• Home
  • »
  • News
  • »
  • trend
  • »
  • Google Street View: ಒಂಬತ್ತು ವರ್ಷಗಳ ಬಳಿಕ ಮಹಿಳೆಯನ್ನು ಅದೇ ಸ್ಥಳದಲ್ಲಿ ಸೆರೆಹಿಡಿದ ಗೂಗಲ್​ ಮ್ಯಾಪ್​

Google Street View: ಒಂಬತ್ತು ವರ್ಷಗಳ ಬಳಿಕ ಮಹಿಳೆಯನ್ನು ಅದೇ ಸ್ಥಳದಲ್ಲಿ ಸೆರೆಹಿಡಿದ ಗೂಗಲ್​ ಮ್ಯಾಪ್​

ಲಿಯಾನ್ನೆ ಕಾರ್ಟ್‌ರೈಟ್

ಲಿಯಾನ್ನೆ ಕಾರ್ಟ್‌ರೈಟ್

ಇದೊಂದು ಅಪರೂಪದ ಸನ್ನಿವೇಶ. ಶತಕೋಟಿಯಲ್ಲಿ ಒಂದು ಬಾರಿ ಈ ರೀತಿ ಮರುಕಳಿಸಬಹುದು ಎಂದು ಅನೇಕರು ಕಾಮೆಂಟ್​​ ಮಾಡಿದ್ದಾರೆ. ಬ್ರಿಟಿಷ್​ ಮಹಿಳೆ ಗೂಗಲ್​ ಸ್ಟ್ರೀಟ್​ನಲ್ಲಿ ಮತ್ತೆ ಕಾಣಿಸಿಕೊಂಡಿರುವುದು ಅಚ್ಚರಿ ಅಲ್ಲದೆ ಮತ್ತೇನು.

  • Share this:

    ಎಂಥಾ ವಿಚಿತ್ರ ನೋಡಿ.. ಕೆಲವೊಂದು ಸನ್ನಿವೇಷಗಳು ಮತ್ತೆ ಮರುಕಳಿಸುವುದುಂಟು. ಆದರೆ ಇದು ತೀರಾ ಅಪರೂಪ. ಅದರಲ್ಲೂ ಕೆಲವೊಂದು ಸಂದರ್ಭಗಳು ಹೀಗೆ ಮರುಕಳಿಸಿದಾಗ ಅಚ್ಚರಿಯಾಗುತ್ತದೆ. ಏಕೆಂದರೆ ಇದು ವಿಲಕ್ಷಣ ಘಟನೆಗೆ ಸಾಕ್ಷಿಯಾಗಿರುತ್ತದೆ. ಆದರ ನಾವಿಲ್ಲಿ ಹೇಳುವ ಸ್ಟೋರಿ ಕೇಳಿದ್ರಾ.. ಲಿಯಾನ್ನೆ ಕಾರ್ಟ್‌ರೈಟ್ ಎಂಬ ಮಹಿಳೆ (Women) ಒಂದೇ ಸ್ಥಳದಲ್ಲಿ ಎರಡು ಬಾರಿ ಕಾಣಿಸಿಕೊಂಡಿದ್ದಾರೆ. ಅಚ್ಚರಿಯ ವಿಚಾರವೆಂದರೆ ಗೂಗಲ್​ ಸ್ಟ್ರೀಟ್​ ವ್ಯೂನಲ್ಲಿ (Google Street View) 9 ವರ್ಷಗಳ ಹಿಂದೆ ಮಹಿಳೆ ಇದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದರು. ಆದರೆ 9 ವರ್ಷ ಕಳೆದ ಬಳಿಕ ಮತ್ತೆ ಅದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಮಹಿಳೆ ಸುದ್ದಿಯಲ್ಲಿದ್ದಾರೆ.


    ಇದೊಂದು ಅಪರೂಪದ ಸನ್ನಿವೇಶ. ಶತಕೋಟಿಯಲ್ಲಿ ಒಂದು ಬಾರಿ ಈ ರೀತಿ ಮರುಕಳಿಸಬಹುದು ಎಂದು ಅನೇಕರು ಕಾಮೆಂಟ್​​ ಮಾಡಿದ್ದಾರೆ. ಬ್ರಿಟಿಷ್​ ಮಹಿಳೆ ಗೂಗಲ್​ ಸ್ಟ್ರೀಟ್​ನಲ್ಲಿ ಮತ್ತೆ ಕಾಣಿಸಿಕೊಂಡಿರುವುದು ಅಚ್ಚರಿ ಅಲ್ಲದೆ ಮತ್ತೇನು.


    ಲಾಡ್​ಬೈಬಲ್​ ವರದಿ ಪ್ರಕಾರ, ಲಿಯಾನ್ನೆ ಕಾರ್ಟ್‌ರೈಟ್ ಎಂಬ ಬ್ರಿಟಿಷ್​ ಮಹಿಳೆ 2009 ಏಪ್ರಿಲ್​ ತಿಂಗಳಿನಲ್ಲಿ ಗೂಗಲ್​ ಸ್ಟ್ರೀಟ್​ ವ್ಯೂನಲ್ಲಿ ಕಾಣಿಸಿಕೊಂಡಿದ್ದರು. ತನ್ನ ಎಡಗೈಯಲ್ಲಿ ಕ್ಯಾರಿಯರ್​ ಬ್ಯಾಗ್​ ಹಿಡಿದುಕೊಂಡು ವಿಕ್ಟೋರಿಯಾ ಸ್ಥಳದ ಮೂಲೆ ಕಾಣಿಸಿಕೊಂಡಿದ್ದರು. ಮಹಿಳೆ ಟ್ರಾಫಿಕ್​ ಕ್ರಾಸಿಂಗ್​ಗಾಗಿ ನಿಂತಿರುವುದು ಗೂಗಲ್​ ಸ್ಟ್ರೀಟ್​ ವ್ಯೂನಲ್ಲಿ ಚೆನ್ನಾಗಿ ಕಾಣಿಸಿದೆ.


    ಆದರೆ 9 ವರ್ಷಗಳ ನಂತರ, 41 ವರ್ಷದ ಈ ಮಹಿಳೆ ಮತ್ತೆ ಅದೇ ಸ್ಥಳದಲ್ಲಿ ಟ್ರಾಫಿಕ್​ ಕ್ರಾಸಿಂಗ್​ಗೆ ಕಾಯುವುದು ಗೂಗಲ್​ ಸ್ಟ್ರೀಟ್​ ವ್ಯೂನಲ್ಲಿ ಕಾಣಿಸಿದೆ. ಆಗಸ್ಟ್​ 2018ರಲ್ಲಿ ಒಂದೇ ಶೈಲಿಯ ಎರಡು ಬ್ಯಾಗ್​​ ಹಿಡಿದಿರುವ ದೃಶ್ಯ ಚೆನ್ನಾಗಿ ಕಾಣಿಸಿದೆ.


    ಇದನ್ನೂ ಓದಿ: Adipurush Teaser ಕಾರ್ಟೂನ್ ಥರ​ ಇದ್ಯಂತೆ, ಗ್ರಾಫಿಕ್ಸ್ ಕಂಡು ಗೇಲಿ ಮಾಡಿದ ನೆಟ್ಟಿಗರು!


    ಅವಳ ಹಿಂದೆ ಅಂಗಡಿಯ ಗಾಜಿನ ಪ್ರದರ್ಶನ ಮತ್ತು ಪಕ್ಕದ ಪಾದಚಾರಿ ಮಾರ್ಗದ ಕೆಲವು ಚಿಹ್ನೆಗಳನ್ನು ಹೊರತುಪಡಿಸಿ, ಕಳೆದ ದಶಕದಲ್ಲಿ ಮಾರ್ಪಡಿಸಲಾದ ಎಲ್ಲವು ಗಮನಾರ್ಹವಾಗಿ ಹೋಲುತ್ತವೆ.


    ಇದನ್ನೂ ಓದಿ: Ayudha Puja: ನವರಾತ್ರಿಯ ನವಮಿಯಂದು ಆಯುಧ ಪೂಜೆ ಸಂಭ್ರಮ


    ಲಿಯಾನ್ನೆ ಪತಿ, ರಿಚರ್ಡ್ ಕಾರ್ಟ್‌ರೈಟ್, ಆಕೆ ಬ್ಯಾಗ್​ ಹಿಡಿದುಕೊಂಡು ಕಾರ್ಲಿಸ್​ಗೆಯಲ್ಲಿ ರಸ್ತೆಯನ್ನು ದಾಟಲು ನಿಂತಿರುವ Google ನಕ್ಷೆಗಳ ಚಿತ್ರವನ್ನು ತೋರಿಸಿದರು.ಆದರೆ ಒಂಬತ್ತು ವರ್ಷಗಳ ನಂತರ, ಅದೇ ಲಿಯಾನ್ನೆ ಮತ್ತೆ ಅದೇ ಸ್ಥಳದಲ್ಲಿ ಕಾಣಿಸಿಕೊಂಡಿರುವುದನನ್ನು ನೋಡಿ ಅಬ್ಬರಿಗೊಂಡರು.


    ಈ ಬಗ್ಗೆ ಮಾತನಾಡಿದ ಲಿಯಾನ್ನೆ "ಜನರು ಬಹುಶಃ ನನನ್ನು ಸಮಯ ಪ್ರಯಾಣಿಕ ಎಂದು ಭಾವಿಸುತ್ತಾರೆ. ಸುಮಾರು ಒಂದು ದಶಕದ ನಂತರ ಅವರು ಅದೇ ಸ್ಥಳದಲ್ಲಿ ಸೆರೆಸಿಕ್ಕ ವಿಶ್ವದ ಏಕೈಕ ವ್ಯಕ್ತಿ ನಾನು ಆಗಿರಬಹುದು. ನಾನು ಕಾರನ್ನು ಮೊದಲ ಬಾರಿಗೆ ನೋಡಿದೆ, ಹಾಗಾಗಿ ಅದು ಯಾವಾಗ ಪ್ರಕಟವಾಯಿತು ಎಂಬುದು ಗೊತ್ತಾಗಲಿಲ್ಲ. ಎಲ್ಲರೂ ಇದು ತುಂಬಾ ತಮಾಷೆಯೆಂದು ಭಾವಿಸಿದ್ದಾರೆ." ಎಂದು ಹೇಳಿದ್ದಾರೆ

    Published by:Harshith AS
    First published: