ಬ್ಯೂಟಿ ಪಾರ್ಲರ್ (Beauty Parlour) ಸಲೂನ್ಗಳು ಅಂದ ಹೆಚ್ಚಿಸಲು ಇರುವಂತಹ ಕೇಂದ್ರಗಳು ಅಂತಾನೇ ಹೇಳಬಹುದು. ಯಾಕಂದ್ರೆ ಯಾವುದೇ ಟ್ರೀಟ್ಮೆಂಟ್, ಗೆಟ್ಅಪ್ (Get up), ವಸ್ತ್ರಾಲಂಕಾರಗಳು ಬೇಕಂದರೂ ಪಾರ್ಲರ್, ಸಲೋನ್ಗಳಲ್ಲಿ ದೊರೆಯುತ್ತದೆ. ಅದ್ರಲ್ಲೂ ಈಗಿನ ಕಾಲದಲ್ಲಿ ಹೆಚ್ಚಾಗಿ ಸ್ಪಾ(Spa) ಅಂತ ಆರಂಭವಾಗಿದೆ. ಇದ್ರಲ್ಲಿ ಅಂತೂ ಸಖತ್ ಬೆಲೆ ಬಾಳುವ ಪ್ಯಾಕೇಜ್ ಇರುತ್ತದೆ. ಪೆಡಿಕ್ಯೂರ್, ಮೆಡಿಕ್ಯೂರ್, ಬಾಡಿ ಮಸಾಜಿಂಗ್ ಹೀಗೆ ನಾನಾ ರೀತಿಯ ಟ್ರೀಟ್ಮೆಂಟ್ಗಳನ್ನು ನೀಡಿತ್ತಾರೆ ಇಲ್ಲಿ. ಅದಕ್ಕಂತಲೇ ಹಲವಾರು ಕೋರ್ಸ್ಗಳೂ (Course) ಇರುತ್ತವೆ. ಹಾಗಾದ್ರೆ ಈ ಪಾರ್ಲರ್ ಇಂದ ಅನುಕೂಲಗಳು ಮಾತ್ರ ಆಗ್ತಾ ಇದ್ಯಾ ಅಂತ ಕೇಳಿದ್ರೆ ಸತ್ಯಕ್ಕೂ ಇಲ್ಲ. ಇದೇ ಪಾರ್ಲರ್ ಇಂದ ಓರ್ವ ಮಹಿಳೆ ಇದೀಗ ಸಾವಿನ ಬಾಗಿಲನ್ನು ತಟ್ಟುವಂತಾಗಿದೆ.
ನಿಮ್ಮ ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ಉಗುರಿನ ಸೌಂದರ್ಯ ಕಾಪಾಡಿಕೊಳ್ಳಲು ನೀವು ಅದರ ಅಂದವನ್ನು ಹೆಚ್ಚಿಸಲು ಹಸ್ತಾಲಂಕಾರ ಮಾಡಿಸಲಾಗುತ್ತದೆ. ಅಂದ ಮಾಡಲು ಹೋಗಿ ಇನ್ನೊಂದು ಆದ್ರೆ ಏನು ಮಾಡೋದು? ಇದರ ಬಗ್ಗೆ ಕೊಂಚ ಆಲೋಚನೆಯೂ ಕೂಡ ಇರೋದಿಲ್ಲ ಅಲ್ವಾ? ಆದರೆ, ಹಸ್ತಾಲಂಕಾರ ಮಾಡಿಸಿಕೊಳ್ಳಲು ಹೋದ ಮಹಿಳೆಗೆ ಇದೇ ರೀತಿಯ ಘಟನೆ ಸಂಭವಿಸಿದೆ. ಆಕೆಯ ಉಗುರುಗಳಲ್ಲಿ ಮಾರಣಾಂತಿಕ ಕ್ಯಾನ್ಸರ್ ಬೆಳವಣಿಗೆಯಾಯಿತು. ಯುಎಸ್ನಲ್ಲಿ ವಾಸಿಸುವ ಗ್ರೇಸ್ ಗಾರ್ಸಿಯಾ, ಹಸ್ತಾಲಂಕಾರ ಮಾಡುಗಾಗಿ ಹೋದರು, ಅಲ್ಲಿ ಅವಳ ಉಗುರುಗಳನ್ನು ಉಪಕರಣದ ಸಹಾಯದಿಂದ ರೂಪಿಸಲಾಯಿತು. ಬಳಿಕ ಗುಳ್ಳೆಗಳಿರುವುದು ಮಹಿಳೆ ಗಮನಕ್ಕೆ ಬಂದಿದೆ.
ಇದನ್ನೂ ಓದಿ: ರಜೆಯಲ್ಲಿದ್ದ ಉದ್ಯೋಗಿಗೆ ಸಹೋದ್ಯೋಗಿಗಳು ಕಾಲ್ ಮಾಡುವಂತಿಲ್ಲ; ಕಾಲ್ ಮಾಡಿದ್ರೆ 1 ಲಕ್ಷ ರೂಪಾಯಿ ದಂಡ!
ಈ ಬ್ಯೂಟಿ ಪಾರ್ಲರ್ ಕಥೆ ಕೇಳಿದ್ರೆ ನಿಜಕ್ಕೂ ನೀವು ಅಚ್ಚರಿ ಆಗೋದಂತೂ ಪಕ್ಕಾ ಬಿಡಿ. ಯಾಕಂದ್ರೆ ನೀವು ಪಾರ್ಲರ್ಗಳಿಗೆ ಹೋಗುತ್ತಾ ಇರ್ತೀರ. ಇದೀಗ ಈ ಮಹಿಳೆಗೆ ಆದ ಗತಿ ಇನ್ಯಾರಿಗೂ ಬರಬಾರದು ಅಷ್ಟೆ.
ಪರೀಕ್ಷೆಯಲ್ಲಿ, ಮಹಿಳೆಗೆ ಚರ್ಮದ ಕ್ಯಾನ್ಸರ್ ಇರುವುದು ಅರಿವಾಯಿತು. ಹಸ್ತಾಲಂಕಾರ ಮಾಡಿದ ನಂತರ, ಮಹಿಳೆ ತನ್ನ ಬೆರಳು ಮೂಗೇಟಿಗೊಳಗಾದ ಮತ್ತು ಉಗುರು ಪ್ರಾರಂಭವಾಗುವ ತೆಳುವಾದ ಚರ್ಮದ ವೃತ್ತದ ಮೇಲೆ ಗುಳ್ಳೆ ರೂಪುಗೊಂಡಿರುವುದನ್ನು ಗಮನಿಸಿದರು. ಮಹಿಳೆಯ ಬಲ ಬೆರಳಿನ ಗುಳ್ಳೆ ಮೂರು ತಿಂಗಳವರೆಗೆ ಸಂಪೂರ್ಣವಾಗಿ ಗುಣವಾಗದಿದ್ದಾಗ, ಏನೋ ತಪ್ಪಾಗಿದೆ ಎಂದು ಅವಳು ಅರಿತುಕೊಂಡಳು.
ತನ್ನ ಉಗುರಿನಲ್ಲಿ ಏನೋ ಕುಂದು ಕೊರತೆ ಆಗಿದೆ ಅಂತ ಆಕೆಗೆ ಅನಿಸಲು ಆರಂಭವಾಯ್ತು. ಇದರ ನಂತರ ಅವಳು ಚರ್ಮರೋಗ ತಜ್ಞರನ್ನು ತಲುಪಿದಳು. ಅಲ್ಲಿ ವೈದ್ಯರು ಬಯಾಪ್ಸಿ ಮಾಡಲು ಸಲಹೆ ನೀಡಿದರು. ಗಾರ್ಸಿಯಾಗೆ ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಇರುವುದು ಪತ್ತೆಯಾಯಿತು, ಇದು ಚರ್ಮದ ಕ್ಯಾನ್ಸರ್ನ ರೂಪವಾಗಿದೆ.
ಇದನ್ನೂ ಓದಿ: ನಾಯಿನೂ ಸ್ಕಿಪ್ಪಿಂಗ್ ಮಾಡುತ್ತೆ ಕಣ್ರೀ! ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಆಯ್ತು!
ಗಾರ್ಸಿಯಾ ಡಾ. ಟಿಯೊ ಸೊಲೈಮಾನಿ ಚಿಕಿತ್ಸೆ ನೀಡಿದರು. ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ನಿಂದ ಕ್ಯಾನ್ಸರ್ ಉಂಟಾಗುತ್ತದೆ ಮತ್ತು ಹಸ್ತಾಲಂಕಾರ ಮಾಡಲು ಹೋಗಿ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸಿರಬಹುದು ಎಂದು ಅವರು ಬಹಿರಂಗಪಡಿಸಿದರು. HPV ಯಿಂದ ಉಗುರಿನ ಕ್ಯಾನ್ಸರ್ ಅಪರೂಪವಾಗಿದ್ದರೂ, ಈಗ ಅದರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಜ್ಞರು ಹೇಳಿದ್ದಾರೆ.
ಈ ವಿಷಯವನ್ನು ಕೇಳಿದಾಗ ನಿಮಗೆ ಒಂದು ಬಾರಿ ಎದೆ ಜಲ್ ಅಂದಿರಬೇಕು ಅಲ್ವಾ? ಹಾಗಾದ್ರೆ ಇನ್ನು ಮುಂದೆ ನೀವು ಬ್ಯೂಟಿ ಪಾರ್ಲರ್ಗೆ ಭೇಟಿ ನೀಡುವ ಮುನ್ನ ನೋರು ಬಾರಿ ಯೋಚಿಸಿ, ಒಳ್ಳೆಯ ಸ್ಪಾ ಮತ್ತು ಪಾರ್ಲರ್ಗಳಿಗೆ ಹೋಗಿ ಅಷ್ಟೇ. ಇಲ್ಲದಿದ್ದಲ್ಲಿ ನಿಮಗೂ ಇಂತ ಗತಿ ಬರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ