Viral Story: ದೇಹದಲ್ಲಿ ಬೆಳೆಯುವ ಕೂದಲಿನ ಫೋಟೋ ಮಾರಿ ಆದಾಯ ಗಳಿಸುವ ಮಹಿಳೆ! ಈಕೆಯ ವಾರ್ಷಿಕ ಆದಾಯ ಎಷ್ಟು ಗೊತ್ತಾ?

Viral Story: ಮಹಿಳೆ ದೇಹದ ಕೂದಲಿನ ಫೋಟೋಗಳನ್ನು ಮಾರಾಟ ಮಾಡುವ ಮೂಲಕ ಹಣ ಮಾಡುತ್ತಿದ್ದಾಳೆ. ಯಾರೂ ಊಹಿಸದಂತಹ ವಿಚಿತ್ರ ವ್ಯವಹಾರವನ್ನು ಅವಳು ಮಾಡುತ್ತಾಳೆ. ಮಹಿಳೆ ತನ್ನ ದೇಹದ ಕೂದಲಿನ ಫೋಟೋಗಳನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ಹಣ ಗಳಿಸುತ್ತಿದ್ದಾಳೆ ಎಂದ ಸಂಗತಿಯೇ ಅಶ್ಚರ್ಯಕರವಾಗಿದೆ.

ಕ್ಯಾಂಡೇಸ್ ಸಿಂಥಿಯಾ

ಕ್ಯಾಂಡೇಸ್ ಸಿಂಥಿಯಾ

  • Share this:
    ಈಗಿನ ಕಾಲದಲ್ಲಿ ಕೆಲಸ (Job) ಸಿಗುವುದು ತುಂಬಾ ಕಷ್ಟ. ಕೊರೊನಾ (Corona) ಸಮಯದಲ್ಲಂತೂ ಅನೇಕರು ವರ್ಕ್​ ಫ್ರಂ ಹೋಮ್ (Work From Home)​ ಕೆಲಸವನ್ನೇ ಹುಡುಕುತ್ತಿದ್ದಾರೆ. ಆದರೆ ಇಂದಿನ ಕಾಲದಲ್ಲಿ ಹಣ (Money) ಸಂಪಾದಿಸುವುದು ಕಷ್ಟವಲ್ಲ, ಹಣ  ಗಳಿಸಲುವ ಸಾಕಷ್ಟು ಮಾರ್ಗಗಳಿವೆ. ಅದರಂತೆಯೇ ಕೆನಡಾದ (Canada) ಮಹಿಳೆಯೊಬ್ಬರು ಮನೆಯಲ್ಲಿಯೇ ಕುಳಿತು ಹಣ ಗಳಿಸುತ್ತಿದ್ದಾಳೆ. ಅದರಲ್ಲೂ ಆಕೆ ತನ್ನ ದೇಹದ ಕೂದಲಿನ (Body Hair) ಫೋಟೋಗಳನ್ನು ಮಾರುವ ಮೂಲಕ ಹಣ ಗಳಿಸುತ್ತಿದ್ದಾಳೆ.

    ಹೌದು. ಮಹಿಳೆ ದೇಹದ ಕೂದಲಿನ ಫೋಟೋಗಳನ್ನು ಮಾರಾಟ ಮಾಡುವ ಮೂಲಕ ಹಣ ಮಾಡುತ್ತಿದ್ದಾಳೆ. ಯಾರೂ ಊಹಿಸದಂತಹ ವಿಚಿತ್ರ ವ್ಯವಹಾರವನ್ನು ಅವಳು ಮಾಡುತ್ತಾಳೆ. ಮಹಿಳೆ ತನ್ನ ದೇಹದ ಕೂದಲಿನ ಫೋಟೋಗಳನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ಹಣ ಗಳಿಸುತ್ತಿದ್ದಾಳೆ ಎಂದ ಸಂಗತಿಯೇ ಅಶ್ಚರ್ಯಕರವಾಗಿದೆ.

    ಕೆನಡಾದ ನ್ಯೂ ಬ್ರನ್ಸ್‌ವಿಕ್‌ನ 32 ವರ್ಷದ ತಾಯಿ ಕ್ಯಾಂಡೇಸ್ ಸಿಂಥಿಯಾ ಎಂಬಾಕೆ ಆನ್‌ಲೈನ್ ಫ್ಯಾನ್ಸ್ ಚಂದಾದಾರಿಕೆ ಸೈಟ್‌ನಲ್ಲಿ ತನ್ನ ದೇಹದ ಕೂದಲಿನ ಫೋಟೋಗಳನ್ನು ಮಾರಾಟ ಮಾಡುತ್ತಾಳೆ ಮತ್ತು ಅದರಿಂದ ಹಣವನ್ನು ಗಳಿಸುತ್ತಾಳೆ. ಆಕೆಯ ಕಂಕುಳಿನಲ್ಲಿ, ಕಾಲುಗಳಲ್ಲಿ ಬೆಳೆಯುವ ಕೂದಲು ನೋಡಲು ಜನರು ಬಯಸುತ್ತಾರೆ. ಅದರಂತೆ ಆಕೆ ಫೋಟೋ ತೆಗೆಯುವ ಮೂಲಕ ನೇಡಿಕೆಯಿಟ್ಟ ಜನರಿಗೆ ಕಳುಹಿಸುತ್ತಾಳೆ. ಮಾತ್ರವಲ್ಲದೆ ಜನರಿಂದ ಹಣ ಪಡೆಯುತ್ತಾಳೆ. ಅಂದಹಾಗೆಯೇ ವಯಸ್ಕ ರೂಪದರ್ಶಿಯಾಗಿರುವ ಈಕೆಗೆ ಹಣ ಸಂಪಾದಿಸಲು ಹೀಗೊಂದು ದಾರಿ ಕಂಡುಹಿಡಿದಿದ್ದಾಳೆ ಎಂದರೆ ಬಲು ಅಚ್ಚರಿ ಎನಿಸುತ್ತದೆ.

    2018 ರಲ್ಲಿ, ಕ್ಯಾಂಡೇಸ್ ತನಗೆ ನಾರ್ಕೊಲೆಪ್ಸಿ ಇದೆ ಎಂದು ತಿಳಿಯಿತು. ಇದು ಒಂದು ರೀತಿಯ ಕಾಯಿಲೆಯಾಗಿದ್ದು, ಇದರಲ್ಲಿ ವ್ಯಕ್ತಿಯು ಯಾವಾಗಲೂ ದಣಿದ ಮತ್ತು ನಿದ್ರೆಯನ್ನು ಅನುಭವಿಸುತ್ತಾನೆ. ಮಾತ್ರವಲ್ಲದೆ ಈ ಕಾಯಿಲೆಯಿಂದ ಬಳಲುವ ವ್ಯಕ್ತಿಗೆ ಶಕ್ತಿಯೇ ಇಲ್ಲದಂತಾಗುತ್ತದೆ. ಅದರಂತೆಯೇ ಕ್ಯಾಂಡೇಸ್ ಅವರು ದೇಹದ ಶಕ್ತಿಯನ್ನು ಅಗತ್ಯ ಕೆಲಸಗಳಿಗೆ ಮಾತ್ರ ಬಳಸಳು ನಿರ್ಧರಿಸುತ್ತಾಳೆ. ಅಂದಿನಿಂದ ಅವರು ದೇಹದ ಕೂದಲನ್ನು ಸ್ವಚ್ಛಗೊಳಿಸುವುದನ್ನು ನಿಲ್ಲಿಸುತ್ತಾಳೆ.

    ಇದನ್ನೂ ಓದಿ:Elon Musk: ಶ್ರೀಲಂಕಾವನ್ನು ಖರೀದಿಸಿ ಸಿಲೋಮ್​ ಮಸ್ಕ್​ ಎಂದು ಹೆಸರಿಡಿ; ಎಲಾನ್​ ಮಸ್ಕ್​ಗೆ ಸಲಹೆ ನೀಡಿದ ಸ್ನ್ಯಾಪ್​ಡೀಲ್​ ಸಿಇಒ



    ಡೈಲಿ ಸ್ಟಾರ್ ವರದಿಯ ಪ್ರಕಾರ, ಕ್ಯಾಂಡೇಸ್ ಆರಂಭದಲ್ಲಿ ತಾನು ಹೊರಗೆ ಹೋದಾಗ, ಬೆಳೆದ ಕೂದಲಿನ ಬಗ್ಗೆ ನಾಚಿಕೆಪಡುತ್ತಿದ್ದಳು. ಆದರೆ ಕ್ರಮೇಣ ಅವಳು ತನ್ನ ದೇಹದ ಕೂದಲನ್ನು ಅಳವಡಿಸಿಕೊಂಡಳು. ಈಗ ಅವಳು ಸಂಪೂರ್ಣ ಆತ್ಮವಿಶ್ವಾಸದಿಂದ ತನ್ನ ಕೂದಲನ್ನು ತೋರಿಸುತ್ತಾಳೆ.

    ಇದನ್ನೂ ಓದಿ: BMW F 900 XR: ಅಬ್ಬಾ..! ಈ ಬೈಕ್​ ಕೇವಲ 3.6 ಸೆಕೆಂಡ್​ಗಳಲ್ಲಿ 0-100 Km ವೇಗವನ್ನು ಪಡೆಯುತ್ತದೆ

    ಅಂದಹಾಗೆಯೇ ಈಕೆ ವರ್ಷಕ್ಕೆ 15-16 ಲಕ್ಷ ರೂಪಾಯಿ ಗಳಿಸುತ್ತಾಳೆ. ಅನೇಕ ಪುರುಷರು ಅವಳ ಕೂದಲುಳ್ಳ ಫೋಟೋವನ್ನು ನೋಡಲು ಕಾಯುತ್ತಿರುತ್ತಾರೆ.

    ಕ್ಯಾಡೇಸ್ ತನ್ನ ದೇಹದ ಪ್ರತಿಯೊಂದು ಭಾಗದ ಕೂದಲನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 1 ಲಕ್ಷದವರೆಗೆ ಗಳಿಸುತ್ತಾಳೆ. ಕೆಲವೊಮ್ಮೆ ಇದಕ್ಕಿಂತ ಹೆಚ್ಚು ಹಣ ಗಳಿಸುತ್ತಾಳೆ. ಆಕೆಯ ಆದಾಯವು ಒಂದು ವರ್ಷದಲ್ಲಿ 16 ಲಕ್ಷ ರೂಪಾಯಿಗಳನ್ನು ತಲುಪುತ್ತದೆ ಎಂದು ಹೇಳಿಕೊಂಡಿದ್ದಾಳೆ.
    Published by:Harshith AS
    First published: