news18-kannada Updated:December 29, 2020, 5:25 PM IST
photo: Instagram
ಕಣ್ಣಾರೆ ಕಂಡರು ಪರಾಂಬರಿಸಿ ನೋಡು ಎಂಬ ಗಾದೆ ಮಾತು ಇದೆ. ಆದರೆ ಅನೇಕರಿಗೆ ಈ ಗಾದೆ ಮಾತು ಗೊತ್ತಿದ್ದರು ಅದರ ಒಳಾರ್ಥ ತಿಳಿಯದೆ ಮತ್ತೆ ಅದೇ ತಪ್ಪು ಮಾಡುವವರಿದ್ದಾರೆ. ಆದರೆ ಯಾರೆ ಆಗಲಿ ಸರಿಯಾಗಿ ನೋಡಿ ಮುನ್ನಡೆಯುವುದು ಉತ್ತಮ. ಯಾಕೆಂದರೆ ಕೆಲವೊಮ್ಮೆ ಅಪಾಯಗಳು ಎದುರಾಗುವ ಸಂದರ್ಭ ಜಾಸ್ತಿ ಇರುತ್ತದೆ.
ಇಲ್ಲೊಬ್ಬಳು ಹುಡುಗಿ ಸ್ನೇಹಿತನ ಹಾಡಿಗೆ ಮೈಮರೆತು ಪಕ್ಕದಲ್ಲಿ ಕ್ಯಾಂಡಲ್ ಇದೆ ಎಂದು ತಿಳಿಯದೆ ಕೂಡಲು ಸುಟ್ಟುಕೊಂಡಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆಯೇ ಈ ದೃಶ್ಯ ಸ್ಪೇನ್ನ ಮ್ಯಾಡ್ರಿಡ್ ನಗರದಲ್ಲಿ ನಡೆದಿದೆ. ಯುವತಿ ತನ್ನ ಸ್ನೇಹಿತನ ಹಾಡಿಗೆ ಮೈಮರೆಯುತ್ತಾ ತಾನು ಸ್ವರ ಸೇರಿಸುತ್ತಾ ಹಾಡುತ್ತಿದ್ದಾಳು. ಆದರೆ ಆಕೆಗೆ ಹಿಂದೆ ಕ್ರಿಸ್ಮಸ್ ಕ್ಯಾಂಡಲ್ ಇದೆ ಎಂದು ತಿಳಿದಿರಲಿಲ್ಲ. ಕೊಂಚ ಹೊತ್ತಿನಲ್ಲಿ ಆಕೆಯ ಕೂದಲಿಗೆ ಬೆಂಕಿ ತಗುಲಿದೆ.
ಗಾಯಕಿ ಸೋಫೀಯಾ ಗೆಳೆಯ ಅಲ್ವಾರೊ ಸೋಲರ್ ಜೊತೆಗೆ ಕ್ರಿಸ್ಮಸ್ ಹಬ್ಬವನ್ನು ಎಂಜಾಯ್ ಮಾಡುತ್ತಿದ್ದಳು. ಹಾಡು ಹಾಡುತ್ತಾ ಆ ಕ್ಷಣವನ್ನು ಇಬ್ಬರು ಆನಂದಿಸುತ್ತಿದ್ದರು. ಮಾತ್ರವಲ್ಲದೆ, ವಿಡಿಯೋ ಮಾಡುವ ಮೂಲಕ ಆ ಆನಂದವನ್ನು ಸೆರೆಹಿಡಿಯುತ್ತಿದ್ದರು.
ಅಲ್ವರೊ ಗಿಟಾರ್ ನುಡಿಸುತ್ತಾ ಹಾಡಿದರೆ. ಸೋಫಿಯಾ ಕೂಡ ಆತನೊಂದಿಗೆ ಸ್ವರ ಸೇರಿಸುತ್ತಿದ್ದಳು. ಆದರೆ ಕ್ರಿಸ್ಮಸ್ ಹಬ್ಬದ ಕ್ಷಣವಾದ್ದರಿಂದ ಸೋಫಿಯಾಗೆ ತನ್ನ ಹಿಂಭಾಗದಲ್ಲಿ ಕ್ಯಾಂಡಲ್ ಇದೆ ಎಂದು ಕಾಣಿಸಿಲ್ಲ. ಆಕೆ ಹಾಡುತ್ತಿದ್ದಂತೆ ಕ್ಯಾಂಡಲ್ಗೆ ಕೂದಲು ತಗುಲಿದೆ. ನಿಧಾನವಾಗಿ ಬೆಂಕಿ ಹಚ್ಚಿಕೊಂಡಿದೆ. ಬೆಂಕಿ ಉರಿಯುತ್ತಾ ಹೋದಂತೆ ಆಕೆಗೆ ಬೆಂಕಿ ತಗುಲಿರುವುದು ಗೊತ್ತಾಗಿದೆ.
ಕೂಡಲೇ ಸೋಪಿಯಾ ಕಿರುಚುತ್ತಾ ನಂದಿಸಲು ಮುಂದಾಗುತ್ತಾಳೆ. ಗೆಳೆಯ ಅಲ್ವರೊ ಕೂಡ ಬೆಂಕಿ ನಂದಿಸುತ್ತಾನೆ. ಆದರೆ ಈ ಘಟನೆಯಿಂದ ಸೋಫಿಯಾಗೆ ಯಾವುದೇ ಗಾಯವಾಗಿಲ್ಲ.
ಸೋಫಿಯಾ ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾಳೆ. ಜೊತೆಗೆ ಗೆಳೆಯ ಬೆಂಕಿಯಿಂದ ತನನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾಳೆ.
First published:
December 29, 2020, 5:19 PM IST