ಅಪಾಯ ಎಲ್ಲಿ ಹೇಗಿರುತ್ತದೆ ಎನ್ನುವುದನ್ನು ಹೇಳುವುದಕ್ಕೇ ಸಾಧ್ಯವಿಲ್ಲ. ಹಳೆಯದ್ದೊಂದು ಕಥೆ ನೆನಪಿದೆಯಾ? ಮರದಿಂದ ಬಿದ್ದ ಸಾಯುತ್ತೀ (Death) ಎಂದು ಭವಿಷ್ಯ ತಿಳಿದು ವ್ಯಕ್ತಿಯೊಬ್ಬ ಮನೆಯೊಳಗೆಯೇ ಹೆದರಿ ಕುಳಿತ. ಆದರೂ ಸಾವನ್ನಪ್ಪಿದ. ಹೇಗೆ ಗೊತ್ತೇ? ಆತ ಕುಳಿತಿದ್ದ ಮಣೆ ಮರದ್ದಾಗಿತ್ತು (Tree). ಹೀಗೆ ಕೆಲವೊಂದು ಸಂಗತಿಗಳನ್ನು ನಾವು ಬದಲಾಯಿಸಲಾರೆವು. ಬಹಳಷ್ಟು ವಿಷಯಗಳು ಮನುಷ್ಯನ ನಿಯಂತ್ರಣವನ್ನು (Control) ಮೀರಿದ ವಿಚಾರಗಳು. ತೀರ ಅನಿರೀಕ್ಷಿತ ಅಥವಾ ಹೀಗೂ ಆಗುತ್ತಾ ಎಂದು ಅಚ್ಚರಿಪಡುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಮೊಮೋಸ್ (Momos) ತಿಂದು ಸಾವನ್ನಪ್ಪಿದ್ದಂತೆ ಅಪಾಯ, ಅಪಘಾತಗಳು (Accident) ಹೇಳಿ ಸಂಭವಿಸುವುದಿಲ್ಲ, ಸಂಭವಿಸಿದ ಮೇಲೆ ಓಹ್ ಹೀಗೂ ಅಪಾಯ (Danger) ಆಗೋ ಸಾಧ್ಯತೆ ಇದೆ ಎಂದು ಅರಿವಾಗುತ್ತದೆ ಅಷ್ಟೆ.
ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ಬೈಕ್‌ನಿಂದ ದೊಪ್ಪನೆ ರಸ್ತೆಗೆ ಬಿದ್ದರು. ಮಲೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆ ಹೋಗುವಾಗಲೇ ಬೀಳುತ್ತೆ ತೆಂಗಿನಕಾಯಿ
ಇಬ್ಬರು ವ್ಯಕ್ತಿಗಳೊಂದಿಗೆ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವ ಬೈಕ್‌ನೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ವೀಡಿಯೊದ ಕೆಲವು ಸೆಕೆಂಡುಗಳಲ್ಲಿ, ಹೆದ್ದಾರಿಯ ಬದಿಯಲ್ಲಿರುವ ಮರವೊಂದರಿಂದ ಬೃಹತ್ ತೆಂಗಿನಕಾಯಿ ಬೀಳುತ್ತದೆ.
ಬೈಕ್‌ನಿಂದ ಉರುಳಿ ರಸ್ತೆಗೆ ಬಿದ್ದ ಮಹಿಳೆ
ಬೈಕ್‌ನಲ್ಲಿ ಪಿಲಿಯನ್ ಸವಾರಿ ಮಾಡುತ್ತಿದ್ದ ಮಹಿಳೆಯ ಮೇಲೆ ತೆಂಗಿನಕಾಯಿ ಅಪಾಯಕಾರಿಯಾಗಿ ಬೀಳುತ್ತದೆ. ಅವಳು ವೇಗವಾಗಿ ಬಂದ ಬೈಕಿನ ಮೇಲೆ ಉರುಳಿ ರಸ್ತೆಗೆ ಬೀಳುತ್ತಾಳೆ. ಅದೃಷ್ಟವಶಾತ್, ಅವಳು ಹೆಲ್ಮೆಟ್ ಧರಿಸಿ ಕಾಣಿಸಿಕೊಂಡಿದ್ದು ಅದು ಬಿದ್ದಿದ್ದರ ಪರಿಣಾಮ ತಡೆದುಕೊಳ್ಳಲು ಸಹಾಯ ಮಾಡಿತು.
ತೆಂಗಿನ ಮರಗಳಿಗೆ ಬೀಳುತ್ತಾ ಕೊಡಲಿ?
ಈ ಘಟನೆಯನ್ನು ಮಲೇಷ್ಯಾ ಸಚಿವ ಅಜ್ರುಲ್ ಮಹತೀರ್ ಬಿನ್ ಅಜೀಜ್ ಕೂಡ ಹಂಚಿಕೊಂಡಿದ್ದಾರೆ. ಈ ರೀತಿಯ ಅಪಘಾತಗಳನ್ನು ತಪ್ಪಿಸಲು ಹೆದ್ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿರುವ ತೆಂಗಿನ ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಹೊಟ್ಟೆ ನೋವೆಂದು ಟಾಯ್ಲೆಟ್ಗೆ ಹೋದ ಯುವತಿಗೆ ಶಾಕ್; ಮಗುವಿಗೆ ಜನ್ಮ ನೀಡಿಯೇ ಬಿಟ್ಟಳು!
ಮಹಿಳೆಯ ಮಗಳು ತನ್ನ ತಾಯಿಯ ಸ್ಥಿತಿಯ ಬಗ್ಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸಂತ್ರಸ್ತೆ ನನ್ನ ತಾಯಿ. ಸಂತ್ರಸ್ತೆ ಕಡೆ ಓಡಿ ಹೋಗಿದ್ದು ನನ್ನ ತಂಗಿ, ದೇವರಿಗೆ ಧನ್ಯವಾದಗಳು. ಮಾಮಾ ಎಚ್ಚೆತ್ತುಕೊಂಡಿದ್ದಾರೆ. GH ಪೆನಾಂಗ್ ವಾರ್ಡ್‌ನಲ್ಲಿ ಇನ್ನೂ ಮೇಲ್ವಿಚಾರಣೆಯಲ್ಲಿದ್ದಾರೆ. ಸಂತ್ರಸ್ತೆ ಸ್ಥಿತಿಯು ತುಂಬಾ ಗಂಭೀರವಾಗಿದೆ ಎಂದಿದ್ದಾರೆ.
ಹೊಟ್ಟೆ ನೋವೆಂದು ಟಾಯ್ಲೆಟ್ಗೆ ಹೋಗಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ
ಯುನೈಟೆಡ್ ಕಿಂಗ್‌ಡಮ್‌ನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ರಾತ್ರಿ ಹೊರಡುವ ಮೊದಲು ಶೌಚಾಲಯಕ್ಕೆ ಹೋದಾಗ ಸಂಪೂರ್ಣವಾಗಿ ದಿಗ್ಭ್ರಮೆಗೊಂಡಿದ್ದಾರೆ. ಏಕಾಏಕಿ ಮಗುವಿಗೆ ಜನ್ಮ ನೀಡಿದ್ದಾರೆ. ತನ್ನ ಅನಿರೀಕ್ಷಿತ ಹೆರಿಗೆಯ ಮರುದಿನ 20 ನೇ ವರ್ಷಕ್ಕೆ ಕಾಲಿಟ್ಟ ಜೆಸ್ ಡೇವಿಸ್, ಎಂಬಾಕೆಗೆ ತಾನು ಗರ್ಭಿಣಿಯಾಗಿದ್ದಾಳೆಂದು ತಿಳಿದಿರಲಿಲ್ಲ. ಋತುಚಕ್ರದ ಕಾರಣದಿಂದ ತನಗೆ ಹೊಟ್ಟೆ ನೋವಾಗುತ್ತಿದೆ ಎಂದು ಡೇವಿಸ್ ಭಾವಿಸಿದ್ದಳು.
ಜೂನ್ 11 ರಂದು ತನ್ನ ಮಗನನ್ನು ಜಗತ್ತಿಗೆ ಸ್ವಾಗತಿಸಿದ ನಂತರ 20 ವರ್ಷ ವಯಸ್ಸಿನ ಡೇವಿಸ್ ತಾಯ್ತನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಈಕೆಗೆ ಗಂಡು ಮಗು ಜನಿಸಿದ್ದು, ಹುಟ್ಟಿದಾಗ ತೂಕ ಸುಮಾರು 3 ಕೆ.ಜಿ. ಇತ್ತು. ಅವನು ಜನಿಸಿದಾಗ ಅದು ನನ್ನ ಜೀವನದ ದೊಡ್ಡ ಆಘಾತವಾಗಿತ್ತು. ನಾನು ಮೊದಲು ಕನಸು ಕಾಣುತ್ತಿದ್ದೇನೆ ಎಂದು ನಾನು ಭಾವಿಸಿದೆ". "ಅವನು ಅಳುವುದನ್ನು ನಾನು ಕೇಳುವವರೆಗೂ ಏನಾಯಿತು ಎಂದು ನನಗೆ ತಿಳಿದಿರಲಿಲ್ಲ" ಎಂದು ಡೇವಿಸ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ