Potato: 5 ವರ್ಷಗಳಿಂದ ಜೊತೆಗಿದ್ದ ಆಲೂಗಡ್ಡೆಗೆ ನಾಮಕರಣ ಮಾಡಿದ ಮಹಿಳೆ!

ತರಕಾರಿ ಇಷ್ಟವಾಯಿತು ಎಂದು ವರ್ಷಾನುಗಟ್ಟಲೆ ಅದನ್ನು ಜೊತೆಗಿಟ್ಟುಕೊಳ್ಳುವವರ ಬಗ್ಗೆ ಕೇಳಿದ್ದೀರಾ? ಇಲ್ಲಿ ಈ ಮಹಿಳೆ ಆಲೂಗಡ್ಡೆ ಜೊತೆಗಿಟ್ಟುಕೊಂಡಿದ್ದಲ್ಲದೇ, ಅದಕ್ಕೆ ನಾಮಕರಣ ಬೇರೆ ಮಾಡಿದ್ದಾಳಂತೆ!

ಸದಾ ನಗುತ್ತಿರುವ ಆಲೂಗಡ್ಡೆ

ಸದಾ ನಗುತ್ತಿರುವ ಆಲೂಗಡ್ಡೆ

  • Share this:
ಜನರು ಸಾಮಾನ್ಯವಾಗಿ ತಮಗಿಷ್ಟವಾದದ್ದನ್ನು ವರ್ಷಾನುಗಟ್ಟಲೆ ಅಥವಾ ಜೀವಮಾನವಿಡಿ ಜೊತೆಗೆ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಆದರೆ ತರಕಾರಿ (Vegetables) ಇಷ್ಟವಾಯಿತು ಎಂದು ವರ್ಷಾನುಗಟ್ಟಲೆ ಅದನ್ನು ಜೊತೆಗಿಟ್ಟುಕೊಳ್ಳುವವರ ಬಗ್ಗೆ ಕೇಳಿದ್ದೀರಾ? ಯೂಎಸ್‍ನ (USA) ಕೊಲೊರಾಡೋದ ಪಾರ್ಕರ್‍ನಲ್ಲಿ ಅಂತಹ ಮಹಿಳೆಯೊಬ್ಬರಿದ್ದಾರೆ (Women). ಆಕೆಯ ಹೆಸರು ಲೋರಿ ಬ್ರಿಕ್ಸ್. 2017 ರಲ್ಲಿ ನಗುಮೊಗದ ಆಲೂಗಡ್ಡೆಯೊಂದು ನೋಡಲು ಆತ್ಮೀಯವಾಗಿ ಕಂಡಿತು ಎಂದು, ಅದನ್ನು ಬಳಸದೆ ಇದುವರೆಗೂ ತನ್ನ ಬಳಿಯೇ ಇಟ್ಟುಕೊಂಡಿದ್ದಾಳೆ ಆಕೆ ! ನಗುಮುಖದ ಆಲೂಗಡ್ಡೆಯೇ (Potato)? ಬಹುಷಃ ಅದು ಆ ಮಹಿಳೆಯ ಭ್ರಮೆ ಇರಬೇಕು ಎಂದುಕೊಳ್ಳುತ್ತೀದ್ದೀರಾ? ಖಂಡಿತಾ ಅಲ್ಲ, ಆ ಆಲೂಗಡ್ಡೆಯ ಮೇಲೆ ಕಣ್ಣು, ಮೂಗಿನ ಹೊಳ್ಳೆಗಳು ಮತ್ತು ನಗು ಮುಖದ ಬಾಯಿಯ ಲಕ್ಷಣಗಳನ್ನು ಕಾಣಬಹುದು! ವಿಚಿತ್ರ ಎನಿಸಿದರೂ ಇದು ನಿಜ.

ಸದಾ ನಗುತ್ತಿರುವ ಆಲೂಗಡ್ಡೆ
“ಐದು ವರ್ಷಗಳ ಹಿಂದೆ ಸೂಪರ್ ಮಾರ್ಕೆಟ್‍ನಲ್ಲಿ ಕೊಂಡ ಆಲೂಗಡ್ಡೆಗಳ ಚೀಲದಲ್ಲಿ ಆ ಆಲೂಗಡ್ಡೆ ನನಗೆ ಸಿಕ್ಕಿತ್ತು. ನಾನು ಬೆಳಗ್ಗಿನ ಉಪಹಾರಕ್ಕಾಗಿ ಹ್ಯಾಶ್ ಬ್ರೌನ್ಸ್ ಗಳನ್ನು ಮಾಡಲು ಅವುಗಳನ್ನು ಹೊರ ತೆಗೆಯುತ್ತಿದ್ದೆ ಮತ್ತು ನನಗೆ ಆ ಅಲೂಗಡ್ಡೆ ನನ್ನನ್ನು ನೋಡಿ ನಗುತ್ತಿದೆ ಎಂದೆನಿಸಿತು” ಎಂದು ಲೋರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

“ನನಗೆ ಅದರಿಂದ ಹ್ಯಾಶ್ ಬ್ರೌನ್ ಮಾಡಲು ಇಷ್ಟವಾಗಲಿಲ್ಲ, ಏಕೆಂದರೆ ಅದು ನೋಡಲು ತುಂಬಾ ಆತ್ಮೀಯವೆನಿಸಿತು. ನನಗೆ ಅದು ಎಷ್ಟು ನಗುವನ್ನು ತರಿಸಿತು ಎಂದರೆ, ನನ್ನಿಂದ ಅದನ್ನು ಎಸೆಯಲು ಅಥವಾ ತಿನ್ನಲು ಸಾಧ್ಯವಾಗಲೇ ಇಲ್ಲ. ಅದರಿಂದ ಮುಕ್ತಿ ಪಡೆಯುವುದು ನಾಚಿಕೆಗೇಡಿನ ಸಂಗತಿ ಎಂದು ಆಲೋಚಿಸಿದ್ದು ನನಗೆ ನೆನಪಿದೆ” ಎಂದಿದ್ದಾರೆ ಅವರು.

ಆಲೂಗಡ್ಡೆಗೆ ನಾಮಕರಣ
ಕಣ್ಣು, ಮೂಗು, ಬಾಯಿಯ ಲಕ್ಷಣಗಳನ್ನು ಹೊಂದಿದ್ದ ಆ ಆಲೂಗಡ್ಡೆ ಸಿಕ್ಕಾಪಟ್ಟೆ ಮುದ್ದಾಗಿದೆ ಎಂದು ಲೋರಿ ಮತ್ತು ಆಕೆಯ ಗಂಡ ಮೈಕೆಲ್ ಬ್ರಿಕ್ಸ್ ಅದನ್ನು ತಿನ್ನಲಿಲ್ಲ ಮತ್ತು ಎಸೆಯಲೂ ಇಲ್ಲ ಎಂಬುದೇನೋ ಸರಿ. ಇನ್ನೂ ವಿಚಿತ್ರವೆಂದರೆ ಅವರಿಬ್ಬರು ಅಷ್ಟಕ್ಕೆ ಸುಮ್ಮನಾಗದೆ ಆಲೂಗಡ್ಡೆಗೆ ಹೆಸರನ್ನು ಕೂಡ ಇಟ್ಟರು. ಆದೇನು ಹೆಸರಂತೀರಾ? ಪೀಟ್ ! ಲೋರಿಗೆ ನಗುಮೊಗದ ಆಲೂಗಡ್ಡೆ ಮಹಾಶಯ ಪೀಟ್ ಎಷ್ಟು ಇಷ್ಟವಾಯಿತೆಂದರೆ, ಆಕೆ ಅದರ ಜೊತೆ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಪೀಟ್ ಅನ್ನು ಎಸೆಯಲಿಲ್ಲ, ತಿನ್ನಲಿಲ್ಲ ಇನ್ನೇನು ಮಾಡಿದರು ಅಂತೀರಾ?ಐದು ವರ್ಷಗಳಿಂದ ಫ್ರಿಡ್ಜಿನಲ್ಲಿ ಇರುವ ಆಲೂಗಡ್ಡೆ
ಲೋರಿ ತನ್ನ ಸಹೋದರಿಯಿಂದ ಅಲೂಗಡ್ಡೆಯನ್ನು ಫ್ರೀಜ್ ಮಾಡುವುದು ಹೇಗೆ ಎಂದು ತಿಳಿದುಕೊಂಡು, ಪೀಟ್ ಅನ್ನು ಫ್ರಿಡ್ಜಿನಲ್ಲಿ ಸಂರಕ್ಷಿಸಿ ಇಟ್ಟಿದ್ದಾರೆ. ಐದು ವರ್ಷಗಳಿಂದ ಪೀಟ್ ಲೋರಿಯ ಮನೆಯ ಫ್ರಿಡ್ಜಿನಲ್ಲಿ ಆರಾಮವಾಗಿ ಕುಳಿತಿದೆ. 51 ವರ್ಷದ ಲೋರಿಗೆ ಕಳೆದ ತಿಂಗಳು, ತನ್ನ ಮನೆಯ ಕೋಲ್ಡ್ ಸ್ಟೋರೆಜ್‍ನಲ್ಲಿರುವ ಪೀಟ್‍ನ ನೆನಪಾಯಿತಂತೆ. ಆಕೆ ಅದರ ಜೊತೆ ಮತ್ತೊಂದು ಫೋಟೋ ಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿದರು. ಲೋರಿಯು ಪೀಟ್ ಅನ್ನು, ಕೋಲ್ಡ್ ಸ್ಟೋರೆಜ್‍ನಿಂದ ಹೊರ ತೆಗೆದಾಗ ಅದು “ಇನ್ನೂ ನಗುತ್ತಿತ್ತು”. ಅದಕ್ಕೊಂದು ಮಂಜುಗಡ್ಡೆಯ ಗಡ್ಡವಿತ್ತು ಮತ್ತು ಮೊಳಕೆ ಪಾದಗಳಿದ್ದವು ಎಂದಿದ್ದಾರೆ ಅವರು.

ಇದನ್ನೂ ಓದಿ:  Bride and Groom: ಮದುವೆಯಲ್ಲಿ ವಧು ವರರ ಬೆಂಕಿಯ ಸಾಹಸಮಯ ಎಂಟ್ರಿ! ವಿಡಿಯೋ ವೈರಲ್

ಐದು ವರ್ಷಗಳ ನಂತರದ ಫೋಟೋಶೂಟ್ ಮಾಡಿಸಿದ್ದೇನೋ ಆಯಿತು, ಆದರೆ ಪೀಟ್ ಅನ್ನು ಇನ್ನೂ ಐದು ವರ್ಷಗಳ ಕಾಲ ಸಂರಕ್ಷಿಸಿಡುವ ಇರಾದೆ ಲೋರಿಗಿದೆ. ಪೀಟ್ ಜೊತೆ ಒಂದು ದಶಕದ ನಂತರದ ಫೋಟೋ ಶೂಟ್ ಮಾಡಿಸುವ ಆಸೆ ಆಕೆಯದ್ದು. ಲೋರಿ ಮತ್ತು ಪೀಟ್ ಜೊತೆಗಿರುವ ಫೋಟೋಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗಿವೆ.

ಈ ವಿಚಿತ್ರ ಘಟನೆಯ ಬಗ್ಗೆ ನೆಟ್ಟಿಗರು ಹೇಳಿದ್ದೇನು?
“ಜಗತ್ತಿನಲ್ಲಿ ಇಂತದ್ದನ್ನೆಲ್ಲಾ ಮಾಡುವ ಜನರಿದ್ದಾರೆ ಎಂಬುವುದನ್ನು ತಿಳಿದುಕೊಂಡಾಗ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ” ಎಂದು ಒಬ್ಬ ನೆಟ್ಟಿಗರು ಪ್ರತಿಕ್ರಿಯೆ ಬರೆದರೆ, ಇನ್ನೊಬ್ಬರು, “ಇದು ಒಂಥರಾ ವಿಚಿತ್ರವಾಗಿದೆ, ಅಸಲಿ ಆಶೀರ್ವಾದಕ್ಕಾಗಿ ಧನ್ಯವಾದಗಳು” ಎಂದು ಬರೆದಿದ್ದಾರೆ.

ಇದನ್ನೂ ಓದಿ:  Goat Marriage: ಡೌರಿ ಕೊಟ್ಟು ಹೆಣ್ಣು ಮೇಕೆಯನ್ನು ಮದುವೆಯಾದ ಭೂಪ! ಕಾರಣ ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಿ

“ಅವನು ಜನರಿಗೆ ಈ ಮಟ್ಟಿಗೆ ಸಂತೋಷ ನೀಡುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬರಿಗೂ ಸಿಲ್ಲಿಯಾಗಿರುವುದು ಏನಾದರೂ ಬೇಕು ಎಂದು ನನಗೆ ಅನಿಸುತ್ತದೆ ಮತ್ತು ಅದು ಎಲ್ಲರಿಗೂ ತೃಪ್ತಿ ನೀಡುತ್ತದೆ. ತಮ್ಮ ದಿನವನ್ನು ಸಂತಸದಾಯಕವಾಗಿಸಿತು ಎಂದು ಜನರು ಹೇಳುತ್ತಿದ್ದಾರೆ ಮತ್ತು ಈ ಸಂಗತಿ ನನಗೆ ಸಂತೋಷ ನೀಡಿದೆ” ಎಂದು ಲೋರಿ ಹೇಳಿದ್ದಾರೆ.
Published by:Ashwini Prabhu
First published: