• Home
  • »
  • News
  • »
  • trend
  • »
  • Viral Video: ಇದೇನ್​ ನಾಯಿನಾ? ಇಲ್ಲ ಸಿಂಹನಾ? ಏನ್​ ಗುರೂ ಈ ಚೆಲುವೆಗೆ ಡಬಲ್​ ಮೀಟರ್​ ಅನ್ಸುತ್ತೆ!

Viral Video: ಇದೇನ್​ ನಾಯಿನಾ? ಇಲ್ಲ ಸಿಂಹನಾ? ಏನ್​ ಗುರೂ ಈ ಚೆಲುವೆಗೆ ಡಬಲ್​ ಮೀಟರ್​ ಅನ್ಸುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಮಹಿಳೆಯೊಬ್ಬಳು ಒಂದು ಸಿಂಹವನ್ನು ತನ್ನ ಸಾಕುಪ್ರಾಣಿಯಂತೆ ನೋಡಿಕೊಳ್ಳುತ್ತಾ ಇದ್ದಾಳೆ ನೋಡಿ.

  • Share this:

ಸಾಮಾನ್ಯವಾಗಿ ನಾವು ಸಾಕುಪ್ರಾಣಿಗಳು (Pet Animals) ಎಂದರೆ ಮುದ್ದಾದ ನಾಯಿ (Cute Dog) ಯನ್ನು ಮನೆಯಲ್ಲಿ ಸಾಕಿಕೊಳ್ಳುವುದು, ಕ್ಯೂಟ್ (Cute) ಆಗಿರುವಂತಹ ಬೆಕ್ಕ (Cat) ನ್ನು ಸಾಕಿಕೊಳ್ಳುವುದನ್ನು ನೋಡಿರುತ್ತೇವೆ. ಈ ಸಾಕುಪ್ರಾಣಿಗಳನ್ನು ಅನೇಕರು ತಮ್ಮ ಮಕ್ಕಳಂತೆ ಕಂಕುಳಲ್ಲಿಯೇ ಎತ್ತಿಕೊಂಡು ಮುದ್ದಾಡುವುದನ್ನು ಸಹ ನಾವು ಅನೇಕ ಬಾರಿ ನೋಡಿರುತ್ತೇವೆ. ಈ ಸಾಕುನಾಯಿಗಳಲ್ಲಿಯೂ ಸಹ ಕೆಲವು ನಾಯಿಗಳು ನೋಡಲು ತುಂಬಾನೇ ಭಯಂಕರವಾಗಿದ್ದು, ಒಳ್ಳೆ ಹುಲಿ (Tiger) ಮತ್ತು ಸಿಂಹ (Lion) ದ ಹಾಗೆ ದೈತ್ಯವಾಗಿರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಅಂತಹ ಸಾಕುನಾಯಿಗಳನ್ನು ನೋಡಿದಾಗ ನಮಗೆ ಎಷ್ಟೋ ಬಾರಿ ‘ಅಬ್ಬಾ ಹೇಗಿದೆ ನೋಡಿ ಈ ನಾಯಿ, ಒಳ್ಳೆ ಸಿಂಹದ ಹಾಗಿದೆ’ ಅಂತ ಅನ್ನಿಸಿರುತ್ತದೆ. ಈಗೇಕೆ ಇದೆಲ್ಲದರ ಬಗ್ಗೆ ನಾವು ಹೇಳುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಕಾಡುತ್ತಿರಬೇಕಲ್ಲವೇ? ವಿಷಯ ಏನೆಂದರೆ ಇಲ್ಲೊಂದು ವೀಡಿಯೋ ನಿಮ್ಮನ್ನು ಬೆಚ್ಚಿ ಬೀಳಿಸುತ್ತೆ ಅಂತ ಹೇಳಬಹುದು.


ಇದೇನ್​ ನಾಯಿನಾ? ಸಿಂಹನಾ?


ಯಾರಾದರೂ ಈ ಸಿಂಹ ಮತ್ತು ಹುಲಿಯನ್ನು ದೂರದಿಂದ ಈ ಮೃಗಾಲಯದಲ್ಲಿ ಅಥವಾ ಕಾಡಿನಲ್ಲಿ ಸಫಾರಿ ಹೋದಾಗ ನೋಡುತ್ತೇವೆ. ಆದರೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಮಹಿಳೆಯೊಬ್ಬಳು ಒಂದು ಸಿಂಹವನ್ನು ತನ್ನ ಸಾಕುಪ್ರಾಣಿಯಂತೆ ನೋಡಿಕೊಳ್ಳುತ್ತಾ ಇದ್ದಾಳೆ ನೋಡಿ.


ಸಿಂಹದ ಜೊತೆಗೆ ಸಾಕುಪ್ರಾಣಿಯಂತೆ ವರ್ತಿಸುತ್ತಿರುವ ಮಹಿಳೆ!


ವಿಡಿಯೋ ತುಣುಕಿನಲ್ಲಿ, ಮಹಿಳೆಯೊಬ್ಬಳು ಸಿಂಹದ ಪಕ್ಕದಲ್ಲಿ ಸ್ವಲ್ಪವೂ ಹೆದರಿಕೆಯಿಲ್ಲದೆ ನಿಂತುಕೊಂಡು ತನ್ನ ಸಾಕುಪ್ರಾಣಿಯಂತೆ ಅದರ ತಲೆಯ ಮೇಲೆ ಕೈಯನ್ನು ಆಡಿಸುತ್ತಾ ನಿಂತಿರುವುದನ್ನು ನಾವು ನೋಡಬಹುದು.


ಒಳ್ಳೆ ಸಾಕುಪ್ರಾಣಿ ನಾಯಿಮರಿಯಂತೆ ಸಿಂಹದ ಜೊತೆಗೆ ವರ್ತಿಸುತ್ತಿರುವುದನ್ನು ನಾವು ಇಲ್ಲಿ ನೋಡಬಹುದು. ಅಲ್ಲಿ ಇರುವುದು ಒಂದೇ ಸಿಂಹವಲ್ಲ, ಇದರ ಹಿಂದೆ ಎರಡು ಮೂರು ಸಿಂಹಗಳಿರುವುದನ್ನು ಸಹ ನಾವು ನೋಡಬಹುದು. ಈ ವೀಡಿಯೋ ತುಣುಕನ್ನು ನೋಡಿದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ಕ್ಷಣ ಆಘಾತಕ್ಕೊಳಗಾಗಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಇದನ್ನೂ ಓದಿ: ವಿಚಿತ್ರವಾಗಿದೆ ಈ ಪ್ರೀ ವೆಡ್ಡಿಂಗ್​​ ಫೋಟೋಶೂಟ್​, ವೈರಲ್ ಆಯ್ತು ವಿಡಿಯೋ


ಈ ವೀಡಿಯೋದಲ್ಲಿ, ಸಿಂಹವೊಂದು ಮಹಿಳೆಯ ಹಿಂದಿನ ಪಂಜರದಲ್ಲಿ ತಿರುಗಾಡುತ್ತಿರುವುದನ್ನು ಸಹ ನಾವು ನೋಡಬಹುದು. ಅದೇ ಸಮಯದಲ್ಲಿ, ಒಂದೆರಡು ಸಿಂಹಗಳು ಮತ್ತು ಸಿಂಹಿಣಿ ಅಲ್ಲೇ ಹಾಕಿರುವ ಮಂಚಗಳ ಮೇಲೆ ಕುಳಿತಿರುವುದನ್ನು ಸಹ ನಾವು ನೋಡಬಹುದು. ಸಿಂಹ ಮತ್ತು ಸಿಂಹಿಣಿಯನ್ನು ನಿಯಂತ್ರಿಸಲು ದೊಡ್ಡ ಕಬ್ಬಿಣದ ಸರಪಳಿಯನ್ನು ಬಳಸಲಾಗುತ್ತಿದೆ. ಮಹಿಳೆ ತನ್ನ ಕೈಗಳಿಂದ ಹತ್ತಿರದ ಸಿಂಹದ ತಲೆಯನ್ನು ಸವರುತ್ತಿರುವ ದೃಶ್ಯವನ್ನು ಕಾಣಬಹುದು.

View this post on Instagram


A post shared by Khaleel Ahmed (@k4_khaleel)
11 ಮಿಲಿಯನ್ ವೀಕ್ಷಣೆಗಳನ್ನ ಪಡೆದ ವೀಡಿಯೋ!


ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಇನ್‌ಸ್ಟಾಗ್ರಾಮ್ ನಲ್ಲಿ '@k4_khaleel' ಎಂಬ ಹೆಸರಿನ ಪುಟದಿಂದ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಇನ್‌ಸ್ಟಾಗ್ರಾಮ್ ನಲ್ಲಿ ತುಂಬಾನೇ ಹಿಟ್ ಆಗಿದೆ ಮತ್ತು ಇದು ಇಲ್ಲಿಯವರೆಗೆ ಸುಮಾರು 11 ಮಿಲಿಯನ್ ವೀಕ್ಷಣೆಗಳು, 1400 ಕಾಮೆಂಟ್ ಗಳು ಮತ್ತು 6,02,537 ಲೈಕ್ ಗಳನ್ನು ಸಹ ಗಳಿಸಿದೆ ಎಂದು ಹೇಳಬಹುದು.


ಸಖತ್​ ಫನ್ನಿ ಕಾಮೆಂಟ್ಸ್​ ನೋಡಿ!


ವೀಡಿಯೋ ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಅದಕ್ಕೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಧೈರ್ಯಶಾಲಿ ಕೃತ್ಯವೆಂದು ಹೇಳಿ ಆ ವೀಡಿಯೋದಲ್ಲಿರುವ ಮಹಿಳೆಯ ಧೈರ್ಯವನ್ನು ಹೊಗಳಿದರೆ, ಇತರರು ಇದು ಭಯಾನಕ ನಡೆ ಎಂದು ಭಾವಿಸಿದ್ದಾರೆ. ನಿಜ ಜೀವನದಲ್ಲಿ ಈ ಅಪಾಯವನ್ನು ತೆಗೆದುಕೊಳ್ಳದಂತೆ ಇತರರಿಗೆ ಸಲಹೆ ಸಹ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ನೀಡಿದ್ದಾರೆ.


ಇದನ್ನೂ ಓದಿ: ಭಾರತಕ್ಕಾಗಿ ಆಜಾದಿ ಸ್ಯಾಟ್ ನಿರ್ಮಿಸಿದ ಬಾಲಕಿಯರ ಡಿಫರೆಂಟ್ ಫೋಟೋಶೂಟ್! ನೀವೂ ನೋಡಿ


ಇದೇ ರೀತಿಯಾಗಿ ಈ ಹಿಂದೆ ನಾವು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿಯೇ ದೊಡ್ಡ ದೊಡ್ಡ ಹೆಬ್ಬಾವುಗಳನ್ನು ಸಾಕಿಕೊಂಡಿದ್ದು, ಅವುಗಳನ್ನು ತನ್ನ ಕೈಗಳಲ್ಲಿ ಎತ್ತಿಕೊಂಡಿರುವ ವೀಡಿಯೋವನ್ನು ಹಂಚಿಕೊಂಡಿದ್ದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು.

Published by:ವಾಸುದೇವ್ ಎಂ
First published: