ಈಗಂತೂ ನಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಮನೆಯಿಂದ ಆಚೆ ಸಹ ಹೋಗಬೇಕಿಲ್ಲ. ಎಲ್ಲವೂ ನಾವು ಈಗ ಮೊಬೈಲ್ ನಲ್ಲಿಯೇ ಖರೀದಿಸಬಹುದು. ಹೌದು, ಏನೇ ಬೇಕಾದರೂ ನಾವು ಮೊಬೈಲ್ (Mobile) ಫೋನ್ ನಲ್ಲಿ ಅದರ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿಯೇ ಆರ್ಡರ್ ಮಾಡಿಕೊಳ್ಳಬಹುದು. ಹಾಗೆ ಆರ್ಡರ್ ಮಾಡಿದ ವಸ್ತು ಸ್ವಲ್ಪ ಸಮಯದಲ್ಲಿಯೇ ನಮ್ಮ ಕೈಗೆ ಬಂದು ಸೇರುತ್ತದೆ ಅಂತ ಹೇಳಬಹುದು. ಈಗ ಮನೆಗೆ ಬೇಕಾದ ಆಹಾರ ಪದಾರ್ಥಗಳಿಂದ ಹಿಡಿದು ಔಷಧಿಗಳನ್ನು ಸಹ ಮನೆಯಲ್ಲಿ ಕುಳಿತುಕೊಂಡೇ ಆನ್ಲೈನ್ (Online) ನಲ್ಲಿ ಜನರು ಖರೀದಿಸುತ್ತಿದ್ದಾರೆ ಅಂತ ಹೇಳಬಹುದು. ಇ-ಕಾಮರ್ಸ್ ಸೈಟ್ ಗಳಾದ ಅಮೆಜಾನ್, ಫ್ಲಿಪ್ಕಾರ್ಟ್ (Flipcart) ನಂತಹವುಗಳಲ್ಲಿ ನೀವು ಏನು ಬೇಕೊ ಅದನ್ನೆಲ್ಲಾ ಆರ್ಡರ್ ಮಾಡಿಕೊಳ್ಳಬಹುದು. ಈಗ ಸ್ವಿಗ್ಗಿ ಅವರು ಈ ರೀತಿಯ ಎಕ್ಸ್‌ಪ್ರೆಸ್ ದಿನಸಿ ವಿತರಣಾ ಪ್ಲಾಟ್ಫಾರ್ಮ್ ಇನ್ಸ್ಟಾಮಾರ್ಟ್ ದೇಶದಲ್ಲಿ ಹೆಚ್ಚು ಜನಪ್ರಿಯವಾಗಿದೆ ಮತ್ತು ಅದರ ತ್ವರಿತ ಸೇವೆಗಳೊಂದಿಗೆ ಅನೇಕ ಜನರ ಜೀವನವನ್ನು ಹೆಚ್ಚು ಅನುಕೂಲಕರವಾಗಿಸಿದೆ ಅಂತ ಹೇಳಬಹುದು.
ಸ್ವಿಗ್ಗಿಯಲ್ಲಿ ಸ್ಯಾನಿಟರಿ ಪ್ಯಾಡ್ ಜೊತೆ ಬಂತು ಕುಕೀಸ್
ದಿನಸಿ ಅಂಗಡಿಗಳಿಗೆ ಹೋಗುವ ಬದಲು, ಜನರು ಸ್ವಿಗ್ಗಿಯ ತ್ವರಿತ ವಿತರಣಾ ಅಪ್ಲಿಕೇಶನ್ ನಲ್ಲಿ 15 ನಿಮಿಷಗಳಲ್ಲಿ ದೈನಂದಿನ ಅಗತ್ಯಗಳಿಗಾಗಿ ವಸ್ತುಗಳನ್ನು ಪಡೆಯಬಹುದು. ಇತ್ತೀಚೆಗೆ, ಅಪ್ಲಿಕೇಶನ್‌ನಿಂದ ಸ್ಯಾನಿಟರಿ ಪ್ಯಾಡ್ ಗಳನ್ನು ಆರ್ಡರ್ ಮಾಡಿದ ಮಹಿಳೆಯೊಬ್ಬರು ಆರ್ಡರ್ ಜೊತೆಗೆ ಕೆಲವು ಚಾಕೊಲೇಟ್ ಕುಕೀಗಳನ್ನು ಸಹ ಪಡೆದ ಆಶ್ಚರ್ಯಪಡುವಂತಹ ಘಟನೆಯೊಂದು ನಡೆದಿದೆ ನೋಡಿ.
ಟ್ವಿಟ್ಟರ್ ಬಳಕೆದಾರರಾದ ಸಮೀರಾ ಅವರು ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಬೆಳವಣಿಗೆಯನ್ನು ಅವರು "ಚಿಂತನಶೀಲ" ಎಂದು ಕರೆದಿದ್ದಾರೆ. "ನಾನು ಸ್ವಿಗ್ಗಿ ಇನ್ಸ್ಟಾಮಾರ್ಟ್ ನಿಂದ ಸ್ಯಾನಿಟರಿ ಪ್ಯಾಡ್ ಗಳನ್ನು ಆರ್ಡರ್ ಮಾಡಿದ್ದೆ ಮತ್ತು ಆ ಚೀಲದ ಕೆಳಭಾಗದಲ್ಲಿ ಚಾಕೊಲೇಟ್ ಕುಕೀಗಳನ್ನು ಇಟ್ಟಿದ್ದರು. ತುಂಬಾನೇ ಚಿಂತನಶೀಲವಾದ ಯೋಚನೆ ಇದು. ಆದರೆ ಅದನ್ನು ಯಾರು ಮಾಡಿದರು, ಸ್ವಿಗ್ಗಿ ಅಥವಾ ಅಂಗಡಿಯವರು ಅಂತ ಗೊತ್ತಾಗಲಿಲ್ಲ ನೋಡಿ” ಅಂತ ಹೇಳಿದ್ದಾರೆ.
ಸ್ವಿಗ್ಗಿ ಕೂಡ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು "ನೀವು ಈ ಸಮಯದಲ್ಲಿ ಆಹ್ಲಾದಕರ ದಿನವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ, ಸಮೀರಾ" ಎಂದು ಬರೆದಿದ್ದಾರೆ.
ಸ್ವಿಗ್ಗಿಯ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಒಳ್ಳೆಯ ಸನ್ನೆಯನ್ನು ಶ್ಲಾಘಿಸಿದರೆ, ಇತರರು ಸ್ವಿಗ್ಗಿ ತನ್ನ ಗ್ರಾಹಕರಿಗೆ ಪ್ರಚಾರದ ಉದ್ದೇಶಗಳಿಗಾಗಿ ನಿಯಮಿತವಾಗಿ ಉಚಿತ ಕೊಡುಗೆಗಳನ್ನು ಒದಗಿಸುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ತಲೆ ಕೆಳಗಾಗೂ ಗೌನ್ ಧರಿಸಬಹುದಾ? ಈ ಮಾಡೆಲ್‌ಗಳನ್ನು ನೋಡಿದ್ರೆ ಬಿದ್ದೂ ಬಿದ್ದು ನಗ್ತೀರಿ!
"ಇನ್ಸ್ಟಾಮಾರ್ಟ್ ತನ್ನದೇ ಆದ ಡಾರ್ಕ್ ಸ್ಟೋರ್‌ಗಳಿಂದ ಇದನ್ನೆಲ್ಲಾ ಸರಬರಾಜು ಮಾಡುತ್ತದೆ. ಆದ್ದರಿಂದ ಖಂಡಿತವಾಗಿಯೂ ಇದು ಎಸ್ಒಪಿಯ ಭಾಗವಾಗಿದೆ. ಅದಕ್ಕಾಗಿ ನೀವು ಸ್ವಿಗ್ಗಿಗೆ ಧನ್ಯವಾದ ಹೇಳಬಹುದು" ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.
I ordered sanitary pads from @SwiggyInstamart and found a bunch of chocolate cookies at the bottom of the bag.
Pretty thoughtful!
But not sure who did it, swiggy or the shopkeeper?
— Sameera (@sameeracan) January 25, 2023
I ordered sanitary pads from @SwiggyInstamart and found a bunch of chocolate cookies at the bottom of the bag.
Pretty thoughtful!
But not sure who did it, swiggy or the shopkeeper?
— Sameera (@sameeracan) January 25, 2023
ಸ್ವಿಗ್ಗಿಯ ಈ ಸೇವೆ ಈಗ ದೇಶದ 29 ನಗರಗಳಲ್ಲಿ ಲಭ್ಯವಿದೆ
500 ಕ್ಕೂ ಹೆಚ್ಚು ಬ್ರ್ಯಾಂಡ್ ಗಳಿಂದ 5,000 ಕ್ಕೂ ಹೆಚ್ಚು ಉತ್ಪನ್ನಗಳನ್ನು ನೀಡುವ ತ್ವರಿತ ವಾಣಿಜ್ಯ ಪ್ಲಾಟ್ಫಾರ್ಮ್ ಭಾರತದ 29 ನಗರಗಳಲ್ಲಿ ಅಸ್ತಿತ್ವದಲ್ಲಿದೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಈ ಸಂಖ್ಯೆಯನ್ನು 43ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಸುದ್ದಿ ಸಂಸ್ಥೆಯೊಂದರ ವರದಿ ತಿಳಿಸಿದೆ. ಈ ಸೇವೆಯನ್ನು ಮೊದಲು ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿ 2020 ರಲ್ಲಿ ಪ್ರಾರಂಭಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ