ನಮ್ಮ ಶಾಲಾ ದಿನಗಳ ನೆನಪು (School Days) ಗಳಲ್ಲಿ, ನಾವು ತೆಗೆದುಕೊಂಡು ಹೋಗುತ್ತಿದ್ದ ಊಟದ ಡಬ್ಬಿ(Lunch Box)ಯ ನೆನಪುಗಳು (Memory( ಕೂಡ ಸೇರಿಕೊಂಡಿರುತ್ತವೆ. ಸ್ನೇಹಿತರೊಂದಿಗೆ ನಮ್ಮ ಡಬ್ಬಿಯ ಊಟವನ್ನು ಹಂಚಿಕೊಂಡು ತಿನ್ನುತ್ತಿದ್ದ ಅಥವಾ ಊಟ ಸೋರುತ್ತಿದ್ದ ಡಬ್ಬಿಯನ್ನು ಬ್ಯಾಗ್ ನಿಂದ ಹೊರ ತೆಗೆಯಲು ಮುಜುಗರ ಪಡುತ್ತಿದ್ದ ನೆನಪುಗಳು ಯಾರಿಗಿಲ್ಲ ಹೇಳಿ..? ಅದೆಲ್ಲಾ ಸರಿ, ನಿಮ್ಮ ಊಟದ ಡಬ್ಬಿ ಹೇಗಿರುತ್ತಿತ್ತು ನೆನಪಿದೆಯಾ..? ಮಿಕ್ಕಿ ಮೌಸ್, ಸಿಂಡ್ರೆಲ್ಲಾ, ಹೀಮ್ಯಾನ್ ಚಿತ್ರಗಳಿದ್ದ ಬಣ್ಣ ಬಣ್ಣದ ಪ್ಲಾಸ್ಟಿಕ್ ಡಬ್ಬಿಗಳೇ (Plastic Box) ಅಥವಾ ಸ್ಟೀಲ್ ಡಬ್ಬಗಳೇ..? ಒಂದು ವೇಳೆ ನೀವು ಸ್ಟೀಲ್ ಡಬ್ಬ(Steel Box)ದಲ್ಲಿ ಊಟ ತೆಗೆದುಕೊಂಡು ಹೋಗುತ್ತಿದ್ದವರು ಎಂದಾದಲ್ಲಿ, ಈ ಕೆಳಗಿನ ಫೋಟೋ ನಿಮ್ಮ ಮನಸ್ಸಿನೊಳಗೆ ಎಲ್ಲೋ ಬಚ್ಚಿಟ್ಟುಕೊಂಡಿರುವ , ಶಾಲಾ ದಿನಗಳ ಲಂಚ್ ಪೀರಿಯೆಡ್‍ನ ನೆನಪುಗಳನ್ನು ಹೊರ ತರುವುದಂತೂ ಖಂಡಿತಾ.
ಹಾಗಂತಾ, ಈ ಫೋಟೋ ನಮ್ಮ ದೇಶದ ಯಾವುದೋ ಸೇಠುವಿನ ಸ್ಟೀಲ್ ಅಂಗಡಿಯಲ್ಲಿ ತೆಗೆದಿರುವುದು ಎಂದುಕೊಳ್ಳಬೇಡಿ. ಟ್ವಿಟ್ಟರ್ ಬಳಕೆದಾರರಾದ ಮಧುರಾ ರಾವ್ ಅವರು, ಯೂರೋಪ್ ನ ಒಂದು ಅಂಗಡಿಗೆ ಶಾಪಿಂಗ್ ಹೋದಾಗ ಈ ಫೋಟೋವನ್ನು ತೆಗೆದಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಯುರೋಪ್ ನಲ್ಲಿ ಕಾಣಿಸಿತು ಸ್ಟೀಲ್ ಡಬ್ಬ
ಯುರೋಪಿನ ಹಿಪ್ ಸ್ಟರ್ ಅಂಗಡಿಗಳಲ್ಲಿ ಈ ಸ್ಟೀಲ್ ಡಬ್ಬಿಗಳನ್ನು ಮಾರುತ್ತಿರುವುದನ್ನು ನೋಡಿದ ಮಧುರಾ ಅವರು, ತಾವು ಭಾರತದಲ್ಲಿ ಶಾಲೆಗೆ ಹೋಗುತ್ತಿದ್ದಾಗ, ಒಂದರ ಮೇಲೊಂದು ಪೇರಿಸಿರುವ ಶೈಲಿಯ ಅಂತದ್ದೇ ಸ್ಟೀಲ್ ಡಬ್ಬಿಗಳಲ್ಲಿ ಊಟ ತೆಗೆದುಕೊಂಡು ಹೋಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡು, ಅದರ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ, ಎರಡು ದಶಕಗಳ ಬಳಿಕ, ಭಾರತದಿಂದ ದೂರ ಇರುವ ಆ ದೇಶ ಒಂದು ಅಂಗಡಿಯಲ್ಲಿ ಅಂತದೇ ಸ್ಟೀಲ್ ಡಬ್ಬವನ್ನು ನೋಡಿ ಅವರಿಗೆ ಅಚ್ಚರಿಯಾಯಿತಂತೆ.
ಇದನ್ನೂ ಓದಿ: Viral Post: ಮಗನ ಮಹಾನ್ ಕಾರ್ಯ ಹಂಚಿಕೊಂಡ ತಾಯಿ: ಮಕ್ಕಳ ಹಸಿವು ನೀಗಿಸಲು ಮುಂದಾದ ಸಂಸ್ಥೆ
ಅವರು ಆ ಊಟದ ಸ್ಟೀಲ್ ಡಬ್ಬಿಯ ಫೋಟೋವನ್ನು ಹಂಚಿಕೊಳ್ಳುತ್ತಾ, “ಎರಡು ದಶಕಗಳ ನಂತರ ಯೂರೋಪ್‍ನ ಹಿಪ್ ಸ್ಟರ್ ಸ್ಟೋರ್ ಗಳಲ್ಲಿ ಇದನ್ನು ಮಾರಾಟ ಮಾಡುತ್ತಿರುವುದನ್ನು ಕಂಡುಕೊಳ್ಳಲು, ಶಾಲೆಯಲ್ಲಿ ಇದರಲ್ಲಿ ಊಟ ತರುತ್ತಿದ್ದದ್ದಕ್ಕೆ ತಮಾಷೆಗೆ ಒಳಗಾಗಿದ್ದೆ ಎಂಬಂತಾಯಿತು” ಎಂಬ ಅಡಿಬರಹವನ್ನು ಬರೆದಿದ್ದಾರೆ.
ಮಧುರಾಗೆ ನೆಟ್ಟಿಗರ ಪ್ರಶ್ನೆ
ಮಧುರಾ ಅವರ ಟ್ವೀಟ್ ಅನ್ನು ನೋಡಿ, “ಇದಕ್ಕಾಗಿ ನೀವು ಹಾಸ್ಯಕ್ಕೆ ಒಳಗಾಗಿದ್ದೀರಾ? ಯಾಕೆ? ಇದು ಭಾರತದಲ್ಲಿ ಸಾಮಾನ್ಯ ವಿಷಯ ಅಲ್ಲವೇ? ಅಥವಾ ಪುಣೆಯಲ್ಲಿ ಮಾತ್ರವೇ?” ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ?
“ಇದು 2002-2005 ರ ಬಾಂಬೆಯ ಸಂಗತಿ. ಕೂಲ್ ಎನಿಸಿಕೊಳ್ಳುತ್ತಿದ್ದ ಮಕ್ಕಳು ಸ್ಟೀಲ್ ಡಬ್ಬದಿಂದ ಬಣ್ಣದ ಪ್ಲಾಸ್ಟಿಕ್ ಡಬ್ಬಗಳಿಗೆ ಬದಲಾಗುತ್ತಿದ್ದರು ಅಥವಾ ಕ್ಯಾಂಟೀನ್‍ನಲ್ಲಿ ಊಟ ಮಾಡುತ್ತಿದ್ದರು” ಎಂದು ಉತ್ತರಿಸಿದ್ದಾರೆ.
Got bullied in school for brining lunch in this only to find it being sold in hipster stores in Europe two decades later 🥲 pic.twitter.com/2MPEhJk2gC
— Madhura Rao (@madhurarrao) April 16, 2022
ಮಧುರಾ ರಾವ್ ಅವರು ಈ ಟ್ವೀಟ್‍ಗೆ ಹಲವಾರು ಮಂದಿ, ಸ್ಟೀಲ್ ಊಟದ ಡಬ್ಬಿಯ ಜೊತೆಗಿನ ತಮ್ಮ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ತಾವು ಈಗಲೂ ಇಂತಹ ಡಬ್ಬಿಗಳನ್ನೇ ಬಳಸಲು ಇಷ್ಟ ಪಡುತ್ತೇವೆ ಎಂದಿದ್ದರೆ, ಇನ್ನು ಕೆಲವರು ಈ ರೀತಿಯ ಸ್ಟೀಲ್ ಡಬ್ಬಗಳಲ್ಲಿ ಊಟ ಹೇಗೆ ಸೋರುತ್ತದೆ ಎಂಬುದನ್ನು ಬರೆದುಕೊಂಡಿದ್ದಾರೆ.
“ನಾನು ಈಗಲೂ ಕೆಲಸಕ್ಕೆ ನನ್ನದೇ ಊಟವನ್ನು ತರುತ್ತೇನೆ. ಊಟದ ಸಮಯದವರೆಗೆ ಊಟ ಬಿಸಿಯಾಗಿರಲೆಂದು ನಾನೀಗ ಥರ್ಮಲ್ ಟಿಫಿನ್ ಬಳಸುತ್ತೇನೆ. ನಾಚಿಕೆ ಪಡುವಂತದ್ದು ಏನೂ ಇಲ್ಲ” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
Some kids brought them to school in 🇲🇺 too (especially if it was during a religious Indian celebration). While we did not make fun of them, we thought it was different. U R right… they’re POPULAR & expensive in 🇰🇷 too. We have similar versions in 🇰🇷 ( a little fancy). pic.twitter.com/s8yjUiZkUo
— Natacha M. (@natacha_moor) April 17, 2022
ಇದನ್ನೂ ಓದಿ: Viral Video: ಹಾರ ಹಾಕಲು ಬರುತ್ತಿದ್ದಂತೆ ವರನ ಕೆನ್ನೆಗೆ ಹೊಡೆದು ಕಾಲ್ಕಿತ್ತ ವಧು!
”ಇದು ಮತ್ತು ಇದರಂತದ್ದೇ ಊಟದ ಡಬ್ಬಗಳ ಬಳಕೆ 1950 ರ ವರೆಗೆ ಜರ್ಮನಿಯಲ್ಲಿ ಸಾಮಾನ್ಯವಾಗಿತ್ತು ಮತ್ತು ಅದನ್ನು ಆಗ “ಹೆಂಕೆಲ್ ಮನ್ನ್” ಎಂದು ಕರೆಯುತ್ತಿದ್ದರು. ಯುದ್ಧದ ನಂತರ 50 ನೇ ದಶಕದ ಆರಂಭದಲ್ಲಿ, ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ನನ್ನ ಅಮ್ಮನ ಬಳಿಯೂ ಇಂತದ್ದು ಒಂದಿತ್ತು” ಎಂದು ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
Even now I’m bringing own lunch to work. Now using thermal tiffin so my food warm when lunch time. Nothing to be ashamed pic.twitter.com/EVkcJOjDRp
— The other side of me (@Klik25) April 17, 2022
“ ಈ ಲೋಹದ ಡಬ್ಬಗಳು ನನಗೆ ಇಷ್ಟ, ಆದರೆ ನೀವು ಇದರಲ್ಲಿ ಊಟವನ್ನು ಹೇಗೆ ಬಿಸಿ ಮಾಡುತ್ತೀರಾ?” ಎಂದು ಇನ್ನೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. “ನನ್ನ ಅಮ್ಮ ಯಾವತ್ತೂ ಪ್ಲಾಸ್ಟಿಕ್ ಡಬ್ಬದಲ್ಲಿ ಊಟ ಕೊಡಲಿಲ್ಲ. ಪ್ಲಾಸ್ಟಿಕ್ ಡಬ್ಬದಲ್ಲಿ ಬಿಸಿ ಊಟ ಹಾಕಿಕೊಡುವುದು ಯಾವತ್ತೂ ಸುರಕ್ಷಿತವಲ್ಲ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಬಹುಶ: ನನ್ನ ತರಗತಿಯಲ್ಲಿ ಕಾಲೇಜಿನವರೆಗೂ ಸ್ಟೀಲ್ ಡಬ್ಬದಲ್ಲಿ ಊಟ ತರುತ್ತಿದ್ದವಳು ನಾನು ಒಬ್ಬಳೇ ಆಗಿದ್ದೆ” ಎಂದು ಮತ್ತೊಬ್ಬ ಬಳಕೆದಾರರು ನೆನಪುಗಳನ್ನು ಹಂಚಿಕೊಂಡಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ