• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral Photo: ಮೆಸೇಜ್‌ನಲ್ಲೇ ಮಹಿಳೆಯನ್ನು ಚುಡಾಯಿಸಿದ ರ್‍ಯಾಪಿಡೋ ಡ್ರೈವರ್! ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ

Viral Photo: ಮೆಸೇಜ್‌ನಲ್ಲೇ ಮಹಿಳೆಯನ್ನು ಚುಡಾಯಿಸಿದ ರ್‍ಯಾಪಿಡೋ ಡ್ರೈವರ್! ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾನ್ಯವಾಗಿ ರ್‍ಯಾಪಿಡೋ, ಓಲಾ ಇಂತಹ ಅಪ್ಲಿಕೇಶನ್​ಗಳನ್ನು ನಮಗೆ ಬೇಕಾದ ಸಂದರ್ಭದಲ್ಲಿ ಬಳಸಿಕೊಳ್ತೇವೆ. ಎಷ್ಟೇ ರಾತ್ರಿ, ದೂರವಿದ್ದರೂ ಡ್ರಾಪ್​ ಮಾಡುವ ಉದ್ದೇಶದಿಂದ ಇವರು ಬರುತ್ತಾರೆ. ಆದರೆ ಇಲ್ಲೊಂದು ಹುಡುಗಿ ತನ್ನ ಅಗತ್ಯಕ್ಕಾಗಿ ರ್‍ಯಾಪಿಡೋ ಡ್ರೈವರ್​ಗೆ ಮೆಸೇಜ್ ಮಾಡಿದ್ದಾಳೆ. ಆದರೆ ನಂತರ ರ್‍ಯಾಪಿಡೋ ಡ್ರೈವರ್​ ಅವಳನ್ನು ಮೆಸೇಜ್ ಮೂಲಕ ಚುಡಾಯಿಸಿದ್ದಾನೆ.

ಮುಂದೆ ಓದಿ ...
 • Share this:

  ಇತ್ತೀಚೆಗೆ ಸ್ಮಾರ್ಟ್​​ಫೋನ್​ಗಳ (Smartphones) ಬಳಕೆ ಅಧಿಕವಾಗಿದೆ. ಆದರೆ ಇದನ್ನು ದುರುಪಯೋಗ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ ಎಂದು ಹೇಳ್ಬಹುದು. ಈಗ ಯಾವುದೇ ಕೆಲಸ ಆಗಬೇಕಾದ್ರು ಕ್ಷಣ ಮಾತ್ರದಲ್ಲಿ ಸ್ಮಾರ್ಟ್​ಫೋನ್​ನಲ್ಲಿ ಮಾಡಿಮುಗಿಸಬಹುದು. ಆದರೆ ಇದನ್ನೇ ಲಾಭವಾಗಿಟ್ಟುಕೊಂಡು ಕೆಲವರು ದುರುಪಯೋಗ ಮಾಡುತ್ತಾರೆ. ಕೆಲವರು ವಂಚನೆ ಮಾಡಲು ಆರಂಭಿಸಿದ್ರೆ, ಇನ್ನೂ ಕೆಲವರು ಹುಡುಗಿಯರಿಗೆ ಮೆಸೇಜ್​ ಮಾಡುವ ಚಟವನ್ನು ಹೊಂದಿರುತ್ತಾರೆ. ಅಂತಹದೇ ಒಂದು ಘಟನೆ ಇದೀಗ ನಡೆದಿದ್ದು, ರ್‍ಯಾಪಿಡೋ ಡ್ರೈವರ್ (Rapido Driver) ಒಬ್ಬ ಒಂದು ಹುಡುಗಿಗೆ ಮೆಸೇಜ್ (Message) ಮಾಡಿರುವ ಸ್ಕ್ರೀನ್​ ಶಾಟ್​ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Social Media Viral)​ ಆಗಿದೆ.


  ಸಾಮಾನ್ಯವಾಗಿ ರ್‍ಯಾಪಿಡೋ, ಓಲಾ ಇಂತಹ ಅಪ್ಲಿಕೇಶನ್​ಗಳನ್ನು ನಮಗೆ ಬೇಕಾದ ಸಂದರ್ಭದಲ್ಲಿ ಬಳಸಿಕೊಳ್ತೇವೆ. ಎಷ್ಟೇ ರಾತ್ರಿ, ದೂರವಿದ್ದರೂ ಡ್ರಾಪ್​ ಮಾಡುವ ಉದ್ದೇಶದಿಂದ ಇವರು ಬರುತ್ತಾರೆ. ಆದರೆ ಇಲ್ಲೊಂದು ಹುಡುಗಿ ತನ್ನ ಅಗತ್ಯಕ್ಕಾಗಿ ರ್‍ಯಾಪಿಡೋ ಡ್ರೈವರ್​ಗೆ ಮೆಸೇಜ್ ಮಾಡಿದ್ದಾಳೆ. ಆದರೆ ನಂತರ ರ್‍ಯಾಪಿಡೋ ಡ್ರೈವರ್​ ಅವಳನ್ನು ಮೆಸೇಜ್ ಮೂಲಕ ಚುಡಾಯಿಸಿದ್ದಾನೆ.


  ಟ್ವಿಟರ್​ನಲ್ಲಿ ಫೋಟೋ ವೈರಲ್


  ಒಂದು ಟ್ವೀಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫು;ಲ್ ವೈರಲ್ ಆಗಿದೆ. ಟ್ವಿಟ್ಟರ್‌ನಲ್ಲಿ ಹುಸ್ನ್‌ಪಾರಿ ಎಂಬ ಹೆಸರಿನ ಮಹಿಳೆಯೊಬ್ಬರು ರ್‍ಯಾಪಿಡೋ ಡ್ರೈವರ್‌ನೊಂದಿಗಿನ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಶೇರ್​ ಮಾಡಿಕೊಂಡಿದ್ದಾರೆ.


  ಇದನ್ನೂ ಓದಿ: ಕೀಬೋರ್ಡ್​ನ F​, J ಲೆಟರ್​​ಗೆ ಲೈನ್​ ಇರೋದು ಯಾಕೆ? ಗೊತ್ತಾದ್ರೆ ನೀವು ಅಚ್ಚರಿಯಾಗ್ತೀರಾ!


  ಇನ್ನು ಈ ಟ್ವೀಟ್​ನಲ್ಲಿ ಪಿಕಪ್​ಗಾಗಿ ತನ್ನ ಲೊಕೇಶನ್ ಅನ್ನು ಶೇರ್ ಮಾಡಿಕೊಂಡಿದ್ದೇನೆ. ಆದರೆ ಆತ ನಂತರ ವಾಟ್ಸಾಪ್​ನಲ್ಲಿ ಮೆಸೇಜ್​ ಮಾಡಿ ಚುಡಾಯಿಸಿದ್ದಾನೆ ಎಂದು ಹೇಳಿದ್ದಾರೆ. ಈ ಬಗ್ಗೆ ರ್‍ಯಾಪಿಡೋ ಡ್ರೈವರ್ ಮಾಡಿದ ಮೆಸೇಜ್​ ಸ್ಕ್ರೀನ್​ ಶಾಟ್​ ಅನ್ನು ಟ್ವಿಟರ್​ ಪೇಜ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಇನ್ನು ಈಕೆ ಮಾಡಿದ ಟ್ವೀಟ್​ ಕೆಲವೇ ಹೊತ್ತಿನಲ್ಲಿ ಟ್ವಿಟರ್​ನಲ್ಲಿ ಭಾರೀ ವೈರಲ್ ಆಗಿದೆ. ಇನ್ನು ಕೆಲವರು ಆಕೆಯ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳಲು ಹಲವಾರು ಕಮೆಂಟ್​ಗಳನ್ನು ಮಾಡಿದ್ದಾರೆ. ಹಾಗೆಯೇ ಆ ರ್‍ಯಾಪಿಡೋ ಡ್ರೈವರ್​ನ ವಿರುದ್ಧ ಕಠಿಣ ಕ್ರಮ ಆಗ್ಬೇಕು ಎಂದು ಹೇಳಿದ್ದಾರೆ.


  ಇದರಲ್ಲೊಬ್ಬರು, ಅಮೆಜಾನ್​, ಫ್ಲಿಪ್​ಕಾರ್ಟ್​, ಓಲಾನಂತಹ ಹಲವಾರು ಈ ರೀತಿಯ ಅಪ್ಲಿಕೇಶನ್​ಗಳಿವೆ. ಇದರಿಂದ ನಿಮ್ಮ ಲೊಕೇಶನ್ ಅವರಿಗೆ ತಿಳಿಯುತ್ತದೆ ಮತ್ತು ಇದರಿಂದ ಹಲವಾರು ಸಮಸ್ಯೆಗಳು ಸಹ ಆಗುತ್ತದೆ ಎಂದು ಹೇಳಿದ್ದಾರೆ.


  ಇನ್ನೊಬ್ಬರು ಇಂತಹ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.
  ಇನ್ನು ಇದೇ ರೀತಿ ಕಳೆದ ಬಾರಿ ರ್‍ಯಾಪಿಡೋ ಚಾಲಕನೊಬ್ಬ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.


  ಕೇರಳ ಮೂಲದ 23 ವರ್ಷದ ಯುವತಿ ಮೇಲೆ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ರ‍್ಯಾಪಿಡೋ ಚಾಲಕ ಮತ್ತು ಆತನ ಇಬ್ಬರು ಸ್ನೇಹಿತ ಸೇರಿಕೊಂಡು ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಈಗಾಗ್ಲೇ ಬಂಧಿಸಿ ವಿಚಾರಣೆ ನಡೆಸಿದ್ದಾರೆ.


  ಕೇರಳದ ಫ್ರೀಲಾನ್ಸ್ ಉದ್ಯೋಗಿಯಾಗಿರುವ ಸಂತ್ರಸ್ತೆ ಕೆಲಸದ ಸಲುವಾಗಿ ಬೆಂಗಳೂರಿಗೆ ಬಂದಿದ್ದರು. ಎಲೆಕ್ಟ್ರಾನಿಕ್ಸ್ ಸಿಟಿಯ ನಿಲಾದ್ರಿ ನಗರದಲ್ಲಿರುವ ತನ್ನ ಸ್ನೇಹಿತೆಯ ಮನೆಗೆ ತೆರಳಲು ಕೇರಳ ಮೂಲದ ಯುವತಿ ಬೈಕ್​ ಟ್ಯಾಕ್ಸಿ ಬುಕ್​ ಮಾಡಿದ್ದಳು. ಈ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು