Viral Video: ನೆಟ್ಟಿಗರನ್ನು ಒಂದು ಕ್ಷಣ ದಿಗ್ಭ್ರಮೆಗೊಳಿಸಿದ ಕರಡಿ ವಿಡಿಯೋ

ಈ ವೀಡಿಯೋ ತುಣುಕನ್ನು ಇದುವರೆಗೂ 4,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು ಮತ್ತು ಅನೇಕರನ್ನು ದಿಗ್ಭ್ರಮೆಗೊಳಿಸಿದೆ ಎಂದು ಹೇಳಬಹುದು. ನಾವು ಕರಡಿ ಭಾಷೆಯಲ್ಲಿ ಪರಿಣತರಲ್ಲ, ಆದರೆ ಬಹುಶಃ ಈ ಕರಡಿ ಅತ್ಯಂತ ವಿಧೇಯವಾಗಿತ್ತು ಎಂದು ಕಾಣುತ್ತದೆ

ಕರಡಿ

ಕರಡಿ

  • Share this:

ಈಗಂತೂ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅನೇಕ ಸಾಕು ಪ್ರಾಣಿಗಳ (Pet Animals) ಮುದ್ದಾದ ಚೇಷ್ಟೆಗಳ ವೀಡಿಯೋ (Video Clips) ತುಣುಕುಗಳು ಹರಿದಾಡುತ್ತಿರುವುದನ್ನು ನಾವು ಪ್ರತಿದಿನ ನೋಡುತ್ತೇವೆ. ಮನಸ್ಸಿಗೆ ತುಂಬಾನೇ ಮುದವನ್ನು ನೀಡುವಂತಹ ವೀಡಿಯೋ ತುಣುಕುಗಳನ್ನು ಹೆಚ್ಚು ಜನರು ನೋಡಿ ಇಷ್ಟ ಪಟ್ಟ ನಂತರ ಅವುಗಳು ವೈರಲ್ ವೀಡಿಯೋ (Viral Video)ಗಳಾಗುತ್ತವೆ. ಇತ್ತೀಚೆಗೆ ಈ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು (Dog, Cats) ಹೀಗೆ ದೈತ್ಯ ಪ್ರಾಣಿಯಾದ ಆನೆ (Elephants) ಮತ್ತು ಭಯಾನಕ ಎಂದೆನಿಸುವ ನಾಗರಹಾವಿನ ಫೋಟೋಗಳು (Snake Video), ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಹರಿದಾಡುತ್ತಲೇ ಇರುತ್ತವೆ.


ಅರೇ ಈಗೇಕೆ ನಾವು ಪ್ರಾಣಿಗಳ ಬಗ್ಗೆ ಇಷ್ಟೊಂದು ಮಾತಾಡುತ್ತಿದ್ದೇವೆ ಎಂದು ನಿಮಗೆ ಪ್ರಶ್ನೆಯೊಂದು ಖಂಡಿತವಾಗಿಯೂ ಕಾಡುತ್ತಿರಬೇಕಲ್ಲವೇ? ಇಲ್ಲಿ ನಾವು ಹೇಳಲು ಹೊರಟಿರುವ ನಿಜವಾದ ಘಟನೆಯಲ್ಲಿ ಸಹ ಒಂದು ಪ್ರಾಣಿ ಇದೆ ಅದಕ್ಕೆ ಇಷ್ಟೆಲ್ಲಾ ಪೀಠಿಕೆ.


ಕೆಲವೊಂದು ಪ್ರಾಣಿಗಳಿಗೆ ಮನುಷ್ಯರು ಅವುಗಳಿಗೆ ಏನು ಹೇಳುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಉದಾಹರಣೆಗೆ ಸಾಕು ನಾಯಿಗೆ ನೀವು ಏನಾದರೂ ಹೇಳಿದರೆ ಅದಕ್ಕೆ ಅರ್ಥವಾಗುತ್ತದೆ ಮತ್ತು ಅದು ಪ್ರತಿಕ್ರಿಯಿಸುತ್ತದೆ. ಇಲ್ಲಿರುವ ಒಂದು ಕರಡಿಗೂ ಸಹ ಮನೆಯವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾದಂತೆ ತಿಳಿಯುತ್ತದೆ. ಆದರೆ ಅದು ಅವರ ಮಾತಿಗೆ ಸ್ವಲ್ಪ ತಡವಾಗಿ ಪ್ರತಿಕ್ರಿಯಿಸಿದೆ.


ಇದನ್ನೂ ಓದಿ: Mini Homes: ಬೆಂಕಿ ಪೊಟ್ಟಣದಷ್ಟು ಇರೋ ಪುಟಾಣಿ ಮನೆಯಲ್ಲಿವೆ ಎಲ್ಲ ಸೌಲಭ್ಯ: ಫೋಟೋಗಳಲ್ಲಿ ನೋಡಿ

ಮಹಿಳೆ ಮಾತು ಕೇಳಿದ ಕರಡಿ

ಮಹಿಳೆಯೊಬ್ಬಳು ತನ್ನ ಮನೆಯ ಬಾಗಿಲ ಬಳಿ ಬಂದು ನಿಂತುಕೊಂಡ ಕರಡಿಯೊಂದನ್ನು ತನ್ನ ಮನೆಯ ಬಾಗಿಲನ್ನು ಮುಚ್ಚಿ ನಿರ್ಗಮಿಸುವಂತೆ ಕರಡಿಯನ್ನು ನಯವಾಗಿ ಕೇಳಿದ ವೀಡಿಯೊ ಅಂತರ್ಜಾಲದಲ್ಲಿ ತುಂಬಾನೇ ವೈರಲ್ ಆಗಿದೆ. ಸೂಸನ್ ಕೆಹೋ ಅವರು ಯೂಟ್ಯೂಬ್ ನಲ್ಲಿ ಹಂಚಿಕೊಂಡಿರುವ ಈ ವೀಡಿಯೋ ತುಣುಕು ನೆಟ್ಟಿಗರನ್ನು ಒಂದು ಕ್ಷಣ ದಿಗ್ಭ್ರಮೆಗೊಳಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ನೀವು ನೋಡಿ ನಿಮಗೂ ಹಾಗೆ ಅನ್ನಿಸಬಹುದು.


ಇದನ್ನೂ ಓದಿ: Viral Video: ಆನೆ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡುವುದನ್ನು ನೋಡಿದ್ದೀರಾ? ಮಿಸ್​ ಮಾಡ್ಬೇಡಿ ನೋಡಿ

ಸೂಸನ್ ಅವರು ರೆಕಾರ್ಡ್ ಮಾಡಿದ ವೀಡಿಯೋದಲ್ಲಿ, ತನ್ನ ಮನೆಯ ಬಾಗಿಲನ್ನು ತೆರೆಯುತ್ತಾಳೆ. ಆಗ ಅಲ್ಲಿಯೇ ಒಂದು ದೊಡ್ಡ ಕಪ್ಪು ಕರಡಿ ಬಂದು ನಿಂತಿರುವುದನ್ನು ನೋಡಿ ಮಹಿಳೆಯು ಬಾಗಿಲಿನಿಂದ ಸ್ವಲ್ಪ ದೂರ ಹಿಂದಕ್ಕೆ ಸರಿದು ಸೂಸನ್ ನಯವಾಗಿ ಕರಡಿಯನ್ನು ಬಾಗಿಲು ಮುಚ್ಚಿ ಎಂದು ಕೇಳುತ್ತಾಳೆ.


ಬಾಗಿಲು ಮುಚ್ಚಿದ ಕರಡಿ

ತುಂಬಾ ಸಲ ನಯವಾಗಿ ಕೇಳಿಕೊಂಡ ಮಹಿಳೆಯ ವಿನಂತಿಗೆ ಕರಡಿ ನಿಧಾನವಾಗಿ ಒಳಗೆ ಬಂದು ಮನೆಯಲ್ಲಿ ಇಣುಕಿ ನೋಡುತ್ತದೆ. ಇದ್ದಕ್ಕಿದ್ದಂತೆ, ಅದು ಮಹಿಳೆಯ ಮಾತುಗಳನ್ನು ಕೇಳುತ್ತದೆ ಮತ್ತು ತನ್ನ ಬಾಯಿಯಿಂದ ಬಾಗಿಲಿನ ನಾಬ್ ಅನ್ನು ಎಳೆಯುತ್ತದೆ ಮತ್ತು ಬಾಗಿಲನ್ನು ಮುಚ್ಚುತ್ತದೆ.


ಇದು ರೀಲ್ ಅಲ್ಲ ರಿಯಲ್ ಘಟನೆ

ಆ ಬಾಗಿಲು ಚೆನ್ನಾಗಿ ಮುಚ್ಚಿರದ ಕಾರಣ, ಮಹಿಳೆಯು ಚೆನ್ನಾಗಿ ಮುಚ್ಚುವಂತೆ ಹೇಳುತ್ತಾರೆ. ಅದಕ್ಕೆ ಕರಡಿಯು ಚೆನ್ನಾಗಿ ಎಳೆದು ಮುಚ್ಚಿ ಹೋಗುತ್ತದೆ. ಇದನ್ನು ನೋಡಿದ ನಿಮಗೆ ತುಂಬಾನೇ ಆಶ್ಚರ್ಯವಾಗಬಹುದು. ಆದರೆ ಇದು ನಿಜವಾಗಿ ನಡೆದ ಘಟನೆಯ ವೀಡಿಯೋ ತುಣುಕು.




4 ಸಾವಿರಕ್ಕೂ ಅಧಿಕ ವ್ಯೂವ್ ಪಡೆದ ವಿಡಿಯೋ

ಈ ವೀಡಿಯೋ ತುಣುಕನ್ನು ಇದುವರೆಗೂ 4,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು ಮತ್ತು ಅನೇಕರನ್ನು ದಿಗ್ಭ್ರಮೆಗೊಳಿಸಿದೆ ಎಂದು ಹೇಳಬಹುದು. ನಾವು ಕರಡಿ ಭಾಷೆಯಲ್ಲಿ ಪರಿಣತರಲ್ಲ, ಆದರೆ ಬಹುಶಃ ಈ ಕರಡಿ ಅತ್ಯಂತ ವಿಧೇಯವಾಗಿತ್ತು ಎಂದು ಕಾಣುತ್ತದೆ ಮತ್ತು ಮಹಿಳೆಯ ಮಾತುಗಳನ್ನು ಆಲಿಸಿ ಸದ್ದಿಲ್ಲದೆ ಮನೆಯಿಂದ ಹೊರಟು ಹೋಗಿರಬಹುದು ಎಂದು ಹೇಳಿದ್ದಾರೆ.


Published by:Mahmadrafik K
First published: