ಪ್ರತಿಯೊಬ್ಬರ ಜೀವನದಲ್ಲೂ (Life) ಪ್ರೀತಿ ಎಂಬ ಎರಡೂವರೆ ಅಕ್ಷರಗಳ ಪದ ಮನಸ್ಸಿನ ಮೇಲೆ ನೋವು ಮತ್ತು ನಲಿವುಗಳ ಛಾಪನ್ನು ಬಿಟ್ಟು ಹೋಗಿರುತ್ತದೆ ಅಂತ ಹೇಳಿದರೆ ಸುಳ್ಳಲ್ಲ. ಹೌದು, ಪ್ರೀತಿಯ ಭಾವನೆಗಳನ್ನ ಪ್ರೀತಿ ಮಾಡುವವರ ಜೊತೆಗೆ ಹಂಚಿಕೊಳ್ಳುವುದೇ ಒಂದು ಖುಷಿ. ಈ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಈಗೆಲ್ಲಾ ತುಂಬಾನೇ ದಾರಿಗಳಿವೆ, ಆದರೆ ಸ್ವಲ್ಪ ಮೂವತ್ತು ವರ್ಷ ಹಿಂದೆ ಹೋದರೆ ಅವಾಗೆಲ್ಲಾ ಜನರು (People) ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುವುದಕ್ಕೆ ಇದ್ದುದ್ದು ಕೇವಲ ಎರಡೇ ಎರಡು ಮಾರ್ಗಗಳು ಅಂತ ಹೇಳಬಹುದು. ಒಂದು ತಮ್ಮ ಪ್ರಿಯಕರ ಅಥವಾ ಪ್ರಿಯತಮೆಗೆ ಪ್ರೇಮ ಪತ್ರಗಳನ್ನು ಬರೆದು ತಮ್ಮ ಪ್ರೀತಿಯ ಭಾವನೆಯನ್ನು ಅವರೊಂದಿಗೆ ಹಂಚಿಕೊಳ್ಳುವುದು ಮತ್ತು ಎರಡನೆಯ ದಾರಿ ಎದೆ ಗುಂಡಿಗೆ ಗಟ್ಟಿ ಮಾಡಿಕೊಂಡು ಹೋಗಿ ಪ್ರೀತಿಸಿದವರ ಎದುರು ನಿಂತು ‘ಐ ಲವ್ ಯು’ (I Love You) ಅಂತ ಹೇಳೋದು.
ಆಗೆಲ್ಲಾ ಈಗಿನ ಹಾಗೆ ಸಾಮಾಜಿಕ ಮಾಧ್ಯಮಗಳು ಇರಲಿಲ್ಲ ಮತ್ತು ಮೆಸೇಜಿಂಗ್ ಅಪ್ಲಿಕೇಷನ್ ಗಳು ಸಹ ಇರಲಿಲ್ಲ ಅಂತ ಹೇಳಬಹುದು. ಅದೆಲ್ಲಾ ಏಕೆ ಮೊಬೈಲ್ ಫೋನ್ ಗಳು ಈಗಿನ ತರಹ ‘ಸ್ಮಾರ್ಟ್’ ಫೋನ್ ಗಳಾಗಿರಲಿಲ್ಲ ಅಂತ ಹೇಳಬಹುದು.
ಆಗೆಲ್ಲಾ ಪ್ರೇಮಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಪರಸ್ಪರರ ಯೋಗಕ್ಷೇಮವನ್ನು ತಿಳಿಯಲು ಈ ಪತ್ರಗಳೇ ಸಹಾಯ ಮಾಡುತ್ತಿದ್ದವು. ಹೀಗೆ ಕೆಲವೊಬ್ಬರು ತಮ್ಮ ಪ್ರೇಮಿಗೆ ಬರೆದ ಪತ್ರಗಳನ್ನು ಇನ್ನೂ ಸಹ ಜೋಪಾನವಾಗಿ ಇಟ್ಟುಕೊಂಡಿರುತ್ತಾರೆ ಅಂತ ಹೇಳಬಹುದು. ಇದೆಲ್ಲಾ ಈಗೇಕೆ ಮಾತಾಡ್ತಾ ಇದೀವಿ ಅಂತ ನಿಮಗೆ ಅನ್ನಿಸಬಹುದು.
ತನ್ನ ಪತಿ ತನಗೆ ಬರೆದ ಹಳೆಯ ಪ್ರೇಮ ಪತ್ರ ಈಗ ಮತ್ತೆ ಸಿಕ್ಕಿದೆಯಂತೆ..
ಇಲ್ಲೊಬ್ಬ ಮಹಿಳೆಗೆ ತನ್ನ ಪತಿರಾಯ ತನ್ನನ್ನು ಪ್ರೀತಿಸುತ್ತಿದ್ದ ಸಮಯದಲ್ಲಿ ಬರೆದ ಪ್ರೇಮ ಪತ್ರವೊಂದು ಈಗ ಮತ್ತೆ ಕೈಗೆ ಸಿಕ್ಕಿದೆಯಂತೆ ನೋಡಿ. ಗಂಡ ಕಾಲೇಜಿನಲ್ಲಿ ಓದುತ್ತಿರುವಾಗ ಆಕೆಗೆ ಪ್ರೇಮ ಪತ್ರ ಬರೆದಿದ್ದಾನೆ.
ಅದಾದ 18 ವರ್ಷಗಳ ನಂತರ, ಅವನು ಆಕೆಗೆ ಬರೆದ ಪ್ರೇಮ ಪತ್ರವೊಂದನ್ನು ಮತ್ತೆ ಕಂಡುಕೊಂಡಿದ್ದಾಳೆ ಮತ್ತು ಅವುಗಳಲ್ಲಿ ಒಂದನ್ನು ಟ್ವಿಟರ್ ನಲ್ಲಿ ಸಹ ಹಂಚಿಕೊಂಡಿದ್ದಾಳೆ ನೋಡಿ.
ಇದನ್ನೂ ಓದಿ: ಅಯ್ಯಬ್ಬಾ, ಇದು ಸಾಮಾನ್ಯದ ಮೀನಲ್ಲ; ಬಿಟ್ರೆ ರಕ್ತವನ್ನೇ ಹೀರುತ್ತಂತೆ!
ಇದಲ್ಲದೆ, ಈ ಪ್ರೇಮ ಪತ್ರದಲ್ಲಿ ಅವರು ಕೆಲಸ ಮಾಡುತ್ತಿದ್ದ ಪ್ರಯೋಗದ ವಿವರವಾದ ರೇಖಾಚಿತ್ರವಿದೆ. ಈ ಅಸಾಮಾನ್ಯ ಪ್ರೇಮ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರ ಗಮನವನ್ನು ಸೆಳೆಯಿತು ಮತ್ತು ಜನರಿಂದ ಹಲವಾರು ಪ್ರತಿಕ್ರಿಯೆಗಳನ್ನು ಸಹ ಪಡೆಯಿತು.
"ನಿನ್ನೆ ನಾನು ಮನೆಯಲ್ಲಿ ಕೆಲವು ಹಳೆಯ ವಸ್ತುಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ, ನಮ್ಮ ಯಜಮಾನ್ರು ಅಯ್ಯರ್ ಅವರು ಸುಮಾರು 18 ವರ್ಷಗಳ ಹಿಂದೆ ನನಗೆ ಬರೆದ ಕೆಲವು ಹಳೆಯ ಪ್ರೇಮ ಪತ್ರಗಳನ್ನು ಮತ್ತೆ ಕಂಡುಕೊಂಡೆ.
ಆದರೆ ತಮ್ಮ ಗೆಳತಿಗೆ ಬರೆದ ಪತ್ರಗಳಲ್ಲಿ ತಾವು ಮಾಡುತ್ತಿರುವ ಪ್ರಯೋಗದ ಬಗ್ಗೆ ರೇಖಾಚಿತ್ರಗಳೊಂದಿಗೆ ಯಾರು ವಿವರಿಸುತ್ತಾರೆ ನೀವೇ ಹೇಳಿ? ಇದಕ್ಕೆ ಅನ್ಸುತ್ತೆ ನಾನು ಈ ವ್ಯಕ್ತಿಯನ್ನು ಪ್ರೀತಿ ಮಾಡಿದ್ದು" ಎಂದು ಟ್ವಿಟರ್ ಬಳಕೆದಾರರಾದ ಸಾಯಿಸ್ವರೂಪ ಅವರು ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಈ ಪೋಸ್ಟ್ ಗೆ ಶೀರ್ಷಿಕೆಯೊಂದನ್ನು ಬರೆದಿದ್ದಾರೆ.
ಆ ಪ್ರೇಮ ಪತ್ರದಲ್ಲಿ ಏನೆಲ್ಲಾ ಬರೆದಿದ್ರು ಗೊತ್ತೇ?
ಪ್ರಯೋಗಾತ್ಮಕ ಸ್ಥಳಕ್ಕೆ ಹೋಗಲು ಅವರಿಗೆ ತಮ್ಮ ಗುಂಪಿನ ಸಹವರ್ತಿಗಳಲ್ಲಿ ಒಬ್ಬರ ವಿನಂತಿಯನ್ನು ನಿರಾಕರಿಸಲು ಸಾಧ್ಯವಾಗಲಿಲ್ಲವಂತೆ ಅನ್ನೋದರಿಂದ ಈ ಪತ್ರವು ಪ್ರಾರಂಭವಾಗಿತ್ತು.
Was cleaning up some old stuff yday when I rediscovered some old hand written letters that Mr Iyer had written to me some 18.5 years ago.
But who writes about lab experiments along with detailed diagrams in letters to their girl friend?
(Yeah I said yes to this guy 😍) pic.twitter.com/OSzWejrB4p
— Saiswaroopa (@Sai_swaroopa) April 3, 2023
ಅವರು 25 ಕೆಜಿ ಟ್ರಕ್ ಬ್ಯಾಟರಿಯನ್ನು ಎತ್ತುವಾಗ ಬೆನ್ನು ಉಳುಕಿಸಿಕೊಂಡಿದ್ದು ಅದೇ ಪ್ರಯೋಗದಿಂದ ಅಂತ ಅವರು ಆ ಪತ್ರದಲ್ಲಿ ಬರೆದಿದ್ರು ಅಂತ ಅವರು ಹೇಳುತ್ತಾರೆ. ನಂತರ ಅವರು ಆ ಪತ್ರಕ್ಕೆ 'ಪ್ರಯೋಗ' ಅಂತ ಶೀರ್ಷಿಕೆ ಬೇರೆ ಕೊಟ್ಟಿದ್ರು ಅಂತ ಹೇಳ್ತಾರೆ ಸಾಯಿಸ್ವರೂಪ.
ಇದನ್ನೂ ಓದಿ: ಜನರನ್ನು ಕಂಡರೆ ಕೂಗುತ್ತಾರೆ, ಓಡಿ ಹೋಗುತ್ತಾರೆ ಸಹೋದರರು, ಈ ಸಮಸ್ಯೆಗೆ ಕಾರಣ ಏನು?
ಶೇರ್ ಮಾಡಿದಾಗಿನಿಂದ, ಈ ಪೋಸ್ಟ್ ಮೂರು ಲಕ್ಷ ವೀಕ್ಷಣೆಗಳನ್ನು ಪಡೆದಿದೆ ಮತ್ತು 2,420ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ.
ಈ ಪ್ರೇಮ ಪತ್ರ ನೋಡಿ ಏನಂದ್ರು ಗೊತ್ತಾ ನೆಟ್ಟಿಗರು?
"ತುಂಬಾನೇ ಸುಂದರವಾಗಿದೆ ಆದರೆ ಇಂಗ್ಲೀಷ್ ನಲ್ಲಿ ಪತ್ರ ಬರೆದಿದ್ದಾರೆ, ನಿಮ್ಮ ಸ್ಥಳೀಯ ಭಾಷೆಯಲ್ಲಿ ಅಲ್ಲ ಎಂಬುದು ಆಶ್ಚರ್ಯದ ಸಂಗತಿ" ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಇದಕ್ಕೆ ಉತ್ತರಿಸಿದ ಸಾಯಿಸ್ವರೂಪ, "ನಾನು ತೆಲುಗು ಮತ್ತು ಅವರು ತಮಿಳು. ಆದ್ದರಿಂದ, ಇಂಗ್ಲಿಷ್ ನಲ್ಲಿ ಬರೆದಿದ್ದಾರೆ ಎಂದು ಹೇಳಿದರು.
“ಪತ್ರದಲ್ಲಿನ ನಿಮ್ಮ ಸಂಭಾಷಣೆಗಳು ತುಂಬಾನೇ ಆಸಕ್ತಿದಾಯಕವಾಗಿವೆ" ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಓಹ್, ಈ ಪತ್ರ ಅಂತೂ ತುಂಬಾನೇ ಮುದ್ದಾಗಿ ಬರೆದಿದ್ದಾರೆ" ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ