ಪ್ರಾಮಾಣಿಕತೆಗೆ, ನಿಯತ್ತಿಗೆ ಹೆಸರುವಾಸಿಯಾಗಿರುವ ಸಾಕು ಪ್ರಾಣಿ ಅಂದರೆ ನಾಯಿ. ನಾಯಿ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ, ಪುಟ್ಟ ಮಕ್ಕಳಿಂದ ( Childrens) ಹಿಡಿದು ದೊಡ್ಡವರವರೆಗೂ ನಾಯಿ (Dog) ಎಂದರೆ ಎಲ್ಲರಿಗೂ ಪ್ರೀತಿ ಇದೆ. ಯಾರ ಮನೆಯಲ್ಲಾದರೂ ಅಥವಾ ಯಾರ ಬಳಿಯಾದರೂ ನಾಯಿ ಮರಿಯನ್ನು ನೋಡಿದರೆ ಸಾಕು ಅದನ್ನು ಎತ್ತಿ ಮುದ್ದಾಡಬೇಕೆನಿಸುತ್ತದೆ. ಪ್ರಾಣಿಗಳನ್ನು(Animal Love) ಇಷ್ಟಪಡುವವರಿಗಂತೂ ನಾಯಿ ನೋಡಿದರೆ ಸಾಕು ಅದನ್ನು ಮನೆಗೆ ಕೊಂಡೊಯ್ಯುವಷ್ಟು ಉತ್ಸುಕರಾಗಿ ಬಿಡುತ್ತಾರೆ. ಅದೆಷ್ಟೋ ಮನೆಗಳಲ್ಲಿ ನಾಯಿಯೂ ಕೂಡ ಮನೆಯ ಸದಸ್ಯನಾಗಿ ಬಿಟ್ಟಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಿಳೆಯೊಬ್ಬರು (Women) ಕ್ಯೂಟ್ ನಾಯಿಯೊಂದಕ್ಕೆ ಸೀಮಂತ (Baby Shower) ಮಾಡಿದ್ದಾರೆ.
ನಾಯಿಗೆ ಸೀಮಂತ ಕಾರ್ಯ ಜೊತೆಗೆ ಅಕ್ಕಪಕ್ಕದವರಿಗೆ ಔತಣ
ಹೌದು, ನಾಯಿಗಿರುವ ಬೆಲೆ ನಿಜಕ್ಕೂ ಮನುಷ್ಯನಿಗಿಲ್ಲ ಎಂದು ಹೇಳಿದರೂ ತಪ್ಪಾಗಲಾರದು. ನಾಯಿಗೆ ನೀವು ಕೊಂಚ ಪ್ರೀತಿ ತೋರಿಸಿದರೆ ಸಾಕು, ಅದು ನಿಮಗೆ ಅಪಾರ ಪ್ರೀತಿ ನೀಡುತ್ತದೆ. ನೀವು ಬೇಡ ಅಂದರೂ ಸಾಕಷ್ಟು ಕಾಳಜಿ ತೋರಿಸುತ್ತದೆ. ಮನೆಯಲ್ಲಿ ನಾಯಿ ಸಾಕಿದರೆ, ಮನೆಯವರೊಂದಿಗೆಲ್ಲ ಬೆರೆತು ತಾವು ಕೂಡ ಮನೆಯ ಮಕ್ಕಳಂತೆ ಆಗಿ ಬಿಡುತ್ತದೆ. ಎಷ್ಟೋ ಮಂದಿ ತಾವು ಸಾಕಿರುವ ನಾಯಿಗೆ ಬರ್ತ್ಡೇ ಮಾಡಿ ಕೇಕ್ ಕತ್ತರಿಸಿ ಸಂತಸ ಪಟ್ಟಿರುವುದನ್ನು ನಾವು ನೋಡಿರುತ್ತೇವೆ.
ಇದೀಗ ಶ್ವಾನ ಪ್ರಿಯರೊಬ್ಬರು ತಮ್ಮ ಮುದ್ದಾದ ನಾಯಿ ಮರಿಗೆ ಸೀಮಂತ ಕಾರ್ಯ ನೆರವೇರಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಅಕ್ಕಪಕ್ಕದ ಮನೆಯವರನ್ನು ಔತಣಕ್ಕೂ ಕೂಡ ಆಹ್ವಾನಿಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಾಯಿಯ ಸೀಮಂತ ವೀಡಿಯೋ ಶೇರ್ ಮಾಡಿದ ಮಾಲೀಕರು
ವೀಡಿಯೋದಲ್ಲಿ ಸುಜಾತ ಭಾರತಿ ಎಂಬವರು, ನಾಯಿಗೆ ಹೊಸ ಬಟ್ಟೆ ತೊಡಿಸಿ, ಕುತ್ತಿಗೆಗೆ ಹಾರ ಹಾಕಿ, ನಾಯಿಯ ಹಣೆಗೆ ಕುಂಕುಮವಿಟ್ಟು, ಆರತಿ ಬೆಳಗುತ್ತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ತಟ್ಟೆಯೊಂದರಲ್ಲಿ ನಾಯಿ ಇಷ್ಟಪಡುವಂತ ವಿವಿಧ ಭಕ್ಷ್ಯಗಳನ್ನು ತಿನ್ನಲು ಇಟ್ಟಿರುವುದನ್ನು ನೋಡಬಹುದಾಗಿದೆ.
ನನ್ನ ಮುದ್ದಾದ ನಾಯಿಗೆ ಸೀಮಂತ
ತಾವು ಸಾಕಿರುವ ನಾಯಿಗೆ ಸೀಮಂತ ಮಾಡಿದ ಪ್ರಯುಕ್ತ ಬೀದಿ ನಾಯಿಗಳಿಗೂ ಮನೆಯಲ್ಲಿ ತಯಾರಿಸಿದ ಆಹಾರವನ್ನು ಹಾಕಿದ್ದಾರೆ. ಇನ್ನೂ ಈ ವೀಡಿಯೋವನ್ನು ಸುಜಾತ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ಮುದ್ದಾದ ನಾಯಿಗೆ ಸೀಮಂತ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಮಹಿಳೆಯ ಶ್ವಾನ ಪ್ರೀತಿಗೆ ಮನಸೋತ ನೆಟ್ಟಿಗರು
ಈ ವೀಡಿಯೋಗೆ ವ್ಯಕ್ತಿಯೊಬ್ಬರು ದೇವರು ನಿಮ್ಮಗೂ ಮತ್ತು ನಿಮ್ಮ ನಾಯಿಗೂ ದೇವರು ಆಶೀರ್ವಾದಿಸಲಿ ಕಾಮೆಂಟ್ ಮಾಡಿದರೆ, ಮತ್ತೊಬ್ಬರು ನಿಮ್ಮ ಆಲೋಚನೆ ಮತ್ತು ಕಾರ್ಯ ಕಲ್ಪನೆಗೆ ಮೀರಿದ್ದು, ಓರ್ವ ಶ್ವಾನ ಪ್ರಿಯನಾಗಿ, ನೀವು ನಾಯಿ ಮೇಲೆ ಇಟ್ಟಿರುವ ಪ್ರೀತಿಯನ್ನು ಅರ್ಥಮಾಡಿಕೊಳ್ಳಬಲ್ಲೆ. ಈ ರೀತಿಯ ಉತ್ತಮ ಕಾರ್ಯಗಳನ್ನು ಮುಂದುವರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
View this post on Instagram
ಇದೇ ರೀತಿ ಇತ್ತೀಚೆಗಷ್ಟೇ ಕಾಲ್ಸಂಗ್ ಡೋರ್ಜಿ ಎಂಬ ಶ್ವಾನ ಪ್ರಿಯರು ಮೈಸೂರು, ಕೊಡಗು ಗಡಿಯಲ್ಲಿರುವ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಅನಾಥ ಬೀದಿ ನಾಯಿಮರಿಗಳ ಆಶ್ರಯ ಕೇಂದ್ರ ಸ್ಥಾಪಿಸಿದ್ದಾರೆ.
ಇಲ್ಲಿ ಸುಮಾರು 40ಕ್ಕೂ ಅಧಿಕ ನಾಯಿಗಳಿದ್ದು, ಎಲ್ಲವೂ ಬೀದಿನಾಯಿಗಳೇ ಆಗಿದೆ. ಕೊಪ್ಪ, ಪಿರಿಯಾಪಟ್ಟಣ, ಕುಶಾಲನಗರ, ಮಡಿಕೇರಿ ಹೀಗೆ ವಿವಿಧ ಸ್ಥಳಗಳಿಂದ ಈ ನಾಯಿಗಳನ್ನು ರಕ್ಷಿಸಿ ತಂದು ತಮ್ಮ ಆಶ್ರಯತಾಣದಲ್ಲಿ ಸಾಕುತ್ತಿದ್ದಾರೆ. ಕೇವಲ ಆಹಾರ ಆಶ್ರಯ ಮಾತ್ರವಲ್ಲ, ಅನಾರೋಗ್ಯಪೀಡಿತ ನಾಯಿಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನ ಕೂಡ ಇವರೇ ನೀಡುವ ಮೂಲಕ ಶ್ವಾನದ ಮೇಲಿನ ಪ್ರೀತಿ ಮೆರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ