ಕಡಿಮೆ ಬಜೆಟ್​​ನಲ್ಲಿ ಮದುವೆ ಮಾಡಿದ್ರೆ ಓಡಿ ಹೋಗ್ತೀನಿ; ತಂದೆ-ತಾಯಿಗೆ ಬೆದರಿಕೆ ಹಾಕಿದ ವಧು

ಮದುವೆಗೆ ತೆಗೆದಿರಿಸಿದ್ದ ದುಡ್ಡಿನಲ್ಲಿ ಬರೇ ಅರ್ಧದಷ್ಟನ್ನು ವಿವಾಹಕ್ಕೆ ಖರ್ಚು ಮಾಡುವುದಾಗಿ ಹೆತ್ತವರು ನಿರ್ಧರಿಸಿದ್ದಕ್ಕೆ ವಧು ಪೋಷಕರನ್ನು ಬೆದರಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಶ್ವದಲ್ಲಿ ನಡೆಯುವ ಕೆಲವೊಂದು ಘಟನೆಗಳು ನಮಗೆ ವಿಲಕ್ಷಣ ಎಂದು ತೋರಿದರೂ ಒಮ್ಮೊಮ್ಮೆ ಅದನ್ನು ನಂಬಲೇಬೇಕಾದ ಅನಿವಾರ್ಯತೆ ಒದಗಿಬರುತ್ತದೆ. ಜಗತ್ತಿನಲ್ಲಿ ಇಂತಹವರು ಇರುತ್ತಾರೆಯೇ ಎಂದು ಒಮ್ಮೊಮ್ಮೆ ಆಶ್ಚರ್ಯ ಉಂಟಾಗುತ್ತದೆ. ನಾವಿಂದು ನಿಮಗೆ ತಿಳಿಸುತ್ತಿರುವ ಸುದ್ದಿ ಅಮೆರಿಕದಲ್ಲಿ ನಡೆದ ಘಟನೆಯಾಗಿದ್ದರೂ ನಿಮ್ಮನ್ನು ಹೌಹಾರುವಂತೆ ಮಾಡುವುದು ಖಂಡಿತ. ವಿವಾಹವನ್ನು ಕಡಿಮೆ ಖರ್ಚಿನಲ್ಲಿ ಅಚ್ಚುಕಟ್ಟಾಗಿ ಮಾಡುವುದು ಈಗೀಗ ಟ್ರೆಂಡ್ ಆಗುತ್ತಿದ್ದು ವೈಭವದ ಮದುವೆಗೆ ಬ್ರೇಕ್ ಬಿದ್ದಿದೆ ಎಂದೇ ಹೇಳಬಹುದು. ಆದರೆ ತನ್ನಿಷ್ಟದ ಮದುವೆಗೆ ಹೆತ್ತವರು ಅಡ್ಡಿಮಾಡಿದರೆಂದು ಇಲ್ಲೊಬ್ಬಳು ವಧು ಓಡಿ ಹೋಗುವುದಾಗಿ ಹೆತ್ತವರನ್ನು ಹೆದರಿಸಿದ್ದಾಳೆ. ವಿವಾಹ ಸಂದರ್ಭದಲ್ಲಿ ಹೆತ್ತವರು ಮಕ್ಕಳ ವಿವಾಹಕ್ಕೆ ಹೆಚ್ಚು ಖರ್ಚು ಮಾಡುವುದು ವಾಡಿಕೆ. ಸಾಲ ಮಾಡಿಯಾದರೂ ಮದುವೆ ಮಾಡು ಎಂಬ ಮಾತಿನಂತೆ ತಮ್ಮ ಮಕ್ಕಳ ವಿವಾಹವನ್ನು ಧಾಮ್ ಧೂಮ್ ಆಗಿ ಮಾಡಬೇಕೆಂಬುದು ಅವರ ಮಹದಾಸೆಯಾಗಿರುತ್ತದೆ.

ವಧು ಕೂಡ ತನ್ನ ಪೋಷಕರಿಗೆ ಹೆಚ್ಚಿನ ಹೊರೆಯಾಗದೇ ವಿವಾಹ ನಡೆಯಲಿ ಎಂದು ಬಯಸುತ್ತಾಳೆ. ಆದರೆ ಅಮೆರಿಕ ಮೂಲದ ವಧುವೊಬ್ಬಳು ತನ್ನ ವಿವಾಹಕ್ಕೆ ನಿರ್ಧರಿಸಿದ ಮೊತ್ತಕ್ಕಿಂತ ಕಡಿಮೆ ಖರ್ಚು ಮಾಡುವುದನ್ನು ಖಂಡಿಸಿ ಓಡಿಹೋಗುವುದಾಗಿ ಹೆತ್ತವರಿಗೆ ಧಮ್ಕಿ ಹಾಕಿದ್ದಾಳೆ.

ಸ್ವತಃ ವಧುವೇ ಈ ಘಟನೆಯ ಕುರಿತು ರೆಡ್ಡಿಟ್‌ನಲ್ಲಿ ವಿವರಿಸಿದ್ದು, ಮದುವೆಗೆ ತೆಗೆದಿರಿಸಿದ್ದ ದುಡ್ಡಿನಲ್ಲಿ ಬರೇ ಅರ್ಧದಷ್ಟನ್ನು ವಿವಾಹಕ್ಕೆ ಖರ್ಚು ಮಾಡುವುದಾಗಿ ಹೆತ್ತವರು ನಿರ್ಧರಿಸಿದ್ದಕ್ಕೆ ವಧು ಪೋಷಕರನ್ನು ಬೆದರಿಸಿದ್ದಾಳೆ.

ಇದನ್ನೂ ಓದಿ:Tissue Paper: ಟಿಶ್ಯೂ ಪೇಪರ್​ನಿಂದಲೂ ಮಾಸ್ಕ್​​ ತಯಾರಿಸಬಹುದು...! ಹೇಗೆ ಅಂತೀರಾ? ಇಲ್ನೋಡಿ

ಮಗಳ ಮದುವೆಗೆಂದು ಪೋಷಕರು ಸುಮಾರು  28 ಲಕ್ಷ ಹಣವನ್ನು  ಎತ್ತಿಟ್ಟಿದ್ದರು. ಅದರಂತೆ ವಧು ವಿವಾಹದ ಸಿದ್ಧತೆಗಳನ್ನು ಮಾಡಿಕೊಂಡಿದ್ದಳು. ಆದರೆ ವಧುವಿನ ತಾಯಿ ಅದರ ಅರ್ಧದಷ್ಟು ಮೊತ್ತವನ್ನು ಮಾತ್ರವೇ ಖರ್ಚು ಮಾಡಿ ಮದುವೆ ಮಾಡುವುದಾಗಿ ಹೇಳಿದರು. ಅಂದರೆ 14 ಲಕ್ಷ ಹಣದಲ್ಲಿ ಮದುವೆ ಮಾಡುವುದು ಪೋಷಕರ ಪ್ಲಾನ್ ಆಗಿತ್ತು.  ಇದರಿಂದ ಕೋಪಗೊಂಡ ಯುವತಿ, ನೀವು 28 ಲಕ್ಷ ಹಣವನ್ನೂ ಮದುವೆಗೆ ಖರ್ಚು ಮಾಡದಿದ್ದರೆ ನಾನು ಈಗಲೇ ಓಡಿ ಹೋಗುತ್ತೇನೆ ಎಂದು ಪೋಷಕರನ್ನು ಹೆದರಿಸಿದ್ದಾಳೆ.

ಯುವತಿ ಹೇಳುವ ಪ್ರಕಾರ, ನನ್ನ ಪೋಷಕರು 14 ಲಕ್ಷ ಹಣ ಖರ್ಚು ಮಾಡಿ ಮದುವೆ ಮಾಡುವುದು ಎಂದು  ಮೊದಲೇ ಹೇಳಿದ್ದರೆ ತಾನು ವಿವಾಹಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಮೊದಲಿಗೆ 28 ಲಕ್ಷ  ಖರ್ಚು ಮಾಡುತ್ತೇವೆ ಎಂದು ಹೇಳಿ ನಂತರ ಅವರು ಮಾತಿಗೆ ತಪ್ಪಿದ್ದಾರೆ. ಅದಕ್ಕಾಗಿ ನಾನು ನನ್ನ ನಿರ್ಧಾರವನ್ನು ಪ್ರಕಟಿಸಿರುವೆ ಎಂದು ವಧು ಸುದ್ದಿ ವೆಬ್‌ಸೈಟ್‌ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Green Fungus: ಬ್ಲ್ಯಾಕ್​, ವೈಟ್, ಯೆಲ್ಲೋ ಆಯ್ತು.... ಈಗ ಗ್ರೀನ್​ ಫಂಗಸ್​ ಪತ್ತೆ..!

ವಧು ಹೇಳುವಂತೆ ತನ್ನ ತಂದೆ ತಾಯಿ ವಿವಾಹದ ಮೊತ್ತವನ್ನು ಮೊದಲೇ ನನಗೆ ತಿಳಿಸಿದ್ದರೆ ನಾನು ವಿವಾಹಕ್ಕೆ ಯಾವುದೇ ಸಿದ್ಧತೆಗಳನ್ನು ಮಾಡುತ್ತಿರಲಿಲ್ಲ. ಆದರೆ ನನ್ನೆಲ್ಲಾ ಆಸೆಗಳಿಗೆ ಅವರು ತಣ್ಣೀರೆರಚಿದ್ದಾರೆ ಎಂಬುದು ವಧುವಿನ ವಾದವಾಗಿದೆ.

ಪ್ರಸಕ್ತ ಕಾಲದಲ್ಲಿ ವಿವಾಹವೆಂಬುದು ಬಜೆಟ್‌ಗೆ ಸೀಮಿತವಾಗುತ್ತಿದೆ. ಸೀಮಿತ ಜನರ ಹಾಜರಾತಿಯಲ್ಲಿ ನಡೆಯುವ ಎಷ್ಟೋ ಮದುವೆಗಳು ವಿವಾಹಕ್ಕೆ ನಡೆಯುವ ಅದ್ದೂರಿ ಖರ್ಚು ವೆಚ್ಚಗಳಿಗೆ ಬ್ರೇಕ್ ಹಾಕುತ್ತಿವೆ ಮತ್ತು ಸರಳವಾಗಿ ನಡೆಯುತ್ತಿವೆ. ಆದರೆ ಈ ವಧು ಮದುವೆಯ ಬಜೆಟ್ ಕಡಿಮೆಯಾಗಿದ್ದಕ್ಕೆ ಈ ರೀತಿಯ ನಿರ್ಧಾರವನ್ನು ಪ್ರಕಟಿಸಿದ್ದಾಳೆ.

​​ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: