Viral Video: ಸೀರೆಯುಟ್ಟು ಕ್ರಿಕೆಟ್​ ಮೈದಾನದಲ್ಲಿ ಓಡಿದ ಮಹಿಳೆ ಕಿಸ್ ಮಾಡಿದ್ದು ಯಾರಿಗೆ?!

ಕ್ರಿಕೆಟ್​ ಮ್ಯಾಚ್​ ನಡೆಯುತ್ತಿರುವಾಗಲೇ ಮೈದಾನಕ್ಕೆ ಹಾರಿ ಓಡಿದ ಕಪ್ಪು ಸೀರೆಯುಟ್ಟ ಮಹಿಳೆಯನ್ನು ತಡೆಯಲು ಅಲ್ಲಿನ ಸಿಬ್ಬಂದಿ ಪ್ರಯತ್ನಿಸಿದರೂ ಅವರಿಂದ ತಪ್ಪಿಸಿಕೊಂಡು ತನ್ನ ನೆಚ್ಚಿನ ಕ್ರಿಕೆಟಿಗನಿಗೆ ಕಿಸ್ ಮಾಡಿ ಓಡಿ ಬಂದ ವಿಡಿಯೋ ಈಗ ವೈರಲ್ ಆಗಿದೆ.

Sushma Chakre | news18
Updated:July 21, 2019, 11:05 AM IST
Viral Video: ಸೀರೆಯುಟ್ಟು ಕ್ರಿಕೆಟ್​ ಮೈದಾನದಲ್ಲಿ ಓಡಿದ ಮಹಿಳೆ ಕಿಸ್ ಮಾಡಿದ್ದು ಯಾರಿಗೆ?!
1975ರ ಟೆಸ್ಟ್​ ಮ್ಯಾಚ್​ ವೇಳೆ ತೆಗೆದ ವಿಡಿಯೋ ಕ್ಲಿಪ್
  • News18
  • Last Updated: July 21, 2019, 11:05 AM IST
  • Share this:
ಕಳೆದೊಂದು ವಾರದಿಂದ #SareeTwitter ಟ್ರೆಂಡಿಂಗ್​ನಲ್ಲಿದೆ. ಸಿನಿಮಾನಟಿಯರು, ಮಹಿಳಾ ರಾಜಕಾರಣಿಗಳು ತಾವು ಸೀರೆಯುಟ್ಟಹಳೇ  ಫೋಟೋಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳುವ ಮೂಲಕ ಭಾರತೀಯ ಸಂಪ್ರದಾಯದ ಪ್ರಚಾರ ಮಾಡಿದ್ದರು. ಟ್ವಿಟ್ಟರ್​ನಲ್ಲಿ ಚಾಲ್ತಿಯಲ್ಲಿರುವ ನಾನಾ ಚಾಲೆಂಜ್​ಗಳ ಜೊತೆಗೆ ಮಹಿಳೆಯರ ಈ ಸ್ಯಾರಿ ಚಾಲೆಂಜ್ ಕೂಡ ಟ್ರೆಂಡಿಂಗ್​ನಲ್ಲಿತ್ತು.

ಸ್ಯಾರಿ ಟ್ವಿಟ್ಟರ್​ ಹ್ಯಾಶ್​ಟ್ಯಾಗ್​ನೊಂದಿಗೆ ಟ್ರೆಂಡಿಂಗ್​ನಲ್ಲಿದ್ದ ನಟಿಮಣಿಯರು ಸೀರೆಯುಟ್ಟಿರುವ ತಮ್ಮ ಹಳೇ ಫೋಟೋಗಳನ್ನು ಪೋಸ್ಟ್​ ಮಾಡಿದ್ದರು. ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಸೀರೆಯುಟ್ಟಿರುವ ತಮ್ಮ ಫೋಟೋವನ್ನು #SareeTwitter ಹ್ಯಾಶ್​ಟ್ಯಾಗ್​ನೊಂದಿಗೆ ಪೋಸ್ಟ್​ ಮಾಡಿದ್ದರು. ನಟಿಯರಾದ ನಗ್ಮಾ, ಯಾಮಿ ಗೌತಮ್, ಸೋನಂ ಕಪೂರ್, ಮೀರಾ ಚೋಪ್ರಾ, ಸ್ವರ ಭಾಸ್ಕರ್ ಮುಂತಾದವರು ಸೀರೆಯುಟ್ಟ ಫೋಟೋವನ್ನು ಅಪ್​ಲೋ್ಡ್ ಮಾಡುತ್ತಿದ್ದಂತೆ ಅದರಿಂದ ಸ್ಫೂರ್ತಿ ಪಡೆದ ಮಹಿಳೆಯರು ತಮ್ಮ ಫೋಟೋವನ್ನು ಕೂಡ ಇದೇ ಹ್ಯಾಶ್ ಟ್ಯಾಗ್​ನೊಂದಿಗೆ ಪೋಸ್ಟ್​ ಮಾಡತೊಡಗಿದ್ದರು.ಆದರೆ, ಇದೀಗ 1975ರ ವಿಡಿಯೋವೊಂದು ಟ್ವಿಟ್ಟರ್​ನಲ್ಲಿ ವೈರಲ್ ಆಗಿದ್ದು, ಸೀರೆಯುಟ್ಟ ಮಹಿಳೆಯೊಬ್ಬರು ಕ್ರಿಕೆಟ್​ ಮೈದಾನದಲ್ಲಿ ಓಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬ್ಲಾಕ್ ಆ್ಯಂಡ್​ ವೈಟ್​ನಲ್ಲಿರುವ ಈ ವಿಡಿಯೋ 1975ರಲ್ಲಿ ಟೆಸ್ಟ್​ ಮ್ಯಾಚ್​ ನಡೆಯುತ್ತಿದ್ದ ವೇಳೆ ಚಿತ್ರೀಕರಿಸಿದ್ದಾಗಿದೆ. ಕ್ರಿಕೆಟ್​ ಮ್ಯಾಚ್​ ನಡೆಯುತ್ತಿರುವಾಗಲೇ ಮೈದಾನಕ್ಕೆ ಹಾರಿ ಓಡಿದ ಕಪ್ಪು ಸೀರೆಯುಟ್ಟ ಮಹಿಳೆಯನ್ನು ತಡೆಯಲು ಅಲ್ಲಿನ ಸಿಬ್ಬಂದಿ ಪ್ರಯತ್ನಿಸಿದರೂ ಅವರಿಂದ ತಪ್ಪಿಸಿಕೊಂಡು ತನ್ನ ನೆಚ್ಚಿನ ಕ್ರಿಕೆಟಿಗನಿಗೆ ಕಿಸ್ ಮಾಡಿ ಓಡಿ ಬಂದ ವಿಡಿಯೋ ಈಗ ವೈರಲ್ ಆಗಿದೆ.
Loading...
ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ 'ವೀರೇ ದಿ ವೆಡ್ಡಿಂಗ್' ಖ್ಯಾತಿಯ ನಟಿ ಸ್ವರ ಭಾಸ್ಕರ್, 'ಈ ಮಹಿಳೆ ಯಾರೆಂದು ಗೊತ್ತಿಲ್ಲ. ಆದರೆ, ಈಕೆ ನಿಜವಾಗಲೂ ರಾಕ್​ಸ್ಟಾರ್​!' ಎಂದು ಟ್ವೀಟ್​ ಮಾಡಿದ್ದಾರೆ.ಈ ವಿಡಿಯೋ ಸದ್ಯಕ್ಕೆ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿದ್ದು, 'ಸೀರೆಯುಟ್ಟು ಅಷ್ಟು ವೇಗವಾಗಿ ಓಡೋದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ'. 'ಸೀರೆಯುಟ್ಟೇ ಇಷ್ಟು ವೇಗವಾಗಿ ಓಡುತ್ತಾಳೆಂದರೆ ಈಕೆ ಅಥ್ಲೆಟಿಕ್ ಆಗಬಹುದಿತ್ತು' ಎಂದೆಲ್ಲ ಹಲವರು ಟ್ವೀಟ್ ಮಾಡಿದ್ದಾರೆ.

First published:July 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...