ಕೆಲವೊಮ್ಮೆ ಸೋಶಿಯಲ್ ಮೀಡಿಯಾ(Social Media)ದಲ್ಲಿ ವಿಚಿತ್ರ ಅನ್ನಿಸುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ರೀತಿ ವಿಡಿಯೋ (Viral Video) ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ರೈಲಿನಡಿ (Railways) ಸಿಲುಕುತ್ತಿರುವ ಪ್ರಯಾಣಿಕರನ್ನು (Passengers) ನಿಲ್ದಾಣದ ಸಿಬ್ಬಂದಿ ರಕ್ಷಣೆ ಮಾಡುವ ವಿಡಿಯೋಗಳನ್ನು ನೋಡಿರುತ್ತಿರಿ. ಒಂದಿಷ್ಟು ಬಾರಿ ರೈಲು ಹಳಿಗಳ (Railway Track) ಮೇಲೆಯೇ ಜನರು ಮೊಬೈಲ್ (mobile) ನಲ್ಲಿಯೇ ಮಾತನಾಡುತ್ತಾ ಹೋಗುತ್ತಿರುತ್ತಾರೆ. ಇದೀಗ ಅಂತಹುವುದೇ ಒಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಗೆ ಹುಚ್ಚು ಹಿಡಿದಿದೆಯಾ? ಆಕೆ ಮಾಡಿದ ಕೆಲಸ ಕಂಡು ಜನರು ಆಕ್ರೋಶ ಹೊರ ಹಾಕಿದ್ದಾರೆ. ಹಾಗಾದ್ರೆ ಆ ವಿಡಿಯೋದಲ್ಲಿ ಏನಿದೆ ಅಂತ ನೋಡೋಣ ಬನ್ನಿ
ಮಹಿಳೆಯೊಬ್ಬರು ರೈಲಿನ ಕೆಳಗೆ ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಪ್ರಿಲ್ 12 ರಂದು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟರ್ ನಲ್ಲಿ ಮಹಿಳೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದುವರೆಗೂ ಸುಮಾರು 94 ಸಾವಿರಕ್ಕೂ ಅಧಿಕ ವ್ಯೈವ್ ಮತ್ತು 3 ಸಾವಿರಕ್ಕೂ ಹೆಚ್ಚು ಲೈಕ್ ಗಳೊಂದಿಗೆ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
ಇದೊಂದು ರೈಲ್ವೇ ನಿಲ್ದಾಣದಲ್ಲಿ ಮಾಡಿರುವ ವಿಡಿಯೋ ಇದಾಗಿದೆ. ಓರ್ವ ಪುರುಷ ತನ್ನ ಮೊಬೈಲ್ ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಗೂಡ್ಸ್ ರೈಲು ಹೋಗುತ್ತಿರೋದನ್ನು ಗಮನಿಸಬಹುದು.
ಇದನ್ನೂ ಓದಿ: Good News: ಹಣ ಇಲ್ಲದಿದ್ದರೂ ರೈಲು ಟಿಕೆಟ್ ಬುಕ್ ಮಾಡೋದು ಹೀಗೆ!
ರೈಲು ಅಲ್ಲಿಂದ ಪಾಸ್ ಆಗುತ್ತಲೇ ಟ್ರ್ಯಾಕ್ ಮೇಲೆ ಮಹಿಳೆಯೊಬ್ಬರು ಮಲಗಿರೋದನ್ನು ನೀವು ನೋಡಬಹುದು. ಕೆಂಪು ಬಣ್ಣದ ಕುರ್ತಾ, ಮುಖದ ಮೇಲೆ ಸ್ಕಾರ್ಪ್ ಹಾಕಿಕೊಂಡಿದ್ದ ಮಹಿಳೆ ರೈಲು ಹೋಗುತ್ತಿದ್ದಂತೆ ಹಳಿಗಳ ಮೇಲಿಂದ ಏಳುತ್ತಾರೆ. ಇನ್ನು ಆ ಮಹಿಳೆ ಏನು ಆಗಿಲ್ಲ ಎಂಬಂತೆ ಫೋನ್ ನಲ್ಲಿ ಮಾತನಾಡುತ್ತಾ ಪ್ಲಾಟ್ ಫಾರಂನತ್ತ ಬರುತ್ತಾರೆ. ವಿಡಿಯೋ ಮಾಡುತ್ತಿರುವ ವ್ಯಕ್ತಿ ಸಹ ಮಹಿಳೆಯನ್ನು ಮಾತನಾಡಿಸುತ್ತಾನೆ.
ವಿಡಿಯೋ ನೋಡಿದ ನೆಟ್ಟಿಗರು ಶಾಕ್ !
"ಫೋನ್ ಪಾರ್ ಗಾಸಿಪ್ ಜ್ಯಾದಾ ಜರೂರಿ ಹೈ" (ಫೋನ್ ನಲ್ಲಿ ಗಾಸಿಪ್ ಮಾಡೋದು ಹೆಚ್ಚಾಯ್ತಾ) ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿತು, ಅವರಲ್ಲಿ ಹಲವರು ವೀಡಿಯೊವನ್ನು ಫನ್ನಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಒಂದಿಷ್ಟು ಜನ ಈ ಮಹಿಳೆ ಪ್ರತಿದಿನ ಹೇಗೆ ಮಾಡುತ್ತಾಳೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಮಹಿಳೆಯ ವಿರುದ್ಧ ಆಕ್ರೋಶ
ಈ ರೀತಿಯ ಹುಚ್ಚು ಸಾಹಸಕ್ಕೆ ಮುಂದಾಗೋದು ತಪ್ಪು. ಕೂಡಲೇ ರೈಲ್ವೇ ಪೊಲೀಸರು ಮಹಿಳೆಯನ್ನು ಪತ್ತೆ ಮಾಡಿ, ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ಫನ್ನಿ ಎಮೋಜಿ ಮತ್ತು ಮೀಮ್ಸ್ ಜೊತೆಗೆ ಈ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Infinity Train: ಗುರುತ್ವಾಕರ್ಷಣೆಯ ಬಲದಿಂದ ಚಲಿಸುತ್ತೆ ಈ ರೈಲು! ಡೀಸೆಲ್, ವಿದ್ಯುಚ್ಛಕ್ತಿ ಬೇಡವೇ ಬೇಡ
ಕೋಲಾರದಲ್ಲಿ ತಪ್ಪಿದ ಮಹಾದುರಂತ
ಕೋಲಾರ (Kolar) ಜಿಲ್ಲೆಯ ಟೇಕಲ್ ರೈಲ್ವೇ (Tekal Railway Station) ನಿಲ್ದಾಣದಲ್ಲಿ ಮಹಾ ದುರಂತವೊಂದು ತಪ್ಪಿದೆ. ನೂರಾರು ಜನರು ರೈಲು ಹಳಿ ಕ್ರಾಸ್ (Railway Track Cross) ಮಾಡುತ್ತಿರುವಾಗಲೇ ಶತಾಬ್ದಿ ಎಕ್ಸ್ ಪ್ರೆಸ್ (Shatabdi Express) ಬಂದಿದ್ದರಿಂದ ಓರ್ವ ಸಾವನ್ನಪ್ಪಿದ್ದಾನೆ. ಮಾರ್ಚ್ 9, 2022ರಂದು ಘಟನೆ ಸಂಭವಿಸಿದ್ದು, ಕೆಜಿಎಫ್ ಮೂಲದ ಓರ್ವ ಸಾವನ್ನಪ್ಪಿದ್ದಾನೆ. ಈ ಘಟನೆಗೆ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಪ್ರಯಾಣಿಕರು (Passengers) ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ