ಮಹಿಳೆಯರು (Woman) ತಮ್ಮ ಸೌಂದರ್ಯ (Beauty) ಹೆಚ್ಚಿಸಿಕೊಳ್ಳಲು ಅಥವಾ ಕಾಪಾಡಿಕೊಳ್ಳಲು ಎಷ್ಟು ಬೇಕಾದಷ್ಟು ಹಣ (Money) ಖರ್ಚು ಮಾಡಲು ಸಿದ್ಧ ಇರ್ತಾರೆ. ಇಂದಿನ ಯುವ ಪೀಳಿಗೆ ಕಣ್ಣಿನ ಕಾಡಿಗೆಯಿಂದ ಮುಡಿಗೆ ತೊಡುವ ಹೂವಿನ ಆಯ್ಕೆ ಬಗ್ಗೆ ತುಂಬಾನೇ ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಕಾರಣ ಎಲ್ಲಿಯೂ ಅವರ ಫ್ಯಾಶನ್ (Fashion) ಏರುಪೇರಾಗಬಾರದು. ಅದಕ್ಕಾಗಿ ಹೆಚ್ಚಿನ ಮಹಿಳೆಯರು ಮದುವೆ (Marriage) ಅಂತಹ ಸಂದರ್ಭಗಳಲ್ಲಿ ಬ್ಯುಟಿ ಪಾರ್ಲರ್ (Beauty Parlor) ಮೊರೆ ಹೋಗುತ್ತಾರೆ. ಇದರಿಂದ ಯಾವುದೇ ತಪ್ಪಾಗದಂತೆ ಎಚ್ಚರ ತೆಗೆದುಕೊಳ್ಳುತ್ತಾರೆ. ಆದ್ರೆ ಕೆಲವೊಮ್ಮೆ ಬ್ಯೂಟಿಶಿಯನ್ (Beautician) ಬಳಿ ಹೋಗುವಾಗ ಏನೇನೋ ಪ್ಲಾನ್ ಮಾಡಿಕೊಂಡಿರುತ್ತಾರೆ. ಆದ್ರೆ ಅಲ್ಲಿಗೆ ಹೋದ್ಮೇಲೆ ಎಲ್ಲವೂ ಉಲ್ಟಾ ಆಗಿರುತ್ತದೆ. ಇದೀಗ ಅದೇ ರೀತಿ ಮಹಿಳೆ ಕೂದಲಿಗಾಗಿ ನಾಲ್ಕು ಸಾವಿರ ಖರ್ಚು ಮಾಡಿದ್ದಾಳೆ. ಕೊನೆಗೆ ಅದರ ಫಲಿತಾಂಶ ನೋಡಿ ಗಳ ಗಳನೇ ಕಣ್ಣೀರು ಹಾಕಿದ್ದಾಳೆ. ಮಹಿಳೆಯ ಕಣ್ಣೀರು ಕಂಡ ನೆಟ್ಟಿಗರು ತುಂಬಾ ಚೆನ್ನಾಗಿಯೇ ಆಕೆಗೆ ಸಮಾಧಾನ ಮಾಡಿದ್ದಾರೆ.
ಮಹಿಳೆಯರು ಸುಂದರವಾಗಿ ಕಾಣುವ ಬಯಕೆಯನ್ನು ಹೊಂದಿರುತ್ತಾರೆ. ಇದಕ್ಕಾಗಿ ಅವರು ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಸೌಂದರ್ಯಕ್ಕಾಗಿ ಮನೆಮದ್ದುಗಳ ಜೊತೆ ಮಾರುಕಟ್ಟೆಯಲ್ಲಿ ಸಿಗುವ ಬ್ಯೂಟಿ ಪ್ರೊಡೆಕ್ಟ್ ಗಳನ್ನು ಬಳಸುತ್ತಾರೆ. ಕೆಲವೊಮ್ಮೆ ಚಿಕಿತ್ಸೆಗಳಿಗೂ ಒಳಗಾಗುತ್ತಾರೆ.
ಕೂದಲಿನ ಬಣ್ಣಕ್ಕೆ 40 ಸಾವಿರ ಉಳಿಸಿದ್ದ ಯುವತಿ!
ಈ ಮಹಿಳೆ ತಮ್ಮ ಕಪ್ಪು ಕೂದಲನ್ನು ಗೋಲ್ಡನ್ ಕಲರ್ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದಕ್ಕಾಗಿಯೇ ಬಹಳ ದಿನಗಳಿಂದ ಹಣ ಉಳಿಸುತ್ತಾ ಬಂದಿದ್ದರು. ದೀರ್ಘ ಸಮಯದ ಉಳಿತಾಯದಿಂದ ಮಹಿಳೆ ಒಟ್ಟು 40 ಸಾವಿರ ರೂಪಾಯಿ ಉಳಿಸಿದ್ದರು. ತಾವು ಅಂದುಕೊಂಡಂತೆ ಹಣ ಉಳಿಸಿದ ಮೇಲೆ ಕೂದಲಿನ ಬಣ್ಣ ಬದಲಿಸಿಕೊಳ್ಳಲು ಸಮೀಪದ ಬ್ಯೂಟಿ ಪಾರ್ಲರ್ ಗೆ ತೆರಳಿದ್ದರು.
ಇದನ್ನೂ ಓದಿ: Royal Family: ಕಡು ಬಡತನದಲ್ಲಿ ಬದುಕುತ್ತಿರುವ 8 ಭಾರತೀಯ ರಾಜವಂಶಸ್ಥರು ಇವರು..!
ಬ್ಯೂಟಿ ಪಾರ್ಲರ್ ಗೆ ತೆರಳಿದ ಯುವತಿ ತನಗೆ ಹೇಗೆ ಮತ್ತು ಯಾವ ರೀತಿಯ ಬಣ್ಣ ಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಳು. ಅದರಂತೆ ಬ್ಯೂಟಿಶಿಯನ್ ಸಹ ಬಣ್ಣ ಹಚ್ಚಿದ್ದರು. ಕೊನೆಗೆ ರಿಸಲ್ಟ್ ನೋಡಿದಾಗ ಯುವತಿ ಗಳಗಳನೇ ಕಣ್ಣೀರು ಹಾಕಿದ್ದಾಳೆ.
ಟಿಕ್ ಟಾಕ್ ನಲ್ಲಿ ನೋವು ಹಂಚಿಕೊಂಡ ಲೀನಾ!
ಈ ಘಟನೆ ನಡೆದಿದ್ದು ನ್ಯೂಯಾರ್ಕ್ ನಲ್ಲಿ. ಯುವತಿಯ ಹೆಸರು ಲೀನಾ. ತನ್ನ ಕೂದಲಿನ ಬಣ್ಣ ಹೇಗೆ ಬದಲಾಯ್ತು ಎಂದು ಟಿಕ್ ಟಾಕ್ ನಲ್ಲಿ ಹೇಳಿಕೊಂಡಿದ್ದಾಳೆ. ತಾನು ದೀರ್ಘ ಸಮಯದಲ್ಲಿ ಉಳಿಸಿದ ಹಣ ಹೇಗೆ ಖರ್ಚು ಆಯ್ತು ಎಂದು ಹೇಳಿಕೊಂಡಿದ್ದಾಳೆ.
ನಾನು ನನ್ನ ನೈಸರ್ಗಿಕ ಕಪ್ಪು ಕೂದಲನ್ನು ಗೋಲ್ಡನ್ ಕಲರ್ ಆಗಿ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕಾಗಿಯೇ ಬಹಳ ದಿನದಿಂದ ಹಣ ಸೇರಿಸುತ್ತಾ ಬಂದಿದ್ದೆ. ಕೂದಲಿನ ಬಣ್ಣ ಬದಲಿಸುವ ಹಿನ್ನೆಲೆ ಸಮೀಪದ ಸಲೂನ್ ಗೆ ತೆರಳಿದ್ದೆ. ಅಲ್ಲಿಯ ಸಿಬ್ಬಂದಿಗೂ ನನ್ನ ಕೂದಲಿನ ಬಗ್ಗೆ ವಿವರವಾಗಿ ಹೇಳಿದ್ದೆ. ಆದ್ರೆ ಸಿಬ್ಬಂದಿಯ ಎಡವಟ್ ನಿಂದಾಗಿ ನನ್ನ ಕಣ್ಣಲ್ಲಿ ನೀರು ಬಂತು ಎಂದು ದುಃಖ ಹಂಚಿಕೊಂಡಿದ್ದಾರೆ.
ಹೊಂಬಣ್ಣದ ಬದಲಾಗಿ ಕೆಂಪು ಬಣ್ಣ ಬಳಕೆ
ಲೀನಾ ಹೇಳುವ ಪ್ರಕಾರ, ಅವರು ಹೊಂಬಣ್ಣದ ನೋಟವನ್ನು ಬಯಸಿದ್ದರು. ಆದರೆ ನಲವತ್ತು ಸಾವಿರ ಉಳಿತಾಯವನ್ನು ಖರ್ಚು ಮಾಡಿದ ನಂತರ ಅವರ ಕೂದಲು ಕೆಂಪಾಯಿತು. ಸಲೂನ್ ಹುಡುಗ ಮಾಡಿದ ತಪ್ಪಿನಿಂದ ನನ್ನ ಕೂದಲು ಕೆಂಪಾಗಿದೆ. ಆದ್ರೆ ನನಗೆ ಕೆಂಪು ಬಣ್ಣದ ಕೂದಲು ಬೇಕಿರಲಿಲ್ಲ. ನನ್ನ ಹಣವೆಲ್ಲವೂ ವ್ಯರ್ಥವಾಯ್ತು ಎಂದು ಲೀನಾ ಅಳುತ್ತಿದ್ದಾರೆ. ಈ ವಿಡಿಯೋದಲ್ಲಿ ಲೀನಾ ಸಲೂನ್ ಮತ್ತು ಅಲ್ಲಿಯ ಸಿಬ್ಬಂದಿ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಲೀನಾಗೆ ಸಮಾಧಾನ ಹೇಳಿದ ನೆಟ್ಟಿಗರು!
ಈ ವೀಡಿಯೊವನ್ನು ಇದುವರೆಗೆ ಒಂಬತ್ತು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಲೀನಾ ತನ್ನ ವೀಡಿಯೊವನ್ನು ಮಾರ್ಚ್ 3 ರಂದು ಅಪ್ಲೋಡ್ ಮಾಡಿದ್ದಾಳೆ. ಆದರೆ, ಅಳುತ್ತಿದ್ದ ಲೀನಾ ಸುಂದರವಾಗಿ ಕಾಣುತ್ತಿದ್ದಾರೆ ಎಂದು ಹಲವರು ಸಾಂತ್ವನ ಹೇಳಿದ್ದಾರೆ. ಕೂದಲು ಕಪ್ಪಾಗಿದ್ದರಿಂದ ಅದನ್ನು ಹೊಂಬಣ್ಣ ಮಾಡುವ ಮೊದಲು ಅದನ್ನು ಕೆಂಪಾಗಿಸಲಾಗುತ್ತದೆ ಎಂದು ಒಬ್ಬರು ಬರೆದಿದ್ದಾರೆ.
ಇದನ್ನೂ ಓದಿ: IRCTC Shimla Tour: ಬಿರು ಬೇಸಿಗೆಯಲ್ಲಿ ಶಿಮ್ಲಾ ಪ್ರವಾಸ ಹೊರಡಬೇಕಾ?; ಇಲ್ಲಿದೆ ನೋಡಿ ಸಂಪೂರ್ಣ ವಿವರ
ಎರಡರಿಂದ ಮೂರು ಸಿಟ್ಟಿಂಗ್ಗಳ ನಂತರ, ಅವನ ಕೂದಲು ಹೊಂಬಣ್ಣದಂತಾಗುತ್ತದೆ. ಇದರಲ್ಲಿ ಅಳಲು ಏನೂ ಇಲ್ಲ. ಇದು ಕೂದಲಿನ ಚಿಕಿತ್ಸೆಗೆ ಸರಿಯಾದ ಪ್ರಕ್ರಿಯೆಯಾಗಿದೆ. ಬಹುತೇಕರು ಈ ಕೆಂಪು ಕೂದಲಿನಲ್ಲಿಯೇ ಚೆನ್ನಾಗಿ ಮತ್ತು ಅಂದವಾಗಿ ಕಾಣಿಸುತ್ತಿದ್ದೀರಿ ಎಂದು ಹೇಳಿ ಸಮಾಧಾನ ಮಾಡಿದ್ರೆ, ಒಂದಿಷ್ಟು ಜನರು ನಾನು ಆ ಸಲೂನ್ ಗೆ ಹೋಗಲ್ಲ ಅಂತ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ