Viral Video: ಟೈಟಾನಿಕ್​ನಂತೆಯೇ ಒಂದು ಸೀನ್, ಜೀವಕ್ಕಾಗಿ ಓಡುವವರ ಮಧ್ಯೆ ಪಿಯಾನೋ ನುಡಿಸುತ್ತಾ ಕುಳಿತ ಉಕ್ರೇನ್ ಯುವತಿ

ಯುದ್ಧ ಪೀಡಿತ ಉಕ್ರೇನ್​ನಲ್ಲಿ (Ukraine) ನಡೆದ ಘಟನೆಯ ವಿಡಿಯೋ ತುಣುಕೊಂದು ಎಲ್ಲೆಡೆ ವೈರಲ್ (Viral) ಆಗಿದ್ದು ನೆಟ್ಟಿಗರು ಮೂಕರಾಗಿ ಇದನ್ನು ನೋಡಿದ್ದಾರೆ. ಏನಿದೆ ಈ ವಿಡಿಯೋದಲ್ಲಿ (Video)? ಯಾಕಿಷ್ಟು ವೈರಲ್ ಆಯ್ತು?

ಉಕ್ರೇನ್ ವೈರಲ್ ವಿಡಿಯೋ

ಉಕ್ರೇನ್ ವೈರಲ್ ವಿಡಿಯೋ

  • Share this:
ಟೈಟಾನಿಕ್ ಸಿನಿಮಾದಲ್ಲಿ ಇನ್ನೇನು ಹಡಗು ಮುಳುಗುವ ಹೊತ್ತು ಲೈಫ್ ಜಾಕೆಟ್ ಹಿಡಿದು ಜನರೆಲ್ಲ ಆತಂಕದಿಂದ ಅತ್ತಿತ್ತ ಓಡುತ್ತಿರುವಾಗ ಹಡಗಿನಲ್ಲಿದ್ದ ಸಂಗೀತವಾದಕರ ತಂಡವೊಂದು ನಿರ್ಲಿಪ್ತವಾಗಿ ಎಲ್ಲವನ್ನೂ ನೋಡುತ್ತಾ, ಅಸಹಾಯಕರಾಗಿ ಪಿಯಾನೋ ನೋಡಿಸುವ ದೃಶ್ಯ ನೆನಪಿದೆಯಾ? ಎಷ್ಟೊಂದು ಭಾವುಕವಾಗಿ, ನಿರ್ವಿಕಾರವಾಗಿ ಕಾಣುವ ಅವರ ಮುಖದ ನಿರ್ಲಿಪ್ತತೆಯಲ್ಲೂ ಸಾವಿರ ಅರ್ಥ ಕಾಣಿಸುತ್ತದೆ. ಈಗ ಇಂತಹದ್ದೇ ಒಂದು ಸಂದರ್ಭದಲ್ಲಿ ನಡೆದ ಘಟನೆ ಸೋಷಿಯಲ್ ಮೀಡಿಯಾದಕ್ಕು ವೈರಲ್ ಆಗಿದೆ. ಯುದ್ಧ ಪೀಡಿತ ಉಕ್ರೇನ್​ನಲ್ಲಿ (Ukraine) ನಡೆದ ಘಟನೆಯ ವಿಡಿಯೋ ತುಣುಕೊಂದು ಎಲ್ಲೆಡೆ ವೈರಲ್ (Viral) ಆಗಿದ್ದು ನೆಟ್ಟಿಗರು ಮೂಕರಾಗಿ ಇದನ್ನು ನೋಡಿದ್ದಾರೆ. ಏನಿದೆ ಈ ವಿಡಿಯೋದಲ್ಲಿ (Video)? ಯಾಕಿಷ್ಟು ವೈರಲ್ ಆಯ್ತು?

ಉಕ್ರೇನ್‌ನ ರಷ್ಯಾದ (Russia) ಆಕ್ರಮಣದ ಮಧ್ಯೆ, ಯುದ್ಧ ಪೀಡಿತ ದೇಶದ ನಿವಾಸಿಗಳು ದಾಳಿಯಿಂದ ಪಾರಾಗಲು ಎಲ್ವಿವ್‌ನ ರೈಲ್ವೆ ನಿಲ್ದಾಣವನ್ನು (Railway Station) ಸೇರುತ್ತಿರುವಾಗ ಪಿಯಾನೋ ವಾದಕರೊಬ್ಬರು ವಾಟ್ ಎ ವಂಡರ್‌ಫುಲ್ ವರ್ಲ್ಡ್ (What a wonderful world) ನುಡಿಸುತ್ತಿರುವ ವೀಡಿಯೊ ವೈರಲ್ ಆಗಿದೆ.

ಈಕೆಗೆ ಯಾವ ಭಯವೂ ಇಲ್ಲ, ತಾರತುರಿಯೂ ಇಲ್ಲ

ಜನರು ನಿಲ್ದಾಣಕ್ಕೆ ಸೇರುತ್ತಿದ್ದಂತೆ, ಯುವತಿಯೊಬ್ಬಳು ಪಿಯಾನೋ ನುಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವಳು ಹಾಡನ್ನು ನುಡಿಸುತ್ತಿರುವಾಗ, ತಳ್ಳುಗಾಡಿಯಲ್ಲಿ ಮಗುವಿನೊಂದಿಗೆ ಮಹಿಳೆಯೊಬ್ಬರು ಅವಳ ಹಾಡು ಕೇಳಲು ನಿಲ್ಲಿಸುತ್ತಾರೆ. ಇನ್ನೊಬ್ಬರು ದೃಶ್ಯವನ್ನು ಸೆರೆಹಿಡಿಯುತ್ತಾರೆ, ನಗುತ್ತಾ ಮತ್ತು ವೀಡಿಯೊದಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಾರೆ.

2 ಮಿಲಿಯನ್​ಗೂ ಹೆಚ್ಚು ವೀಕ್ಷಣೆ

ರಾಯಿಟರ್ಸ್‌ನ ವಿಶೇಷ ವರದಿಗಾರ ಆಂಡ್ರ್ಯೂ ಆರ್‌ಸಿ ಮಾರ್ಷಲ್ ಅವರು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 41 ಸೆಕೆಂಡುಗಳ ಕ್ಲಿಪ್ ಅನ್ನು ಇಲ್ಲಿಯವರೆಗೆ 2 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ವೈರಲ್ ಆಯ್ತು ವಿಡಿಯೋ

"ಪೂರ್ವ ಉಕ್ರೇನ್‌ನಲ್ಲಿ ಯುದ್ಧದಿಂದ ಪಲಾಯನಗೈಯುತ್ತಿರುವ ದಣಿದ ನಿರಾಶ್ರಿತರಿಂದ ತುಂಬಿರುವ ಎಲ್ವಿವ್ ನಿಲ್ದಾಣದ ಹೊರಗೆ, ಒಬ್ಬ ನಿಪುಣೆ ಪಿಯಾನೋ ವಾದಕಿ "ವಾಟ್ ಎ ವಂಡರ್‌ಫುಲ್ ವರ್ಲ್ಡ್" ಅನ್ನು ನುಡಿಸುತ್ತಿದ್ದಾರೆ. ಇದು ಕಾಡುವಷ್ಟು ಸುಂದರವಾಗಿದೆ" ಎಂದು ಟ್ವೀಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಭಾವುಕರಾದ್ರು ನೆಟ್ಟಿಗರು

ಕ್ಲಿಪ್ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಪಿಯಾನೋ ವಾದಕಿಯ ವೀಡಿಯೊ ಸಂದರ್ಶನವಿದೆಯೇ ಎಂದು ನಾನು ಎದುರು ನೋಡುತ್ತಿದ್ದೇನೆ. ನಾನು ಅವಳನ್ನು ಸಂದರ್ಶಿಸಲು ಮತ್ತು ಚಾಟ್ ಮಾಡಲು ಇಷ್ಟಪಡುತ್ತೇನೆ" ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Ukraine ಅಧ್ಯಕ್ಷರ ಜೊತೆ ನೇರಾನೇರ ಮಾತನಾಡಿ ಬಿಡಿ: PM Modi ಒತ್ತಾಯಕ್ಕೆ ಮಣಿಯುತ್ತಾರಾ ಪುಟಿನ್?

ಈ ಹಾಡನ್ನು ಬಾಬ್ ಥಿಯೆಲ್ ಮತ್ತು ಜಾರ್ಜ್ ಡೇವಿಡ್ ವೈಸ್ ಬರೆದಿದ್ದಾರೆ. ಲೂಯಿಸ್ ಆರ್ಮ್‌ಸ್ಟ್ರಾಂಗ್ ಹಾಡಿದ್ದಾರೆ. ಇದು ವಾಟ್ ಎ ವಂಡರ್‌ಫುಲ್ ವರ್ಲ್ಡ್ 1967 ರಲ್ಲಿ ಬಿಡುಗಡೆಯಾಯಿತು. ಈ ಹಾಡು ವಿಯೆಟ್ನಾಂ ಯುದ್ಧದ ಸಮಯದಲ್ಲಿ ಬಿಡುಗಡೆಯಾದ ಗುಡ್ ಮಾರ್ನಿಂಗ್, ವಿಯೆಟ್ನಾಂ ಚಿತ್ರದಲ್ಲಿ ಕಾಣಿಸಿಕೊಂಡಿತು.

ಇದನ್ನೂ ಓದಿ: Viral News: ಜೀವ ಉಳಿಸೋದಕ್ಕಾಗಿ ಮೊದಲ ಬಾರಿ ಬಸ್ ಓಡಿಸಿದ ಮಹಿಳೆ, ಭೇಷ್ ಯೋಗಿತಾ ಎಂದ ನೆಟ್ಟಿಗರು

ರಷ್ಯಾದ ದಾಳಿಯು 11 ನೇ ದಿನವೂ ಮುಂದುವರೆದಿದ್ದು, ಉಕ್ರೇನ್ ಪಶ್ಚಿಮದಿಂದ ಹೆಚ್ಚಿನ ಸಹಾಯವನ್ನು ಕೋರಿರುವುದರಿಂದ ಉಕ್ರೇನ್‌ನಿಂದ ಪಲಾಯನ ಮಾಡುವ ನಿರಾಶ್ರಿತರ ಸಂಖ್ಯೆ 1.5 ಮಿಲಿಯನ್ ತಲುಪುವ ನಿರೀಕ್ಷೆಯಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ರಷ್ಯಾದ ಮುತ್ತಿಗೆಯಲ್ಲಿರುವ ದಕ್ಷಿಣದ ಎರಡು ನಗರಗಳಾದ ಮಾರಿಯುಪೋಲ್ ಮತ್ತು ವೊಲ್ನೋವಾಖಾದಿಂದ ನಾಗರಿಕರನ್ನು ಪಲಾಯನ ಮಾಡಲು ಶನಿವಾರ ಕದನ ವಿರಾಮ ವಿಫಲವಾದ ನಂತರ ರಷ್ಯಾ ಮತ್ತು ಉಕ್ರೇನ್ ಪರಸ್ಪರ ದೂಷಿಸಿಕೊಂಡವು.
Published by:Divya D
First published: