ಅವಳಲ್ಲ..ಅವನು: ಇದು ಪ್ರೇಮಿಗಾಗಿ ಲಿಂಗ ಪರಿವರ್ತನೆ ಮಾಡಿಕೊಂಡವಳ ಕಥೆ..!

ಈ ಕುರಿತು ಪ್ರಿಯತಮೆ ಮದುವೆಯಾಗಲಿರುವ ವ್ಯಕ್ತಿ ಜೊತೆ ಕೂಡ ಮಾತನಾಡಿದ್ದಾರೆ. ಆದರೆ ಆತನೊಂದಿಗೆ ಪ್ರೇಯಸಿ ತಾನು ಮಾನಸಿಕ ಅಸ್ವಸ್ಥೆ ಎಂದು ತಿಳಿಸಿದ್ದಳು ಎನ್ನುತ್ತಾರೆ.

news18
Updated:December 27, 2018, 3:58 PM IST
ಅವಳಲ್ಲ..ಅವನು: ಇದು ಪ್ರೇಮಿಗಾಗಿ ಲಿಂಗ ಪರಿವರ್ತನೆ ಮಾಡಿಕೊಂಡವಳ ಕಥೆ..!
ದೀಪು
news18
Updated: December 27, 2018, 3:58 PM IST
ಅವನಲ್ಲ...ಅವಳು ಎಂದಾಗ ಕಣ್ಮುಂದೆ ಬರುವುದು ಲಿಂಗ ಪರಿವರ್ತನೆ ಮಾಡಿಕೊಂಡಿರುವ ಒಂದಷ್ಟು ಮಂದಿಯ ಚಿತ್ರಗಳು. ನಮ್ಮ ಸಮಾಜದಲ್ಲೂ ಶಸ್ತ್ರ ಚಿಕಿತ್ಸೆಯ ಮೂಲಕ ಲಿಂಗ ಪರಿವರ್ತನೆ ಮಾಡಿಕೊಂಡ ಅನೇಕ ಪುರುಷರನ್ನು (ಅವಳು) ಕಾಣಬಹುದು. ಆದರೆ ಇದಕ್ಕೆಲ್ಲಾ ತದ್ವಿರುದ್ದ  ಎಂಬಂತೆ ಕೇರಳದ ಕೋಝಿಕ್ಕೋಡ್​ ಜಿಲ್ಲೆಯಲ್ಲಿ ಒಂದು ಘಟನೆ ನಡೆದಿದೆ. ಅರ್ಚನಾ ರಾಜ್ (23)​ ಎಂಬ ಹುಡುಗಿ ತನ್ನ ಲಿಂಗವನ್ನು ಪರಿವರ್ತನೆ ಮಾಡಿಕೊಂಡಿದ್ದಾಳೆ. ಅದು ಕೂಡ ತನ್ನ ಪ್ರಿಯತಮೆಯನ್ನು ಮದುವೆಯಾಗಲು. ಆದರೆ ಲಿಂಗ ಪರಿವರ್ತನೆ ಮಾಡಿದ ಬಳಿಕ ಪ್ರೇಯಸಿ ಕೈಕೊಟ್ಟಿದ್ದಾಳೆ.

ವಡಕರ ನಿವಾಸಿಯಾಗಿರುವ ಅರ್ಚನಾ ಎರಡು ತಿಂಗಳ ಹಿಂದೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆಯ ಮೂಲಕ ಲಿಂಗವನ್ನೇ ಬದಲಿಸಿ ದೀಪು ಆರ್. ದರ್ಶನಾ ಆಗಿದ್ದರು. ಈ ಸಮಯದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಸಾಥ್ ನೀಡಿದ್ದ ಪ್ರೇಯಸಿ ಲಿಂಗ ಪರಿವರ್ತನೆ ಆಗುತ್ತಿದ್ದಂತೆ ಕೈ ಕೊಟ್ಟಿದ್ದಾಳೆ. ಇದರಿಂದ ಈಗ ದೀಪುಗೆ ಮುಂದೇನು ಎಂದು ತೋಚದಂತಾಗಿದೆ.

ಇವರಿಬ್ಬರು ಮೊದಲ ಬಾರಿ ಕಂಪೆನಿಯೊಂದರಲ್ಲಿ ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲೇ ಇಬ್ಬರ ನಡುವೆ ಸ್ನೇಹ ಮೂಡಿತ್ತು. ಈ ಸ್ನೇಹ ಸಂಬಂಧದಿಂದ ಪ್ರೀತಿ ಮೊಳಕೆ ಹೊಡೆದಿತ್ತು. ಆದರೆ ಇಬ್ಬರ ನಡುವೆ ಸಲಿಂಗ ಸಂಬಂಧ ಇಲ್ಲದಿದ್ದರಿಂದ ಒಬ್ಬರು ಪುರುಷರಾಗುವ ತೀರ್ಮಾನಕ್ಕೆ ಬರಲಾಗಿದೆ. ಅದರಂತೆ ತನ್ನ ಪ್ರಿಯತಮೆಯನ್ನು ಪಡೆಯಲು ಲಿಂಗ ಪರಿವರ್ತನಗೆ ಅರ್ಚನಾ(ದೀಪು) ಮುಂದಾಗಿದ್ದಾರೆ. ಇದಕ್ಕೆ ಇವರಿಬ್ಬರ ಪ್ರೇಮ್​ ಕಹಾನಿ ತಿಳಿದಿದ್ದ ಗೆಳೆಯರು ಕೂಡ ಬೆಂಬಲಿಸಿದ್ದಾರೆ. ಹೀಗಾಗಿ ಚೆನ್ನೈನ ಆಸ್ಪತ್ರೆಯೊಂದರಲ್ಲಿ 2 ಲಕ್ಷ ಖರ್ಚು ಮಾಡಿ 'ಅವನು' ಆಗಿದ್ದಾನೆ.

ಶಸ್ತ್ರ ಚಿಕಿತ್ಸೆಯ ತನಕ ಕರೆ ಮಾಡುತ್ತಿದ್ದ ಪ್ರಿಯತಮೆ ಅರ್ಚನಾಗೆ 'ದೀಪು' ಎಂಬ ಹೆಸರನ್ನೂ ನಾಮಕರಣ ಮಾಡಿದ್ದಾಳೆ. ಆದರೆ ಸರ್ಜರಿ ಬಳಿಕ ಏಕ್​ಧಂ ಮಾತು ಬಿಟ್ಟಿದ್ದಾಳೆ. ಇದರ ನಡುವೆ ಎಲ್ಲ ಮುಗಿದು ಬರುವಷ್ಟರಲ್ಲಿ ದೀಪುವಿನ ಪ್ರೇಯಸಿ ಮತ್ತೊಂದು ಮದುವೆಗೆ ತಯಾರಾಗಿದ್ದಾಳೆ ಎಂಬ ಸುದ್ದಿಯೊಂದು ಕಿವಿಗೆ ಬಿದ್ದಿದೆ. ಈಗ ಬೇರೆ ದಾರಿ ಕಾಣದೇ ದೀಪು ಮರಳಿ ತನ್ನ ಪ್ರಿಯತಮೆಯನ್ನು ಹಿಂಪೆಡೆಯುವ ಸರ್ಕಸ್​ನಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಇದು ಕ್ಯಾನ್ಸರ್​ಗಿಂತ ಅಪಾಯಕಾರಿ: ನಿಮಗೆ ತಿಳಿಯದೇ ಬಲಿ ಪಡೆಯುತ್ತೆ..!

ಈ ಕುರಿತು ಪ್ರಿಯತಮೆ ಮದುವೆಯಾಗಲಿರುವ ವ್ಯಕ್ತಿ ಜೊತೆ ಕೂಡ ಮಾತನಾಡಿದ್ದಾರೆ. ಆದರೆ ಆತನೊಂದಿಗೆ ಪ್ರೇಯಸಿ ತಾನು ಮಾನಸಿಕ ಅಸ್ವಸ್ಥೆ ಎಂದು ತಿಳಿಸಿದ್ದಳು ಎನ್ನುತ್ತಾರೆ ದೀಪು. ಅಲ್ಲದೆ ಪೊಲೀಸ್​ ಠಾಣಾ ಮೆಟ್ಟಿಲೇರಿದ್ದರೂ ಪ್ರಯೋಜನವಾಗಲಿಲ್ಲ. ಅಲ್ಲೂ ಕೂಡ ದೀಪುವನ್ನು ಪ್ರಿಯತಮೆ ತಿರಸ್ಕರಿಸಿದ್ದಾಳೆ. ಸದ್ಯ ಸುಪ್ರೀಂ ಕೋರ್ಟ್​ ಮೊರೆ ಹೋಗಿ ನ್ಯಾಯ ಪಡೆಯುವ ವಿಶ್ವಾಸದಲ್ಲಿದ್ದಾರೆ ವಂಚಿತ ಪ್ರೇಮಿ.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೇರದೇ ಪಾದರಕ್ಷೆ ಧರಿಸುವುದಿಲ್ಲವೆಂದು ಶಪಥ: 15 ವರ್ಷಗಳ ನಂತರ ಈಡೇರಿದ ಆಸೆ
Loading...

ಆದರೆ ಮತ್ತೆ ಹುಡುಗಿ ಆಗುವ ಆಸೆ ದೀಪುಗೆ ಇಲ್ವಂತೆ. ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಹೆಣ್ತನವನ್ನು ತೆಗೆದು ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ತಾನು ಇಂತಹ ಸರ್ಜರಿಗೆ ಮುಂದಾಗಲು ಕೂಡ ತನ್ನ ಪ್ರೇಯಸಿಯ ಒತ್ತಾಯವೇ ಕಾರಣ ಎಂದು ತಿಳಿಸಿದ್ದಾರೆ. ಇದೊಂದು ವಿಚಿತ್ರ ಪ್ರೇಮ ಕಹಾನಿ ಎಂದು ಹೇಳಬಹುದಾದರೂ, ಪ್ರೀತಿ ಕುರುಡು ಎಂಬುದಕ್ಕೆ ತಾಜಾ ಉದಾಹರಣೆ ಈ ಪ್ರೀತಿ ಕಥೆ ಎನ್ನಬಹುದು.

First published:December 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ