Emergency Numberಗೆ ಕರೆ ಮಾಡಿ ಪಿಜ್ಜಾ ಕೇಳಿದ ಮಹಿಳೆ: Smart Operatorಗೆ ಅರ್ಥ ಆಯ್ತು ಆಕೆಯ ಮಾತು!

ಬ್ರಿಟಿಷ್ ಸಹಾಯವಾಣಿಯ ಸಿಬ್ಬಂದಿಗೆ ಮಹಿಳೆ ಪಿಜ್ಜಾ ಕೇಳುತ್ತಿದ್ದಂತೆ ಒಂದು ಕ್ಷಣ ಶಾಕ್ ಆಗಿದ್ರು. ನಂತರ ನಿಧಾನವಾಗಿ ಮಹಿಳೆಯ ಮಾತು ಆಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುರ್ತುಸೇವೆ ಸಂಖ್ಯೆಗೆ (Emergency Number) ನೀವು ಕರೆ ಮಾಡಿದ್ರೆ ನಿಮಗೆ ತೊಂದರೆಯಲ್ಲಿದ್ದಾಗ ನಿಮಗೆ ಸಹಾಯ (Help) ಸಿಗುತ್ತದೆ. ನಮ್ಮಲ್ಲಿ ಪೊಲೀಸ್ (Police), ವೈದ್ಯಕೀಯ (Medical), ಮಹಿಳೆ(Woman)ಯರಿಗೆ ಸಂಬಂಧಿಸಿದಂತೆ ಸಹಾಯವಾಣಿಯ ಸಂಖ್ಯೆ(Helpline Numbers)ಗಳು ಇವೆ. ಸಹಾಯವಾಣಿಯಲ್ಲಿರುವ ಸಿಬ್ಬಂದಿ 24*7 ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ಸಹಾಯಕ್ಕೆ ದಾವಿಸುತ್ತಾರೆ. ಇನ್ನು ಕೆಲ ಕಿಡಿಗೇಡಿಗಳು ತುರ್ತು ಸಹಾಯವಾಣಿಗಳಿಗೆ ಕರೆ ಮಾಡಿ ಸುಳ್ಳು ಮಾಹಿತಿ ನೀಡಿರುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ. ಇನ್ನೂ ಒಂದಿಷ್ಟು ಸಂದರ್ಭಗಳಲ್ಲಿ ಕರೆ ಮಾಡಿ ಕಾಲಹರಣ ಮಾಡ್ತಾರೆ. ಆದ್ರೆ ಇಲ್ಲೋರ್ವ ಮಹಿಳೆ ಎಮೆರ್ಜೆನ್ಸಿ ನಂಬರ್ ಗೆ ಕರೆ ಮಾಡಿ ಪಿಜ್ಜಾ ಬರ್ಗರ್ (Pizza Burger) ಕೇಳಿದ್ದಾರೆ.

ಸಾಮಾನ್ಯ ಸಿಬ್ಬಂದಿ ಆಗಿದ್ರೆ ಇದು ಪಿಜ್ಜಾ ಸೆಂಟರ್ ಅಲ್ಲ ಅಂತ ಕೇಳಿ ಕರೆ ಕಟ್ ಮಾಡುತ್ತಾರೆ. ಆದ್ರೆ ಈ ಸ್ಮಾರ್ಟ್ ಆಪರೇಟರ್ ಮಹಿಳೆ ತೊಂದರೆಯಲ್ಲಿ ಸಿಲುಕಿರುವ ಮಾಹಿತಿಯ ಸುಳಿವು ಅವರ ಧ್ವನಿಯಲ್ಲಿಯೇ ಸಿಕ್ಕಿತ್ತು. ನ್ಯೂಯಾರ್ಕ್ ನಲ್ಲಿ  ಘಟನೆ ನಡೆದಿದೆ,.

ಮಹಿಳೆಯ ಸಮಸ್ಯೆ ಅರ್ಥ ಮಾಡಿಕೊಂಡ ಸಿಬ್ಬಂದಿ

ತುರ್ತು ಸಂದರ್ಭಗಳಲ್ಲಿ ಬಳಸುವ ಸಂಖ್ಯೆಗೆ ಕರೆ ಮಾಡಿ ಪಿಜ್ಜಾ-ಬರ್ಗರ್ ಕೇಳಲು ಪ್ರಾರಂಭಿಸಿದರೆ, ಆಪರೇಟರ್ (Woman Orders Pizza on Emergency Number) ಕೋಪಗೊಳ್ಳುತ್ತಾರೆ. ಆದರೆ ಬ್ರಿಟಿಷ್ ತುರ್ತು ಸೇವಾ ನಿರ್ವಾಹಕರು ಈ ವಿಷಯದಲ್ಲಿ ಕೋಪಗೊಳ್ಳಲಿಲ್ಲ. ತಮಗೆ ಕರೆ ಮಾಡಿರುವ ಮಹಿಳೆಯ (Smart Operator Gets the Hint Of Caller) ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದಾರೆ.

ಅನೇಕ ಬಾರಿ ಅಪಾಯದಲ್ಲಿ ಸಿಲುಕಿಕೊಂಡಿರುವ ಜನರು ತುರ್ತು ಸಹಾಯವಾಣಿಗೆ ಕರೆ ಮಾಡಿ ಸಹಾಯ ಕೇಳುತ್ತಾರೆ. ಕೆಲವೊಮ್ಮೆ ತಾವು ಇರೋ ಪರಿಸ್ಥಿತಿಯಲ್ಲಿ ಸಹಾಯ ಕೇಳಲು ಆಗುತ್ತಿರಲ್ಲ. ಈ ಸಂದರ್ಭದಲ್ಲಿ ಸಂತ್ರಸ್ತರು ಸಹಾಯವಾಣಿಗೆ ಕರೆ ಮಾಡಿ, ಬೇರೆ ರೀತಿಯಲ್ಲಿ ತಮ್ಮ ಸಮಸ್ಯೆಯನ್ನು ಹೇಳಲು ಪ್ರಯತ್ನಿಸುತ್ತಾರೆ. ಹಾಗಾಗಿ ಸಹಾಯವಾಣಿಯ ಸಿಬ್ಬಂದಿ ಎಲ್ಲರ ಮಾತನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುತ್ತಾರೆ.

ಬ್ರಿಟಿಷ್ ಸಹಾಯವಾಣಿಯ ಸಿಬ್ಬಂದಿಗೆ ಮಹಿಳೆ ಪಿಜ್ಜಾ ಕೇಳುತ್ತಿದ್ದಂತೆ ಒಂದು ಕ್ಷಣ ಶಾಕ್ ಆಗಿದ್ರು. ನಂತರ ನಿಧಾನವಾಗಿ ಮಹಿಳೆಯ ಮಾತು ಆಲಿಸಿದ್ದಾರೆ.

ಇದನ್ನೂ ಓದಿ:  Viral News: ಮದ್ವೆ ವಾರ್ಷಿಕೋತ್ಸವಕ್ಕೆ ಪತಿಗೆ ಹೊಸ ಸಂಗಾತಿಯನ್ನು ಗಿಫ್ಟ್ ನೀಡಿದ ಮಹಿಳೆ; ಮುಂದೇನಾಯ್ತು ಗೊತ್ತಾ?

ಮಹಿಳಗೆ ಪಿಜ್ಜಾ ಸಹಾಯ ಬೇಕಾಗಿಲ್ಲ

ಈ ಘಟನೆಯನ್ನು ಉತ್ತರ ಯಾರ್ಕ್‌ಷೈರ್ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಒಬ್ಬ ಮಹಿಳೆಯಿ.ದ ಕರೆ ಬಂದಿತ್ತು. ಆದರೆ ಆ ಮಹಿಳೆ ಪಿಜ್ಜಾ ಡೆಲಿವರಿ ಕಂಪನಿಯೊಂದಿಗೆ ಮಾತನಾಡುತ್ತಿರುವಂತೆ ವರ್ತಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಿಬ್ಬಂದಿಗೆ ಕೇಳಿದ ಪ್ರಶ್ನೆಗೆ ಹೌದು ಎಂದ ಮಹಿಳೆ

ಫೋನ್‌ ಗೆ ಹಾಜರಾದ ಆಪರೇಟರ್ ಕೆಲವೇ ಸೆಕೆಂಡುಗಳಲ್ಲಿ ಮಹಿಳೆಯ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಒಂದೇ ಒಂದು ಪ್ರಶ್ನೆ ಕೇಳಿದ್ದಾರೆ. ನಿಮಗೆ ಏನಾದರೂ ತೊಂದರೆ ಇದೆಯೇ? ಮಹಿಳೆ ಉತ್ತರ ಹೌದು ಎಂದಾಗ, ಬಸ್ಸಿನಲ್ಲಿದ್ದ ಸಹ ಪ್ರಯಾಣಿಕನಿಂದ ಮಹಿಳೆಗೆ ಅಪಾಯವಿದೆ ಎಂದು ತಿಳಿಯಲು  ಆಪರೇಟರ್ ಗೆ ಹೆಚ್ಚು ಸಮಯ ಹಿಡಿಯಲಿಲ್ಲ.

ಇದನ್ನೂ ಓದಿ:  Viral News: ಕೂದಲಿಗಾಗಿ 40 ಸಾವಿರ ಖರ್ಚು ಮಾಡಿ ಗಳಗಳನೇ ಅತ್ತ ಚೆಲುವೆ: ನೆಟ್ಟಿಗರು ಸಾಂತ್ವಾನ ಹೇಳಿದ್ದು ಹೇಗೆ ಗೊತ್ತಾ?

ಬಸ್ ಪತ್ತೆ ಮಾಡಿದ ಪೊಲೀಸರು

ಮಹಿಳೆ ಮಾತನಾಡುತ್ತಲೇ ಇದ್ದಾಗ ಪೊಲೀಸರು ಆನ್‌ ಲೈನ್ ಟ್ರ್ಯಾಕರ್‌ ನಿಂದ ಬಸ್  ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ತಮ್ಮ ತಂಡವನ್ನು ಕಳುಹಿಸಿದ್ದಾರೆ. ಅಲ್ಲಿ ಪೊಲೀಸರು 40 ವರ್ಷದ  ವ್ಯಕ್ತಿಯನ್ನು ಬಂಧಿಸಿದ್ದಾರೆ. ಸದ್ಯ ಈ  ವ್ಯಕ್ತಿ ಜಾಮೀನಿನ ಮೇಲೆ ಹೊರ ಬಂದಿದ್ದಾನೆ.  ಯಾರ್ಕ್‌ ಷೈರ್ ಪೊಲೀಸರ ಈ ಟ್ವೀಟ್ ವೈರಲ್ ಆಗಿದ್ದು, ಮಹಿಳೆಯ ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಸಿಬ್ಬಂದಿಯ ಸಮಯಪ್ರಜ್ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
Published by:Mahmadrafik K
First published: