ಮನೆಯಲ್ಲಿ ಒಂದು ಸಾಕುಪ್ರಾಣಿ ಇದ್ದರೆ, ನಮ್ಮಿಂದ ಅದಕ್ಕೆ ಎಷ್ಟರ ಮಟ್ಟಿಗೆ ಪ್ರೀತಿ ಮತ್ತು ಆರೈಕೆ ಸಿಗುತ್ತದೆಯೋ ಗೊತ್ತಿಲ್ಲ, ಆದರೆ ಆ ಸಾಕುಪ್ರಾಣಿಯಿಂದ ನಮಗೆ ಸಿಗುವ ಖುಷಿ ಮತ್ತು ನೆಮ್ಮದಿ ಲಕ್ಷ ರೂಪಾಯಿ ಕೊಟ್ಟರೂ ಸಿಗೋದಿಲ್ಲ ಅಂತ ಹೇಳಬಹುದು. ಮನೆಯಲ್ಲಿರುವ ನಮ್ಮ ಮಕ್ಕಳು (Children) ನಮಗೆ ಎಷ್ಟು ಸಹಾಯ ಮಾಡುತ್ತಾರೋ ಗೊತ್ತಿಲ್ಲ, ಆದರೆ ಈ ಸಾಕುಪ್ರಾಣಿಗಳು ಮಾತ್ರ ನಮ್ಮ ಕಷ್ಟದ ಸಮಯದಲ್ಲಿ ತುಂಬಾನೇ ಸಹಾಯಕ್ಕೆ ಬರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಆ ಸಾಕುಪ್ರಾಣಿ ನಾಯಿ (Dog) ಆದರಂತೂ ಮುಗಿದೇ ಹೋಯ್ತು, ಮನೆಯಲ್ಲಿರುವ ಪ್ರತಿಯೊಂದು ಕೆಲಸದಲ್ಲಿಯೂ ಸಹ ತನ್ನ ಒಡೆಯ ಅಥವಾ ಒಡತಿಗೆ ಸಹಾಯ ಮಾಡಲು ಮುಂದಾಗುತ್ತದೆ. ಇಷ್ಟೇ ಅಲ್ಲದೆ ಈ ಸಾಕುನಾಯಿಗಳು ತುಂಬಾನೇ ಪ್ರಮಾಣಿಕವಾಗಿರುತ್ತವೆ ಮತ್ತು ಭಾವನಾತ್ಮಕವಾಗಿ ಸಹ ಅವುಗಳು ಮನೆಯವರ ಜೊತೆಯಲ್ಲಿ ಹೊಂದಿಕೊಳ್ಳುತ್ತವೆ ಅಂತ ಹೇಳಬಹುದು.
ಮನೆಯವರಿಗೆ ನೋವಾದರೆ ಸಾಕುನಾಯಿಗಳಿಗೂ ನೋವಾಗುತ್ತಂತೆ
ಮನೆಯ ಮಾಲೀಕರು ಮತ್ತು ನಾಯಿಗಳು ಒಂದು ರೀತಿಯ ವಿಶೇಷ ಬಂಧವನ್ನು ಹಂಚಿಕೊಳ್ಳುತ್ತಾರೆ. ನೋಡ ನೋಡುತ್ತಿದ್ದಂತೆ ಈ ಸಾಕುನಾಯಿಗಳು ಮನೆಯವರ ಜೀವನದ ಒಂದು ದೊಡ್ಡ ಭಾಗವಾಗಿ ಬಿಡುತ್ತವೆ. ಅವು ಮನೆಯಲ್ಲಿದ್ದ ಯಾವುದೇ ಸದಸ್ಯರಿಗೆ ಕಿಂಚಿತ್ತು ನೋವಾದರೂ ಸಹ ಅವೂ ನೋವು ಅನುಭವಿಸುತ್ತವೆ.
ಅವು ಕುಟುಂಬದ ಒಬ್ಬ ಸದಸ್ಯರಂತೆಯೇ ಆಗಿ ಬಿಟ್ಟಿರುತ್ತವೆ ಮತ್ತು ಮಾಲೀಕರ ನೋವಿನ ಸಂದರ್ಭಗಳಲ್ಲಿಯೂ ಸಹ ಈ ಸಾಕುನಾಯಿಗಳು ಸಹಾಯ ಮಾಡುತ್ತವೆ. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.
ಶಸ್ತ್ರಚಿಕಿತ್ಸೆಯ ನಂತರ ಈ ಮಹಿಳೆಗೆ ಚೇತರಿಸಿಕೊಳ್ಳಲು ಸಹಾಯ ಮಾಡಿದ ಸಾಕುನಾಯಿ
ಇದೇ ರೀತಿಯ ಘಟನೆಯನ್ನು ಹಂಚಿಕೊಂಡ ಮಹಿಳೆಯೊಬ್ಬರು ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳಲು ತನ್ನ ನಾಯಿ ಹೇಗೆ ಸಹಾಯ ಮಾಡಿತು ಎಂಬುದನ್ನು ಹಂಚಿಕೊಂಡಿದ್ದಾರೆ ನೋಡಿ. ಶಸ್ತ್ರಚಿಕಿತ್ಸೆಯ ನಂತರ ಪೋಸ್ಟೊ ಎಂಬ ಸಾಕುನಾಯಿ ತನ್ನ ಜೀವನದಲ್ಲಿ ಬಂದಿತು ಮತ್ತು ಅದು ಅವಳ ಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸಿತು ಎಂದು ಅವಳು ತನ್ನ ವೀಡಿಯೋ ಪೋಸ್ಟ್ ನಲ್ಲಿ ಹೇಳುತ್ತಾಳೆ.
ಈ ವೀಡಿಯೋದಲ್ಲಿ, ಮಹಿಳೆಯೊಬ್ಬರು ವಾಕರ್ ಸಹಾಯದಿಂದ ನಿಧಾನವಾಗಿ ನಡೆದುಕೊಂಡು ಹೋಗುವುದನ್ನು ಕಾಣಬಹುದು ಮತ್ತು ಅವರ ಕಾಲಿನ ಮೇಲೆ ಮೊಣಕಾಲು ಬ್ರೇಸ್ ಅನ್ನು ಸಹ ಕಾಣಬಹುದು. ನಂತರ ಅವರು ತಮ್ಮ ಸಾಕುನಾಯಿ ಮತ್ತು ಪರದೆಗಳೊಂದಿಗೆ ಆಡುವ ಕ್ಲಿಪ್ ಗಳನ್ನು ಸಹ ಹಂಚಿಕೊಳ್ಳುತ್ತಾರೆ. "ನಾಯಿಗಳು ನಿಜವಾಗಿಯೂ ಗಾಯವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿವೆ" ಎಂದು ಮಹಿಳೆ ತಮ್ಮ ಪೋಸ್ಟ್ ನಲ್ಲಿ ಹೇಳುತ್ತಾರೆ.
ಇದನ್ನೂ ಓದಿ: ಗುಲಾಬಿ ಬಣ್ಣಕ್ಕೆ ತಿರುಗಿದ ಬೆಂಗಳೂರಿನ ರಸ್ತೆಗಳು!
ಮಹಿಳೆ ತಾವು ಹಂಚಿಕೊಂಡ ಪೋಸ್ಟ್ ನ ಶೀರ್ಷಿಕೆಯಲ್ಲಿ ಏನ್ ಬರ್ದಿದ್ದಾರೆ?
"ನಾಯಿಮರಿಯನ್ನು ಪಡೆದ ನಂತರ ನಿಮ್ಮ ಜೀವನವು ಹೇಗೆ ಬದಲಾಗುತ್ತದೆ? ನಿಮ್ಮ ಸಾಕುಪ್ರಾಣಿಯೊಂದಿಗೆ ಸಮಯ ಕಳೆಯುವುದು ತುಂಬಾನೇ ವಿಶ್ರಾಂತಿ ನೀಡುತ್ತದೆ, ಎಂಡಾರ್ಫಿನ್ ಬಿಡುಗಡೆಯನ್ನು ಉತ್ತೇಜಿಸುತ್ತದೆ, ಇದು ಮೆದುಳಿನ ರಾಸಾಯನಿಕಗಳಾಗಿವೆ, ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ಉತ್ತಮ ಭಾವನೆಯನ್ನು ಅನುಭವಿಸಲು ಸಹಾಯ ಮಾಡುತ್ತದೆ. ಈ ಪ್ರೀತಿಯ ಪ್ರಾಣಿಯನ್ನು ಸಾಕುವುದು ನಿಮ್ಮ ರಕ್ತದೊತ್ತಡವನ್ನು ಸಹ ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ" ಎಂದು ವೀಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
View this post on Instagram
"ಸಾಕುನಾಯಿಗಳು ನಮ್ಮ ನೋವನ್ನು ಗುಣಪಡಿಸುತ್ತವೆ ಎಂಬುದು ಅಕ್ಷರಶಃ ನಿಜ, ನಾನು ಅದನ್ನು ಅನುಭವಿಸಿದ್ದೇನೆ. ಅದು ಯಾವಾಗಲೂ ನನ್ನ ಪಕ್ಕದಲ್ಲಿಯೇ ಕೂತು ನನ್ನ ಸಂತೋಷದ ಹಾರ್ಮೋನ್ ಆಗಿತ್ತು, ಅದನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ನಾಯಿಯ ಬಗ್ಗೆ ಹಳೆಯ ದಿನಗಳನ್ನು ನೆನಪಿಸಿಕೊಂಡು ಪ್ರತಿಕ್ರಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ