Lockdown: ಲಾಕ್‌ಡೌನ್​ನಿಂದಾಗಿ ಡೇಟ್ ಮಾಡಿದ ವ್ಯಕ್ತಿಯ ಮನೆಯಲ್ಲಿ ಸಿಲುಕಿಕೊಂಡ ಚೀನಾದ ಮಹಿಳೆ..! ಮುಂದೇನು ಆಯ್ತು..?

ಅವಳು ಇನ್ನೂ ತನ್ನ ಡೇಟ್‌ನ ಮನೆಯಲ್ಲೇ ಸಿಲುಕಿಕೊಂಡಿದ್ದಾಳೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದರ ಹೊರತಾಗಿ, ಝೆಂಗ್ಝೌನಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಲೇ ಇವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ವರದಿಗಳ ಪ್ರಕಾರ, ಚೀನಾದಲ್ಲಿ ಕೋವಿಡ್ -19 ತ್ವರಿತ ಲಾಕ್‌ಡೌನ್‌ನಿಂದಾಗಿ (Lockdown in China) ಮಹಿಳೆಯೊಬ್ಬರು (Woman) ಬ್ಲೈಂಡ್ ಡೇಟ್‌ನಲ್ಲಿ(Blind Date) ಭೇಟಿಯಾದ ವ್ಯಕ್ತಿಯ ಮನೆಯಲ್ಲಿ ಸಿಲುಕಿಕೊಂಡರು. ವಾಂಗ್ ಎಂದು ಗುರುತಿಸಲ್ಪಟ್ಟಿರುವ ಅನಾಮಧೇಯ ಮಹಿಳೆ ಕಳೆದ ವಾರ ಚೀನಾದ ಸಾಮಾಜಿಕ ಪ್ಲಾಟ್‌ಫಾರ್ಮ್ (Social Platform) “ವೀ ಚಾಟ್” ನಲ್ಲಿ ರಾತ್ರಿಯ ಊಟಕ್ಕೆ ತನ್ನ ಡೇಟ್ ಮನೆಗೆ ಭೇಟಿ ನೀಡಿದ ಬಳಿಕ ಅಲ್ಲೇ ಲಾಕ್ ಆಗಿದ್ದೇನೆ ಎಂದು ಪೋಸ್ಟ್ ಮಾಡುತ್ತಾ , ಇತ್ತೀಚೆಗಷ್ಟೇ ಲೂನಾರ್‌ ಹೊಸ ವರ್ಷಕ್ಕೆ ಮುಂಚಿತವಾಗಿ, ಗುವಾಂಗ್‌ಝೌದಿಂದ ಝೆಂಗ್‌ಝೌಗೆ ಮರಳಿದ್ದಾರೆ ಎಂಬುವುದಾಗಿ ಹಂಚಿಕೊಂಡಿದ್ದಾರೆ. "ನನಗೆ ವಯಸ್ಸು ಮೀರುತ್ತಿರುವ ಕಾರಣ ನನ್ನ ಪೋಷಕರು 0 ಕ್ಕೂ ಹೆಚ್ಚು ಬ್ಲೈಂಡ್ ಡೇಟ್‌ಗಳನ್ನು ಏರ್ಪಡಿಸಿದರು” ಎಂದು ಅವರು ಈ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಮನೆಯಿಂದ ಹೊರ ಬರಲು ಸಾಧ್ಯವಾಗಲಿಲ್ಲ
ಅವಳ ಐದನೇ ಡೇಟ್ ವೇಳೆ "ತಾನು ಅಡುಗೆಯಲ್ಲಿ ತುಂಬಾ ಚಾಣಾಕ್ಷ ಎಂದು ಹೇಳಿ ಆಕೆಯನ್ನು ಆತನ ಮನೆಗೆ ಡಿನ್ನರ್‌ಗೆ ಆಹ್ವಾನಿಸಿದರು" ಎಂದು ಹೇಳಿದಳು. ಆದರೆ, ಭೋಜನದ ಸಮಯಕ್ಕೆ ಸರಿಯಾಗಿ, ಕೋವಿಡ್ -19 ಪ್ರಕರಣಗಳಿಂದಾಗಿ ತನ್ನ ಡೇಟ್‌ನ ಸಮುದಾಯವನ್ನು ತ್ವರಿತ ಲಾಕ್‌ಡೌನ್ ಅಡಿಯಲ್ಲಿ ಇರಿಸಲಾಯಿತು. ಹಲವು ದಿನಗಳ ಕಾಲ ಆ ಮನೆಯಿಂದ ಹೊರ ಬರಲು ಸಾಧ್ಯವಾಗಲಿಲ್ಲ. ವಾಂಗ್ ಪೋಸ್ಟ್ ಅನ್ನು ಮುಂದುವರಿಸುತ್ತಾ, ನಾಲ್ಕು ದಿನಗಳ ಕಾಲ ನಾನು ನನ್ನ ಡೇಟ್‌ನ ಮನೆಯಲ್ಲಿ ಸಿಲುಕಿಕೊಂಡಿದ್ದೆ ಮತ್ತು ಆ ಪರಿಸ್ಥಿತಿ ಸೂಕ್ತವಾಗಿರಲಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು. "ಅವನು ಹೆಚ್ಚು ಮಾತನಾಡುವುದಿಲ್ಲ" ಎಂಬುವುದನ್ನು ಆಕೆ ಸೇರಿಸಿದಳು.

ಇದನ್ನೂ ಓದಿ: Lockdown ಭಯಕ್ಕೆ ಊರು ಬಿಡುತ್ತಿರುವ ಕಾರ್ಮಿಕರು; ಸಂಕಷ್ಟದಲ್ಲಿ ಮೀನುಗಾರರು

ಝೆಂಗ್ಝೌನಲ್ಲಿ ಕೋವಿಡ್-19 ಪ್ರಕರಣ ಹೆಚ್ಚಳ
ವಾಂಗ್ ಪ್ರಕರಣದಲ್ಲಿ, ಅವಳು ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆ ಆನಂದಿಸುತ್ತಿದ್ದಾಳೆ ಎಂದನಿಸುತ್ತದೆ . "ಈ ರೋಗ ಶೀಘ್ರದಲ್ಲೇ ಕೊನೆಗೊಳ್ಳಲಿ ಮತ್ತು ನನ್ನ ಒಂಟಿ ಸಹೋದರಿಯರು ಕೂಡ ಶೀಘ್ರದಲ್ಲೇ ಜೊತೆಗಾರರನ್ನು ಕಂಡುಕೊಳ್ಳಲಿ" ಎಂದು ನಾನು ಆಶಿಸುತ್ತೇನೆ ಎಂದು ಬರೆಯುತ್ತಾ, ಆನ್‌ಲೈನ್‌ನಲ್ಲಿ ತನಗೆ ಗಮನ ಕೊಟ್ಟಂತಹ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ. ಅವಳು ಇನ್ನೂ ತನ್ನ ಡೇಟ್‌ನ ಮನೆಯಲ್ಲೇ ಸಿಲುಕಿಕೊಂಡಿದ್ದಾಳೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದರ ಹೊರತಾಗಿ, ಝೆಂಗ್ಝೌನಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಲೇ ಇವೆ.

ಸಮುದಾಯಗಳ ಲಾಕ್‌ಡೌನ್
ಕಳೆದ ವಾರದಲ್ಲಿ ಝೆಂಗ್ಝೌನಲ್ಲಿ 100ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ನಗರದಾದ್ಯಂತ ಮಂಗಳವಾರ, ಎಲ್ಲಾ ಅನಗತ್ಯ ವ್ಯವಹಾರಗಳನ್ನು ಮುಚ್ಚಲು ಆದೇಶಿಸುವುದರ ಜೊತೆಗೆ "ಸೈಲೆಂಟ್" ಮೋಡ್‌ನಲ್ಲಿ ಕಾರ್ಯನಿರ್ವಹಿಸುವ ಕೋವಿಡ್-19 ವಾಹಕಗಳನ್ನು ಶೋಧಿಸುವ ನಿಟ್ಟಿನಲ್ಲಿ 12.6 ಮಿಲಿಯನ್ ನಗರ ನಿವಾಸಿಗಳನ್ನು ವ್ಯಾಪಕವಾಗಿ ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಗಿದೆ .

ವಾಡಿಕೆಯಂತೆ ಕೋವಿಡ್-19 ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ, ಚೀನಾದಲ್ಲಿನ ಸಮುದಾಯಗಳನ್ನು ಲಾಕ್‌ಡೌನ್ ಮಾಡಲಾಗುತ್ತದೆ. ಇತ್ತೀಚಿನ ವಾರಗಳಲ್ಲಿ, ತ್ವರಿತ ಲಾಕ್‌ಡೌನ್ ಕಠಿಣ ಕ್ರಮಗಳಿಂದಾಗಿ , ಅಚಾನಕ್ಕಾಗಿ ಸಿಕ್ಕಿಬಿದ್ದ ಏಕೈಕ ವ್ಯಕ್ತಿ ವಾಂಗ್ ಮಾತ್ರ ಅಲ್ಲ. ಉತ್ತರದ ನಗರವಾದ ಕ್ಸಿಯಾನ್‌ನಲ್ಲಿ, ಕಳೆದ ತಿಂಗಳು ಒಬ್ಬ ವ್ಯಕ್ತಿ ಮನೆ ಬದಲಾಯಿಸುವ ಪ್ರಕ್ರಿಯೆಯ ಸಮಯದಲ್ಲಿ ಲಾಕ್‌ಡೌನ್‌ಗೆ ಸಿಕ್ಕಿ ಹಾಕಿಕೊಂಡನು.

ಇದನ್ನೂ ಓದಿ: ರಾಜ್ಯದಲ್ಲಿ 90 ಸಾವಿರಕ್ಕೂ ಅಧಿಕ ಸಕ್ರಿಯ ಕೊರೊನಾ ಕೇಸ್: ಮತ್ತೆ Lockdown ಆಗುತ್ತಾ? ಸಚಿವ Sudhakar ಮಾಹಿತಿ

ಪರಿಣಾಮವಾಗಿ, ಅವನಿಗೆ ತನ್ನ ಕಾರಿನಲ್ಲಿದ್ದ ಸಾಮಾನುಗಳನ್ನು ಸಂಗ್ರಹಿಸಲು ಕೂಡಾ ಅನುಮತಿ ಸಿಗದ ಕಾರಣ ನೆರೆಹೊರೆಯವರಿಂದ ಹೊದಿಕೆಯನ್ನು ಎರವಲು ತೆಗೆದುಕೊಳ್ಳಬೇಕಾಯಿತು. ಕೊರೊನಾ ವೈರಸ್ ಪ್ರಕರಣಗಳ ಅಲೆಯ ನಂತರ, ಡಿಸೆಂಬರ್ ಅಂತ್ಯದಲ್ಲಿ ಕ್ಸಿಯಾನ್‌ನಲ್ಲಿ 13 ಮಿಲಿಯನ್ ನಿವಾಸಿಗಳನ್ನು ಲಾಕ್‌ಡೌನ್ ಅಡಿಯಲ್ಲಿ ಇರಿಸಲಾಗಿತ್ತು.
Published by:vanithasanjevani vanithasanjevani
First published: