ಭಾರತದಲ್ಲಿ ಸದ್ಯ ಹೀಟ್ ವೇವ ಹವಾ. ಸೆಖೆ, ಬಿಸಿ ಎಂದು ಪರದಾಡಿದರೆ ಬಿಸಿಲು ಕಮ್ಮಿಯಾಗುತ್ತಾ? ಹಾಗಿದ್ರೆ ಇದೇ ಬಿಸಿಲು ನಮ್ಮ ಅಗತ್ಯಕ್ಕಾಗಿ ಬಳಸಿಕೊಂಡರೆ ಹೇಗೆ? ಕೇರಳದ ಅಮ್ಮ ಒಬ್ಬರು ಬಿಸಿಲಲ್ಲಿ ಬಾಣಲೆ ಇಟ್ಟು ಎಣ್ಣೆ ಹಾಕಿ ಹಪ್ಪಳ ಕರಿದಿದ್ದು ನೆನಪಿದೆಯಾ? ಸೌದಿಯಲ್ಲಿ ವ್ಯಕ್ತಿಯೊಬ್ಬರು ಬಾಲ್ಕನಿಗೆ ಬಂದು ಪ್ಯಾನ್ ಇಟ್ಟು ಆಮ್ಲೆಟ್ ಮಾಡಿದ್ದು ನೆನಪಿದೆಯಾ? ಬೇಸಗೆ ಬಂದರೆ ಸಾಕು ಇಂಥದ್ದೆಲ್ಲ ಬೇಕಾದಷ್ಟು ನೋಡಲು ಸಿಗುತ್ತದೆ. ಈಗ ನಾರ್ತ್ ಇಂಡಿಯಾದ ಜನಪ್ರಿಯ ಆಹಾರ ಚಪಾತಿ ಸುಡಲು ಈಝಿ ಐಡಿಯಾ ಸಿಕ್ಕಿದೆ.
ಒಡಿಶಾದ ಸೋನೆಪುರ್ನಲ್ಲಿ ಮಹಿಳೆಯೊಬ್ಬರು ಕಾರ್ ಬಾನೆಟ್ನಲ್ಲಿ ಚಪಾತಿ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆ ಕಾರಿನ ಬಾನೆಟ್ ಮೇಲೆ ಚಪಾತಿ ಮಾಡುತ್ತಿರುವ ದೃಶ್ಯ ಈಗ ಕ್ಯಾಮರಾದಲ್ಲಿ ಸೆರೆಯಾಗಿದೆ.
ಟ್ವಿಟ್ಟರ್ ಬಳಕೆದಾರ ನಿಲಮಾಧಬ್ ಪಾಂಡಾ (Nilamadhab Panda) ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ . ನನ್ನ ಪಟ್ಟಣ ಸೋನೆಪುರದ ದೃಶ್ಯಗಳಿವು. ಇಲ್ಲಿ ಬಿಸಿಲಿನ ಧಗೆ ತೀವ್ರವಾಗಿದ್ದು, ಒಬ್ಬರು ಕಾರ್ ಬಾನೆಟ್ನಲ್ಲಿ (car Bonnet) ಚಪಾತಿ ಮಾಡುತ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.
ಕಾರ್ ಬಾನೆಟ್ ಮೇಲೆ ರೊಟ್ಟಿ
ಮಣಿಪುರದ ಹವಾಮಾನ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ವೀಡಿಯೊಗೆ ಪ್ರತಿಕ್ರಿಯಿಸಿ, ಭಾರತಕ್ಕೆ ಅಭಿನಂದನೆಗಳು, ಅಂತಿಮವಾಗಿ ನಾವು ಕಾರ್ ಬಾನೆಟ್ ಮೇಲೆ ರೊಟ್ಟಿ ಮಾಡಬಹುದು ಎಂದು ಬರೆದು ಈ ಟ್ವಿಟ್ನ್ನು ರಿಟ್ವಿಟ್ ಮಾಡಿದ್ದಾರೆ.
ದೇಶದ ಹಲವು ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ಬಿಸಿಲು ಜನರನ್ನು ಏದುಸಿರು ಬಿಡುವಂತೆ ಮಾಡುತ್ತಿದೆ. ದೇಶದಲ್ಲಿ ಇನ್ನು ದಿನಗಳ ಕಾಲ ವಿಪರೀತ ಬಿಸಿಲು ಇರಲಿದೆ.
ಇದನ್ನೂ ಓದಿ: Viral Dance: ವಿದ್ಯಾರ್ಥಿನಿ ಜೊತೆ ಡ್ಯಾನ್ಸ್ ಮಾಡಿ ಪ್ರೋತ್ಸಾಹಿಸಿದ ಟೀಚರ್, ಸರ್ಕಾರಿ ಶಾಲೆ ವಿಡಿಯೋ ವೈರಲ್
ಒಡಿಶಾದಲ್ಲಿ ತೀವ್ರ ಬಿಸಿಗಾಳಿಯಿಂದಾಗಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಮುಂದಿನ ಐದು ದಿನಗಳ ಕಾಲ ಒಡಿಶಾದ ಜನರಿಗೆ ಚಾಲ್ತಿಯಲ್ಲಿರುವ ಹವಾಮಾನ ವೈಪರೀತ್ಯದಿಂದ ಯಾವುದೇ ವಿರಾಮವಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಮಂಗಳವಾರ ಹೇಳಿದ್ದಾರೆ.
ಒಣ ಗಾಳಿ-ಸುಡು ಬಿಸಿಲು
ವಾಯುವ್ಯ-ಪಶ್ಚಿಮ ಒಣ ಗಾಳಿ ಮತ್ತು ಹೆಚ್ಚಿನ ಸೌರ ಇನ್ಸೋಲೇಶನ್ನಿಂದಾಗಿ ಮುಂದಿನ ಮೂರು ದಿನಗಳಲ್ಲಿ ಒಡಿಶಾದ ಒಳಭಾಗದಲ್ಲಿ ಹಲವು ಸ್ಥಳಗಳಲ್ಲಿ ತಾಪಮಾನವು 3-5 ಡಿಗ್ರಿ ಸೆಲ್ಸಿಯಸ್ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
ದೆಹಲಿಯು ಮೇ 1 ರವರೆಗೆ, ಬಿಹಾರ ಏಪ್ರಿಲ್ 29 ರವರೆಗೆ, ಏಪ್ರಿಲ್ 28-30 ರ ಅವಧಿಯಲ್ಲಿ ಛತ್ತೀಸ್ಗಢದ ಮೇಲೆ ಮತ್ತು ಏಪ್ರಿಲ್ 28 ರಂದು ಗುಜರಾತ್ನ ಉತ್ತರ ಭಾಗಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಲಿದೆ.
ಇದನ್ನೂ ಓದಿ: Cancer Patient: ಚಿಕಿತ್ಸೆ ಪಡೆಯುತ್ತಿದ್ದ ಬೆಡ್ನಿಂದಲೇ ಕೆಲಸದ ಇಂಟರ್ವ್ಯೂ ನೀಡಿದ ಕ್ಯಾನ್ಸರ್ ರೋಗಿ, ಕೆಲಸ ಸಿಕ್ಕಿತಾ?
ಈಗಾಗಲೇ ಕೆಲವು ಭಾಗಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ, ರಾಜಸ್ಥಾನ, ದೆಹಲಿ, ಹರಿಯಾಣ, ಯುಪಿ ಮತ್ತು ಒಡಿಶಾದಲ್ಲಿ ಉಷ್ಣ ಅಲೆಯ ಹೆಚ್ಚಲಿದೆ. ಮೇ ಮೊದಲ ವಾರದವರೆಗೆ ಇದೇ ರೀತಿ ಪರಿಸ್ಥಿತಿ ಇರಲಿದ್ದು, ನಂತರ ಮಳೆ ಆಗುವ ಸಾಧ್ಯತೆ ಇದೆ.
ಜನರಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ, ಬಿಹಾರ, ಪಶ್ಚಿಮ ರಾಜಸ್ಥಾನ, ಒಡಿಶಾ, ವಿದರ್ಭ ಮತ್ತು ಸೌರಾಷ್ಟ್ರ ಕಚ್ನಲ್ಲಿ ಈಗಾಗಲೇ ಜನರು ಬಿಸಿಲಿಗೆ ತತ್ತರಿಸಿದ್ದಾರೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ದಾಟಲಿದೆ. ದೆಹಲಿಯಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಹಳದಿ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಮಕ್ಕಳು, ವೃದ್ಧರು, ಕಾಯಿಲೆಯಿಂದ ಬಳಲುತ್ತಿರುವವರು ಎಚ್ಚರಿಕೆವಹಿಸುವಂತೆ ಸೂಚನೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ