ದೇವರು (God) ಎಲ್ಲೆಲ್ಲೂ ಇದ್ದಾನೆ ಅಂತ ಸಾಮಾನ್ಯವಾಗಿ ಎಲ್ಲರೂ ನಂಬುತ್ತಾರೆ. ಧರ್ಮಗಳು, ದೇವರ ನಾಮಗಳು ಹಲವು ಇರಬಹುದು. ಆದರೆ, ಭಕ್ತಿ ಮತ್ತು ನಂಬಿಕೆ ಒಂದೇ ಅಲ್ವಾ? 16ನೇ ಶತಮಾನದಲ್ಲಿ ಮೀರಾಬಾಯ್ (Mirabai) ಶ್ರೀ ಕೃಷ್ಣ ದೇವರನ್ನೇ ತನ್ನ ಗಂಡ ಎಂದು ತಿಳಿದುಕೊಂಡು ಜೀವನವನ್ನು ಸಾಗಿಸುತ್ತಾ ಇದ್ದ ಉದಾಹರಣೆಯನ್ನು ನಾವು ಕೇಳಿದ್ದೇವೆ. ಹಾಗೆಯೆ ಸುಧಾಮ ಮತ್ತು ಕೃಷ್ಣನ ಗೆಳೆತನದ ಕಥೆ ಕೂಡ ನಮಗೆ ಗೊತ್ತು. ಹೀಗೆ ಪುರಾತನ ಕಾಲದಿಂದಲೂ (Ancient Times) ಕೃಷ್ಣನ ತುಂಟತನ, ಗೆಳೆತನ, ಪ್ರೀತಿ ಎಲ್ಲವೂ ಪ್ರಖ್ಯಾತ ಅಲ್ವಾ? ಅದೇ ರೀತಿಯಾಗಿ ಇಂದಿನ ಕಾಲದಲ್ಲೂ ಶ್ರೀ ಕೃಷ್ಣ (Shri Krishna) ನನ್ನೇ ನಂಬಿ ಆತನನ್ನೇದೇವರು ಎಂದು ಮದುವೆ ಆಗೋದನ್ನು ಕೇಳಿದ್ದೀರಾ?
ಈ ಹಿಂದೆ ರಾಜಸ್ಥಾನ ರಾಜ್ಯದ ಜೈಪುರ್ ಜಿಲ್ಲೆಯ ಗೋವಿಂದಗಢ ಹೋಬಳಿ ಸಮೀಪದ ನರಸಿಂಘಪುರ ಎಂಬ ಗ್ರಾಮದ 30 ವರ್ಷದ ಯುವತಿ ಪೂಜಾ ಸಿಂಗ್ ಎಂಬಾಕೆ ಭಗವಾನ್ ಮಹಾವಿಷ್ಣುವನ್ನೇ ಮದುವೆಯಾಗಿದ್ದು, ಶ್ರೀಹರಿಯೇ ನನ್ನ ಗಂಡ ಅಂತ ಹೇಳುತ್ದಿದ್ದಾಳೆ. ಗ್ರಾಮದ ವಿಷ್ಣು ದೇಗುಲದಲ್ಲಿ ಆಕೆ ವಿಷ್ಣು ಜೊತೆ ಮದುವೆಯಾಗಿದ್ದು, ಆಕೆಯ ಮದುವೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಹೀಗೆ ದೇವರ ಮೇಲೆ ಅತಿಯಾಗಿ ನಂಬಿಕೆ ಇದ್ದು, ಹರಕೆಗಳನ್ನು ಹೊತ್ತು ಕೊಳ್ಳುವವರು ಹಲವಾರು ಜನರು ಇದ್ದಾರೆ. ಇನ್ನು ದೇವರು ನಮ್ಮ ಸುತ್ತ ಇದ್ದಾನೆ, ಆತನೇ ನನ್ನ ಗಂಡ ಎಂದು ಮದುವೆ ಆಗುವವರು ಕೂಡ ಇಂದಿನ ಕಾಲದಲ್ಲಿ ಇದ್ದಾರೆ ಅಂದ್ರೆ ನೀವು ನಂಬಲೇ ಬೇಕು.
ಇದನ್ನೂ ಓದಿ: ಭಗವಾನ್ ವಿಷ್ಣು ಜೊತೆ ಮದುವೆಯಾದ ಯುವತಿ! ದೇವಸ್ಥಾನದಲ್ಲೇ ದೇವರ ಜೊತೆ ಕಲ್ಯಾಣೋತ್ಸವ!
ಸಾಮಾನ್ಯವಾಗಿ ಹುಡುಗಿಗೆ ತನ್ನನ್ನು ಮದುವೆ ಆಗುವವನ್ನು ಹೀಗೆ ಇರಬೇಕು, ಹಾಗೆ ಇರಬೇಕು, ಡ್ರೀಮ್ ಬಾಯ್ ಅಂತೆಲ್ಲಾ ಕನಸುಗಳು ಇರೋದು ಕಾಮನ್ ಬಿಡಿ. ಹಾಗೆಯೇ ಹುಡುಗನಿಗೂ ಕೂಡ ಡ್ರೀಮ್ ಗರ್ಲ್ ಇರ್ತಾರೆ. ಆದರೆ ಈಗ ವೈರಲ್ ಆಗ್ತಾ ಇರುವ ಹುಡುಗಿಯು ನಿಜಕ್ಯೂ ಅದ್ಭುತ! ಯಾಕಂದ್ರೆ ಶ್ರೀ ಕೃಷ್ಣನನ್ನೇ ಮದುವೆ ಆಗಿದ್ದಾಳಂತೆ ಈಕೆ.
ಏನಿದು ಘಟನೆ?
ಎಲ್ಎಲ್‌ಬಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಹೆಸರು ರಕ್ಷಾ, ವಯಸ್ಸು 30. ಈಕೆಯು ಶ್ರೀ ಕೃಷ್ಣನನ್ನು ತುಂಬಾ ಪೂಜೆ ಮಾಡುತ್ತ ಇದ್ದಳು ಹಾಗೆಯೇ ತುಂಬಾ ಈ ದೇವರನ್ನು ನಂಬಿದ್ದಳು. ಈ ದೇವರ ಜೊತೆಗೇ ಎಂದಿಗೂ ಒಳ್ಳೆಯ ಸಂಬಂಧ ಇರಬೇಕೆಂದು ಆ ದೇವರನ್ನೇ ಮದುವೆ ಆಗಿದ್ದಾಳೆ. ಈ ಮದುವೆಗೆ ಉತ್ತರ ಪ್ರದೇಶದ ಔರ್ರೈಯಾ ಜಿಲ್ಲೆಯ ಜನರು ಸಾಕ್ಷಿ ಆಗಿದ್ದಾರೆ.
ಇದನ್ನೂ ಓದಿ: ವಾರದ 3 ದಿನ ಒಂದು ಹೆಂಡತಿ, ಇನ್ನು 3 ದಿನ ಇನ್ನೊಂದು ಪತ್ನಿ! ಭಾನುವಾರ ಗಂಡ ಫುಲ್ ಫ್ರೀ!
ಹೌದು, ಇದು ವಿಚಿತ್ರ ಅಂತ ನಿಮಗೆ ಅನಿಸಿದ್ರೂ ಸತ್ಯವಾಗಿ ನಡೆದ ಘಟನೆ ಕಣ್ರೀ. ರಕ್ಷಾ ಶ್ರೀ ಕೃಷ್ಣ ದೇವರನ್ನು ಹೃದಯದಿಂದ ಪೂಜಿಸುತ್ತಾ ಇದ್ದಳು ಹಾಗೆಯೇ ಪ್ರೀತಿಸುತ್ತಾ ಇದ್ದಾಳು. ನಂತರ ಈ ದೇವರನ್ನೇ ಮದುವೆ ಆಗುವ ನಿರ್ಧಾರವನ್ನೂ ಮಾಡಿದಳು. ಈ ವಿಷಯವನ್ನು ತನ್ನ ತಂದೆಯಾದ ರಂಜಿತ್ ಸಿಂಗ್ ಸೋಲಂಕಿಯ ಬಳಿ ಹೇಳಿದಳು. ಇದಕ್ಕೆ ಆಕೆಯ ತಂದೆ ಒಪ್ಪಿಕೊಂಡು, ಅವರ ಕುಟುಂಬದವರಿಗೆ ಈ ವಿಷಯವನ್ನು ತಿಳಿಸಿ, ಮದುವೆಗೆ ಸಿದ್ಧತೆ ಮಾಡಿಕೊಂಡ್ರು. ಈ ಮದುವೆಯಲ್ಲಿ ರಕ್ಷಾಳ ಕುಟುಂಬಸ್ಥರು, ಆಪ್ತರು ಎಲ್ಲರೂ ಆಗಮಿಸಿದ್ದರು.
ವಧು ರಕ್ಷಾ, ಕೃಷ್ಣನ ಮೂರ್ತಿಯನ್ನು ಹೊತ್ತುಕೊಂಡು ಮದುವೆ ಆಗಿದ್ದಾಳೆ. ಹಾಗೆಯೇ ಪ್ರತೀ ಶಾಸ್ತ್ರವನ್ನು ಮಾಡಿದ್ದಾರೆ. ಮದುವೆಯಲ್ಲಿ ಈ ಮೂರ್ತಿಯನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾಳೆ. ಇದೇ ಸಮಯಲ್ಲಿ ಮೂರ್ತಿ ಮತ್ತು ರಕ್ಷಾ ಮದುವೆಯ ಅದ್ಧೂರಿ ಮೆರವಣಿಗೆ ಕೂಡ ಸಾಗಿದ್ದಾರೆ.
ಇದಾದ ನಂತರ ಸಂಗೀತ, ನೃತ್ಯ ಎಲ್ಲಾ ಸಂಭ್ರಮವು ಜರುಗಿದೆ. ಬಳಿಕ ವಧು ರಕ್ಷಾ , ಕೃಷ್ಣನ ಮೂರ್ತಿಯೊಂದಿಗೆ ಸುಖಚೈನ್ಪುರ ಪ್ರದೇಶದಲ್ಲಿನ ಒಬ್ಬರ ನೆಂಟರ ಮನೆಗೆ ತೆರಳಿದ್ದಾಳೆ ನಂತರ ಅಲ್ಲಿಂದ ತನ್ನ ಪತಿ ಶ್ರೀಕೃಷ್ಣನ ಮೂರ್ತಿಯನ್ನು ಹೊತ್ತುಕೊಂಡು ತವರಿಗೆ ವಾಪಾಸ್ ಬಂದಿದ್ದಾಳೆ.
ಈಕೆ ಎಲ್ಎಲ್‌ಬಿ ಸ್ಟೂಡೆಂಟ್ ಆಗಿದ್ರೂ ಕೂಡ, ಈ ದೇವರನ್ನು ನಂಬಿ, ಮದುವೆ ಆಗಿರುವುದು ನಿಜಕ್ಕೂ ಆಶ್ಚರ್ಯ ಅಂತ ಹೇಳಬಹುದು. ಸದ್ಯಕ್ಕೆ ಈ ವಿಷಯ ಎಲ್ಲಾ ಕಡೆ ವೈರಲ್ ಆಗ್ತಾ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ