• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • 20 ವರ್ಷದವಳಿದ್ದಾಗ ಮಾರಾಟ ಮಾಡಿದ್ದ Roller Skates 60ರ ಪ್ರಾಯದಲ್ಲಿ ವಾಪಸ್ ಖರೀದಿಸಿ; ಅದು ಹೇಗೆ ಗೊತ್ತಾ?

20 ವರ್ಷದವಳಿದ್ದಾಗ ಮಾರಾಟ ಮಾಡಿದ್ದ Roller Skates 60ರ ಪ್ರಾಯದಲ್ಲಿ ವಾಪಸ್ ಖರೀದಿಸಿ; ಅದು ಹೇಗೆ ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಿಂಡ್ರೆಲ್ಲಾಳಂತೆ ಪಾದರಕ್ಷೆಗಳ ಕಾರಣದಿಂದ ಯಾರಾದರೂ ರಾಜಕುಮಾರನನ್ನು ಪಡೆದಿದ್ದಾರೆಯೇ ಎಂದು ಊಹಿಸಲು ಹೋಗಬೇಡಿ. ಈ ಸುದ್ದಿಯಲ್ಲಿರುವುದು ಪಾದರಕ್ಷೆಗಳಿಂದ ರಾಜಕುಮಾರ ಸಿಕ್ಕನೆಂಬ ಖುಷಿಯಲ್ಲ, ದೂರವಾಗಿದ್ದ ಅಚ್ಚುಮೆಚ್ಚಿನ ರೋಲರ್ ಸ್ಕೇಟ್‍ಗಳನ್ನು ಮತ್ತೆ ಪಡೆದ ಸಂತೋಷ. ಕೆನಡಾದ ರೆನೀ ಫಾರೆಸ್ಟಾಲ್ ಎಂಬ ಮಹಿಳೆಯ ಕಥೆಯಿದು.

ಮುಂದೆ ಓದಿ ...
  • Share this:

ಬಾಲ್ಯದಲ್ಲಿ ನಾವು ಕೇಳಿದ ಸಿಂಡ್ರೆಲ್ಲಾಳ (Cinderella) ಕಥೆಯಲ್ಲಿ, ಪಾದರಕ್ಷೆಗಳು ಅವಳಿಂದ ದೂರವಾಗಿ, ಮತ್ತೆ ಅವಳನ್ನು ಸೇರಿದಾಗ ಅವಳ ಜೀವನದ ದಿಕ್ಕೇ ಬದಲಾಗುತ್ತದೆ, ಸಿಂಡ್ರೆಲ್ಲಾಳ ಜೀವನದ ಅತ್ಯಂತ ಸಂತಸದ ಕ್ಷಣವದು. ಸಿಂಡ್ರೆಲ್ಲಾಳ ಕಥೆ ಈಗೇಕೆ ಎನ್ನುತ್ತೀರಾ? ಇಲ್ಲೊಂದು ಅಂತದ್ದೇ ಸುದ್ದಿ ಇದೆ. ಹಾಗಂತ, ಸಿಂಡ್ರೆಲ್ಲಾಳಂತೆ ಪಾದರಕ್ಷೆಗಳ (Footwear) ಕಾರಣದಿಂದ ಯಾರಾದರೂ ರಾಜಕುಮಾರನನ್ನು ಪಡೆದಿದ್ದಾರೆಯೇ ಎಂದು ಊಹಿಸಲು ಹೋಗಬೇಡಿ. ಈ ಸುದ್ದಿಯಲ್ಲಿರುವುದು ಪಾದರಕ್ಷೆಗಳಿಂದ ರಾಜಕುಮಾರ ಸಿಕ್ಕನೆಂಬ ಖುಷಿಯಲ್ಲ, ದೂರವಾಗಿದ್ದ ಅಚ್ಚುಮೆಚ್ಚಿನ ರೋಲರ್ ಸ್ಕೇಟ್‍ಗಳನ್ನು (Roller Skates) ಮತ್ತೆ ಪಡೆದ ಸಂತೋಷ. ಕೆನಡಾದ ರೆನೀ ಫಾರೆಸ್ಟಾಲ್ ಎಂಬ ಮಹಿಳೆಯ ಕಥೆಯಿದು.


ರೋಲರ್ ಸ್ಕೇಟ್‍ಗಳ ಮಾರಾಟ
ಆಕೆ ಹದಿಹರೆಯದ ಹುಡುಗಿಯಾಗಿದ್ದಾಗ ತಾಯಿ, ಬಿಳಿ ಬಣ್ಣದ ರೋಲರ್ ಸ್ಕೇಟ್‍ಗಳನ್ನು ಕೊಡಿಸಿದ್ದರು. ಹೈ ಸ್ಕೂಲ್ ಕಲಾ ಶಿಕ್ಷಕಿಯಾಗಿದ್ದ ಆಕೆ ವೈಯುಕ್ತಿಕವಾಗಿ ಕಷ್ಟಕರ ಸಮಯವನ್ನು ಕಳೆಯುತ್ತಿದ್ದ ದಿನಗಳವು. ಆಗ ಆಕೆ ರೋಲರ್ ಸ್ಕೇಟ್‍ಗಳನ್ನು ಜೊತೆಯೇ ಏಕಾಂಗಿಯಾಗಿ ಸಮಯವನ್ನು ಕಳೆಯುತ್ತಿದ್ದರಂತೆ. ನಂತರದ ದಿನಗಳಲ್ಲಿ ಆಕೆ ಆ ರೋಲರ್ ಸ್ಕೇಟ್‍ಗಳನ್ನು ಬೇರೆ ಯಾರಿಗೋ ಮಾರಾಟ ಮಾಡಿದ್ದರು ಮತ್ತು ಅವುಗಳನ್ನು ಮರೆತೇ ಬಿಟ್ಟಿದ್ದರು.


60 ನೇ ವಯಸ್ಸಿಗೆ ಕಾಲಿಡಲಿದ್ದಾಗ ಫಾರೆಸ್ಟಾಲ್‍ಗೆ ಮತ್ತೊಮ್ಮೆ ರೋಲರ್ ಸ್ಕೇಟಿಂಗ್ ಮಾಡುವ ಆಸೆ ಹುಟ್ಟಿತು. 60 ನೇ ವರ್ಷದ ಸಂಭ್ರಮವನ್ನು ರೋಲರ್ ಸ್ಕೇಟಿಂಗ್ ಮೂಲಕ ಏಕೆ ಆಚರಿಸಬಾರದು ಎಂದು ಆಕೆ ಯೋಚಿಸಿದರು. ರೋಲರ್ ಸ್ಕೇಟಿಂಗ್ ಆಸೆ ಹುಟ್ಟಿದ್ದೇ ತಡ, ರೆನೀ ಫಾರೆಸ್ಟಾಲ್ ಕೂಡಲೇ ಆಧುನಿಕ ರೋಲರ್ ಸ್ಕೇಟ್ ಜೋಡಿಯನ್ನು ಖರೀದಿಸಿ ತಂದರು.


40 ವರ್ಷಗಳ ಹಿಂದೆ ಮಾರಾಟ ಮಾಡಿದ್ದ ಸ್ಕೇಟ್‍ಗಳು ವಾಪಾಸ್ ಪಡೆದುಕೊಂಡ ಫಾರೆಸ್ಟಲ್
ಆದರೆ, ಹೊಸ ರೋಲರ್ ಸ್ಕೇಟ್‍ಗಳು ಆಕೆಯ ಕಾಲಿಗೆ ಫಿಟ್ ಆಗಲಿಲ್ಲ. ಹಾಗಾಗಿ, ಆಕೆಯ ಆನ್‍ಲೈನ್‍ನಲ್ಲಿ ಹಳೆಯ ಜೋಡಿಗಳೇನಾದರೂ ಸಿಗುತ್ತವೆಯೇ ಎಂದು ಹುಡುಕಾಟ ಆರಂಭಿಸಿದರು. ತನ್ನ 60ನೇ ಹುಟ್ಟು ಹಬ್ಬಕ್ಕೆ ಮುನ್ನವೇ, ಫೇಸ್‍ಬುಕ್ ಪುಟವೊಂದರಲ್ಲಿ ಹಳೆಯ ಸ್ಕೇಟ್‍ಗಳು ಮಾರಾಟಕ್ಕೆ ಇರುವ ಜಾಹಿರಾತೊಂದು ಆಕೆಯ ಗಮನಕ್ಕೆ ಬಂತು.


ಇದನ್ನೂ ಓದಿ: Viral Video: ಶಾಲಾ ಸಮಾರಂಭದಲ್ಲಿ ಮಗನಿಗೆ ಸರ್ಪ್ರೈಸ್ ಕೊಟ್ಟ ತಂದೆ; ಇವರಿಬ್ಬರ ಬಾಂಧವ್ಯಕ್ಕೆ ಭಾವುಕರಾದ ನೆಟ್ಟಿಗರು


ಜೇಮ್ಸ್ ಬಾಂಡ್ ಎಂಬ ಹೆಸರಿನ ವ್ಯಕ್ತಿಯೊಬ್ಬರು, 40 ಡಾಲರ್‍ಗೆ ವಿಂಟೆಜ್ ಸ್ಕೇಟ್‍ಗಳು ಮಾರಾಟಕ್ಕೆ ಇರುವ ಬಗ್ಗೆ ಉಲ್ಲೇಖಿಸಿದ್ದರು. ಅದು ಅತ್ಯಂತ ಹಳೆಯ ಸ್ಕೇಟ್‍ಗಳಾಗಿದ್ದ ಕಾರಣ, ಬಾಂಡ್‍ಗೆ ಅದರ ಗಾತ್ರವೆಷ್ಟು ಎಂಬುವುದನ್ನು ಓದಲು ಸಾಧ್ಯವಾಗಿರಲಿಲ್ಲ, ಹಾಗಾಗಿ, ಅದು 10 ಇಂಚು ಅಳತೆ ಇದೆ ಎಂದಷ್ಟೆ ಬರೆದಿದ್ದರು. ರೆನಿ ಫಾರೆಸ್ಟಲ್‍ನ ಪಾದಗಳ ಅಳತೆಯೂ ಕೂಡ ಅಷ್ಟೇ ಇತ್ತು.


ಎರಡು ದಿನ ಬಿಟ್ಟು, ಫಾರೆಸ್ಟಲ್ ಆ ಸ್ಕೇಟ್‍ಗಳನ್ನು ಖರೀದಿಸಲು ಬಾಂಡ್‍ನ ಮನೆಗೆ ಹೋದರು. ಅದನ್ನು ಧರಿಸಿ ನೋಡಿದಾಗ ಅವರಿಗೆ ಅಚ್ಚರಿ ಕಾದಿತ್ತು. ಏಕೆಂದರೆ, ಅವುಗಳು ಆಕೆಯ ಕಾಲಿಗೆ ಸರಿಯಾಗಿ ಫಿಟ್ ಆಗುತ್ತಿದ್ದವು. ಅದಕ್ಕೂ ದೊಡ್ಡ ಅಚ್ಚರಿಯ ಸಂಗತಿ ಏನು ಗೊತ್ತೆ? ಅವು 40 ವರ್ಷಗಳ ಹಿಂದೆ ಫಾರೆಸ್ಟಾಲ್ ಮಾರಿದ್ದ ಸ್ವಂತ ಸ್ಕೇಟ್‍ಗಳಾಗಿದ್ದವು.


ಈ ಬಗ್ಗೆ ಫಾರೆಸ್ಟಾಲ್ ಮಾಧ್ಯಮಕ್ಕೆ ಹೇಳಿದ್ದೇನು ಗೊತ್ತಾ?
ಅಚ್ಚರಿಗೊಂಡ ಫಾರೆಸ್ಟಾಲ್, ಸ್ಕೇಟ್‍ನ ಟಂಗ್‍ನ ಹಿಂಭಾಗವನ್ನು ಎಳೆದು ನೋಡಿದರು, ಅದರಲ್ಲಿ ಆಕೆಯ ಹೆಸರು ಬರೆದಿತ್ತು! “ಆ ವ್ಯಕ್ತಿ (ಬಾಂಡ್) ಅಲ್ಲಿ ನಿಂತಿದ್ದರು ಮತ್ತು ನಾನು ಅವನನ್ನು ನೋಡಿದಾಗ ಹಾಗೂ ನನ್ನ ಹೆಸರನ್ನು ಕಂಡಾಗ, ನನ್ನ ಕಣ್ಣುಗಳು ತುಂಬಿಕೊಂಡವು, ಕಾರಣ ಜೀವನದ ಹಿಂದಿನ ದಿನಗಳು ಅಕ್ಷರಶಃ ನನ್ನ ಕಣ್ಣ ಮುಂದೆ ಬಂದಂತಾಗಿತ್ತು” ಎಂದು ಫಾರೆಸ್ಟಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.


ಸ್ಕೇಟರನ್ನು ಗುರುತು ಹಚ್ಚಲು ಸಹಾಯ ಮಾಡಿದ್ದೆ ಆ ಹೆಸರು
ಫಾರೆಸ್ಟಲ್ ಆ ಸ್ಕೇಟ್‍ಗಳನ್ನು ಖರೀದಿಸಿ ಮನೆಗೆ ತಂದರು. ಫಾರೆಸ್ಟಾಲ್ ಪಾಲಿಗೆ ಜೀವನದಿಂದ ದೂರವಾಗಿದ್ದ ಸ್ಕೇಟ್‍ಗಳು ಮತ್ತೆ ದೊರಕಿದ್ದು ನಿಜಕ್ಕೂ ಭಾವನಾತ್ಮಕ ಕ್ಷಣವಾಗಿತ್ತು. ಫಾರೆಸ್ಟಾಲ್ ಅವರದ್ದು ದೊಡ್ಡ ಕುಟುಂಬವಾಗಿದ್ದ ಕಾರಣ, ಮಕ್ಕಳ ನಡುವೆ ವಸ್ತುಗಳಿಗಾಗಿ ಜಗಳ ನಡೆಯದಂತೆ ತಡೆಯಲು ತಮ್ಮ ತಮ್ಮ ವಸ್ತುಗಳ ಮೇಲೆ ಹೆಸರನ್ನು ಬರೆದಿಡಬೇಕು ಎಂದು ಆಕೆಯ ತಂದೆ ಸೂಚಿಸಿದ್ದರು. ಫಾರೆಸ್ಟಾಲ್ ಕೂಡ ಅದನ್ನೇ ಮಾಡಿದ್ದರು. ಆಕೆಯ ಅಂದು ಮಾಡಿದ ಆ ಕೆಲಸ 40 ವರ್ಷಗಳ ಬಳಿಕ ತನ್ನ ಸ್ಕೇಟರನ್ನು ಗುರುತು ಹಚ್ಚಲು ಸಹಾಯ ಮಾಡಿದೆ.


ಇದನ್ನೂ ಓದಿ: Viral Video: ಹೆಂಡತಿಯರು ಕೊಟ್ಟ ಗಿಫ್ಟ್​ಗೆ ಗಂಡಂದಿರು ಫಿದಾ! ಸೂಪರ್ ಆಗಿತ್ತು ಸರ್ಪೈಸ್


ಫಾರೆಸ್ಟಾಲ್ ಆ ಸ್ಕೇಟ್‍ಗಳನ್ನು ಸ್ವಚ್ಛ ಮಾಡಿದ್ದಾರೆ, ಅವುಗಳಿಗೆ ಮ್ಯಾಚ್ ಆಗುವಂತಹ ಲೇಸ್‍ಗಳನ್ನು ಮತ್ತು ಕೆಂಪು ಚಕ್ರಗಳನ್ನು ಖರೀದಿಸಿದ್ದಾರೆ. ಈ ಬೇಸಿಗೆಯಲ್ಲಿ ಅವುಗಳನ್ನು ಧರಿಸಿ ಸ್ನೇಹಿತರ ಜೊತೆ ಸ್ಕೇಟಿಂಗ್ ಮಾಡುವ ಆಸೆ ಅವರದ್ದು.

top videos
    First published: