Fathers Album: ತಂದೆಯ ಅಗಲಿಕೆ ನಂತರ ಅವರ ಛಾಯಾಚಿತ್ರ ಕೌಶಲ್ಯ ನೋಡಿ ಮಂತ್ರಮುಗ್ಧಳಾದ ಮಗಳು..!

ರಮಣೀಯ ಪರ್ವತಗಳು, ಮೋಡಗಳ ಕಲರವ, ನೀಲಜಲದ ಮನ ಕಲಕುವ ನೋಟಗಳನ್ನು ಹೊತ್ತ ಆ ಅದ್ಭುತ ಚಿತ್ರಗಳು ನಿಜಕ್ಕೂ ನೋಡಲು ಮೋಹಕವಾಗಿದ್ದು ಅವಿಸ್ಮರಣೀಯವಾಗಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಜೀವನವೇ ಹಾಗೆ. ಕೆಲವೊಮ್ಮೆ ವ್ಯಕ್ತಿಗಳು ನಮ್ಮ ಜೊತೆಗೆ ಇರುವಾಗ ಅವರ ಕುರಿತು ನಮಗೇನೂ ಅಷ್ಟೊಂದು ಗೊತ್ತಾಗುವುದೇ ಇಲ್ಲ ಅಥವಾ ಅದನ್ನರಿಯುವ ಪ್ರಯತ್ನ ನಾವು ಅಷ್ಟೊಂದಾಗಿ ಮಾಡುವುದಿಲ್ಲ. ಆದರೆ ಆ ವ್ಯಕ್ತಿಯು ನಮ್ಮಿಂದ ದೂರವಾದಾಗ ಆ ವ್ಯಕ್ತಿಯ(Person) ಬೆಲೆ ತಿಳಿಯಲಾರಂಭಿಸುತ್ತದೆ(Recognize) . ಅವರಲ್ಲಿದ್ದ ಜಾಣ್ಮೆ, ಕೌಶಲ್ಯ (Skill) ಮುಂತಾದ ಗುಣಗಳನ್ನು ಗುರುತಿಸಲಾರಂಭಿಸುತ್ತೇವೆ. ನಮಗೆ ಪ್ರೀತಿ ಪಾತ್ರರಾದವರ ಅನುಪಸ್ಥಿತಿ ಉಂಟಾದಾಗ ಅತೀವವಾದ ದುಖವಾಗುವುದು ಸಹಜ. ಆದಾಗ್ಯೂ ಅವರ ನೆನಪುಗಳು (Memories) ಶಾಶ್ವತವಾಗಿರುವ ಸ್ಮರಣಿಕೆಗಳ ರೂಪದಲ್ಲಿದ್ದಾಗ ಮನಸ್ಸಿಗೆ ಕೊಂಚ ಸಮಾಧಾನವಾಗಬಹುದು.

ಅದ್ಭುತ ಛಾಯಾಚಿತ್ರ ಕಲಾವಿದ
ಇದೇ ರೀತಿಯ ಒಂದು ಆಸಕ್ತಿದಾಯಕ ಘಟನೆಯೊಂದು ವರದಿಯಾಗಿದ್ದು ತಂದೆ ಹಾಗೂ ಮಗಳ ಮಧ್ಯದ ಅದ್ಭುತ ಬಾಂಧವ್ಯ ತಿಳಿಸುವಂತಿದೆ. ತಂದೆ ತೀರಿದ ನಂತರ ಮಗಳಿಗೆ ಒಮ್ಮೆ ತನ್ನ ತಂದೆಯ ಫೋಟೋ ಅಲ್ಬಮ್ ಸಿಕ್ಕಿದೆ. ಆ ಅಲ್ಬಮ್ ಅನ್ನು ತಿರುವಾಡಿದಾಗ ಅವಳು ಅಕ್ಷರಶಃ ಮಂತ್ರಮುಗ್ಧಳಾಗಿದ್ದಾಳೆ. ಏಕೆಂದರೆ ಆಕೆಯ ತಂದೆ ಒಬ್ಬ ಅದ್ಭುತ ಛಾಯಾಚಿತ್ರ ಕಲಾವಿದನಾಗಿದ್ದ. ಅವರು ತಮ್ಮ ಕ್ಯಾಮೆರಾ ಲೆನ್ಸುಗಳಲ್ಲಿ ಸೆರೆ ಹಿಡಿದಿರುವ ಪ್ರಕೃತಿಯ ದೃಶ್ಯಗಳು ನೋಡಲು ಅಮೋಘವಾಗಿದ್ದವು. ತಂದೆಯ ಈ ಕೌಶಲ್ಯದ ಬಗೆ ಅವಳಿಗೆ ಅರಿವೇ ಇರಲಿಲ್ಲ. ಆದರೆ ಅದನ್ನು ಕಣ್ಣಾರೆ ನೋಡಿದಾಗ ಒಂದು ಕ್ಷಣ ಅವಳ ಕಣನ್ನು ಅವಳೇ ನಂಬದಾಗಿದ್ದಳು ಎನ್ನುವಂತಿತ್ತು.

ಈ ಕುರಿತು ಮಗಳು ತನ್ನ ಟ್ವಿಟ್ಟರ್‌ ಖಾತೆಯಲ್ಲಿ "ನನ್ನ ತಂದೆ ತೀರಿಹೋದ ನಂತರ ಅವರ ಹಳೆಯ ಫೊಟೋ ಅಲ್ಬಮ್ ಅನ್ನು ನಾ ಕಂಡೆ, ಅದನ್ನು ನೋಡಿದಾಗ ಅದರಲ್ಲಿರುವ ದೃಶ್ಯಚಿತ್ರಗಳಿಂದ ನಾನು ಮಂತ್ರಮುಗ್ಧಳಾದೆ" ಎಂದು ಬರೆದುಕೊಂಡು ನಾಲ್ಕು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾಳೆ. ಈಗ ಅವಳ ಪೋಸ್ಟ್ ವೈರಲ್ ಆಗಿದೆ. 6000ಕ್ಕೂ ಹೆಚ್ಚಿನ ರೀಟ್ವೀಟ್‌ಗಳನ್ನು ಅದೀಗ ಕಂಡಿದೆ.

ಇದನ್ನೂ ಓದಿ: Photography: ಕೈಯಿಲ್ಲ, ಕಾಲಿಲ್ಲ.. ಆದರೆ ಈತನ ಫೋಟೋಗ್ರಫಿ ಮಾತ್ರ ಯಾರಿಗೂ ಕಡಿಮೆ ಇಲ್ಲ!

ಟ್ವಿಟ್ಟರ್‌ ಪೋಸ್ಟ್ ವೈರಲ್
ನೂರಾರು ಸಂಖ್ಯೆಯಲ್ಲಿ ಟ್ವಿಟ್ಟರ್‌ ಬಳಕೆದಾರರು ಅವಳ ಪೋಸ್ಟ್ ಅನ್ನು ಮೆಚ್ಚಿ ಅದ್ಭುತವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆ ಫೋಟೋಗಳನ್ನು ಕೊಂಡಾಡುತ್ತಿದ್ದಾರೆ. ಒಬ್ಬ ಬಳಕೆದಾರನಂತೂ ಆ ಪೋಸ್ಟ್ ಅನ್ನು ಹಾಕಿದ ಮಗಳನ್ನು ಕುರಿತು "ಸಹೋದರಿ, ದಯವಿಟ್ಟು ವಾಟರ್ ಮಾರ್ಕ್ ಗುರುತನ್ನು ಹಾಕಿ ಈ ಚಿತ್ರಗಳನ್ನು ಪೋಸ್ಟ್ ಮಾಡು. ಇಂದಿನ ದಿನಗಳಲ್ಲಿ ಕಾಪಿ ರೈಟ್ ಉಲ್ಲಂಘನೆ ತುಂಬಾನೇ ಸಾಮಾನ್ಯವಾಗಿದೆ" ಎಂದು ಎಚ್ಚರಿಸಿದ್ದಾರೆ.

ಇನ್ನೊಬ್ಬ ಟ್ವಿಟರ್ ಬಳಕೆದಾರ ಮಗಳು ಹಾಕಿದ ಆ ಪೋಸ್ಟ್ ಅನ್ನು ಮೆಚ್ಚಿ "ಈ ಚಿತ್ರಗಳು ಅದ್ಭುತವಾಗಿವೆ. ನಿನ್ನಲ್ಲೂ ಸಹ ಖಂಡಿತವಾಗಿ ನಿನ್ನ ತಂದೆಯಿಂದ ಬಳುವಳಿಯಾಗಿ ಬಂದಿರುವ ಪ್ರತಿಭೆಯಿದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

1990ರ ದಶಕದ ಸಮಯದ ಚಿತ್ರಗಳು
ಮತ್ತೊಬ್ಬ ನೆಟ್ಟಿಗರು ಆ ಪೋಸ್ಟ್ ಕುರಿತು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಹೀಗೆ ಬರೆದುಕೊಂಡಿದ್ದಾರೆ, "ಈ ಚಿತ್ರಗಳು ನಿಜಕ್ಕೂ ಸುಂದರವಾದ ಚಿತ್ರಗಳಾಗಿವೆ. ಅದರಲ್ಲೂ ಕೊನೆಯ ಚಿತ್ರ ಅದ್ಭುತ". ಇನ್ನೊಬ್ಬ ಬಳಕೆದಾರ ಆ ಚಿತ್ರಗಳನ್ನು ಯಾವಾಗ ತೆಗೆಯಲಾಗಿದೆ ಎಂಬುದರ ಬಗ್ಗೆ ಕೇಳಿರುವ ಪ್ರಶ್ನೆಗೆ ಮಗಳು ಹೀಗೆ ಉತ್ತರಿಸಿದ್ದಾಳೆ, "1990ರ ದಶಕದ ಸಮಯದಲ್ಲಿ ಸೆರೆಹಿಡಿಯಲಾದ ಚಿತ್ರಗಳು ಅವಾಗಿವೆ" ಎಂದು.

ಮಗದೊಬ್ಬ ಟ್ವಿಟ್ಟರ್‌ ಬಳಕೆದಾರ ಮಗಳು ಹಾಕಿದ್ದ ತಂದೆಯು ಸೆರೆಹಿಡಿದಿದ್ದ ಚಿತ್ರಗಳ ಕುರಿತು ಪ್ರಶಂಸೆಯ ಸುರಿಮಳೆಯನ್ನೇ ಗೈದಿದ್ದಾನೆ. ತನ್ನ ಗೋಡೆಯ ಮೇಲೆ "ನನ್ನ ಹಾಗೆಯೇ ನಿನ್ನ ತಂದೆಯೂ ಸಹ ಸಾಕಷ್ಟು ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ನಿನಗೆ ಆ ಚಿತ್ರಗಳಲ್ಲಿ ಕಾಣುತ್ತಿರುವ ಆ ಒಂದು ಸೌಂದರ್ಯವು ಯಾವಾಗಲೂ ಮ್ಯಾಜಿಕ್ ರೀತಿಯಾಗಿರುತ್ತದೆ. ನಿನ್ನ ಪ್ರಕೃತಿಯ ಅಗಾಧ ಸೌಂದರ್ಯವನ್ನು ನೋಡುವಂತಹ ಕಣ್ಣನ್ನು ಹೊಂದಿದ್ದರು" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Food: ಆಹಾರದ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವವರ ದೇಹದ ತೂಕ ಹೆಚ್ಚುತ್ತದೆಯಂತೆ..!

ಮಗಳಿಗೂ ಒಂದು ಸಲಾಂ
ಒಟ್ಟಿನಲ್ಲಿ ಹೇಳಬೇಕೆಂದರೆ ತಂದೆಯಲ್ಲಿದ್ದ ಪ್ರತಿಭೆಯನ್ನು ಈಗ ಮಗಳು ಅನಾವರಣ ಮಾಡಿ ತೋರಿಸಿದಂತಾಗಿದೆ. ಈ ಮೂಲಕ ತಂದೆಯ ಅದ್ಭುತ ಕೆಲಸವನ್ನು ಜನರು ಈಗ ಕೊಂಡಾಡುವಂತಾಗಿದೆ. ರಮಣೀಯ ಪರ್ವತಗಳು, ಮೋಡಗಳ ಕಲರವ, ನೀಲಜಲದ ಮನ ಕಲಕುವ ನೋಟಗಳನ್ನು ಹೊತ್ತ ಆ ಅದ್ಭುತ ಚಿತ್ರಗಳು ನಿಜಕ್ಕೂ ನೋಡಲು ಮೋಹಕವಾಗಿದ್ದು ಅವಿಸ್ಮರಣೀಯವಾಗಿವೆ. ತನ್ನ ತಂದೆಯಲ್ಲಿದ್ದ ಪ್ರತಿಭೆಯನ್ನು ಎಲ್ಲರಿಗೂ ತಿಳಿಯುವಂತೆ ಮಾಡಿದ ಆ ಮಗಳಿಗೂ ಒಂದು ಸಲಾಂ ಹೊಡೆಯಲೇ ಬೇಕಲ್ಲವೆ..?
Published by:vanithasanjevani vanithasanjevani
First published: