ನಿಮ್ಮ ಕೂದಲನ್ನು (Hair) ನೀವು ಆಗೊಮ್ಮೆ ಈಗೊಮ್ಮೆ ಎನ್ನುವಂತೆ ನಿಮಗೆ ಬೇಕಾದ ಹಾಗೆ ಸ್ಟೈಲಿಂಗ್ (Styling) ಮಾಡಿಕೊಂಡಿರುತ್ತೀರಿ. ಆದರೆ ಇಲ್ಲೊಬ್ಬ ಪ್ರಸಿದ್ಧ (Famous) ಹೇರ್ ಸ್ಟೈಲಿಸ್ಟ್ ದಾನಿ ಹಿಸ್ವಾನಿ ಅವರು ಒಬ್ಬ ಮಹಿಳೆಗೆ (Women) ಮಾಡಿದ ಹೇರ್ ಸ್ಟೈಲ್ (Hair Style) ತರಹ ಅಂತೂ ನೀವು ಖಂಡಿತವಾಗಿಯೂ ಮಾಡಿಸಿಕೊಂಡಿರುವುದಿಲ್ಲ. ತುಂಬಾ ದೊಡ್ಡ ಕೇಶವಿನ್ಯಾಸಕ್ಕಾಗಿ ಗಿನ್ನಿಸ್ ವಿಶ್ವದಾಖಲೆ (Gunnies Word Record) ಮಾಡಿದ್ದಾರೆ ಹೇರ್ ಸ್ಟೈಲಿಸ್ಟ್ ದಾನಿ ಅವರು ಅಂತ ಹೇಳಲಾಗುತ್ತಿದೆ. ಈ ವರ್ಷದ ಸೆಪ್ಟೆಂಬರ್ 16 ರಂದು ಯುಎಇಯ ದುಬೈನಲ್ಲಿ (Dubai) 2.90 ಮೀಟರ್ (9 ಅಡಿ 6.5 ಇಂಚುಗಳು) ಆಶ್ಚರ್ಯಕರವಾದ ರೀತಿಯಲ್ಲಿ ಕ್ರಿಸ್ಮಸ್ ಮರದ ಆಕಾರದಲ್ಲಿ ಮಹಿಳೆಯ ಕೂದಲನ್ನು ದಾನಿ ಹಿಸ್ವಾನಿ ಅವರು ವಿನ್ಯಾಸಗೊಳಿಸಿದರು.
ದಾನಿ ಮಾಡಿದ ಹೇರ್ ಸ್ಟೈಲ್ ಗಿನ್ನಿಸ್ ವಿಶ್ವದಾಖಲೆ ಆಗಿದೆ..
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗುರುವಾರ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಮಹಿಳೆ ಒಂದು ಹೆಲ್ಮೆಟ್ ರೀತಿಯಲ್ಲಿ ಧರಿಸಿದ್ದು, ಅದರಲ್ಲಿ ಮೂರು ಸಣ್ಣ ಕಂಬಗಳು ನೆಟ್ಟಗೆ ನಿಂತಿವೆ.
ಕ್ರಿಸ್‌ಮಸ್ ಮರವನ್ನು ರಚಿಸಲು, ದಾನಿ ಹಿಸ್ವಾನಿ ಅವರು ಕೋಯಿಫ್ಯೂರ್ ಅನ್ನು ರಚಿಸಲು ವಿಗ್ ಗಳು ಮತ್ತು ಕೂದಲಿನ ವಿಸ್ತರಣೆಗಳನ್ನು ಬಳಸಿದರು ಮತ್ತು ಚೆಂಡುಗಳಂತಹ ಕ್ರಿಸ್‌ಮಸ್ ಅಲಂಕಾರಕ ವಸ್ತುಗಳನ್ನು ಸಹ ಸೇರಿಸಿದರು.
ವೀಡಿಯೋದ ಜೊತೆಗೆ, ದಾನಿ ಹಿಸ್ವಾನಿ ಅವರ ಅತ್ಯಂತ ದೊಡ್ಡ ಕೇಶವಿನ್ಯಾಸ 2.90 ಮೀಟರ್ (9 ಅಡಿ 6.5 ಇಂಚು) ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನ ಪ್ರಕಟಣೆಯ ಪ್ರಕಾರ, ದಾನಿ ಏಳು ವರ್ಷಗಳ ಹಿಂದೆ ಫ್ಯಾಷನ್ ಜಗತ್ತಿಗೆ ಪ್ರವೇಶಿಸಿದರು ಮತ್ತು ಆಗ ಅವರು ಕೂದಲಿನಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಪ್ರಾರಂಭಿಸಿದರು. ಕೇಶವಿನ್ಯಾಸವು ಕೇವಲ ಒಂದು ಸೇವೆಗಿಂತ ಮಿಗಿಲಾದದ್ದು, ಅದು ಒಂದು ರೀತಿಯ ಕಲೆ ಎಂದು ಅವರು ನಂಬುತ್ತಾರೆ.
ಹಿಂದೊಮ್ಮೆ ದಾನಿ ಇಂತಹ ಪ್ರಯತ್ನ ಮಾಡಿದ್ದರಂತೆ..
"ದಾನಿ ಈ ಹಿಂದೆ ಮಹಿಳೆಯ ಕೂದಲನ್ನು ಬಳಸಿಕೊಂಡು ತಲೆಯ ಮೇಲೆ ಒಂದು ಸಣ್ಣ ಕ್ರಿಸ್‌ಮಸ್ ಮರವನ್ನು ಸೃಷ್ಟಿಸಿದ್ದರು. ಆದರೆ ಈಗ ಮತ್ತೊಮ್ಮೆ ದೊಡ್ಡ ಕ್ರಿಸ್‌ಮಸ್ ಮರದ ಆಕಾರದಲ್ಲಿ ಅತ್ಯುನ್ನತ ಕೇಶವಿನ್ಯಾಸವನ್ನು ರಚಿಸುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಮಾಡಿ ತಮ್ಮನ್ನು ತಾವೇ ದೊಡ್ಡ ಸವಾಲನ್ನು ಹಾಕಿಕೊಂಡು, ಅದರಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಪ್ರಕಟಣೆ ತಿಳಿಸಿದೆ.
ಈ ವೀಡಿಯೋ ಇನ್‌ಸ್ಟಾಗ್ರಾಮ್ ನಲ್ಲಿ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಆದಾಗ್ಯೂ, ಅಂತರ್ಜಾಲವು ಈ ಸಾಧನೆಯಿಂದ ಅಷ್ಟೊಂದು ಸಂತೋಷವಾಗಿರಲಿಲ್ಲ.
ಇದನ್ನೂ ಓದಿ: Swiggyಸ್ವಿಗ್ಗಿಯಲ್ಲಿ 75,000 ರೂಪಾಯಿಯ ಫುಡ್ ಆರ್ಡರ್ ಮಾಡಿದ ವ್ಯಕ್ತಿ! ಏನಪ್ಪಾ ಆ ಮೆನು?
ನೆಟ್ಟಿಗರು ಈ ಸಾಧನೆಯಿಂದ ಸಂತೋಷವಾಗಿಲ್ಲ..
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ "ಇದು ಜನಾಂಗೀಯ ಭಾವನೆ ಮತ್ತು ಅದು ಕೂದಲಿನ ಟೋಪಿಯಾಗಿದೆ. ಅವನು ಕನಿಷ್ಠ ಅವಳ ಹೊಂದಿಕೆಯಾಗದ ಕೂದಲಿನ ಸುರುಳಿಗಳನ್ನು ಒಳಗೆ ತುರುಕಬಹುದಿತ್ತು. ಆಗ ಇನ್ನೂ ಚೆನ್ನಾಗಿ ಕಾಣುತ್ತಿತ್ತು” ಎಂದು ಹೇಳಿದ್ದಾರೆ.
"ಇದು ಕೇಶವಿನ್ಯಾಸವಲ್ಲ, ಅದು ಹೆಡ್ ಡ್ರೆಸ್" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಈ ಗಿನ್ನಿಸ್ ಬುಕ್ ರೆಕಾರ್ಡ್ ಈಗ ಒಂದು ವ್ಯವಹಾರದ ಪರಿಕಲ್ಪನೆಯಾಗಿ ಮಾರ್ಪಟ್ಟಿದೆ. ಊಹೆಗಿಂತ ಹೆಚ್ಚಾಗಿರುವ ತನ್ನ ಸ್ವಂತ ಕೂದಲನ್ನು ಹೊಂದಿರುವ ಹೇರ್ ಸ್ಟೈಲ್ ಅನ್ನು ಮಾತ್ರ ಪರಿಗಣಿಸಬೇಕು" ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.
"ಇದರಲ್ಲಿ ಕೇವಲ ಕೂದಲಿನ ಪ್ರಮಾಣವನ್ನು ಅಷ್ಟೇ ಪರಿಗಣಿಸಿ ದಾಖಲೆ ಆಗಿದೆಯೋ ಇಲ್ಲವೋ ಅಂತ ಹೇಳಬೇಕು, ದಾಖಲೆಯು ಕೇವಲ ನೈಜ ಕೂದಲಿನೊಂದಿಗೆ ಮಾತ್ರ ಇರಬೇಕು ಮತ್ತು ಅದು ಹೆಚ್ಚುವರಿ ಕೃತಕ ಕೂದಲಿನ ದಾಖಲೆಯಾಗಬಾರದು” ಎಂದು ನಾಲ್ಕನೇ ಬಳಕೆದಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ