ಜೋರಾಗಿ ನಕ್ಕು ದವಡೆಯನ್ನೇ ಕಳೆದುಕೊಂಡ ಯುವತಿ..!

ಆರಂಭದಲ್ಲಿ ಬಾಯಿ ಮುಚ್ಚಲು ಸಾಧ್ಯವಾಗಲಿಲ್ಲ. ಇದರಿಂದ ಪಾರ್ಶ್ವವಾಯು ಸಮಸ್ಯೆಗೆ ಒಳಗಾಗಿದ್ದಾರೆ ಎಂದೇ ಭಾವಿಸಿದ್ದೆ, ಆದರೆ ಆ ಬಳಿಕ ದವಡೆ ಜಾರಿ ಹೋಗಿರುವುದು ತಿಳಿದು ಬಂತು

zahir | news18-kannada
Updated:September 12, 2019, 8:11 PM IST
ಜೋರಾಗಿ ನಕ್ಕು ದವಡೆಯನ್ನೇ ಕಳೆದುಕೊಂಡ ಯುವತಿ..!
ಚಕಿತ್ಸೆ ನೀಡುತ್ತಿರುವ ವೈದ್ಯ
  • Share this:
ನಗು ಅತ್ಯುತ್ತಮ ಔಷಧಿ ಎನ್ನಲಾಗುತ್ತದೆ. ಆದರೆ ಅದೇ ನಗುವಿನಿಂದ ತೊಂದರೆ ಸಿಲುಕಿದರೆ? ಹೌದು, ಇಂತಹದೊಂದು ಘಟನೆ ಚೀನಾದ ಕುನ್ಮಿಂಗ್​ನಲ್ಲಿ ನಡೆದಿದೆ. ಗುವಾಂಗ್​ಝೌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯು ಜೋರಾಗಿ ನಕ್ಕಿದ್ದಾರೆ. ಖುಷಿಯ ಅಲೆಯಲ್ಲಿದ್ದ ಯುವತಿಯ ನಗುವಿನೊಂದಿಗೆ ದುಖಃ ಆವರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಿರಲಿಲ್ಲ.

ಏಕೆಂದರೆ ನಗುತ್ತಿದ್ದಂತೆ ಯುವತಿಯ ದವಡೆ ಕೀಲು ತಪ್ಪಿದೆ. ಅಷ್ಟೇ ಅಲ್ಲದೆ ದವಡೆ ಜೋತು ಬಿದ್ದಿದ್ದರಿಂದ ಬಾಯಿ ಅಗಲವಾಗಿ ತೆರೆದುಕೊಂಡಿದೆ. ಆದರೂ ಮಹಿಳೆ ಅದೃಷ್ಟ ಮಾತ್ರ ಚೆನ್ನಾಗಿತ್ತು. ಅದೇ ರೈಲಿನಲ್ಲಿ ವೈದ್ಯರೊಬ್ಬರು ಕೂಡ ಪ್ರಯಾಣಿಸುತ್ತಿದ್ದರು.ಕೂಡಲೇ ಡಾ. ಲುವೋ ವೆನ್ಶೆಂಗ್ ಮಹಿಳೆಯ ನೆರವಿಗೆ ಧಾವಿಸಿದ್ದಾರೆ.

'ಆರಂಭದಲ್ಲಿ ಬಾಯಿ ಮುಚ್ಚಲು ಸಾಧ್ಯವಾಗಲಿಲ್ಲ. ಇದರಿಂದ ಪಾರ್ಶ್ವವಾಯು ಸಮಸ್ಯೆಗೆ ಒಳಗಾಗಿದ್ದಾರೆ ಎಂದೇ ಭಾವಿಸಿದ್ದೆ, ಆದರೆ ಆ ಬಳಿಕ ದವಡೆ ಜಾರಿ ಹೋಗಿರುವುದು ತಿಳಿದು ಬಂತು' ಎಂದು ವೆಶ್ಶೆಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಪರ ಆಡಲು ವಿದೇಶಿ ತಂಡದ ನಾಯಕತ್ವ ತೊರೆದ ಯುವ ಕ್ರಿಕೆಟಿಗ

ಇದನ್ನು ಗಮನಿಸಿದ ವೈದ್ಯ ದವಡೆಯನ್ನು ಯಥಾಸ್ಥಾನದಲ್ಲಿ ಜೋಡಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಸುಧಾರಿಸಿಕೊಂಡ ಮಹಿಳೆಯು ಡಾ. ಲುವೋ ವೆನ್ಶೆಂಗ್ ಧನ್ಯವಾದ ಹೇಳಿದರು ಎಂದು ಗುವಾಂಚಾ ಮಾಧ್ಯಮ ತಿಳಿಸಿದೆ. ಒಟ್ಟಿನಲ್ಲಿ ನಗು ಕೇವಲ ಔಷಧವಲ್ಲ, ಅಪಾಯಕ್ಕೂ ಆಹ್ವಾನ ಎಂಬುದಕ್ಕೆ ಇದುವೇ ನಿದರ್ಶನ.

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading