ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನಾವು ಸುದ್ಧಿಗಳನ್ನು ಮಾತ್ರ ಓದದೇ, ಮನರಂಜನೆಗೆ ಕೂಡ ಹೆಚ್ಚಿನ ಆಧ್ಯತೆಗಳನ್ನು ನೀಡಲಾಗುತ್ತಿದೆ. ಮನರಂಜನೆಗೂ ಕೂಡ ಸೈ ಎನಿಸಿಕೊಂಡಿದೆ ಈ ಸೋಶಿಯಲ್ ಮೀಡಿಯಾ. ಅದೇ ರೀತಿಯಾಗಿ ನಾಯಕ ಅಥವಾ ನಾಯಕಿ ಆಗಬೇಕು ಅಂದ್ರೆ ಸಿನಿಮಾದಲ್ಲಿ ನಟಿಸಲೇ ಬೇಕು ಅಂತ ಏನಿಲ್ಲ ಬಿಡಿ. ಯಾಕಂದ್ರೆ ರೈಲ್ವೆ ಸ್ಟೇಷನ್ ನಲ್ಲಿ ಹಾಡು ಹಾಡಿ ಒನ್ ನೈಟ್ ಅಲ್ಲಿ ಫೇಮಸ್ ಆದ ಸಿಂಗರ್ (Singer) ಅನ್ನು ನಾವು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಹೀಗಾಗಿ ಪ್ರತಿಭಾನ್ವಿತರು ಎಲ್ಲೇ ಇದ್ದರೂ ಕೂಡ ಹೇಗಾದರೂ ಒಂದು ರೀತಿಯಲ್ಲಿ ಫೇಮಸ್ ಆಗ್ತಾರೆ ಅಂತ ಹೇಳಬಹುದು. ಅದಕ್ಕೆ ಮೂಲ ಕಾರಣ ಪ್ರಸ್ತುತ ಸಾಮಾಜಿಕ ಜಾಲತಾಣ. ಒಂದು ಮೂಲೆಯಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ರೆ ಸಾಕು. ಹೇಗೆ ಫೇಮಸ್ ಆಗ್ತಾರೆ ಅಂತ ಊಹಿಸಲು ಅಸಾಧ್ಯ.
ಇಷ್ಟೆಲ್ಲ ಪೀಠಿಕೆ ಯಾಕೆ ಕೊಡ್ತಾ ಇರೋದು ಅಂದ್ರೆ, ಇಲ್ಲಿರುವ ಮಹಿಳೆ ಸಖತ್ ವೈರಲ್ ಆಗ್ತಾ ಇದ್ದಾರೆ. ಯಾಕೆ ಏನು ಅಂತ ಕೇಳಿದ್ರೆ ನೀವೇ ಶಾಕ್ ಆಗ್ತೀರಾ! ಆ ಮಹಿಳೆಯ ಉಡುಪನ್ನು ನೋಡ್ತಾ ಇದ್ರೆ ಯಾವುದೋ ಕೆಲಸದಲ್ಲಿ ಇದ್ದ ಹಾಗೆ ಕಾಣುತ್ತದೆ. ಆದರೆ ಈಕೆ ಹಾಡಿರುವಂತಹ ಹಾಡು ಈಗ ಫುಲ್ ವೈರಲ್ ಆಗಿದೆ. ಯಾವುದೋ ಒಂದು ಅಲಂಕೃತಗೊಂಡ ವೇದಿಕೆಯ ಮೇಲೆ ಹಾಡು ಹಾಡಿ ಫೇಮಸ್ ಆದವರನ್ನು ಕಂಡಿರುತ್ತೇವೆ. ಆದರೆ ಇವರು ರಸ್ತೆಯಲ್ಲಿ ಹಾಡನ್ನು ಹೇಳಿದ್ದಾರೆ.
ಈ ಹಿಂದೆ ರೈಲಿನಲ್ಲಿ ಒಬ್ಬರು ತಾತ ಹಿಂದಿ ಹಾಡನ್ನು ಹೇಳಿ ಫುಲ್ ವೈರಲ್ ಆಗಿದ್ರು. ಯಾಕಂದ್ರೆ ಒಂದು ಹಿಂದಿಯ ಹಾಡಿಗೆ ಅಷ್ಟು ಭಾವ, ರಾಗ, ತಾಳಕ್ಕೆ ತಕ್ಕಂತೆ ಹಾಡನ್ನು ಹೇಳಿದ್ರು. ಅದನ್ನು ರೈಲಿನಲ್ಲಿ ಪ್ರಯಾಣಿಸುತ್ತಿರುವವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿ, ಫುಲ್ ಫ್ರೆಂಡ್ ಆಗಿತ್ತು.
ಇದನ್ನೂ ಓದಿ: ಟ್ರೈನಿನಲ್ಲಿ ಕೂತು ಹಿಂದಿ ಹಾಡು ಹಾಡಿದ ವಯಸ್ಸಾದ ವ್ಯಕ್ತಿ! ವಿಡಿಯೋ ವೈರಲ್
ಇದೀಗ ಅದೇ ರೀತಿಯಾಗಿ ಓರ್ವ ಮಹಿಳೆ ಹಾಡನ್ನು ಹಾಡಿದ್ದಾರೆ. ಲತಾ ಮಂಗೇಶ್ಕರ್ ರವರು ಹಾಡಿದ " ಸುನೊ ಸಜ್ಞ ಪಾಪಿಹೇ ನೇ" ಹಾಡನ್ನು ಎಷ್ಟು ಸೊಗಸಾಗಿ, ಮಾಧುರ್ಯವಾಗಿ ಹಾಡನ್ನು ಹೇಳಿದ್ದಾರೆ ಅಂದ್ರೆ ನೀವೇ ಕೇಳಿಸಿಕೊಳ್ಳಿ. ಈ ವಿಡಿಯೋ ಇಂಟರ್ನೆಟ್ ಸಕ್ಕತ್ ಸದ್ದು ಮಾಡ್ತಾ ಇದೆ. "ಸುನೊ ಸಜ್ಞ ಪಾಪಿಹೇ ನೇ" ಹಾಡು 1996 ರಲ್ಲಿ "ಆಯೆ ದಿನ್ ಬಹಾರ್ ಕೆ" ಸಿನಿಮಾದ ಸೂಪರ್ ಹಿಟ್ ಹಾಡು. ಧರ್ಮೇಂದ್ರ, ಆಶಾ ಪರೇಖ್ ಸಿನಿಮಾದಲ್ಲಿ ನಟಿಸಿದ್ದರು.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ