HOME » NEWS » Trend » WOMAN SLAPS HUSBAND ON FLIGHT AFTER HE GOES ON AN ANTI MASK RANT VIRAL VIDEO HG

ಮಾಸ್ಕ್ ಧರಿಸಲ್ಲ ಎಂದಿದ್ದಕ್ಕೆ ಪತ್ನಿ ಕೈಯಿಂದ ಏಟು ತಿಂದ ಪತಿ!; ವಿಡಿಯೋ ವೈರಲ್

ಈಜಿಜೆಟ್​ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಎಲ್ಲಾ ಪ್ರಯಾಣಿಕರು ಮಾಸ್ಕ್​ ಧರಿಸಿದ್ದಾರೆ. ಆದರೆ ಅಲ್ಲಿದ್ದ ವಿವಾಹಿತ ವ್ಯಕ್ತಿಯೊಬ್ಬ ಮಾಸ್ಕ್ ಧರಿಸಲು ನಿರಾಕರಿಸುತ್ತಾನೆ.

news18-kannada
Updated:October 25, 2020, 4:26 PM IST
ಮಾಸ್ಕ್ ಧರಿಸಲ್ಲ ಎಂದಿದ್ದಕ್ಕೆ ಪತ್ನಿ ಕೈಯಿಂದ ಏಟು ತಿಂದ ಪತಿ!; ವಿಡಿಯೋ ವೈರಲ್
ವಿಮಾನ
  • Share this:
ಕೋವಿಡ್​ -19 ಹರಡುವಿಕೆಯನ್ನು ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆ (WHO) ಜನರಿಗೆ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು ಎಂದು ಹೇಳಿದೆ. ಆದರೆ ಕೆಲವರಂತೂ ಈ ನಿಯಮವನ್ನು ಗಾಳಿಗೆ ತೂರಿ ಮಾಸ್ಕ್​ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಮಾತ್ರವಲ್ಲದೆ, ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದಾರೆ. ಅದರಂತೆ ಇಲ್ಲೊಬ್ಬ ವ್ಯಕ್ತಿ ಮಾಸ್ಕ್​ ಧರಿಸದೆ ರಂಪಾಟ ಮಾಡಿದ್ದಕ್ಕಾಗಿ ಹೆಂಡತಿ ಕೈಯಿಂದ ಏಟು ತಿಂದಿದ್ದಾನೆ.

ಈಜಿಜೆಟ್​ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಎಲ್ಲಾ ಪ್ರಯಾಣಿಕರು ಮಾಸ್ಕ್​ ಧರಿಸಿದ್ದಾರೆ. ಆದರೆ ಅಲ್ಲಿದ್ದ ವಿವಾಹಿತ ವ್ಯಕ್ತಿಯೊಬ್ಬ ಮಾಸ್ಕ್ ಧರಿಸಲು ನಿರಾಕರಿಸುತ್ತಾನೆ. ಇದನ್ನು ಕಂಡ ಪತ್ನಿ ಆತನ ಕೆನ್ನೆಗೆ ಸಿಟ್ಟಿನಿಂದ ಬಾರಿಸಿದ್ದಾಳೆ. ಪತ್ನಿಯ ಕೈಯಿಂದ ಏಟು ತಿಂದ ಪತಿಯ ವಿಡಿಯೋ ಇದೀಗ ವೈರಲ್ ಆಗಿದೆ.

ಮ್ಯಾಂಚೆಸ್ಟರ್​​ನಿಂದ ಟೆನೆರೈಫ್​​ಗೆ ತೆರಳುತ್ತಿದ್ದ ಈಜಿಜೆಟ್​ ವಿಮಾನದಲ್ಲಿ ಈ ಘಟನೆ ನಡೆದಿದೆ. ಸಹ ಪ್ರಯಾಣಿಕರು ವ್ಯಕ್ತಿಯ ಬಳಿ ಮಾಸ್ಕ್​ ಧರಿಸಿ ಎಂದು ಹೇಳುತ್ತಾರೆ. ಆದರೆ ಆತ ಮಾತ್ರ ಅವರ ಮಾತನ್ನು ಲೆಕ್ಕಕ್ಕೆ ತೆಗೊಳದೆ ವಾದಿಸುತ್ತಾನೆ. ನಂತರ ಆತನ ಪತ್ನಿ ಕೂಡ ಮಾಸ್ಕ್​​ ಧರಿಸುವಂತೆ ಹೇಳುತ್ತಾಳೆ. ಪತಿಯನ್ನು ಶಾಂತಗೊಳಿಸಲು ಮುಂದಾಗುತ್ತಾಳೆ. ಆದರೆ ಪತಿ ಮಾತ್ರ ಯಾರ ಮಾತನ್ನು ಕೇಳದೆ ವಾದಿಸುತ್ತಾನೆ. ಇದರಿಂದ ಸಿಟ್ಟುಗೊಂಡ ಹೆಂಡತಿ ಗಂಡನ ಕಪಾಳಕ್ಕೆ ಬಾರಿಸುತ್ತಾಳೆ.ಇದು ಸೊಂಟದ ವಿಷ್ಯಾ!; ಈ ಯುವತಿಯ ಸೊಂಟದ ಸುತ್ತಳತೆ ಎಷ್ಟು ಗೊತ್ತಾ?
Published by: Harshith AS
First published: October 25, 2020, 4:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories