Viral News: ಬೆಣಚು ಕಲ್ಲುಗಳನ್ನು ಇರಿಸಿ 42 ಕೋಟಿ ಬೆಲೆ ಬಾಳುವ ವಜ್ರ ಕಳ್ಳತನ ಮಾಡಿದ್ದು ಹೇಗೆ ಗೊತ್ತಾ ಈ ಕಳ್ಳಿ?

ಒಬ್ಬ ವಜ್ರ ತಜ್ಞೆಯಂತೆ ನಟಿಸುವ ಮೂಲಕ, ಅವಳು ಏಳು ಬೆಣಚುಕಲ್ಲುಗಳನ್ನು ಅದರ ಬದಲಾಗಿ ಇರಿಸಿ ಪರಾರಿಯಾಗಿದ್ದಾಳೆ, ಅವುಗಳಲ್ಲಿ ಒಂದು ಲಂಡನ್ನಿನ ಆಭರಣ ಅಂಗಡಿಯಿಂದ 2.2 ಮಿಲಿಯನ್ ಪೌಂಡ್ ಮೌಲ್ಯದ್ದಾಗಿತ್ತು ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವೊಮ್ಮೆ ಈ ಕಳ್ಳರು (Thieves) ಬೆಲೆಬಾಳುವ ವಜ್ರ (Diamond) ವೈಡೂರ್ಯಗಳನ್ನು ಕದಿಯಬೇಕಾದರೆ ತುಂಬಾನೇ ಬುದ್ದಿವಂತಿಕೆಯನ್ನು ಉಪಯೋಗಿಸುತ್ತಾರೆ. ಇಲ್ಲಿಯೂ ಸಹ ಒಬ್ಬ ಮಹಿಳೆ (Woman) ಕದ್ದಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 4.2 ಮಿಲಿಯನ್ ಪೌಂಡ್ ಗಳು ಎಂದರೆ ಭಾರತೀಯ ಮೌಲ್ಯದಲ್ಲಿ 42 ಕೋಟಿ ರೂಪಾಯಿ ಬೆಲೆಬಾಳುವ ವಜ್ರಗಳನ್ನು ತುಂಬಾನೇ ಬುದ್ದಿವಂತಿಕೆಯನ್ನು ಉಪಯೋಗಿಸಿ ಬೆಣಚು ಕಲ್ಲು(Pebbles)ಗಳನ್ನು ಅದರ ಬದಲಿಗೆ ಇಡುವುದರ ಮೂಲಕ ದೋಚಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಹಿಳೆಯು ಈ ಬೆಲೆಬಾಳುವ ವಜ್ರಗಳನ್ನು ಕದ್ದಿದ್ದಕ್ಕೆ ಅವಳಿಗೆ ಕೇವಲ 250 ಪೌಂಡ್ ಎಂದರೆ ಭಾರತೀಯ ಮೌಲ್ಯದಲ್ಲಿ 25,000 ರೂಪಾಯಿ ಮರು ಪಾವತಿಸಲು ಆದೇಶಿಸಲಾಗಿದೆ.

ಈ ಪ್ರಕರಣ ಈಗಾಗಲೇ ಬೆಳಕಿಗೆ ಬಂದು, ಪೊಲೀಸರ ಕೈಗೆ ಸಿಕ್ಕಿಬಿದ್ದ ಈ ಮಹಿಳೆಯು ಪ್ರಸ್ತುತ ಐದೂವರೆ ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವುದಾಗಿ ಹೇಳಲಾಗುತ್ತಿದ್ದು, ಆಕೆಯ ಹೆಸರು ಲುಲು ಲಕಾಟೋಸ್ ಎಂದು ಹೇಳಲಾಗಿದೆ. ಅನ್ನಾ ಎಂಬ ಹೆಸರನ್ನು ಇರಿಸಿಕೊಂಡು ಒಬ್ಬ ವಜ್ರ ತಜ್ಞೆಯಂತೆ ನಟಿಸಿ ಅಸಲಿ ವಜ್ರವನ್ನು ತೆಗೆದುಕೊಂಡು ಹೋಗಿರುವ ದೃಶ್ಯವು ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಏಳು ಬೆಣಚುಕಲ್ಲು ಇರಿಸಿ ಪರಾರಿ

ಒಬ್ಬ ವಜ್ರ ತಜ್ಞೆಯಂತೆ ನಟಿಸುವ ಮೂಲಕ, ಅವಳು ಏಳು ಬೆಣಚುಕಲ್ಲುಗಳನ್ನು ಅದರ ಬದಲಾಗಿ ಇರಿಸಿ ಪರಾರಿಯಾಗಿದ್ದಾಳೆ, ಅವುಗಳಲ್ಲಿ ಒಂದು ಲಂಡನ್ನಿನ ಆಭರಣ ಅಂಗಡಿಯಿಂದ 2.2 ಮಿಲಿಯನ್ ಪೌಂಡ್ ಮೌಲ್ಯದ್ದಾಗಿತ್ತು ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ, ಅವರು 2016 ರಲ್ಲಿ ಆಭರಣ ವ್ಯಾಪಾರಿಗಳ ಸಿಬ್ಬಂದಿಗೆ ಶ್ರೀಮಂತ ರಷ್ಯಾದ ಗ್ರಾಹಕನ ಪರವಾಗಿ ದುಬಾರಿ ವಜ್ರಗಳನ್ನು ಮೌಲ್ಯೀಕರಿಸಲು ಬಂದಿದ್ದಾರೆ ಎಂದು ಹೇಳುವ ಮೂಲಕ ಈ ದರೋಡೆಯನ್ನು ಪ್ರಾರಂಭಿಸಿದರು. ಲುಲು ಪರಿಶೀಲಿಸಿದ ವಜ್ರಗಳನ್ನು ಪ್ಯಾಡ್ ಲಾಕ್ ಮಾಡಿದ ಪರ್ಸ್‌ನಲ್ಲಿ ಇರಿಸಲು ಮತ್ತು ನ್ಯೂ ಬಾಂಡ್ ಸ್ಟ್ರೀಟ್ ಅಂಗಡಿಯ ವಾಲ್ಟ್‌ ನಲ್ಲಿ ಇರಿಸಲು ಉದ್ದೇಶಿಸಲಾಗಿತ್ತು.

ಇದನ್ನೂ ಓದಿ:  Viral News: ಇವನ ಮೂಗಿನೊಳಗೆ ಹಲ್ಲು ಬೆಳೆದಿತ್ತಂತೆ, ನೋಡಿ ವೈದ್ಯರಿಗೇ ಶಾಕ್!

ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಳ್ಳತನದ ಕೆಲವೇ ಗಂಟೆಗಳ ನಂತರ, ಲುಲು ಮತ್ತು ಅವಳ ಸಹಚರರು ದೇಶದಿಂದ ಓಡಿ ಫ್ರಾನ್ಸ್‌ಗೆ ತೆರಳಿದರು ಎಂದು ವರದಿಯಾಗಿದೆ. ಅವಳ ಕಳ್ಳತನ ಮಾಡಿದ ವಜ್ರಗಳನ್ನು ತನ್ನ ಪರ್ಸ್‌ ನಲ್ಲಿ ಹಾಕಿಕೊಂಡು ಆ ವಜ್ರಗಳ ಬದಲಿಗೆ ಬೆಣಚುಕಲ್ಲುಗಳನ್ನು ಅಲ್ಲಿ ಇರಿಸುವುದನ್ನು ಮತ್ತು ಆ ಲಾಕ್ ಮಾಡಿದ ಪರ್ಸ್ ಅನ್ನು ಅವಳ ಕೈಚೀಲಕ್ಕೆ ಹಾಕುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮರುದಿನ ಅವರು ತಮ್ಮ ಆಭರಣದ ಅಂಗಡಿ ತೆರೆದು ನೋಡಿದಾಗ ಅವರಿಗೆ ಈ ವಜ್ರಗಳು ಕಳ್ಳತನವಾದ ಬಗ್ಗೆ ವಿಷಯ ತಿಳಿಯಿತು. ಅಂಗಡಿಯಲ್ಲಿರುವ ವಜ್ರಗಳನ್ನು ಏಳು ಸಣ್ಣ ಬೆಣಚುಕಲ್ಲುಗಳಿಂದ ಬದಲಾಯಿಸಲಾಗಿತ್ತು. ಈಗ ಪೊಲೀಸರು ಮೂಲ ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿ ಮಾಧ್ಯಮದ ವರದಿಗಳು ತಿಳಿಸಿವೆ.

ಪೊಲೀಸರಿಂದ ಮಹಿಳೆಯ ಬಂಧನ

ಇಂತಹ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ 60 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು 2021ರಲ್ಲಿ ಕದಿಯಲು ಸಂಚು ರೂಪಿಸಿದ್ದಕ್ಕಾಗಿ ದೋಷಿ ಎಂದು ಹೇಳಲಾಗಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಮಹಿಳೆಗೆ 250 ಪೌಂಡ್ ದಂಡ

ದುಬಾರಿ ವಜ್ರಗಳನ್ನು ಕದ್ದಿದ್ದಕ್ಕಾಗಿ ಲುಲುಗೆ ಜೈಲು ಶಿಕ್ಷೆ ವಿಧಿಸಲಾಗಿದ್ದರೂ, ಅವಳ ಕಳ್ಳತನಕ್ಕಾಗಿ ಸಣ್ಣ ಮೊತ್ತವನ್ನು ಮಾತ್ರ ಮರು ಪಾವತಿಸಬೇಕಾದ ಆದೇಶ ಹೊರಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸೌತ್ ವಾರ್ಕ್ ಕ್ರೌನ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ, 60 ವರ್ಷದ ಲುಲುಗೆ ಕೇವಲ 245 ಪೌಂಡ್ ಹಣವನ್ನು ದಂಡದ ರೂಪದಲ್ಲಿ ಪಾವತಿಸುವಂತೆ ಆದೇಶಿಸಲಾಯಿತು.

"ಅಂಕಿ ಅಂಶಗಳಿಗೆ ಸಂಬಂಧಿಸಿದಂತೆ, 4,299,671 ಪೌಂಡು ಮತ್ತು ಆಕೆಯ ಹತ್ತಿರ ಲಭ್ಯವಿರುವ 293 ಯುರೋಗಳು ಮತ್ತು 57 ಸೆಂಟ್‌ಗಳ ನಡುವೆ ತುಂಬಾನೇ ವ್ಯತ್ಯಾಸವಿದೆ" ಎಂದು ನ್ಯಾಯಾಧೀಶ ಅಲೆಕ್ಸಾಂಡರ್ ಮಿಲ್ನೆ ಕ್ಯೂಸಿ ಹೇಳಿದರು.

ಇದನ್ನೂ ಓದಿ:  Affair: ಹೆಂಡ್ತಿ ಜೊತೆ ಅಫೇರ್ ಇದ್ದವ ಕೆಲಸದಿಂದ ಔಟ್, ಅದಕ್ಕಾಗಿ ಕೋರ್ಟ್​ಗೆ ಬೇರೆ ಹೋಗಿದ್ದಾನೆ ರೋಮಿಯೋ!

ನ್ಯಾಯಾಧೀಶರು ಈಗಾಗಲೇ ಆ ಹಣವನ್ನು ಲುಲುಳಿಂದ ವಶಪಡಿಸಿಕೊಂಡಿದ್ದು, ಲುಲುಳನ್ನು ಶೀಘ್ರದಲ್ಲಿಯೇ ಫ್ರಾನ್ಸ್‌ ಗೆ ಹಸ್ತಾಂತರಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
Published by:Mahmadrafik K
First published: