ಇಷ್ಟು ಅತಿಯಾಗಿ ಪ್ರೀತಿಸುವ ಗಂಡ ಬೇಡ; ವಿಚ್ಛೇದನ ಕೊಡಿಸಿ

ಕಳೆದ ಒಂದು ವರ್ಷದ ಹಿಂದಷ್ಟೆ ಅದ್ದೂರಿಯಾಗಿ ಮದುವೆಯಾದ ಈ ಜೋಡಿ ಸುಖವಾಗಿ ಜೀವನ ಕಳೆಯುತ್ತಿದ್ದರು. ಆದರೆ, ಈ ಸುಖವೇ ಇವರ ಪಾಲಿಗೆ ವಿಷವಾಗಿ ಪರಿಣಮಿಸಿದೆ.

Seema.R | news18-kannada
Updated:August 22, 2019, 10:38 PM IST
ಇಷ್ಟು ಅತಿಯಾಗಿ ಪ್ರೀತಿಸುವ ಗಂಡ ಬೇಡ; ವಿಚ್ಛೇದನ ಕೊಡಿಸಿ
ಸಾಂದರ್ಭಿಕ ಚಿತ್ರ
Seema.R | news18-kannada
Updated: August 22, 2019, 10:38 PM IST
ಗಂಡ ತಮ್ಮನ್ನು ತುಂಬಾ ಪ್ರೀತಿಸಬೇಕು ಎಂಬುದು ಪ್ರತಿಯೊಬ್ಬ ಹೆಣ್ಣು ಮಕ್ಕಳ ಆಸೆ. ಆದರೆ ಇಲ್ಲಿ ಗಂಡನ ಅತಿಯಾದ ಪ್ರೀತಿ ಈ ಮಹಿಳೆಗೆ ಬೇಸರ ತರಿಸಿ. ಇಷ್ಟೊಂದು ಮುದ್ದಿಸುವ ಗಂಡನ ನನಗೆ ಬೇಡ ಎಂದು ಕೋರ್ಟ್​ ಮೆಟ್ಟಿಲೇರಿದ್ದಾಳೆ.

ಅಚ್ಚರಿಯಾದರೂ ನಿಜ. ಅರಬ್​ ಸಂಯುಕ್ತ ಸಂಸ್ಥಾನದ ಶಾರ್ಜಾ ನ್ಯಾಯಾಲಯದ ಮುಂದೆ ಈ ರೀತಿಯ ಒಂದು ಪ್ರಕರಣ ಬಂದಿದೆ ಎಂದು ಖಲೀಜ ಟೈಮ್ಸ್​ ವರದಿ ಮಾಡಿದೆ.

ಕಳೆದ ಒಂದು ವರ್ಷದ ಹಿಂದಷ್ಟೆ ಅದ್ದೂರಿಯಾಗಿ ಮದುವೆಯಾದ ಈ ಜೋಡಿ ಸುಖವಾಗಿ ಜೀವನ ಕಳೆಯುತ್ತಿದ್ದರು. ಆದರೆ, ಈ ಸುಖವೇ ಇವರ ಪಾಲಿಗೆ ವಿಷವಾಗಿ ಪರಿಣಮಿಸಿದೆ.

ನನ್ನ ಗಂಡನ ನನಗೆ ಯಾವುದೇ ರೀತಿಯ ನೋವು ಆಗಬಾರದು ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಮನೆಯ ಕೆಲಸವನ್ನು ಮಾಡಲು ಬಿಡುವುದಿಲ್ಲ. ಅಡುಗೆ ಕೂಡ ಅವರೇ ಮಾಡುತ್ತಾರೆ. ಸಿಟ್ಟು ಬಂದು ಜಗಳವಾಡಿದರೂ ನನ್ನದೇ ತಪ್ಪು ಎಂದು ಒಪ್ಪಿಕೊಂಡು ಸುಮ್ಮನಾಗುತ್ತಾರೆ.

ಇದನ್ನು ಓದಿ: ಚಂದ್ರನ ಮೊದಲ ಚಿತ್ರವನ್ನು ಕಳುಹಿಸಿದ ಚಂದ್ರಯಾನ-2

ಇವರು ನನ್ನ ಮುಂದೆ ಮಾತ್ರ ಈ ರೀತಿ ಮಾಡುತ್ತಾರಾ ಎಂಬುದನ್ನು ಪರೀಕ್ಷೆ ಮಾಡಿದೆ. ಆಗ ಇವರು ನನ್ನನ್ನು ಅತಿಯಾಗಿ ಪ್ರೀತಿಸುತ್ತಿರುವುದು ತಿಳಿದು ಬಂದಿತು. ಈ ಉಸಿರುಗಟ್ಟಿಸುವ ಪ್ರೀತಿಯಿಂದ ನನ್ನ ಜೀವನ ನರಕವಾಗಿದೆ. ನನಗೆ ವಿಚ್ಛೇದನ ನೀಡಿ ಎಂದು ಕೋರ್ಟ್​ ಮೊರೆ ಹೋಗಿದ್ದಾಳೆ.

ಈ ವಾದವನ್ನು ಆಲಿಸಿದ ನ್ಯಾಯಾಲಯ ಪ್ರಕರಣವನ್ನು ಹಿಂಪಡೆಯುವಂತೆ ಹೆಂಡತಿಗೆ ತಿಳಿಸಿದೆ. ಮದುವೆಯಾದ ಹೊಸದರಲ್ಲಿ ಇಂತಹ ತಪ್ಪುಗಳು ಆಗುವುದು ಸಹಜ. ಇದನ್ನು ಹೊರಗೆ ಬಗೆಹರಿಸಿಕೊಳ್ಳಿ ಎಂದು ನ್ಯಾಯಾಲಯ ತಿಳಿಸಿದೆ.
Loading...

First published:August 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...