Viral Video: ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸಿದ ಮಹಿಳೆ - ನೋಡುಗರನ್ನು ಬೆಚ್ಚಿ ಬೀಳಿಸತ್ತೆ ಈ ವಿಡಿಯೋ ..

ಆಘಾತಕಾರಿ ಘಟನೆಯು, ಮುಂಬೈನ ವಸಾಯಿ ರಸ್ತೆ ರೈಲ್ವೆ ಜಂಕ್ಷನ್‌ನಲ್ಲಿ ನಡೆದಿದ್ದು ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಇಂತಹ ಅವಘಡದಿಂದ ಮಹಿಳಾ ಪ್ರಯಾಣಿಕರೊಬ್ಬರನ್ನು ಸರಿಯಾದ ಸಮಯಕ್ಕೆ ಕಾಪಾಡಿ ಪ್ರಾಣ ಉಳಿಸಿದರು ಎಂದರೆ ತಪ್ಪಾಗುವುದಿಲ್ಲ.

ವೈರಲ್ ವಿಡಿಯೋ ದೃಶ್ಯ

ವೈರಲ್ ವಿಡಿಯೋ ದೃಶ್ಯ

  • Share this:

ನಾವು ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವಂತಹ ಮಕ್ಕಳಿಗೆ ಚಲಿಸುತ್ತಿರುವ ರೈಲನ್ನು ಅಥವಾ ಬಸ್ ಅನ್ನು ಹತ್ತಲು ಪ್ರಯತ್ನಿಸಬಾರದು ಎಂದು ಹೇಳುತ್ತಿರುತ್ತೇವೆ, ಏಕೆಂದರೆ ಒಮ್ಮೊಮ್ಮೆ ಅದನ್ನು ಹತ್ತುವ ಅವಸರದಲ್ಲಿ ಕಾಲು ಜಾರಿ ಕೆಳಗೆ ಬಿದ್ದು ಏಟು ಮಾಡಿಕೊಳ್ಳುವ ಅವಕಾಶಗಳು ಹೆಚ್ಚಿರುತ್ತವೆ. ಆದರೆ ಮಕ್ಕಳಿಗೆ ಇದನ್ನು ಹೇಳಿ ದೊಡ್ಡವರಾದವರೇ ಆ ತಪ್ಪು ಮಾಡಿದರೆ ಹೇಗೆ ಹೇಳಿ. ಪ್ರಾಣ ಎಲ್ಲರಿಗೂ ಒಂದೇ ಅಲ್ಲವೇ, ಯಾರಾದರೂ ಸರಿಯೇ ಚಲಿಸುವ ರೈಲನ್ನು ಅಥವಾ ಯಾವುದೇ ವಾಹನವನ್ನು ಓಡಿ ಹೋಗಿ ಹತ್ತುವುದು ತುಂಬಾ ಅಪಾಯಕಾರಿ. ಏಕೆಂದರೆ ಅನೇಕ ಜನರು ಹೀಗೆ ಹತ್ತಲು ಪ್ರಯತ್ನಿಸಿ ತಮ್ಮ ಕಾಲು ಜಾರಿ ಕೆಳಗೆ ಬಿದ್ದು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಅನೇಕ ಘಟನೆಗಳನ್ನು ನಾವು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ.


ಇಂತಹದ್ದೇ ಒಂದು ಆಘಾತಕಾರಿ ಘಟನೆಯು, ಮುಂಬೈನ ವಸಾಯಿ ರಸ್ತೆ ರೈಲ್ವೆ ಜಂಕ್ಷನ್‌ನಲ್ಲಿ ನಡೆದಿದ್ದು ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಇಂತಹ ಅವಘಡದಿಂದ ಮಹಿಳಾ ಪ್ರಯಾಣಿಕರೊಬ್ಬರನ್ನು ಸರಿಯಾದ ಸಮಯಕ್ಕೆ ಕಾಪಾಡಿ ಪ್ರಾಣ ಉಳಿಸಿದರು ಎಂದರೆ ತಪ್ಪಾಗುವುದಿಲ್ಲ.


ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸುದ್ದಿ ಸಂಸ್ಥೆಯೊಂದು ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ ಎಂದರೆ ನೀವು ನಂಬಲೇಬೇಕು. ಈ ದೃಶ್ಯಾವಳಿಗಳನ್ನು ವೀಕ್ಷಿಸಿದ ಅನೇಕ ಬಳಕೆದಾರರು, ಸಕಾಲಕ್ಕೆ ಸಹಾಯಕ್ಕೆ ಧಾವಿಸಿ ಆ ಮಹಿಳೆಯನ್ನು ಕಾಪಾಡಿದ ಜನರನ್ನು ಶ್ಲಾಘಿಸಿದ್ದಾರೆ. ಚಲಿಸುತ್ತಿರುವ ರೈಲನ್ನು ಹತ್ತಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಮಹಿಳೆಯ ಅವಾಂತರಕ್ಕೆ ಕುರಿತಂತೆ ಇತರ ಬಳಕೆದಾರರು ಕಾಮೆಂಟ್‌ಗಳನ್ನು ಹರಿಬಿಟ್ಟಿದ್ದು, ಅವಸರವೇ ಅಪಾಯಕ್ಕೆ ಕಾರಣ ಎಂಬ ಶೀರ್ಷಿಕೆಯಡಿ ಮಹಿಳೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.


ಇದನ್ನೂ ಓದಿ: ಮಂಟಪಕ್ಕೆ ಬರೋ ಮುಂಚೆ ತಲೆ ಬೋಳಿಸಿಕೊಂಡು ಬಂದ ವಧು; ಆಕೆ ಹಾಗೆ ಮಾಡೋಕೆ ಕೊಟ್ಟ ಕಾರಣ ವಿಚಿತ್ರ..!

ವಿಡಿಯೋದಲ್ಲಿರುವ ದೃಶ್ಯಾವಳಿಯಿಂದ ತಿಳಿದು ಬರುವುದೇನೆಂದರೆ ರೈಲ್ವೆ ನಿಲ್ದಾಣದಿಂದ ಹೊರಡುವ ರೈಲಿನ ಹತ್ತಿರ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಬರುತ್ತಿರುತ್ತಾರೆ ಈ ಸಮಯದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಮಹಿಳೆಯರಲ್ಲಿ ಒಬ್ಬರು ಪ್ರಯತ್ನಿಸುತ್ತಾರೆ ಆಗ ಕಾಲು ಜಾರಿ ಕೆಳಕ್ಕೆ ಬೀಳುತ್ತಾರೆ. ಅಲ್ಲೇ ಇದ್ದ ಪುರುಷನು ಆ ಮಹಿಳೆಯನ್ನು ಹಿಡಿದು ಎಳೆಯಲು ಪ್ರಯತ್ನಿಸುತ್ತಾನೆ, ಆದರೆ ರೈಲು ಹಾಗೆಯೇ ಮುಂದಕ್ಕೆ ಚಲಿಸುತ್ತಿರುವುದರಿಂದ ಆ ಮಹಿಳೆಯ ಕಾಲು ಕೊಂಚ ಪ್ಲಾಟ್‌ಫಾರ್ಮ್ ನಿಂದ ಕೆಳಗೆ ಹೋಗಿರುತ್ತದೆ.





ಸಹಾಯಕ್ಕೆ ಕೂಗಿಕೊಂಡಾಗ ತಕ್ಷಣವೇ ಅಲ್ಲೇ ಇದ್ದ ಜನರು ಓಡಿ ಬಂದು ಆ ಮಹಿಳೆಯನ್ನು ಕೈ ಹಿಡಿದು ಪಕ್ಕಕ್ಕೆ ಎಳೆದುಕೊಂಡಿರುವುದನ್ನು ಕಾಣಬಹುದಾಗಿದೆ. 1 ನಿಮಿಷ 8 ಸೆಕೆಂಡಿನ ವೀಡಿಯೋದಲ್ಲಿ ಘಟನೆಯ ನಂತರ ತುಂಬಾ ಜನರು ಅಲ್ಲಿ ಸೇರಿರುವುದನ್ನು ನೋಡಬಹುದು.


"ಮಹಾರಾಷ್ಟ್ರ: ವಸಾಯಿ ರಸ್ತೆ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನ ಕೆಳಗೆ ಬೀಳುವುದರಿಂದ ಮಹಿಳೆಯೊಬ್ಬರನ್ನು ಜನರು ಸಂರಕ್ಷಿಸಿದ್ದಾರೆ" ಎಂಬ ಶೀರ್ಷಿಕೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.


ಇದನ್ನೂ ಓದಿ: 90ರ ದಶಕದ Cadbury ಜಾಹೀರಾತಿನ ಮರುಸೃಷ್ಟಿ: ಮಹಿಳೆಯರ ಸಾಧನೆಯ ಸಂಭ್ರಮಾಚರಣೆ

ಈ ವಿಡಿಯೋವನ್ನು ಸೆಪ್ಟೆಂಬರ್ 20 ರಂದು ಹಂಚಿಕೊಳ್ಳಲಾಗಿದ್ದು, ಇದುವರೆಗೂ ವೀಡಿಯೋವನ್ನು 50,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ನೋಡಿದ ಜನರು ಆಘಾತಕ್ಕೊಳಗಾಗಿದ್ದಾರೆ. ರೈಲ್ವೆ ಹಳಿಗಳ ಬಳಿ ಬಿಗಿ ಭದ್ರತೆಯನ್ನು ಒದಗಿಸಿ ಎಂದು ಅನೇಕರು ರೈಲ್ವೆ ಅಧಿಕಾರಿಗಳನ್ನು ವಿನಂತಿಸಿದರೆ, ಇತರರು ಮಹಿಳೆಯನ್ನು ಸಕಾಲದಲ್ಲಿ ರಕ್ಷಿಸಿದ ಜನರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.


Published by:Sandhya M
First published: