• Home
  • »
  • News
  • »
  • trend
  • »
  • ಅಬ್ಬಾ..! ಸತ್ತವರ ಹಲ್ಲು, ಬೂದಿಯಿಂದ ಆಭರಣ; ಅದಕ್ಕೆ ಲಕ್ಷಗಟ್ಟಲೇ ಬೆಲೆ..!

ಅಬ್ಬಾ..! ಸತ್ತವರ ಹಲ್ಲು, ಬೂದಿಯಿಂದ ಆಭರಣ; ಅದಕ್ಕೆ ಲಕ್ಷಗಟ್ಟಲೇ ಬೆಲೆ..!

ಸತ್ತವರ ಹಲ್ಲಿನಿಂದ ಮಾಡಿರುವ ಆಭರಣ

ಸತ್ತವರ ಹಲ್ಲಿನಿಂದ ಮಾಡಿರುವ ಆಭರಣ

ಮರಣ ಹೊಂದಿದವರ ದೇಹದ ಭಾಗಗಳಾದ ಹಲ್ಲು, ಕೂದಲು, ಬೂದಿಯನ್ನು ಬಳಸಿ ಈಕೆ ಆಭರಣ ತಯಾರಿಸುತ್ತಾಳೆ, ಮತ್ತು ಅದನ್ನವರ ಪ್ರೀತಿಪಾತ್ರರಿಗೆ ನೀಡುತ್ತಾಳೆ.

  • Share this:

ನಮ್ಮ ಪ್ರೀತಿಪಾತ್ರರು ಮರಣ ಹೊಂದಿದಾಗ ನಾವು ಅತೀವ ದುಃಖದಿಂದ ಬಳಲುತ್ತೇವೆ. ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೇವೆ. ಅವರ ನೆನಪಿಗಾಗಿ ಗಿಡ ನೆಡುವುದು, ಬಸ್ ನಿಲ್ದಾಣವನ್ನು ಕಟ್ಟುವುದು, ಸ್ಮಾರಕಗಳನ್ನು ನಿರ್ಮಿಸುವುದು, ಹೀಗೆ ಅವರ ನೆನಪನ್ನು ಹಸಿರಾಗಿಸಲು ಹಲವಾರು ಕಾರ್ಯಗಳನ್ನು ನಡೆಸುತ್ತೇವೆ. ಆದರೆ ಮರಣ ಹೊಂದಿದವರ ಹಲ್ಲು, ಕೂದಲು ಮತ್ತು ಬೂದಿಯಿಂದ ಆಭರಣಗಳನ್ನು ತಯಾರಿಸಿ ಅದನ್ನವರ ಪ್ರೀತಿಪಾತ್ರರಿಗೆ ಅವರ ನೆನಪಿನ ಕುರುಹಾಗಿ ನೀಡುವುದನ್ನು ನೀವೆಲ್ಲಾದರೂ ಕೇಳಿದ್ದೀರಾ? ಜಾಕಿ ವಿಲಿಯಮ್ಸ್ ಎಂಬ ಮಹಿಳೆ ಮರಣಿಸಿದವರ ಕೂದಲು, ಹಲ್ಲು, ಮತ್ತು ಬೂದಿಗಳನ್ನು ಬಳಸಿ ಆಭರಣಗಳನ್ನು ತಯಾರಿಸುತ್ತಾಳೆ. ಹಾಗಾದರೆ ಜಾಕಿ ವಿಲಿಯಮ್ಸ್ ಈ ಆಭರಣಗಳನ್ನು ಹೇಗೆ ತಯಾರಿಸುತ್ತಾಳೆ? ಮತ್ತು ಈ ಯೋಚನೆ ಅವಳಿಗೆ ಬಂದದ್ದಾದರೂ ಹೇಗೆ ಎಂಬುದನ್ನು ತಿಳಿಯೋಣ.


ಆಸ್ಟ್ರೇಲಿಯಾದಲ್ಲಿರುವ ಆಭರಣ ತಯಾರಕರು ಮರಣ ಹೊಂದಿದವರ ದೇಹದ ಭಾಗಗಳಿಂದ ಉಂಗುರ ಮತ್ತು ನೆಕ್ಲೇಸ್‌ಗಳನ್ನು ತಯಾರಿಸಿ ಅದನ್ನವರ ಪ್ರೀತಿ ಪಾತ್ರರಿಗೆ ನೀಡುತ್ತದೆ. ಇದೊಂದು ರೀತಿಯ ವಿನೂತನ ಪದ್ಧತಿಯಾಗಿದ್ದು ಅವರ ನೆನಪು ಅವರ ಪ್ರೀತಿಪಾತ್ರರೊಂದಿಗೆ ಹಸಿರಾಗಿರುತ್ತದೆ ಎಂಬುದು ಆಭರಣ ತಯಾರಕರ ಮಾತಾಗಿದೆ.


ಗ್ರೇವ್ ಮೆಟಾಲಮ್ ಹೆಸರಿನ ಆಭರಣದ ಅಂಗಡಿಯನ್ನು 29 ರ ಹರೆಯದ ಜಾಕಿ ವಿಲಿಯಮ್ಸ್ ನಡೆಸುತ್ತಿದ್ದಾರೆ. ಕೈಯಲ್ಲೇ ಮಾಡಿದ ಕುಸುರಿ ಕೆಲಸಗಳನ್ನೊಳಗೊಂಡಿರುವ ಆಭರಣಗಳನ್ನು ಈಕೆ ಮಾರಾಟ ಮಾಡುತ್ತಿದ್ದು ಈ ಆಭರಣ ಇತರೆ ಆಭರಣಗಳಿಗಿಂತ ವಿಭಿನ್ನವಾಗಿದೆ. ಮರಣ ಹೊಂದಿದವರ ದೇಹದ ಭಾಗಗಳಾದ ಹಲ್ಲು, ಕೂದಲು, ಬೂದಿಯನ್ನು ಬಳಸಿ ಈಕೆ ಆಭರಣ ತಯಾರಿಸುತ್ತಾಳೆ, ಮತ್ತು ಅದನ್ನವರ ಪ್ರೀತಿಪಾತ್ರರಿಗೆ ನೀಡುತ್ತಾಳೆ. ಗರ್ಭಾಶಯದಿಂದ ನೆಕ್ಲೇಸ್ ತಯಾರಿಸುವ ಆರ್ಡರ್ ಕೂಡ ಜಾಕಿಗೆ ಬಂದಿದೆಯಂತೆ.


ಇದನ್ನೂ ಓದಿ:Karnataka Weather Update| ದೇಶದಾದ್ಯಂತ ವ್ಯಾಪಿಸಿದ ನೈರುತ್ಯ ಮುಂಗಾರು, ಭಾರತದೆಲ್ಲೆಡೆ ವ್ಯಾಪಕ ಮಳೆ; ಹಲವೆಡೆ ರೆಡ್​ ಅಲರ್ಟ್​!

ನಾನು ಹಲ್ಲನ್ನು ಬಳಸಿ ಕ್ಲೈಂಟ್‌ಗೆ ಬೇಕಾದ ರೀತಿಯ ಆಭರಣಗಳನ್ನು ಸಿದ್ಧಪಡಿಸಿಕೊಡುತ್ತೇನೆ. ಮೆಟಲ್‌ನಿಂದ ಸಾಮಾನ್ಯವಾಗಿ ಆಭರಣ ತಯಾರಿಸುತ್ತೇನೆ. ಮರಣ ಹೊಂದಿದವರ ನೆನಪು ಸದಾ ಕಾಲ ಅವರನ್ನು ಇಷ್ಟಪಟ್ಟವರ ಜೊತೆಗಿರಬೇಕೆಂಬ ಬಯಕೆಯಿಂದ ನಾನು ಆಭರಣ ತಯಾರಿಸುವ ಹವ್ಯಾಸವನ್ನು ಬೆಳೆಸಿಕೊಂಡೆ ಎಂದು ಜಾಕಿ ಹೇಳುತ್ತಾಳೆ. ಕೆಲವು ವರ್ಷಗಳ ಹಿಂದೆ ಜಾಕಿಯ ಗೆಳೆಯ ಮರಣ ಹೊಂದಿದಾಗ ಇತರರ ದುಃಖವನ್ನು ನಿವಾರಿಸುವ ಏನಾದರೂ ಕೆಲಸವನ್ನು ಮಾಡಬೇಕೆಂಬ ನಿರ್ಧಾರಕ್ಕೆ ಬರುತ್ತಾಳೆ.


ನನ್ನ ವೃತ್ತಿಜೀವನದಲ್ಲಿ ಹೆಚ್ಚು ಸ್ಮರಣೀಯ ಕೆಲಸವೆಂದರೆ ಗರ್ಭಾಶಯವನ್ನು ಬಳಸಿಕೊಂಡು ಆಭರಣ ತಯಾರಿಸಲು ಕ್ಲೈಂಟ್ ಒಬ್ಬರು ವಿನಂತಿಸಿಕೊಂಡಿದ್ದು. ಆದರೆ ಅದೊಂದು ಪ್ಲಾಸ್ಟಿಕ್ ಆಗಿರುವುದರಿಂದ ನಾನು ನಿರಾಕರಿಸಿದೆ. ಅದೊಂದು ಬುಲೆಟ್ ಕೇಸಿಂಗ್ ಆಗಿದ್ದು ಅದರಿಂದ ಗುಂಡು ಹಾರಿಸಿಕೊಂಡು ಕ್ಲೈಂಟ್‌ನ ತಾತ ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ಬೂದಿಯನ್ನು ಬಳಸಿ ಆಭರಣಗಳನ್ನು ತಯಾರಿಸುತ್ತೇನೆ. ಸಾಕುಪ್ರಾಣಿಗಳ ಬೂದಿಯನ್ನು ನಾನು ಆಭರಣಗಳಲ್ಲಿ ಬಳಸಿದ್ದಿದೆ ಎಂದು ಜಾಕಿ ಹೇಳುತ್ತಾಳೆ.


ಜಾಕಿ 2017 ರವರೆಗೆ ಮೆಲ್ಬೋರ್ನ್ ಪಾಲಿಟೆಕ್ನಿಕ್‌ನಲ್ಲಿ ಆಭರಣ ಮತ್ತು ವಸ್ತು ವಿನ್ಯಾಸದಲ್ಲಿ ಡಿಪ್ಲೊಮಾ ಪದವೀಧರೆಯಾಗಿದ್ದಾರೆ. ಪದವಿ ಪಡೆದ ನಂತರ ಎಲ್ಲಿಯೂ ಉದ್ಯೋಗ ದೊರಕಿದ್ದಾಗ ಆಕೆ ತನ್ನದೇ ಸ್ವಂತ ವ್ಯವಹಾರ ಮಾಡುವ ತೀರ್ಮಾನವನ್ನು ನಿರ್ಧರಿಸಿದರು. ಜಾಕಿ ಮಾಡುವ ಪ್ರತಿಯೊಂದು ಆಭರಣವು ಆರರಿಂದ ಎಂಟು ವಾರಗಳನ್ನು ಹಿಡಿಯುತ್ತದೆ. ಆಭರಣದ ಬೆಲೆಯು ರೂ 19,000 ದಿಂದ ಪ್ರಾರಂಭಗೊಂಡು 5.5 ಲಕ್ಷದವರೆಗೆ ಇದೆ. ಕಸ್ಟಮರ್‌ನ ವಿನಂತಿಗೆ ಅನುಸಾರವಾಗಿ ಜಾಕಿ ಆಭರಣಗಳನ್ನು ತಯಾರಿಸುತ್ತಾರೆ. ಬೆಳ್ಳಿ, ಚಿನ್ನ ಮತ್ತು ಪ್ಲಾಟಿನಮ್ ಬಳಸಿಕೊಂಡು ಆಕೆ ಆಭರಣವನ್ನು ಸಿದ್ಧಪಡಿಸುತ್ತಾಳೆ.


ಇದನ್ನೂ ಓದಿ:Anekal: ಲಾಕ್​ಡೌನ್​ ತೆರವಾದರೂ ಚೇತರಿಕೆ ಕಾಣದ ಪುಷ್ಪೋದ್ಯಮ; ಹೂ ಬೆಳೆಗಾರರ ಸಂಕಷ್ಟ ಕೇಳೋರಿಲ್ಲ..!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:Latha CG
First published: