಲೇ ಇಬ್ಬರು ಪುರುಷ ಹಾಗೂ ಒಬ್ಬ ಮಹಿಳೆಯಲ್ಲಿ ಕೋವಿಡ್ ದೃಢಪಟ್ಟ ಕಾರಣ ಇಂದೋರ್‌ನಿಂದ ದುಬೈಗೆ ಹಾರುವುದನ್ನು ತಡೆ ಹಿಡಿಯಲಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
Published by:vanithasanjevani vanithasanjevani
First published: