Viral Photo: ‘ಚಿಲ್ಲರೆ ತನ್ನಿ’ ಅಂತ ಸೂಚನೆ ನೀಡಿದ್ರೆ ಕೇಕ್ ಮೇಲೆ ಬರೆದು ತರೋದಾ?

ಕೇಕ್ ಏನೋ ತುಂಬಾನೇ ಚೆನ್ನಾಗಿತ್ತು, ಆದರೆ ಅದು ವೈಷ್ಣವಿ ಮೊಂಡ್ಕರ್ ಅವರು ಆರ್ಡರ್ ಮಾಡುವ ಮೊದಲು ಮೊಬೈಲ್ ಅಪ್ಲಿಕೇಶನ್ ನಲ್ಲಿ ನೋಡಿ ಆರ್ಡರ್ ಮಾಡಿದಾಗ ಅಂತ ಹೇಳಬಹುದು. ಅದೇ ಕೇಕ್ ಮನೆಗೆ ಜೊಮ್ಯಾಟೊ ಡೆಲಿವರಿ ಬಾಯ್ ತಂದು ಕೊಟ್ಟಾಗ ಅದನ್ನು ತೆರೆದು ನೋಡಿದರೆ ಒಂದು ಅಚ್ಚರಿ ಕಾದಿತ್ತು.

ವೈರಲ್ ಕೇಕ್

ವೈರಲ್ ಕೇಕ್

  • Share this:
ಕೆಲವೊಮ್ಮೆ ನಾವು ನಮ್ಮ ಮೊಬೈಲ್ ನಲ್ಲಿ (Mobile) ಈ ಫುಡ್ ಅಗ್ರಿಗೆಟರ್ ಅಪ್ಲಿಕೇಶನ್ ಗಳಲ್ಲಿ ನಮಗೆ ಬೇಕಾದ ಆಹಾರವನ್ನು (Food) ಮತ್ತು ತಿಂಡಿಗಳನ್ನು ಆರ್ಡರ್ ಮಾಡಿ ಮತ್ತು ನಮಗೆ ಬೇಕಾದಂತಹ ಡೆಲಿವರಿ ಸೂಚನೆಗಳನ್ನು ಸಹ ಆ ಫುಡ್ ಅಗ್ರಿಗೆಟರ್ ಗಳ ಮೊಬೈಲ್ ಅಪ್ಲಿಕೇಶನ್ ನಲ್ಲಿ (Mobile Application) ಬರೆದಿರುತ್ತೇವೆ. ಎಂದರೆ ಆ ಸೂಚನೆಗಳಲ್ಲಿ ಮನೆಯ ಬಾಗಿಲಿಗೆ ಆರ್ಡರ್ ಅನ್ನು ಸಿಕ್ಕಿಸಿ ಒಂದು ಬಾರಿ ಮಾತ್ರ ಬೆಲ್ ಮಾಡಿ ಹೋಗಿ ಅಥವಾ ಬರುವಾಗ 500 ರೂಪಾಯಿಯ ಚಿಲ್ಲರೆ ತೆಗೆದುಕೊಂಡು ಬನ್ನಿ ಅಥವಾ ಆರ್ಡರ್ ಅನ್ನು (Order) ಕೆಳಗೆ ಸೆಕ್ಯೂರಿಟಿ ಗಾರ್ಡ್ (Security Guard) ಹತ್ತಿರ ಕೊಟ್ಟಿರಿ ಅಂತ ಹೀಗೆ ಅನೇಕ ರೀತಿಯ ಡೆಲಿವರಿ ಸೂಚನೆಗಳನ್ನು ನೀಡಿರುತ್ತೇವೆ.

ಆದರೆ ಕೆಲವೊಮ್ಮೆ ಈ ಸೂಚನೆಗಳನ್ನು ಆರ್ಡರ್ ನೀಡುವ ಕೇಕ್ ಅಂಗಡಿಗಳಲ್ಲಿ ಕೆಲಸ ಮಾಡುವವರು ಇದನ್ನೇ ಕೇಕ್ ಮೇಲೆ ಬರೆಯುವ ಮಾಹಿತಿ ಅಂತ ತಿಳಿದುಕೊಂಡು ಬರೆದು ಬಿಟ್ಟು ಹಾಗೆಯೇ ಕಳುಹಿಸಿ ಕೊಡುತ್ತಾರೆ. ಇಂತಹ ಘಟನೆಗಳು ಸುಮಾರು ಆಗಿವೆ.

ಕೇಕ್ ಮೇಲೆ ಏನಿತ್ತು?
ಇಲ್ಲಿಯೂ ಸಹ ಇದೇ ರೀತಿಯ ಒಂದು ಘಟನೆ ನಡೆದಿದೆ ನೋಡಿ.. ಕೇಕ್ ಏನೋ ತುಂಬಾನೇ ಚೆನ್ನಾಗಿತ್ತು, ಆದರೆ ಅದು ವೈಷ್ಣವಿ ಮೊಂಡ್ಕರ್ ಅವರು ಆರ್ಡರ್ ಮಾಡುವ ಮೊದಲು ಮೊಬೈಲ್ ಅಪ್ಲಿಕೇಶನ್ ನಲ್ಲಿ ನೋಡಿ ಆರ್ಡರ್ ಮಾಡಿದಾಗ ಅಂತ ಹೇಳಬಹುದು. ಅದೇ ಕೇಕ್ ಮನೆಗೆ ಜೊಮ್ಯಾಟೊ ಡೆಲಿವರಿ ಬಾಯ್ ತಂದು ಕೊಟ್ಟಾಗ ಅದನ್ನು ತೆರೆದು ನೋಡಿದರೆ ಒಂದು ಅಚ್ಚರಿ ಕಾದಿತ್ತು.

ಇದನ್ನೂ ಓದಿ: Chicken biryani ಅಂದ್ರೆ ಈ ದೇವರಿಗೆ ಇಷ್ಟ! ಭಾರತದಲ್ಲಿ ನಾನ್ ವೆಜ್ ಪ್ರಸಾದ ನೀಡುವ ಈ ದೇವಸ್ಥಾನಗಳಿಗೆ ಭೇಟಿ ನೀಡಿ

ಜೊಮ್ಯಾಟೊ ಮೊಬೈಲ್ ಅಪ್ಲಿಕೇಶನ್ ನಲ್ಲಿ ಒಂದು ಕೇಕ್ ಅನ್ನು ಆರ್ಡರ್ ಮಾಡಿದರು ಮತ್ತು ಅಲ್ಲೇ ಇರುವ ಡೆಲಿವರಿ ಸೂಚನೆಯಲ್ಲಿ ತಮ್ಮ ಬಳಿ 500 ರೂಪಾಯಿಗೆ ಚಿಲ್ಲರೆ ಇಲ್ಲ, ದಯವಿಟ್ಟು ಬರುವಾಗ ತೆಗೆದುಕೊಂಡು ಬನ್ನಿ ಅಂತ ಬರೆದಿದ್ದರು. ಈ ನಿರ್ದೇಶನವನ್ನು ಚಾಚು ತಪ್ಪದೆ ಅನುಸರಿಸಲಾಯಿತು, ಆದರೆ ಯಾರೂ ಊಹಿಸಬಹುದಾದ ರೀತಿಯಲ್ಲಿ ಅಲ್ಲ. ಕೇಕ್ ಅಂಗಡಿಯವರು ಈ "500 ರೂಪಾಯಿ ಚಿಲ್ಲರೆಯನ್ನು ತೆಗೆದುಕೊಂಡು ಬನ್ನಿ" ಎಂದು ಕೇಕ್ ಮೇಲೆ ಬರೆದಿದ್ದರು.

ಫೇಸ್ಬುಕ್ ನಲ್ಲಿ ವೈರಲ್ ಆಯ್ತು ಕೇಕಿನ ಫೋಟೋ
ಕೇಕ್ ತಯಾರಿಸುವ ವ್ಯಕ್ತಿ ಈ ನನ್ನ ಸೂಚನೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆಯೇ? ಏಕೆ ತಪ್ಪಾದ ಸ್ಥಳದಲ್ಲಿ ಬರೆದು ಕಳುಹಿಸಿದ್ದಾರೆ ಎನ್ನುವ ಅನೇಕ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ ಅಂತ ತಮ್ಮ ಫೇಸ್‌ಬುಕ್ ನ ಪೋಸ್ಟ್ ನಲ್ಲಿ ವೈಷ್ಣವಿ ಅವರು ಬರೆದಿದ್ದಾರೆ. "ಡೆಲಿವರಿ ಸೂಚನೆಯಲ್ಲಿ ನಾನು “500/- ಚೇಂಜ್ ತನ್ನಿ" ಅಂತ ಬರೆದರೆ ಅವರು ಕೇಕ್ ಮೇಲೆಯೇ ಅದನ್ನು ಬರೆದು ಕಳುಹಿಸಿದ್ದಾರೆ" ಎಂದು ವೈಷ್ಣವಿ ನಗುತ್ತಾ ತಮ್ಮ ಫೇಸ್‌ಬುಕ್ ಪೋಸ್ಟ್ ನಲ್ಲಿ ಬರೆದು ಕೊಂಡಿದ್ದಾರೆ.

ಇದನ್ನು ನೋಡಿ ನೆಟಿಗರು ಹೇಳಿದ್ದೇನು ನೋಡಿ
ಇದನ್ನು ನೋಡಿದ ಒಬ್ಬ ಫೇಸ್‌ಬುಕ್ ಬಳಕೆದಾರರೊಬ್ಬರು "ನೀವು ಹೇಳಿದ್ದನ್ನು ಅಲ್ಲಿ ಬರೆದು ಕಳುಹಿಸಿದ್ದಾರೆ” ಅಂತ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು “ಎಂತಹ ಮುದ್ದಾದ ಕ್ಷಣ" ಎಂದು ಬರೆದಿದ್ದಾರೆ. ಇಂತಹ ಘಟನೆಯನ್ನು ಸಹ ಕೆಲವು ವ್ಯಕ್ತಿಗಳು ಧನಾತ್ಮಕವಾಗಿ ನೋಡಿದ್ದಾರೆ.

ಇದನ್ನೂ ಓದಿ:  Bahubali Samosa: ಇದು ಬಾಹುಬಲಿ ಸಮೋಸಾ! ಅರ್ಧ ಗಂಟೆಯಲ್ಲಿ ತಿಂದರೆ 51 ಸಾವಿರ ರೂಪಾಯಿ ಬಹುಮಾನವಾಗಿ ಗೆಲ್ಲಿರಿ

ಈ ರೀತಿಯ ಸೂಚನೆಗಳನ್ನು ಹೀಗೆ ಕೇಕ್ ಮೇಲೆ ಬರೆದು ಕಳುಹಿಸುತ್ತಿರುವ ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. ಒಬ್ಬ ವ್ಯಕ್ತಿಯು ಇತ್ತೀಚೆಗೆ ನಾಗ್ಪುರದ ಪ್ರಸಿದ್ಧ ಬೇಕರಿಯಿಂದ ಕೇಕ್ ಖರೀದಿಸಿದ್ದಾನೆ. ಅದರಲ್ಲಿ ಮೊಟ್ಟೆ ಹಾಕಿದ್ದೀರಾ ಅಂತ ನಾನು ಅಲ್ಲಿ ಪ್ರಶ್ನೆಯೊಂದನ್ನು ಕೇಳಿದರೆ, ಆ ಬೇಕರಿಯವರು ಆ ಕೇಕ್ ಮೇಲೆ “ಇದರಲ್ಲಿ ಮೊಟ್ಟೆ ಇದೆ" ಅಂತ ದೊಡ್ಡ ಅಕ್ಷರಗಳಲ್ಲಿ ಬರೆದು ಕೊಟ್ಟಿದ್ದನ್ನು ನೋಡಿ ನಾನು ದಿಗ್ಬ್ರಮೆಗೊಂಡಿದ್ದೆ ಎಂದು ಕಪಿಲ್ ವಾಸ್ನಿಕ್ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದರು.
Published by:Ashwini Prabhu
First published: